AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೋಗೇಶ್​​ ಗೌಡ ಹತ್ಯೆ ಪ್ರಕರಣವನ್ನು ಸಿಬಿಐ ಭೇದಿಸಿದ್ದೇಗೆ? ಇಲ್ಲಿವೆ ಕೆಲ ಇಂಟರೆಸ್ಟಿಂಗ್​​ ವಿಚಾರಗಳು

ಯೋಗೇಶ್ ಗೌಡ ಹತ್ಯೆ ಪ್ರಕರಣ ಸಂಬಂಧ ವಿನಯ್​​ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆಯಾಗಿದೆ. ಆ ಬೆನ್ನಲ್ಲೇ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಪತ್ತೆಮಾಡಿದ್ದ ಕೆಲ ವಿಚಾರಗಳು ಈಗ ಬಹಿರಂಗಗೊಂಡಿವೆ. ಬಸವರಾಜ್ ಮುತ್ತಗಿಗೆ ಸುಪಾರಿ ನೀಡಿದ್ದ ವಿನಯ್​​ ಕುಲಕರ್ಣಿ, ಪತ್ನಿ ಹೆಸರಿನಲ್ಲಿ ಖರೀದಿ ಮಾಡಿದ್ದ ಸಿಮ್ ಕಾರ್ಡ್ ಬಳಸಿ ಹಲವು ಬಾರಿ ಸಂಭಾಷಣೆ ನಡೆಸಿದ್ದರು ಎಂಬುದು ಗೊತ್ತಾಗಿದೆ. ಜೊತೆಗೆ ಆರಂಭದಲ್ಲಿ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರ ಲೋಪಗಳನ್ನೂ ಸಿಬಿಐ ಎಳೆ ಏಳೆಯಾಗಿ ಬಿಚ್ಚಿಟ್ಟಿದೆ.

ಯೋಗೇಶ್​​ ಗೌಡ ಹತ್ಯೆ ಪ್ರಕರಣವನ್ನು ಸಿಬಿಐ ಭೇದಿಸಿದ್ದೇಗೆ? ಇಲ್ಲಿವೆ ಕೆಲ ಇಂಟರೆಸ್ಟಿಂಗ್​​ ವಿಚಾರಗಳು
ಯೋಗೇಶ್​​ ಗೌಡ ಹತ್ಯೆ ಪ್ರಕರಣವನ್ನು ಸಿಬಿಐ ಭೇದಿಸಿದ್ದೇಗೆ?
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on:Apr 19, 2026 | 10:05 AM

Share

ಬೆಂಗಳೂರು, ಏಪ್ರಿಲ್​​ 19: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗಿಶ್ ಗೌಡ ಕೊಲೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳ ತನಿಖೆ ವೇಳೆ ಹಲವು ಪ್ರಮುಖ ವಿಷಯಗಳು ಬೆಳಕಿಗೆ ಬಂದಿತ್ತೆಂಬ ವಿಚಾರವೀಗ ಬಯಲಾಗಿದೆ. ಎ1 ಬಸವರಾಜ್ ಮುತ್ತಗಿ ಜೊತೆಗೆ ಮಾತಾಡಲೆಂದು ವಿನಯ್ ಕುಲಕರ್ಣಿ ಪತ್ನಿ ಹೆಸರಿನಲ್ಲಿ ಸಿಮ್ ಖರೀದಿ ಮಾಡಿದ್ದರು. ಅದೇ ಸಿಮ್ ಕಾರ್ಡ್ ಬಳಸಿ 94 ಬಾರಿ ಮುತ್ತಗಿ ಜೊತೆಗೆ ವಿನಯ್​ ಮಾತಾಡಿದ್ದರು. ಅಲ್ಲದೇ ಯೋಗಿಶ್ ಗೌಡ ಕೊಲೆಯಾದ ನಂತರ ಆರು ತಿಂಗಳಲ್ಲಿ ಬಸವರಾಜ್ ಮುತ್ತಗಿಯನ್ನು 57 ಬಾರಿ ವಿನಯ್ ಕುಲಕರ್ಣಿ ಸಂಪರ್ಕಿಸಿದ್ದರು. ಈ ಪೈಕಿ ಆರು ಬಾರಿ ಇಬ್ಬರೂ ಇಂದೇ ಪ್ರದೇಶದಲ್ಲಿ ಇರೋದು ತನಿಖೆ ವೇಳೆ ಗೊತ್ತಾಗಿದೆ ಎನ್ನಲಾಗಿದೆ

ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇ ಯೋಗಿಶ್ ಗೌಡ ಕೊಲೆಗೆ ಕಾರಣವಾಗಿದ್ದು, ಬಸವರಾಜ್ ಮುತ್ತಗಿ ಮತ್ತು ಆತನ ಬಾವ ಚಂದ್ರಶೇಖರ ಇಂಡಿಗೆ ವಿನಯ್ ಕುಲಕರ್ಣಿ ಸುಪಾರಿ ನೀಡಿದ್ದರು. ಆದರೆ ಬಸವರಾಜ್ ಮುತ್ತಗಿ ಮಾಫಿ ಸಾಕ್ಷ್ಯ ಆಗಿದ್ದೇ ಈಗ ವಿನಯ್ ಕುಲಕರ್ಣಿಗೆ ಕಂಟಕವಾಗಿದೆ. ಯೋಗಿಶ್ ಗೌಡ ಹತ್ಯೆ ವೇಳೆ ಎ7 ರಿಂದ ಎ14ರ ವರೆಗಿನ ಆರೋಪಿಗಳು ಆಯುಧ ಬಳಸಿ ಕೊಲೆ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆದರೆ ಪೊಲೀಸರು ಎ1 ರಿಂದ ಎ6 ಆರೋಪಿಗಳನ್ನು ಬಂಧಿಸಿ, ಆಯುಧಗಳು ವಶಕ್ಕೆ ಅಂತಾ ಉಲ್ಲೇಖಿಸಿದ್ದರು. ಬಸವರಾಜ್ ಮುತ್ತಗಿ ಮತ್ತು ಯೋಗಿಶ್ ಗೌಡ ನಡುವಿನ ಭೂ ವ್ಯಾಜ್ಯ ಕೊಲೆಗೆ ಕಾರಣ ಎಂದು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು. ಆದರೆ ಧಾರವಾಡ ಪೊಲೀಸರ ತನಿಖೆಯ ತಪ್ಪುಗಳನ್ನು ಸಿಬಿಐ ಎಳೆ ಏಳೆಯಾಗಿ ಬಿಚ್ಚಿಟ್ಟಿದೆ.

ಇದನ್ನೂ ಓದಿ: ಯೋಗೀಶ್ ಗೌಡ ಕೊಲೆ ಕೇಸ್; ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ

ಜೈಲಲ್ಲಿ ಚಿಂತೆಗೀಡಾದ ವಿನಯ್​​ ಕುಲಕರ್ಣಿ

ಕೊಲೆ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿನಯ್ ಕುಲಕರ್ಣಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿನಲ್ಲಿ ಒಬ್ಬರೇ ಕುಳಿತು ಚಿಂತೆಗೀಡಾಗಿದ್ದಾರೆ. ರಾತ್ರಿ ಇಡೀ ನಿದ್ದೆ ಮಾಡದೆ ಸಿಬ್ಬಂದಿ ನೀಡಿದ ಊಟವನ್ನೂ ತಿನ್ನದೆ ಅವರು ಹಾಗೇ ಇದ್ದಾರೆ ಎಂಬುದು ಗೊತ್ತಾಗಿದೆ. ಜೈಲಿನ ಮೆನುವಿನಂತೆ ಮುದ್ದೆ, ಚಪಾತಿ, ಅನ್ನ ಸಾಂಬರ್ ನೀಡಲಾಗಿತ್ತು. ಸಹಕೈದಿಗಳು ಹೇಳಿದರೂ ಸಹ ಊಟ ಮಾಡದ ವಿನಯ್ ಕುಲಕರ್ಣಿ, ಏಕಾಂಗಿಯಾಗಿ ಕುಳಿತು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ. ಇನ್ನು ಸೆರೆವಾಸದಲ್ಲಿರುವ ವಿನಯ್ ಕುಲಕರ್ಣಿ, ವಿನಯ್ ಸೇರಿ 17 ಅಪರಾಧಿಗಳಿಗೆ ಜೈಲು ಸಿಬ್ಬಂದಿ ಸಜಾಕೈದಿ ನಂಬರ್ ನೀಡಿದ್ದಾರೆ. ವಿನಯ್ ಕುಲಕರ್ಣಿ ಸಜಾಬಂಧಿ ನಂಬರ್ 16110 ಆಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 9:59 am, Sun, 19 April 26

Follow Us
ಮೆಮೊರಿ ಸುಧಾರಿಸಿಕೊಳ್ಳಿ ಎಂದು ಅಧಿಕಾರಿ ಟೇಬಲ್ ಮೇಲೆ ಬಾದಾಮಿ ಎಸೆದ ವ್ಯಕ್ತಿ
ಮೆಮೊರಿ ಸುಧಾರಿಸಿಕೊಳ್ಳಿ ಎಂದು ಅಧಿಕಾರಿ ಟೇಬಲ್ ಮೇಲೆ ಬಾದಾಮಿ ಎಸೆದ ವ್ಯಕ್ತಿ
ವಿದ್ಯಾರ್ಥಿನಿಯರ ಬಳಿ ಅಂಗಡಿ ನೋಡಿಕೊಳ್ಳಿ ಎಂದು ಹೇಳಿ ಹೋದ ಮಾಲೀಕ
ವಿದ್ಯಾರ್ಥಿನಿಯರ ಬಳಿ ಅಂಗಡಿ ನೋಡಿಕೊಳ್ಳಿ ಎಂದು ಹೇಳಿ ಹೋದ ಮಾಲೀಕ
ಅಗ್ನಿಗೆ ಆಹುತಿಯಾದ ಬಿಎಂಟಿಸಿ ಬಸ್​​: ಕ್ಷಣ ಮಾತ್ರದಲ್ಲಿ ತಪ್ಪಿದ ದುರಂತ
ಅಗ್ನಿಗೆ ಆಹುತಿಯಾದ ಬಿಎಂಟಿಸಿ ಬಸ್​​: ಕ್ಷಣ ಮಾತ್ರದಲ್ಲಿ ತಪ್ಪಿದ ದುರಂತ
ಜೀವನ ಪೂರ್ತಿ ಮನುಷ್ಯನಿಗೆ ಗುರುವಿನ ಅನುಗ್ರಹ ಬೇಕೇ ಬೇಕು, ಯಾಕೆ ಗೊತ್ತಾ?
ಜೀವನ ಪೂರ್ತಿ ಮನುಷ್ಯನಿಗೆ ಗುರುವಿನ ಅನುಗ್ರಹ ಬೇಕೇ ಬೇಕು, ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಖರ್ಚು ವೆಚ್ಚಗಳು ಹೆಚ್ಚಾಗಲಿವೆ!
ಇಂದು ಈ ರಾಶಿಯವರಿಗೆ ಖರ್ಚು ವೆಚ್ಚಗಳು ಹೆಚ್ಚಾಗಲಿವೆ!
ದಳಪತಿ ವಿಜಯ್​​ ಬೆಂಬಲಕ್ಕೆ ಮೈಸೂರಿನಿಂದ ಯುವಕನ ಸೈಕಲ್ ಯಾತ್ರೆ
ದಳಪತಿ ವಿಜಯ್​​ ಬೆಂಬಲಕ್ಕೆ ಮೈಸೂರಿನಿಂದ ಯುವಕನ ಸೈಕಲ್ ಯಾತ್ರೆ
ಕೈವ್​​ನ ಸೂಪರ್ ಮಾರ್ಕೆಟ್​​ನಲ್ಲಿ ಗುಂಡು ಹಾರಿಸಿ ಐವರನ್ನು ಕೊಂದ ಶೂಟರ್​
ಕೈವ್​​ನ ಸೂಪರ್ ಮಾರ್ಕೆಟ್​​ನಲ್ಲಿ ಗುಂಡು ಹಾರಿಸಿ ಐವರನ್ನು ಕೊಂದ ಶೂಟರ್​
ಟ್ರಾಫಿಕ್ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಮಾಡಿಕೊಂಡ ಯುವಕ!
ಟ್ರಾಫಿಕ್ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಮಾಡಿಕೊಂಡ ಯುವಕ!
ಬೆಂಗಳೂರಿಗೆ ಬಂದ ನಟ ಅಡಿವಿಶೇಷ್ ಕೈಕುಲುಕಲು ಮುಗಿಬಿದ್ದ ಜನ
ಬೆಂಗಳೂರಿಗೆ ಬಂದ ನಟ ಅಡಿವಿಶೇಷ್ ಕೈಕುಲುಕಲು ಮುಗಿಬಿದ್ದ ಜನ
ತಮ್ಮ ಕುಟುಂಬದ ಮಹಿಳೆಯರು ಮಾತ್ರ ಉದ್ಧಾರವಾಗಬೇಕೆಂಬ ಕುತಂತ್ರ; ಮೋದಿ ಚಾಟಿ
ತಮ್ಮ ಕುಟುಂಬದ ಮಹಿಳೆಯರು ಮಾತ್ರ ಉದ್ಧಾರವಾಗಬೇಕೆಂಬ ಕುತಂತ್ರ; ಮೋದಿ ಚಾಟಿ