AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಅವಧಿ ವಿಸ್ತರಣೆ ಕೋರಿದ್ದ PIL ಇತ್ಯರ್ಥಗೊಳಿಸಿದ ಹೈಕೋರ್ಟ್

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಅವಧಿ ವಿಸ್ತರಿಸುವಂತೆ ಕೋರಿ ದೇವನೂರು ಮಹದೇವ ಹಾಗೂ ರಾಮಚಂದ್ರ ಗುಹಾ ಸಲ್ಲಿಸಿದ್ದ ಪಿಐಎಲ್ ಅನ್ನು ಕರ್ನಾಟಕ ಹೈಕೋರ್ಟ್ ಇತ್ಯರ್ಥಪಡಿಸಿದೆ. ಬಿಎಲ್‌ಒಗಳಿಗೆ ಸಮರ್ಪಕ ತರಬೇತಿಯಿಲ್ಲದೆ ಮತದಾರರು ಹೊರಗುಳಿಯುವ ಆತಂಕ ವ್ಯಕ್ತವಾಗಿತ್ತು. ಅಗತ್ಯ ಬಿದ್ದರೆ ಅವಧಿ ವಿಸ್ತರಿಸಲಾಗುವುದು ಹಾಗೂ ಕರಡು ಪಟ್ಟಿ ಬಳಿಕವೂ ಅರ್ಜಿ ಸಲ್ಲಿಸಬಹುದು ಎಂದು ಚುನಾವಣಾ ಆಯೋಗ ಕೋರ್ಟ್‌ಗೆ ತಿಳಿಸಿದೆ.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಅವಧಿ ವಿಸ್ತರಣೆ ಕೋರಿದ್ದ PIL ಇತ್ಯರ್ಥಗೊಳಿಸಿದ ಹೈಕೋರ್ಟ್
ಹೈಕೋರ್ಟ್​
Ramesha M
| Edited By: |

Updated on: Jul 28, 2026 | 1:27 PM

Share

ಮುಖ್ಯಾಂಶಗಳು

  • ಮತದಾರರ ಪಟ್ಟಿ ಪರಿಷ್ಕರಣೆ ಅವಧಿ ವಿಸ್ತರಣೆ ಪಿಐಎಲ್ ಹೈಕೋರ್ಟ್‌ನಲ್ಲಿ ಇತ್ಯರ್ಥವಾಯಿತು.
  • ಬಿಎಲ್‌ಒ ತರಬೇತಿ ಕೊರತೆಯಿಂದ 70 ಲಕ್ಷ ಮತದಾರರು ಹೊರಗುಳಿಯುವ ಆತಂಕವಿತ್ತು.
  • ಅಗತ್ಯ ಬಿದ್ದರೆ ಅವಧಿ ವಿಸ್ತರಿಸುವುದಾಗಿ ಚುನಾವಣಾ ಆಯೋಗ ಕೋರ್ಟ್‌ಗೆ ಸ್ಪಷ್ಟಪಡಿಸಿದೆ.

ಬೆಂಗಳೂರು, ಜುಲೈ 28: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯ ಅವಧಿ ವಿಸ್ತರಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಕರ್ನಾಟಕ ಹೈಕೋರ್ಟ್ ಇತ್ಯರ್ಥಪಡಿಸಿದೆ.ಸಾಹಿತಿ ದೇವನೂರು ಮಹದೇವ, ಇತಿಹಾಸ ತಜ್ಞ ರಾಮಚಂದ್ರ ಗುಹಾ, ನಿವೃತ್ತ ಮೇಜರ್ ಜನರಲ್ ಎಸ್.ಜಿ. ವಂಬಟ್ಕೆರೆ ಹಾಗೂ ಲೇಖಕಿ ಸಬೀಹಾ ಭೂಮಿಗೌಡ ಅವರು ಈ ಅರ್ಜಿ ಸಲ್ಲಿಸಿದ್ದರು. ಬಿಎಲ್‌ಒಗಳಿಗೆ ಸಮರ್ಪಕ ಮಾಹಿತಿ ಹಾಗೂ ತರಬೇತಿ ಇಲ್ಲದಿರುವುದು ಮತ್ತು ಮತದಾರರ ನೆರವು ಕೇಂದ್ರಗಳ ಸರಿಯಾದ ಕಾರ್ಯನಿರ್ವಹಣೆ ಕೊರತೆಯಿಂದ ಸುಮಾರು 70 ಲಕ್ಷ ಮತದಾರರು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ವಾದ ಮಂಡಿಸಿದ್ದರು.

ಹೈಕೋರ್ಟ್‌ ಮಧ್ಯಪ್ರವೇಶ ಅನಗತ್ಯ ಎಂದ ಪೀಠ

ಇದಕ್ಕೆ ಚುನಾವಣಾ ಆಯೋಗದ ಪರ ವಕೀಲ ಶರತ್ ದೊಡ್ವಾಡ್ ಪ್ರತಿಕ್ರಿಯಿಸಿ, “ಅಗತ್ಯ ಬಿದ್ದರೆ SIR ಅವಧಿಯನ್ನು ವಿಸ್ತರಿಸಲಾಗುವುದು. ಕರಡು ಪಟ್ಟಿ ಪ್ರಕಟವಾದ ನಂತರವೂ ಬಿಟ್ಟುಹೋದ ಮತದಾರರು ಅರ್ಜಿ ಸಲ್ಲಿಸಲು ಅವಕಾಶವಿದೆ” ಎಂದು ಕೋರ್ಟ್‌ಗೆ ತಿಳಿಸಿದರು. ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದಿಸಿ, ಸರ್ಕಾರವೂ ಮತದಾರರ ಹಕ್ಕು ರಕ್ಷಿಸುವಂತೆ ಆಯೋಗಕ್ಕೆ ಮನವಿ ಸಲ್ಲಿಸಿದೆ ಎಂದರು. ಚುನಾವಣಾ ಆಯೋಗವು ಈ ಸಮಸ್ಯೆಗಳನ್ನು ಬಗೆಹರಿಸಲು ಸಮರ್ಥವಾಗಿದೆ ಹಾಗೂ ಇದೇ ವಿಷಯಗಳು ಸುಪ್ರೀಂಕೋರ್ಟ್‌ನಲ್ಲಿಯೂ ಪರಿಶೀಲನೆಯಲ್ಲಿರುವುದರಿಂದ ಈ ಹಂತದಲ್ಲಿ ಹೈಕೋರ್ಟ್‌ ಮಧ್ಯಪ್ರವೇಶ ಅನಗತ್ಯವೆಂದು ಪೀಠವು ಅರ್ಜಿಯನ್ನು ಇತ್ಯರ್ಥಗೊಳಿಸಿದೆ.

ಡಿಜಿಟಲೀಕರಣ ವಿಳಂಬ

ಮನೆ-ಮನೆ ಸಮೀಕ್ಷೆಯಲ್ಲಿ ಜೂನ್ 29ರಿಂದ 59,050 ಬಿಎಲ್‌ಒಗಳು ನಮೂನೆಗಳನ್ನು ವಿತರಿಸಿದ್ದರೂ, ಭರ್ತಿ ಮಾಡಿದ ಫಾರಂಗಳನ್ನು ಆ್ಯಪ್‌ಗೆ ಅಪ್‌ಲೋಡ್ ಮಾಡುವ ಡಿಜಿಟಲೀಕರಣ ಕಾರ್ಯ ಪ್ರಸ್ತುತ ಶೇ.69.51ರಷ್ಟು ಮಾತ್ರ ಪೂರ್ಣಗೊಂಡಿದೆ. 2002ರ SIR ದಾಖಲೆಗಳ ‘ಸೆಲ್ಫ್ ಮ್ಯಾಪಿಂಗ್’ ಹಾಗೂ ‘ಪ್ರೊಜೆನಿ ಮ್ಯಾಪಿಂಗ್’ ಮಾಹಿತಿ ಪತ್ತೆಹಚ್ಚುವಲ್ಲಿ ಉಂಟಾಗಿರುವ ತಾಂತ್ರಿಕ ತೊಡಕಿನಿಂದ ಈ ಪ್ರಕ್ರಿಯೆ ವಿಳಂಬವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ ಮತದಾರರ ಪಟ್ಟಿ ಪರಿಷ್ಕರಣೆ: 5.54 ಕೋಟಿ ನಮೂನೆಗಳ ವಿತರಣೆ ಪೂರ್ಣ; ASDDO ಪಟ್ಟಿಯಲ್ಲಿ 52.97 ಲಕ್ಷ ಮತದಾರರು !

ಇದುವರೆಗೆ ಸಲ್ಲಿಕೆಯಾದ 3.85 ಕೋಟಿ ನಮೂನೆಗಳಲ್ಲಿ 1.56 ಕೋಟಿ ಮತದಾರರು ಸೆಲ್ಫ್ ಮ್ಯಾಪಿಂಗ್ ಹಾಗೂ 1.93 ಕೋಟಿ ಮಂದಿ ಪ್ರೊಜೆನಿ ಮ್ಯಾಪಿಂಗ್ ಪೂರ್ಣಗೊಳಿಸಿದ್ದಾರೆ. ಯಾವುದೇ ಮ್ಯಾಪಿಂಗ್ ಮಾಹಿತಿ ಇಲ್ಲದೆ ಸಲ್ಲಿಕೆಯಾಗಿರುವ 17.19 ಲಕ್ಷ (ಶೇ. 3.1) ನಮೂನೆದಾರರಿಗೆ ಕರಡು ಪಟ್ಟಿ ಪ್ರಕಟವಾದ ನಂತರ ಅಗತ್ಯ ದಾಖಲೆ ಸಲ್ಲಿಸಲು ನೋಟಿಸ್ ನೀಡಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ
ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ
‘ಟಾಕ್ಸಿಕ್ ನೋಡಿದವರು ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’
‘ಟಾಕ್ಸಿಕ್ ನೋಡಿದವರು ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’
ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೀತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ
ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೀತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ
ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ
ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ
ಬೆಂಗಳೂರು: ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ
ಬೆಂಗಳೂರು: ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ
ಸುಬ್ರಹ್ಮಣ್ಯ, ಹನುಮನ ಲಹರಿ ಇರುವ ಪರ್ವ ದಿನ: 12 ರಾಶಿಗಳ ದಿನ ಭವಿಷ್ಯ
ಸುಬ್ರಹ್ಮಣ್ಯ, ಹನುಮನ ಲಹರಿ ಇರುವ ಪರ್ವ ದಿನ: 12 ರಾಶಿಗಳ ದಿನ ಭವಿಷ್ಯ
ಸರ್ಕಾರದ ಜೊತೆ ಇರುತ್ತೇವೆ: ಡಿಕೆಶಿಗೆ ತೇಜಸ್ವಿ ಸೂರ್ಯ ಭರವಸೆ
ಸರ್ಕಾರದ ಜೊತೆ ಇರುತ್ತೇವೆ: ಡಿಕೆಶಿಗೆ ತೇಜಸ್ವಿ ಸೂರ್ಯ ಭರವಸೆ
ಪಶುವೈದ್ಯ ನೇಮಕಾತಿ ಹಗರಣ: CBI ತನಿಖೆಗೆ ಒಪ್ಪಿಸಿ ಎಂದ ಸುರೇಶ್ ಕುಮಾರ್
ಪಶುವೈದ್ಯ ನೇಮಕಾತಿ ಹಗರಣ: CBI ತನಿಖೆಗೆ ಒಪ್ಪಿಸಿ ಎಂದ ಸುರೇಶ್ ಕುಮಾರ್
ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್​ಗೆ ಸದನದಲ್ಲಿ ಖರ್ಗೆ ಖಂಡನೆ
ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್​ಗೆ ಸದನದಲ್ಲಿ ಖರ್ಗೆ ಖಂಡನೆ
ಡಿಕೆಶಿಗೆ ಹೈ ಸೆಕ್ಯೂರಿಟಿ:ದೆಹಲಿಯಲ್ಲಿ ವಿಶೇಷ ಭದ್ರತೆ ಇದೇ ಮೊದಲು
ಡಿಕೆಶಿಗೆ ಹೈ ಸೆಕ್ಯೂರಿಟಿ:ದೆಹಲಿಯಲ್ಲಿ ವಿಶೇಷ ಭದ್ರತೆ ಇದೇ ಮೊದಲು