AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ವಾಯುಗುಣಮಟ್ಟ: ಬೆಂಗಳೂರಿನಲ್ಲಿ ಎಕ್ಯೂಐ 188ಕ್ಕೆ ಏರಿಕೆ, ಹಲವು ನಗರಗಳಲ್ಲೂ ಗಾಳಿಯ ಗುಣಮಟ್ಟ ಕಳಪೆ

ನವೆಂಬರ್ 22ರಂದು ಕರ್ನಾಟಕದ ಹಲವು ನಗರಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ಗಮನ ಸೆಳೆದಿದೆ. ಬೆಂಗಳೂರಿನಲ್ಲಿ AQI 188 ದಾಖಲಾಗಿದ್ದು, ಸಿಲ್ಕ್ ಬೋರ್ಡ್ ಮತ್ತು ಜಯನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಕಳಪೆಯಾಗಿದೆ. ಮೈಸೂರು, ಮಂಗಳೂರು, ಹುಬ್ಬಳ್ಳಿ ನಗರಗಳ ವಾಯು ಗುಣಮಟ್ಟದ ಸ್ಥಿತಿಗತಿ, ಮಾಲಿನ್ಯಕ್ಕೆ ಕಾರಣಗಳು ಮತ್ತು ಆರೋಗ್ಯದ ಮುನ್ನೆಚ್ಚರಿಕೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕದ ವಾಯುಗುಣಮಟ್ಟ: ಬೆಂಗಳೂರಿನಲ್ಲಿ ಎಕ್ಯೂಐ 188ಕ್ಕೆ ಏರಿಕೆ, ಹಲವು ನಗರಗಳಲ್ಲೂ ಗಾಳಿಯ ಗುಣಮಟ್ಟ ಕಳಪೆ
ಸಾಂದರ್ಭಿಕ ಚಿತ್ರ
ಭಾವನಾ ಹೆಗಡೆ
|

Updated on: Nov 22, 2026 | 7:07 AM

Share

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಳ, ಒಟ್ಟಾರೆ AQI 188ಕ್ಕೆ ಏರಿಕೆ ದಾಖಲು.
  • ಸಿಲ್ಕ್ ಬೋರ್ಡ್, ಜಯನಗರದಲ್ಲಿ ಗಾಳಿಯ ಗುಣಮಟ್ಟ ಕಳಪೆ ಮಟ್ಟಕ್ಕೆ ತಲುಪಿದೆ.
  • ಮೈಸೂರು, ಮಂಗಳೂರು, ಹುಬ್ಬಳ್ಳಿ ಸೇರಿದಂತೆ ಹಲವು ನಗರಗಳಲ್ಲೂ ಮಾಲಿನ್ಯದ ಪ್ರಭಾವ.

ಬೆಂಗಳೂರು, ನವೆಂಬರ್ 22: ಕರ್ನಾಟಕದ ಹಲವು ನಗರಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ಏರಿಕೆಯಾಗಿದ್ದು, ಬೆಂಗಳೂರಿನಲ್ಲೂ ಗಾಳಿಯ ಗುಣಮಟ್ಟ ಆತಂಕ ಮೂಡಿಸಿದೆ. ಇಂದು ಬೆಂಗಳೂರಿನಲ್ಲಿ AQI 188 ದಾಖಲಾಗಿದೆ. ಮೈಸೂರು, ಮಂಗಳೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ನಗರಗಳಲ್ಲೂ ವಾಯು ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬಂದಿದೆ. ವಾಹನಗಳ ಹೊಗೆ, ರಸ್ತೆ ಧೂಳು ಹಾಗೂ ಸೂಕ್ಷ್ಮ ಮಾಲಿನ್ಯ ಕಣಗಳು ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿವೆ. ಹೀಗಾಗಿ ಮಕ್ಕಳು, ವೃದ್ಧರು ಮತ್ತು ಉಸಿರಾಟದ ಸಮಸ್ಯೆ ಇರುವವರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಬೆಂಗಳೂರಿನಲ್ಲಿ ಹೆಚ್ಚಿದ ವಾಯುಮಾಲಿನ್ಯ: ಕೆಲವೆಡೆ AQI 200ರ ಗಡಿ ದಾಟಿದೆ!

ನವೆಂಬರ್ 22ರಂದು ಬೆಂಗಳೂರಿನ ಒಟ್ಟಾರೆ AQI 188ರಷ್ಟಿದ್ದು, ಕಳಪೆ ಗಾಳಿಯ ಗುಣಮಟ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ವಿವಿಧ ಪ್ರದೇಶಗಳಲ್ಲೂ ಮಾಲಿನ್ಯದ ಪ್ರಮಾಣದಲ್ಲಿ ಏರಿಳಿತ ಕಂಡುಬಂದಿದೆ.

  • ಸಿಲ್ಕ್ ಬೋರ್ಡ್ – 218
  • ಜಯನಗರ 5ನೇ ಬ್ಲಾಕ್ – 202
  • ಹೆಬ್ಬಾಳ – 190
  • ಹೊಂಬೇಗೌಡ ನಗರ – 153
  • ಬಿಟಿಎಂ ಲೇಔಟ್ – 135
  • ಜಿಗಣಿ – 84
  • ಬಾಪೂಜಿನಗರ – 74

ವಿಶೇಷವಾಗಿ ಸಿಲ್ಕ್ ಬೋರ್ಡ್ ಮತ್ತು ಜಯನಗರದಲ್ಲಿ ಗಾಳಿಯ ಗುಣಮಟ್ಟ ಕಳಪೆ ಮಟ್ಟಕ್ಕೆ ತಲುಪಿರುವುದು ಗಮನಾರ್ಹ.

ಮೈಸೂರು, ಮಂಗಳೂರು, ಹುಬ್ಬಳ್ಳಿಯಲ್ಲೂ ಮಾಲಿನ್ಯದ ಪ್ರಭಾವ

ರಾಜ್ಯದ ಇತರ ನಗರಗಳಲ್ಲಿಯೂ ವಾಯುಮಾಲಿನ್ಯದ ಪ್ರಮಾಣ ಗಮನ ಸೆಳೆಯುತ್ತಿದೆ. ಲಭ್ಯವಿರುವ ವಿವಿಧ ವಾಯು ಗುಣಮಟ್ಟದ ವರದಿಗಳಲ್ಲಿ ದಾಖಲಾಗಿರುವ ಕೆಲವು ನಗರಗಳ ಅಂಕಿಅಂಶಗಳು ಹೀಗಿವೆ:

  • ಮೈಸೂರು : 157
  • ಮಂಗಳೂರು: 134
  • ಹುಬ್ಬಳ್ಳಿ: 123
  • ಬೆಳಗಾವಿ: 138
  • ಬಳ್ಳಾರಿ: 126
  • ಶಿವಮೊಗ್ಗ: 103
  • ಚಿಕ್ಕಮಗಳೂರು: 111
  • ಹಾಸನ: 99
  • ಮಂಡ್ಯ: 93
  • ತುಮಕೂರು: 92

AQI ಪ್ರಮಾಣ 100 ದಾಟಿದಾಗ ಸೂಕ್ಷ್ಮ ಆರೋಗ್ಯ ಸಮಸ್ಯೆ ಇರುವವರು ಎಚ್ಚರಿಕೆ ವಹಿಸಬೇಕು. 151ರಿಂದ 200ರ ನಡುವಿನ AQI ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More