AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹವಾಮಾನ ಬದಲಾವಣೆಯಿಂದ ಸಿಟಿ ಮಂದಿ ಹೈರಾಣು: ವೈರಲ್ ಫ್ಲೂ ಹೆಚ್ಚಳ; ಮಕ್ಕಳಲ್ಲಿ ಉಸಿರಾಟದ ಸಮಸ್ಯೆ

H1N1 Latest News: ಬೆಂಗಳೂರಿನಲ್ಲಿ ಕ್ಷಣ ಕ್ಷಣಕ್ಕೂ ಬದಲಾಗುವ ಹವಾಮಾನ, ಮಳೆ ಹಾಗೂ ಗಾಳಿಯಿಂದಾಗಿ H1N1 ಭೀತಿ ಹೆಚ್ಚಾಗಿದೆ. ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ವೈರಲ್ ಫ್ಲೂ, ಉಸಿರಾಟದ ಸೋಂಕುಗಳು ಹಾಗೂ ವಾಂತಿಭೇದಿ ಪ್ರಕರಣಗಳು ಏರಿಕೆ ಕಂಡಿವೆ. ಸೋಂಕಿನ ಕುರಿತಾಗಿ ಮುನ್ನೆಚ್ಚರಿಕೆ ಇರಲಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಹವಾಮಾನ ಬದಲಾವಣೆಯಿಂದ ಸಿಟಿ ಮಂದಿ ಹೈರಾಣು: ವೈರಲ್ ಫ್ಲೂ ಹೆಚ್ಚಳ; ಮಕ್ಕಳಲ್ಲಿ ಉಸಿರಾಟದ ಸಮಸ್ಯೆ
ಹೆಚ್​​1ಎನ್​​1 Image Credit source: tv9 kannada
ವಿನಯ್​ ಕಾಶಪ್ಪನವರ್​
| Edited By: |

Updated on: Aug 30, 2026 | 8:10 PM

Share

ಬೆಂಗಳೂರು, ಆಗಸ್ಟ್​​ 30: ಸಿಲಿಕಾನ್ ಸಿಟಿಯಲ್ಲಿ (bengaluru) ಈಗಿದ್ದ ವಾತಾವರಣ ಮತ್ತೊಂದು ಗಂಟೆಗೆ ಇರುವುದಿಲ್ಲ. ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ, ಏಕಾಏಕಿ ಬೀಸುವ ತಣ್ಣನೆಯ ಗಾಳಿ ಹಾಗೂ ಬಿಸಿಲು-ಚಳಿಯ ಏರುಪೇರಿನಿಂದಾಗಿ ರಾಜಧಾನಿಯ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ದೇಶದಲ್ಲಿ ಹೆಚ್​​1ಎನ್​​1 (H1N1) ಆತಂಕದ ನಡುವೆಯೇ ಬೆಂಗಳೂರಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮಕ್ಕಳು ಹಾಗೂ ಹಿರಿಯರಲ್ಲಿ ಜ್ವರ, ಉಸಿರಾಟದ ಸೋಂಕು ಮತ್ತು ವೈರಲ್ ಫ್ಲೂ ಬಾಧೆ ತೀವ್ರವಾಗಿ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಏರಿಕೆಯಾಗುತ್ತಿದೆ.

ಒಂದೇ ವಾರದಲ್ಲಿ ಸಾವಿರಾರು ಪ್ರಕರಣ ದಾಖಲು

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಳೆದ ಕೇವಲ ಒಂದು ವಾರದಲ್ಲಿ ಸಾಂಕ್ರಾಮಿಕ ರೋಗಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. 571 ಜನರಲ್ಲಿ ವೈರಲ್ ಇನ್‌ಫ್ಲುಯೆಂಜಾ ದೃಢಪಟ್ಟಿದೆ. 344 ಜನರಲ್ಲಿ ಸಾರಿ (SARI – ತೀವ್ರ ಉಸಿರಾಟದ ಸೋಂಕು) ಪ್ರಕರಣಗಳು ಪತ್ತೆಯಾಗಿವೆ. 3,232 ಜನರಲ್ಲಿ ಎಡಿಡಿ (ADD – ವಾಂತಿಭೇದಿ) ಕಾಣಿಸಿಕೊಂಡಿದೆ. ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಮಕ್ಕಳ ವೈರಲ್ ಕಾಯಿಲೆಗಳ ಪ್ರಮಾಣ ಶೇಕಡಾ 10 ರಿಂದ 15 ರಷ್ಟು ಹೆಚ್ಚಳವಾಗಿದೆ.

ಶಾಲಾ ಮಕ್ಕಳಲ್ಲಿ ವೇಗವಾಗಿ ಹರಡುತ್ತಿದೆ ಫ್ಲೂ

ಹವಾಮಾನ ವೈಪರೀತ್ಯದ ಪರಿಣಾಮ ಪುಟ್ಟ ಮಕ್ಕಳ ಮೇಲೆ ನೇರವಾಗಿ ಬೀಳುತ್ತಿದ್ದು, ಶಾಲಾ ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಒಬ್ಬರಿಂದ ಒಬ್ಬರಿಗೆ ಅತಿ ವೇಗವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇಡಬೇಕೆಂದು ವೈದ್ಯರು ಸೂಚಿಸಿದ್ದಾರೆ. ಜ್ವರ ಅಥವಾ ನೆಗಡಿಯ ಗುಣಲಕ್ಷಣಗಳು ಕಂಡುಬಂದರೆ ಮಕ್ಕಳನ್ನು ಯಾವುದೇ ಕಾರಣಕ್ಕೂ ಶಾಲೆಗೆ ಕಳುಹಿಸಬಾರದು ಮತ್ತು ಸೋಂಕು ಕಡಿಮೆಯಾಗುವವರೆಗೂ ಇತರ ಮಕ್ಕಳ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಸ್ವಯಂ ಚಿಕಿತ್ಸೆ ಬೇಡ: ಮುನ್ನೆಚ್ಚರಿಕೆ ಇರಲಿ

ಮಕ್ಕಳಿಗೆ ಯಾವುದೇ ಕಾರಣಕ್ಕೂ ಸ್ವಯಂ ಚಿಕಿತ್ಸೆ ನೀಡದೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆಯುವುದು ಒಳ್ಳೆಯದು. ವಯಸ್ಸಾದವರು, ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರು ಮತ್ತು ಮಕ್ಕಳಿಗೆ ನಿತ್ಯ ಕಾಯಿಸಿ ಆರಿಸಿದ ಬಿಸಿ ನೀರು ಮತ್ತು ಬಿಸಿ ಆಹಾರವನ್ನೇ ನೀಡಬೇಕು. ಶೀತ ಗಾಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚಗಿನ ಉಡುಪುಗಳನ್ನು ಧರಿಸಬೇಕು. ಅನಗತ್ಯವಾಗಿ ಮಕ್ಕಳನ್ನು ಧೂಳು ಹಾಗೂ ಅತಿಯಾದ ಗಾಳಿ ಇರುವ ಸ್ಥಳಗಳಿಗೆ ಕರೆದೊಯ್ಯಬಾರದು. ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು.

ಇದನ್ನೂ ಓದಿ: H1N1 ಫ್ಲೂ ಆತಂಕ: ಆರೋಗ್ಯ ಇಲಾಖೆಯಿಂದ ಪೋಷಕರು, ಶಾಲೆಗಳಿಗೆ ಶೀಘ್ರ ಹೊಸ ಮಾರ್ಗಸೂಚಿ

ಒಟ್ಟಿನಲ್ಲಿ ದೇಶದಲ್ಲಿ H1N1 ಸೋಂಕಿನ ನಡುವೆ ಬೆಂಗಳೂರಿನಲ್ಲಿ ಹವಾಮಾನದಲ್ಲಿ ಆಗುತ್ತಿರುವ ನಿರಂತರ ಬದಲಾವಣೆ ದೊಡ್ಡವರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸಣ್ಣ ಲಕ್ಷಣಗಳನ್ನೂ ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅಗತ್ಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಬಯಲು ಮಾಡಿದ ಸುದೀಪ್
ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಬಯಲು ಮಾಡಿದ ಸುದೀಪ್
ಹೆಚ್ಚುತ್ತಿರುವ ಕಸ್ತೂರಿ ರಂಗನ್ ಕಿಚ್ಚು ನಾಳೆ ಶೃಂಗೇರಿ ಬಂದ್​​ಗೆ ಕರೆ!
ಹೆಚ್ಚುತ್ತಿರುವ ಕಸ್ತೂರಿ ರಂಗನ್ ಕಿಚ್ಚು ನಾಳೆ ಶೃಂಗೇರಿ ಬಂದ್​​ಗೆ ಕರೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!