AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ವಾಯು ಗುಣಮಟ್ಟ: ಚಳಿಗಾಲ ಶುರುವಾಗುತ್ತಿದ್ದಂತೆ ಗಾಳಿಯ ಗುಣಮಟ್ಟದಲ್ಲಿ ಕೊಂಚ ಇಳಿಕೆ!

ಇಂದು ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳ ಇಂದಿನ ವಾಯು ಗುಣಮಟ್ಟ ಸೂಚ್ಯಂಕ ವಿವರ ಇಲ್ಲಿದೆ. ಸಿಲಿಕಾನ್ ಸಿಟಿಯ ಹೆಬ್ಬಾಳ, ಪೀಣ್ಯ, ವೈಟ್‌ಫೀಲ್ಡ್ ಹಾಗೂ ಮೈಸೂರು, ಮಂಗಳೂರು ನಗರಗಳ ಗಾಳಿಯ ಮಾಲಿನ್ಯ ಪ್ರಮಾಣ ಎಷ್ಟಿದೆ? ಉಸಿರಾಟದ ತೊಂದರೆ ಇರುವವರು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಸಂಪೂರ್ಣ ವಾಯು ಗುಣಮಟ್ಟದ ವರದಿ ಇಲ್ಲಿದೆ.

ಕರ್ನಾಟಕದ ವಾಯು ಗುಣಮಟ್ಟ: ಚಳಿಗಾಲ ಶುರುವಾಗುತ್ತಿದ್ದಂತೆ ಗಾಳಿಯ ಗುಣಮಟ್ಟದಲ್ಲಿ ಕೊಂಚ ಇಳಿಕೆ!
ಸಾಂದರ್ಭಿಕ ಚಿತ್ರ
ಭಾವನಾ ಹೆಗಡೆ
|

Updated on: Oct 30, 2026 | 7:27 AM

Share

ಮುಖ್ಯಾಂಶಗಳು

  • ಬೆಂಗಳೂರಿನ ಗಾಳಿಯ ಗುಣಮಟ್ಟ ಇಂದು 'ಸಾಧಾರಣ' ಮಟ್ಟದಲ್ಲಿದೆ.
  • ಹೆಬ್ಬಾಳ ಮತ್ತು ಪೀಣ್ಯ ಪ್ರದೇಶಗಳಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ.
  • ಮಂಗಳೂರು ನಗರದಲ್ಲಿ ರಾಜ್ಯದಲ್ಲೇ ಅತ್ಯಂತ ಶುದ್ಧ ಗಾಳಿ ದಾಖಲಾಗಿದೆ.

ಬೆಂಗಳೂರು, ಅಕ್ಟೋಬರ್ 30: ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಮತ್ತು ಬೆಂಗಳೂರಿನಲ್ಲಿ ವಾಯು ಗುಣಮಟ್ಟವು ಒಟ್ಟಾರೆಯಾಗಿ ಸಾಧಾರಣ ಮಟ್ಟದಲ್ಲಿದ್ದು, ಕೆಲವು ಪ್ರದೇಶಗಳಲ್ಲಿ ಸೂಕ್ಷ್ಮ ಆರೋಗ್ಯ ಸಮಸ್ಯೆ ಇರುವವರಿಗೆ ತುಸು ಕಾಳಜಿಯ ಅಗತ್ಯವಿದೆ. ದೀಪಾವಳಿ ಹಬ್ಬದ ಸನ್ನಿಹಿತ ಹಾಗೂ ಚಳಿಗಾಲದ ಆರಂಭದಿಂದಾಗಿ ವಾಹನಗಳ ಹೊಗೆ ಮತ್ತು ಧೂಳಿನ ಪ್ರಮಾಣ ನಗರ ಪ್ರದೇಶಗಳಲ್ಲಿ ಸಲ್ಪ ಏರಿಕೆಯಾಗಿದೆ.

ಬೆಂಗಳೂರಿನ ವಾಯು ಗುಣಮಟ್ಟ ಮತ್ತು ವಿವಿಧ ಪ್ರದೇಶಗಳ ಸ್ಥಿತಿ

ಇಂದು ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು 110 ರಿಂದ 130 ರ ಆಜುಬಾಜಿನಲ್ಲಿದೆ.

  • ಹೆಬ್ಬಾಳ ಮತ್ತು ಪೀಣ್ಯ: ಕೈಗಾರಿಕಾ ಚಟುವಟಿಕೆ ಹಾಗೂ ವಾಹನ ದಟ್ಟಣೆಯಿಂದಾಗಿ ಇಲ್ಲಿ ಎಕ್ಯೂಐ ಪ್ರಮಾಣ 135 – 150 ರಷ್ಟಿದ್ದು, ನಗರದಲ್ಲೇ ಹೆಚ್ಚಿನ ವಾಯು ಮಾಲಿನ್ಯ ದಾಖಲಾಗಿದೆ.
  • ಜಯನಗರ ಮತ್ತು ಬಿಟಿಎಂ ಲೇಔಟ್: ವಸತಿ ಪ್ರದೇಶಗಳಲ್ಲಿ ವಾಯು ಗುಣಮಟ್ಟ ತುಸು ಉತ್ತಮವಾಗಿದ್ದು, ಎಕ್ಯೂಐ 80 – 95 ರಷ್ಟಿದೆ (ಸಾಧಾರಣ ಮಟ್ಟ)
  • ಸಿಲ್ಕ್ ಬೋರ್ಡ್ ಮತ್ತು ವೈಟ್‌ಫೀಲ್ಡ್: ಬೆಳಗಿನ ಜಾವದ ದಟ್ಟಣೆಯಿಂದಾಗಿ ಎಕ್ಯೂಐ 120ರ ಸನಿಹದಲ್ಲಿದೆ.

ಮುಖ್ಯವಾಗಿ PM2.5 ಮತ್ತು PM10 ಸೂಕ್ಷ್ಮ ಕಣಗಳ ಪ್ರಮಾಣ ಹೆಚ್ಚಿರುವುದು ಈ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ.

ರಾಜ್ಯದ ಇತರ ಪ್ರಮುಖ ನಗರಗಳ ವಾಯು ಮಾಲಿನ್ಯ ಪ್ರಮಾಣ

ಕರ್ನಾಟಕದ ಇತರ ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಮಾಲಿನ್ಯ ಪ್ರಮಾಣ ಕೊಂಚ ಹೆಚ್ಚಾಗಿದೆ.

  • ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಎಕ್ಯೂಐ 105 – 117ರಷ್ಟಿದ್ದು, ‘ಸಾಧಾರಣ’ ವಿಭಾಗದಲ್ಲಿದೆ.
  • ಮಂಗಳೂರು: ಕರಾವಳಿ ನಗರ ಮಂಗಳೂರಿನಲ್ಲಿ ಸಮುದ್ರದ ಗಾಳಿಯ ಪ್ರಭಾವದಿಂದ ವಾಯು ಗುಣಮಟ್ಟ ಉತ್ತಮವಾಗಿದ್ದು, ಎಕ್ಯೂಐ 50 – 65 ದಾಖಲಾಗಿದೆ.
  • ಹುಬ್ಬಳ್ಳಿ – ಧಾರವಾಡ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಎಕ್ಯೂಐ 85 – 100 ರಷ್ಟಿದೆ.
  • ಬೆಳಗಾವಿ ಮತ್ತು ಕಲ್ಬುರ್ಗಿ: ಇಲ್ಲಿ ವಾಯು ಗುಣಮಟ್ಟ 70 – 90 ರಷ್ಟಿದ್ದು, ‘ಉತ್ತಮದಿಂದ ಸಾಧಾರಣ’ ಮಟ್ಟದಲ್ಲಿದೆ.

ಅಸ್ತಮಾ ಹಾಗೂ ಉಸಿರಾಟದ ತೊಂದರೆ ಇರುವವರು ಮತ್ತು ಹಿರಿಯ ನಾಗರಿಕರು ಬೆಳಗಿನ ಜಾವ ಸಾರ್ವಜನಿಕವಾಗಿ ಸಂಚರಿಸುವಾಗ ಮಾಸ್ಕ್ ಧರಿಸುವುದು ಸೂಕ್ತ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
ಅರ್ನಬ್ ಚಂಡಮಾರುತದ ಅಬ್ಬರ; ಭೋರ್ಗರೆಯುತ್ತಿದೆ ಒಡಿಶಾದ ಗಂಡಹಾತಿ ಜಲಪಾತ
ಅರ್ನಬ್ ಚಂಡಮಾರುತದ ಅಬ್ಬರ; ಭೋರ್ಗರೆಯುತ್ತಿದೆ ಒಡಿಶಾದ ಗಂಡಹಾತಿ ಜಲಪಾತ
ದೀಪಾವಳಿ ಹಬ್ಬಕ್ಕೆ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ ಅಯೋಧ್ಯೆಯ ರಾಮ ಮಂದಿರ
ದೀಪಾವಳಿ ಹಬ್ಬಕ್ಕೆ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ ಅಯೋಧ್ಯೆಯ ರಾಮ ಮಂದಿರ
ಜಿಮ್ ಟ್ರೈನರ್ ಜೊತೆ ಪತಿಯ ಕೊಲೆ ಮಾಡಿದ ಪತ್ನಿ; ಸಿಸಿಟಿವಿ ವಿಡಿಯೋ ನೋಡಿ
ಜಿಮ್ ಟ್ರೈನರ್ ಜೊತೆ ಪತಿಯ ಕೊಲೆ ಮಾಡಿದ ಪತ್ನಿ; ಸಿಸಿಟಿವಿ ವಿಡಿಯೋ ನೋಡಿ
ಹೆಸರು ದುರ್ಬಳಕೆ, ನಂಬಿಕೆ ದ್ರೋಹ: ಧನ್ವೀರ್ ಮೇಲೆ ಕೇಸ್ ಜಡಿದ ದರ್ಶನ್
ಹೆಸರು ದುರ್ಬಳಕೆ, ನಂಬಿಕೆ ದ್ರೋಹ: ಧನ್ವೀರ್ ಮೇಲೆ ಕೇಸ್ ಜಡಿದ ದರ್ಶನ್
ಮೀರಿದ ರೈತರ ತಾಳ್ಮೆ: ಮತ್ತೊಂದು ಹಂತಕ್ಕೆ ಕಬ್ಬು ಬೆಳೆಗಾರರ ಹೋರಾಟ
ಮೀರಿದ ರೈತರ ತಾಳ್ಮೆ: ಮತ್ತೊಂದು ಹಂತಕ್ಕೆ ಕಬ್ಬು ಬೆಳೆಗಾರರ ಹೋರಾಟ
ನಂದಿನಿ ಹಾಲಿನ ಬೆಲೆ ಹೆಚ್ಚಳ ಸಮರ್ಥಿಸಿಕೊಂಡ ಸಿಎಂ ಡಿಕೆ ಶಿವಕುಮಾರ್​​
ನಂದಿನಿ ಹಾಲಿನ ಬೆಲೆ ಹೆಚ್ಚಳ ಸಮರ್ಥಿಸಿಕೊಂಡ ಸಿಎಂ ಡಿಕೆ ಶಿವಕುಮಾರ್​​
ಕೇವಲ ಹಾಲು ಮಾತ್ರವಲ್ಲ ಅದರ ಉತ್ಪನ್ನಗಳ ಬೆಲೆನೂ ಜಾಸ್ತಿ ಆಗುತ್ತೆ: ಸವದಿ
ಕೇವಲ ಹಾಲು ಮಾತ್ರವಲ್ಲ ಅದರ ಉತ್ಪನ್ನಗಳ ಬೆಲೆನೂ ಜಾಸ್ತಿ ಆಗುತ್ತೆ: ಸವದಿ
ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ಹಾಲು ಬೆನ್ನಲ್ಲೇ ಬಸ್ ಟಿಕೆಟ್ ದರ ಹೆಚ್ಚಳ:ಬಿಗ್ ಅಪ್ಡೇಟ್ ನೀಡಿದ ಸಚಿವ
ಹಾಲು ಬೆನ್ನಲ್ಲೇ ಬಸ್ ಟಿಕೆಟ್ ದರ ಹೆಚ್ಚಳ:ಬಿಗ್ ಅಪ್ಡೇಟ್ ನೀಡಿದ ಸಚಿವ
ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್
ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್