AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರುತಿ 800 ಕಾರಿನಲ್ಲಿ ಮಂಗಳೂರಿನಿಂದ ಲಡಾಖ್​ವರೆಗೂ ಸುತ್ತಿದ ಯುವಕರು!

ಮಂಗಳೂರಿನ ಹರೀಶ್, ಕೃಷ್ಣ ಪ್ರಸಾದ್ ಹಾಗೂ ರಾಕೇಶ್ 2001ರ ಮಾಡೆಲ್ ಮಾರುತಿ 800 ಕಾರಿನಲ್ಲಿ 6,900 ಕಿ.ಮೀ ಪ್ರಯಾಣಿಸಿ ಲಡಾಖ್ ತಲುಪಿ ದಾಖಲೆ ಬರೆದಿದ್ದಾರೆ. 'ಕಾಡು ಉಳಿಸಿ' ಜಾಗೃತಿ ಸಂದೇಶದೊಂದಿಗೆ ತೀವ್ರ ಚಳಿ ಮತ್ತು ಕಠಿಣ ರಸ್ತೆಗಳನ್ನು ಎದುರಿಸಿ ಈ ಸಾಧನೆ ಮಾಡಿದ್ದಾರೆ. ಇನ್ನೊಂದೆಡೆ ಬೆಂಗಳೂರಿನ ಆಟೋ ಚಾಲಕ ಬಾಲಕೃಷ್ಣ ಮೋಹನ್ ತಮ್ಮ ಆಟೋದಲ್ಲಿ 8,000 ಕಿ.ಮೀ ಒಂಟಿ ಪ್ರಯಾಣ ಬೆಳೆಸಿ ವಿಶ್ವದ ಅತ್ಯಂತ ಎತ್ತರದ ಉಮ್ಲಿಂಗ್ ಲಾ ತಲುಪಿ ಐತಿಹಾಸಿಕ ಮೈಲಿಗಲ್ಲು ನೆಟ್ಟಿದ್ದಾರೆ.

ಮಾರುತಿ 800 ಕಾರಿನಲ್ಲಿ ಮಂಗಳೂರಿನಿಂದ ಲಡಾಖ್​ವರೆಗೂ ಸುತ್ತಿದ ಯುವಕರು!
ಮಾರುತಿ 800 ಕಾರಿನಲ್ಲಿ ಮಂಗಳೂರಿನಿಂದ ಲಡಾಖ್​ವರೆಗೂ ಸುತ್ತಿದ ಯುವಕರು!
ಭಾವನಾ ಹೆಗಡೆ
|

Updated on: Nov 04, 2026 | 10:21 AM

Share

ಮುಖ್ಯಾಂಶಗಳು

  • ಮಂಗಳೂರಿನ ಮೂವರು ಯುವಕರು ಮಾರುತಿ 800 ಕಾರಿನಲ್ಲಿ ಲಡಾಖ್ ತಲುಪಿ ಸಾಧನೆ.
  • ಕಾಡು ಉಳಿಸಿ ಸಂದೇಶದೊಂದಿಗೆ 6,900 ಕಿಲೋಮೀಟರ್ ದೂರ ಪ್ರಯಾಣ ನಡೆಸಿದ ತಂಡ.
  • ಬೆಂಗಳೂರಿನ ಬಾಲಕೃಷ್ಣ ಆಟೋ ರಿಕ್ಷಾದಲ್ಲಿ ಲಡಾಖ್ ತಲುಪಿ ಹೊಸ ಇತಿಹಾಸ ಸೃಷ್ಟಿ.

ಮಂಗಳೂರು, ನವೆಂಬರ್ 04: ಕರಾವಳಿಯ ಮೂವರು ಸಾಹಸಿಗಳು ಹಳೆಯ ಮಾಡೆಲ್ ಕಾರಿನಲ್ಲಿ ಹಿಮಾಲಯದ ಕಠಿಣ ಹಾದಿಯನ್ನು ಮೆಟ್ಟಿ ನಿಂತು ಇತಿಹಾಸ ಸೃಷ್ಟಿಸಿದ್ದಾರೆ. ಮಂಗಳೂರಿನ ಹರೀಶ್ ಭಟ್, ಕೃಷ್ಣ ಪ್ರಸಾದ್ ಭಟ್ ಹಾಗೂ ರಾಕೇಶ್ ಬೋಳಾರ್ ಎಂಬುವವರು 2001ರ ಮಾಡೆಲ್ ನ ಮಾರುತಿ 800 ಕಾರಿನಲ್ಲಿ ಸುಮಾರು 11 ರಾಜ್ಯಗಳನ್ನು ಸುತ್ತಿ, ಬರೋಬ್ಬರಿ 6,900 ಕಿಲೋಮೀಟರ್ ದೂರವನ್ನು ಕ್ರಮಿಸುವ ಮೂಲಕ ಲಡಾಖ್ ತಲುಪಿ ಸಾಧನೆ ಮಾಡಿದ್ದಾರೆ. 2026ರ ಅಕ್ಟೋಬರ್ 19 ರಂದು ಆರಂಭವಾದ ಈ ಸಾಹಸಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿ ನವೆಂಬರ್ 2 ರಂದು ವಾಪಸ್ ಮಂಗಳೂರಿಗೆ ಮರಳಿದ್ದಾರೆ.

‘ಕಾಡು ಉಳಿಸಿ’ ಸಂದೇಶದೊಂದಿಗೆ ಕಠಿಣ ಹಾದಿ

ಕೇವಲ ರೋಮಾಂಚನಕ್ಕಾಗಿ ಮಾತ್ರವಲ್ಲದೆ, ‘ಕಾಡು ಉಳಿಸಿ, ವನ್ಯಜೀವಿ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮುಕ್ತ ಭೂಮಿ’ಯಂತಹ ಪರಿಸರ ಜಾಗೃತಿಯ ಸಂದೇಶವನ್ನು ಸಾರಲು ಈ ಮೂವರು ಮುಂದಾಗಿದ್ದರು. ಯಾವುದೇ ಆಧುನಿಕ ಸೌಲಭ್ಯಗಳು, ಜಿಪಿಎಸ್ ಅಥವಾ ಎಸಿ ಇಲ್ಲದ 25 ವರ್ಷ ಹಳೆಯ ಕಾರಿನಲ್ಲಿ ಈ ದೂರದ ಪ್ರಯಾಣ ಕೈಗೊಂಡಿರುವುದು ವಿಶೇಷ. ಕಾರಿನಲ್ಲಿ ಯಾವುದೇ ತಾಂತ್ರಿಕ ದೋಷ ಉಂಟಾದರೆ ಸರಿಪಡಿಸಲು ಅಗತ್ಯವಿರುವ ಬಿಡಿಭಾಗಗಳನ್ನು ಮಾತ್ರ ಅವರು ಜೊತೆಯಲ್ಲಿ ಕೊಂಡೊಯ್ದಿದ್ದರು.

ಮೈನಸ್ 14 ಡಿಗ್ರಿ ಚಳಿ

ಈ ಕುರಿತು ಮಾತನಾಡಿರುವ ರಾಕೇಶ್ ಬೋಳಾರ್, “ಆಫ್-ಸೀಸನ್ ಸಮಯದಲ್ಲಿ ಪ್ರಯಾಣಿಸಿದ್ದರಿಂದ ಮೈನಸ್ 14 ಡಿಗ್ರಿ ಸೆಲ್ಸಿಯಸ್ ವರೆಗಿನ ತೀವ್ರ ಚಳಿಯನ್ನು ಎದುರಿಸಬೇಕಾಯಿತು. ರಸ್ತೆಗಳಲ್ಲಿ ಹೆಪ್ಪುಗಟ್ಟಿದ ‘ಬ್ಲಾಕ್ ಐಸ್’ ಕಾರಣದಿಂದ ವಾಹನ ಚಾಲನೆ ಅತ್ಯಂತ ಅಪಾಯಕಾರಿಯಾಗಿತ್ತು. ಮುಂಜಾಗ್ರತಾ ಕ್ರಮವಾಗಿ ನಾವು ಆಮ್ಲಜನಕ ಸಿಲಿಂಡರ್ ಅನ್ನು ಕೂಡ ಜೊತೆಯಲ್ಲಿ ಇಟ್ಟುಕೊಂಡಿದ್ದೆವು” ಎಂದು ಹಂಚಿಕೊಂಡಿದ್ದಾರೆ. ಯಾವುದೇ ಜಿಪಿಎಸ್ ನೆರವಿಲ್ಲದೆ, ಹಳ್ಳಿಕಾಡಿನ ರಸ್ತೆಗಳ ಮೂಲಕ ಸಾಗುತ್ತಾ ಭಾರತದ ವಿವಿಧ ಸಂಸ್ಕೃತಿ ಹಾಗೂ ಜನರ ಪ್ರೀತಿಯನ್ನು ಹತ್ತಿರದಿಂದ ಅನುಭವಿಸಿದ್ದಾಗಿ ಅವರು ತಿಳಿಸಿದ್ದಾರೆ.

ಬೆಂಗಳೂರಿನ ಬಾಲಕೃಷ್ಣ ಆಟೋ ರಿಕ್ಷಾದಲ್ಲಿ ಅಪರೂಪದ ದಾಖಲೆ

ಇದೇ ರೀತಿಯ ಸಾಹಸಮಯ ಯತ್ನವೊಂದರಲ್ಲಿ, ಬೆಂಗಳೂರಿನ 35 ವರ್ಷದ ಚಾಲಕ ಬಾಲಕೃಷ್ಣ ಮೋಹನ್ ಅವರು ತಮ್ಮ ಸ್ವಂತ ಆಟೋ ರಿಕ್ಷಾದಲ್ಲೇ ಲಡಾಖ್‌ಗೆ ಬರೋಬ್ಬರಿ 24 ದಿನಗಳ ಕಾಲ 8,000 ಕಿ.ಮೀ ಒಂಟಿ ಪ್ರಯಾಣ ನಡೆಸಿ ಐತಿಹಾಸಿಕ ಸಾಧನೆ ಮಾಡಿದ್ದರು. 2026ರ ಆಗಸ್ಟ್ 1 ರಂದು ಪ್ರಯಾಣ ಆರಂಭಿಸಿದ ಅವರು ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳನ್ನು ದಾಟಿ, ಜೊಜಿ ಲಾ ಪಾಸ್‌ನಂತಹ ಅಪಾಯಕಾರಿ ಹಾದಿಗಳನ್ನು ಎದುರಿಸಿದರು. ಬೆಟ್ಟದ ದಾರಿಯಲ್ಲಿ ಸಿಎನ್‌ಜಿ ಬಂಕ್‌ಗಳಿಲ್ಲದ ಕಾರಣ ಪೆಟ್ರೋಲ್‌ಗೆ ಬದಲಾಯಿಸಿಕೊಂಡು, 19,024 ಅಡಿ ಎತ್ತರದಲ್ಲಿರುವ ವಿಶ್ವದ ಅತ್ಯಂತ ಎತ್ತರದ ಮೋಟಾರು ವಾಹನ ರಸ್ತೆಯಾದ ‘ಉಮ್ಲಿಂಗ್ ಲಾ’ ತಲುಪಿ ಆಟೋ ರಿಕ್ಷಾ ಪ್ರಯಾಣದಲ್ಲಿ ಹೊಸ ಇತಿಹಾಸ ಬರೆದಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
ಗಗನ್ vs ಯಶಸ್: ಪತ್ರ ಪಡೆಯಲು ಟಫ್ ಟಾಸ್ಕ್ ಕೊಟ್ಟ ಬಿಗ್ ಬಾಸ್
ಗಗನ್ vs ಯಶಸ್: ಪತ್ರ ಪಡೆಯಲು ಟಫ್ ಟಾಸ್ಕ್ ಕೊಟ್ಟ ಬಿಗ್ ಬಾಸ್
ಇಂದು ಈ ರಾಶಿಯವರು ನಿರ್ಲಕ್ಷ್ಯತನವನ್ನು ತ್ಯಜಿಸಿದರೆ ಉತ್ತಮ
ಇಂದು ಈ ರಾಶಿಯವರು ನಿರ್ಲಕ್ಷ್ಯತನವನ್ನು ತ್ಯಜಿಸಿದರೆ ಉತ್ತಮ
ಬೆಂಗಳೂರು: ಹೊಯ್ಸಳ ನಗರ ಪಬ್​ನಲ್ಲಿ ಅಗ್ನಿ ಅವಘಡ, ತಪ್ಪಿದ ಭಾರಿ ದುರಂತ
ಬೆಂಗಳೂರು: ಹೊಯ್ಸಳ ನಗರ ಪಬ್​ನಲ್ಲಿ ಅಗ್ನಿ ಅವಘಡ, ತಪ್ಪಿದ ಭಾರಿ ದುರಂತ
ನನ್ನ ಹೇಳಿಕೆ ತಿರುಚಲಾಗಿದೆ: ವಿವಾದಾತ್ಮಕ ಹೇಳಿಕೆ ಬಗ್ಗೆ ಛಲವಾದಿ ಸ್ಪಷ್ಟನೆ
ನನ್ನ ಹೇಳಿಕೆ ತಿರುಚಲಾಗಿದೆ: ವಿವಾದಾತ್ಮಕ ಹೇಳಿಕೆ ಬಗ್ಗೆ ಛಲವಾದಿ ಸ್ಪಷ್ಟನೆ
ಹಿರಿಯೂರು ಉಪಚುನಾವಣೆ: ಕಾಂಗ್ರೆಸ್​​ ಅಭ್ಯರ್ಥಿಯ ಸುಳಿವು ನೀಡಿದ ಡಿಕೆಶಿ
ಹಿರಿಯೂರು ಉಪಚುನಾವಣೆ: ಕಾಂಗ್ರೆಸ್​​ ಅಭ್ಯರ್ಥಿಯ ಸುಳಿವು ನೀಡಿದ ಡಿಕೆಶಿ
ಉಕ್ರೇನ್ ಮೇಲೆ ರಷ್ಯಾದಿಂದ ಭೀಕರ ದಾಳಿ; ಶಾಲಾ ಕಟ್ಟಡ ಧ್ವಂಸವಾಗಿ 29 ಜನ ಸಾವು
ಉಕ್ರೇನ್ ಮೇಲೆ ರಷ್ಯಾದಿಂದ ಭೀಕರ ದಾಳಿ; ಶಾಲಾ ಕಟ್ಟಡ ಧ್ವಂಸವಾಗಿ 29 ಜನ ಸಾವು
ಛಲವಾದಿ ನಾರಾಯಣಸ್ವಾಮಿ ಮನೆಗೆ ಮುತ್ತಿಗೆ ಯತ್ನ; ಕೈ ಕಾರ್ಯಕರ್ತರು ವಶಕ್ಕೆ
ಛಲವಾದಿ ನಾರಾಯಣಸ್ವಾಮಿ ಮನೆಗೆ ಮುತ್ತಿಗೆ ಯತ್ನ; ಕೈ ಕಾರ್ಯಕರ್ತರು ವಶಕ್ಕೆ
ಮುತ್ತುಸ್ವಾಮಿ ದೀಕ್ಷಿತರ್ 250ನೇ ಜಯಂತಿ ಪ್ರಯುಕ್ತ 250 ರೂ. ನಾಣ್ಯ ಬಿಡುಗಡೆ
ಮುತ್ತುಸ್ವಾಮಿ ದೀಕ್ಷಿತರ್ 250ನೇ ಜಯಂತಿ ಪ್ರಯುಕ್ತ 250 ರೂ. ನಾಣ್ಯ ಬಿಡುಗಡೆ
ಪರೀಕ್ಷಾ ಅಕ್ರಮ ತಡೆಗೆ ಕೆಇಎಯಿಂದ ಹೊಸ ಮಾರ್ಗಸೂಚಿ ಪ್ರಕಟ
ಪರೀಕ್ಷಾ ಅಕ್ರಮ ತಡೆಗೆ ಕೆಇಎಯಿಂದ ಹೊಸ ಮಾರ್ಗಸೂಚಿ ಪ್ರಕಟ
ವಿಜಯಲಕ್ಷ್ಮಿ ದರ್ಶನ್ ಸುತ್ತ ಗರಗರನೆ ತಿರುಗಿದ ಕರಿಕಲ್ಲಮ್ಮ ದೇವರ ಮೂರ್ತಿ
ವಿಜಯಲಕ್ಷ್ಮಿ ದರ್ಶನ್ ಸುತ್ತ ಗರಗರನೆ ತಿರುಗಿದ ಕರಿಕಲ್ಲಮ್ಮ ದೇವರ ಮೂರ್ತಿ