ಐದು ಸಾವಿರ ಬಿಎಂಟಿಸಿ ಬಸ್ಗಳಿಗೆ ಸಿಸಿ ಕ್ಯಾಮೆರಾ, ಪ್ಯಾನಿಕ್ ಬಟನ್ ಅಳವಡಿಕೆ, ಹೇಗೆ ಕಾರ್ಯನಿರ್ವಹಿಸುತ್ತದೆ ಎಂದುದು ಇಲ್ಲಿದೆ
ಬಸ್ನಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಬಿಎಂಟಿಸಿ ಬಸ್ಗಳಲ್ಲಿ ಸಿಸಿ ಕ್ಯಾಮೆರಾ ಹಾಗೂ ಪ್ಯಾನಿಕ್ ಬಟನ್ಗಳ ಅಳವಡಿಕೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದು, ಐದು ಸಾವಿರ ಬಸ್ಗಳಿಗೆ ಅಳವಡಿಕೆ ಮಾಡಲಾಗಿದೆ. ಈ ಬಗ್ಗೆ ಟಿವಿ9 ಫ್ಯಾಕ್ಟ್ ಚೆಕ್ ಮಾಡಿದೆ.
ಬೆಂಗಳೂರು, ನ.30: ಬಸ್ನಲ್ಲಿ ಸರಗಳ್ಳತನ, ಲೈಂಗಿಕ ಕಿರುಕುಳದಂತಹ ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಬಿಎಂಟಿಸಿ (BMTC) ಬಸ್ಗಳಲ್ಲಿ ಸಿಸಿ ಕ್ಯಾಮೆರಾ ಹಾಗೂ ಪ್ಯಾನಿಕ್ ಬಟನ್ಗಳ ಅಳವಡಿಕೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದು, ಐದು ಸಾವಿರ ಬಸ್ಗಳಿಗೆ ಅಳವಡಿಕೆ ಮಾಡಲಾಗಿದೆ. ಈ ಬಗ್ಗೆ ಟಿವಿ9 ಕನ್ನಡ ರಿಯಾಲಿಟಿ ಚೆಕ್ ನಡೆಸಿದೆ.
ಕೇಂದ್ರ ಸರ್ಕಾರದ ನಿರ್ಭಯ ಯೋಜನೆ ಅಡಿಯಲ್ಲಿ ಸಿಸಿ ಟಿವಿ ಮತ್ತು ಪ್ಯಾನಿಕ್ ಬಟನ್ ಅಳವಡಿಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನಿಜವಾಗಿಯೂ ಈ ಪ್ಯಾನಿಕ್ ಬಟನ್ ವರ್ಕ್ ಮಾಡುತ್ತದೆಯೇ? ಬಟನ್ ಪ್ರೆಸ್ ಮಾಡಿದರೆ ಸೈರನ್ ಆಗುತ್ತಾ? ಕಂಟ್ರೋಲ್ ರೂಮ್ನಿಂದ ಡ್ರೈವರ್ ಕಂಡಕ್ಟರ್ಗಳಿಗೆ ಕರೆ ಬರುತ್ತಾ? ಬಸ್ನಲ್ಲಿರುವ ಬಟನ್ ಪ್ರೆಸ್ ಮಾಡಿದ ಮಹಿಳೆಯರ ವಿಡಿಯೋ ಕವರೇಜ್ ಆಗುತ್ತಾ ಎಂದು ಪರಿಶೀಲಿಸಲಾಯಿತು.
ಅದರಂತೆ, ಇನ್ನು ಮುಂದೆ ಬಿಎಂಟಿಸಿ ಬಸ್ನಲ್ಲಿ ಮಹಿಳೆಯರು ಸೇಫ್ ಆಗಿ ಓಡಾಡಬಹುದು ಎಂದು ಮನವರಿಕೆಯಾಗಿದೆ. ಇಂದಿನಿಂದ ಬಿಎಂಟಿಸಿ ಬಸ್ನಲ್ಲಿ ಪ್ರಯಾಣ ಮಾಡುವ ಮಹಿಳೆಯರಿಗೆ ಫುಲ್ ಸೆಫ್ಟಿ ಸಿಗಲಿದೆ.
ಬಿಎಂಟಿಸಿ ಬಸ್ನಲ್ಲಿರುವ ಪ್ಯಾನಿಕ್ ಬಟನ್ ಒತ್ತಿದರೆ ಸಿಸಿ ಟಿವಿ ಅಲರ್ಟ್ ಮತ್ತು ಸೈರನ್ ಆನ್ ಆಗುತ್ತದೆ. ಬಟನ್ ಪ್ರೆಸ್ ಆಗುತ್ತಿದ್ದಂತೆ ಬಿಎಂಟಿಯ ಕಂಟ್ರೋಲ್ ರೂಮ್ಗೆ ಬಸ್ನ ಸಂಪೂರ್ಣ ಮಾಹಿತಿ ರವಾನೆಯಾಗಿದೆ. ಅಲ್ಲದೆ, ಕಂಡಕ್ಟರ್ ಮತ್ತು ಡ್ರೈವರ್ಗೆ ಕಂಟ್ರೋಲ್ ರೂಮ್ನಿಂದ ಕರೆ ಬರುತ್ತದೆ.
ಇದನ್ನೂ ಓದಿ: ಇನ್ಮುಂದೆ ವಾಹನಗಳಲ್ಲಿ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸಿದ ಸರ್ಕಾರ
ಪ್ರಯಾಣಿಕರು ನಿಮ್ಮ ಬಸ್ನಲ್ಲಿರುವ ಪ್ಯಾನಿಕ್ ಬಟನ್ ಪ್ರೆಸ್ ಮಾಡಿದ್ದಾರೆ ಆ ಪ್ರಯಾಣಿಕರಿಗೆ ಸಮಸ್ಯೆ ಏನಾಗಿದೆ ಎಂದು ಕೇಳಲಾಗುತ್ತದೆ. ನಂತರ ಆಕೆಯ ರಕ್ಷಣೆಗೆ ಕಂಡಕ್ಟರ್ ಮತ್ತು ಡ್ರೈವರ್ ದಾವಿಸುತ್ತಾರೆ. ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಬಸ್ ಅನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತದೆ. ಯಾರಾದರೂ ಮಹಿಳೆಯರಿಗೆ ಕಿರುಕುಳ ನೀಡಿದ್ದ ಬಗ್ಗೆ ಮಾಹಿತಿ ನೀಡಿದರೆ ಬಸ್ ಅನ್ನು ಹತ್ತಿರದ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಲಾಗುತ್ತದೆ.
ಬಿಎಂಟಿಸಿ ಬಸ್ನಲ್ಲಿ ಮಹಿಳೆಯರಿಗೆ ಆಗುತ್ತಿದ್ದ ಕಿರುಕುಳದ ಬಗ್ಗೆ ಟಿವಿ9 ಸುದ್ದಿ ಪ್ರಸಾರ ಮಾಡಿತ್ತು. ಪರಿಣಾಮ ಕಿರುಕುಳ ನೀಡಿದ್ದ ಕಂಡಕ್ಟರ್ ಕೆಂಪಣ್ಣ ಎಂಬವರನ್ನು ಅಮಾನತು ಮಾಡಲಾಗಿದೆ. ಇದೇ ಕಾರಣಕ್ಕೆ ಟಿವಿ9ಗೆ ಮಹಿಳಾ ಪ್ರಯಾಣಿಕರು ಧನ್ಯವಾದ ತಿಳಿಸಿದ್ದಾರೆ.
ಪ್ರಕರಣದ ನಂತರ ಬಿಎಂಟಿಸಿ ನಮ್ಮ ಬಿಎಂಟಿಸಿ ಆ್ಯಪ್ ಬಿಡುಗಡೆ ಮಾಡಿದ್ದು, ಆ್ಯಪ್ನಲ್ಲಿ ಸ್ಪೆಷಲ್ ಫೀಚರ್ ಲಾಂಚ್ ಮಾಡಲಾಗಿದೆ. ಎಸ್ಓಎಸ್ ಬಟನ್ ಪ್ರೆಸ್ ಮಾಡಿದರೆ ಬಿಎಂಟಿಸಿ ಕಾಲ್ ಸೆಂಟರ್ನಿಂದ ಪ್ರಯಾಣಿಕರ ಮೊಬೈಲ್ ನಂಬರ್ಗೆ ಕರೆ ಬರುತ್ತದೆ. ಈ ವೇಳೆ ಸಮಸ್ಯೆ ಹೇಳಿಕೊಳ್ಳಬಹುದು. ನಂತರ ಸ್ಥಳಕ್ಕೆ ಪಿಂಕ್ ಮಹಿಳಾ ಸಾರಥಿ ವಾಹನವನ್ನು ಕಳಿಸಲಾಗುತ್ತದೆ.
ಪ್ರಯಾಣಿಕರು ಪ್ಲೇ ಸ್ಟೋರ್ನಲ್ಲಿ ನಮ್ಮ ಬಿಎಂಟಿಸಿ ಆ್ಯಪ್ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಸ್ಮಾರ್ಟ್ ಪೋನ್ ಇಲ್ಲದ ಪ್ರಯಾಣಿಕರು ಪ್ಯಾನಿಕ್ ಬಟನ್ ಪ್ರೆಸ್ ಮಾಡಬಹುದು. ಸ್ಮಾರ್ಟ್ ಫೋನ್ ಇರುವ ಪ್ರಯಾಣಿಕರು ಎಸ್ಓಎಸ್ ಬಟನ್ ಪ್ರೆಸ್ ಮಾಡಬಹುದು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ