AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಬುಲೆಟ್ ರೈಲು ತಯಾರಿಕೆ ಪರಿಶೀಲಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಬೆಂಗಳೂರಿನ ಬಿಇಎಂಎಲ್ (BEML) ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಬುಲೆಟ್ ರೈಲಿನ ಪ್ರಮುಖ ಉತ್ಪಾದನಾ ಹಂತಗಳ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಈ ಬುಲೆಟ್ ರೈಲು ಗಂಟೆಗೆ ಗರಿಷ್ಠ 280 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರಲಿದೆ. ಇದರ ಕಾರ್ಯಾಚರಣಾ ವೇಗ ಗಂಟೆಗೆ 249 ಕಿ.ಮೀ. ಇರಲಿದೆ.

ಬೆಂಗಳೂರಿನಲ್ಲಿ ಬುಲೆಟ್ ರೈಲು ತಯಾರಿಕೆ ಪರಿಶೀಲಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
ಬುಲೆಟ್ ರೈಲು ತಯಾರಿಕೆ ಪರಿಶೀಲಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್Image Credit source: Ashwini Vaishnaw X Page
ಪ್ರಸನ್ನ ಹೆಗಡೆ
|

Updated on:Nov 02, 2026 | 11:44 AM

Share

ಬೆಂಗಳೂರು, ನವೆಂಬರ್​ 02: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನ ಬಿಇಎಂಎಲ್ (BEML) ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ, ಬಹು ನಿರೀಕ್ಷಿತ ಬುಲೆಟ್ ರೈಲು B28 ತಯಾರಿಕಾ ಪ್ರಕ್ರಿಯೆಯನ್ನು ಪರಿಶೀಲಿಸಿದ್ದಾರೆ. ಅಂಡರ್‌ಫ್ರೇಮ್, ಸೈಡ್‌ವಾಲ್, ಮೇಲ್ಛಾವಣಿ ಜೋಡಣೆ, ಬೋಗಿ ಜೋಡಣೆ, ಮೇಲ್ಮೈ ಸಿದ್ಧತೆ ಮತ್ತು ಸಂಸ್ಕರಣೆ ಸೇರಿದಂತೆ ಉತ್ಪಾದನೆಯ ಪ್ರಮುಖ ಹಂತಗಳನ್ನು ಅವರು ವೀಕ್ಷಿಸಿದ್ದಾರೆ.

ಘಟಕಗಳ ಕಾರ್ಯವೈಖರಿ ಬಗ್ಗೆಯೂ ಸಚಿವರಿಂದ ಪರಿಶೀಲನೆ

ಪ್ರಯಾಣಿಕರ ಆಸನಗಳು, ಹೀಟಿಂಗ್, ವೆಂಟಿಲೇಷನ್ ಮತ್ತು ಏರ್ ಕಂಡೀಷನಿಂಗ್ (HVAC) ವ್ಯವಸ್ಥೆ, ಕಪ್ಲರ್‌ಗಳು ಹಾಗೂ ರೈಲಿನ ಇತರ ಉಪಕರಣಗಳು ಮತ್ತು ಘಟಕಗಳ ಕಾರ್ಯವೈಖರಿಯನ್ನೂ ಸಚಿವರು ಪರಿಶೀಲಿಸಿದ್ದಾರೆ. ಸೈಡ್ ಮಾಡ್ಯೂಲ್ ಮತ್ತು ರೂಫ್ ಮಾಡ್ಯೂಲ್‌ಗಳ ತಯಾರಿಕೆ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಗ್ರೀನ್ ಸಿಗ್ನಲ್: ಇಲ್ಲಿದೆ ಟಿಕೆಟ್ ದರ, ವೇಳಾಪಟ್ಟಿ ಮಾಹಿತಿ

ಬುಲೆಟ್ ರೈಲಿನ ಪ್ರಮುಖ ವೈಶಿಷ್ಟ್ಯಗಳು

ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಈ ಬುಲೆಟ್ ರೈಲು ಗಂಟೆಗೆ ಗರಿಷ್ಠ 280 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರಲಿದೆ. ಇದರ ಕಾರ್ಯಾಚರಣಾ ವೇಗ ಗಂಟೆಗೆ 249 ಕಿ.ಮೀ. ಇರಲಿದೆ. 202 ಮೀಟರ್ ಉದ್ದದ ಈ ರೈಲಿನಲ್ಲಿ ಎಂಟು ಬೋಗಿಗಳಿದ್ದು, ಒಟ್ಟು 557 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಮುಂಬೈ-ಅಹಮದಾಬಾದ್ ನಡುವಿನ 508 ಕಿ.ಮೀ. ಉದ್ದದ ಬುಲೆಟ್ ರೈಲು ಕಾರಿಡಾರ್‌ನಲ್ಲಿ ಈ ರೈಲು ಸಂಚಾರ ನಡೆಸಲಿದ್ದು, ಸಂಪೂರ್ಣ ಕಾರಿಡಾರ್ 2029ರ ಡಿಸೆಂಬರ್‌ನಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:44 am, Mon, 2 November 26

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ಆಸಿಯಾಗೆ ಜೋಡಿ ಆಗುವಾಸೆ, ಪ್ರಶಾಂತ್​​ ಆಸೆಗೆ ಕೊಳ್ಳಿ ಇಟ್ಟ ಕಿಚ್ಚ
ಆಸಿಯಾಗೆ ಜೋಡಿ ಆಗುವಾಸೆ, ಪ್ರಶಾಂತ್​​ ಆಸೆಗೆ ಕೊಳ್ಳಿ ಇಟ್ಟ ಕಿಚ್ಚ
ನಾವು ಶಿವಭಕ್ತರು, ಶಿವ ದೇವಾಲಯದಲ್ಲಿ ಮದುವೆ: ಐಶ್ವರ್ಯಾ-ಶಿಶಿರ್
ನಾವು ಶಿವಭಕ್ತರು, ಶಿವ ದೇವಾಲಯದಲ್ಲಿ ಮದುವೆ: ಐಶ್ವರ್ಯಾ-ಶಿಶಿರ್
ಸರ್ಕಾರಿ ಶಾಲೆಗೆ ಬಿಸಿಯೂಟ ಅಕ್ಕಿ ಪೂರೈಸದ ಪ್ರಕರಣದಲ್ಲಿ ಇಬ್ಬರು ಸಸ್ಪೆಂಡ್
ಸರ್ಕಾರಿ ಶಾಲೆಗೆ ಬಿಸಿಯೂಟ ಅಕ್ಕಿ ಪೂರೈಸದ ಪ್ರಕರಣದಲ್ಲಿ ಇಬ್ಬರು ಸಸ್ಪೆಂಡ್
ಮನವಿ ನೀಡಿದವರ ಬಳಿ ಸಚಿವ ಮಧು ಬಂಗಾರಪ್ಪ ದರ್ಪ: ವಿಡಿಯೋ ವೈರಲ್
ಮನವಿ ನೀಡಿದವರ ಬಳಿ ಸಚಿವ ಮಧು ಬಂಗಾರಪ್ಪ ದರ್ಪ: ವಿಡಿಯೋ ವೈರಲ್
ಬೆಂಗಳೂರು ರೌಡಿ ಶೀಟರ್‌ಗಳಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್
ಬೆಂಗಳೂರು ರೌಡಿ ಶೀಟರ್‌ಗಳಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್
ಚಿನ್ನ ಖರೀದಿಸಬೇಡಿ ಎಂಬ ಕರೆಯನ್ನು ಪಾಲಿಸಿದ ಭಾರತೀಯರಿಗೆ ಮೋದಿ ಮೆಚ್ಚುಗೆ
ಚಿನ್ನ ಖರೀದಿಸಬೇಡಿ ಎಂಬ ಕರೆಯನ್ನು ಪಾಲಿಸಿದ ಭಾರತೀಯರಿಗೆ ಮೋದಿ ಮೆಚ್ಚುಗೆ
ಕೊಚ್ಚಿನ್ ಏರ್​ಪೋರ್ಟ್​ನಲ್ಲಿ ಲೇಖಕ ರವಿ ಹಂಜ್ ವಿಚಾರಣೆ
ಕೊಚ್ಚಿನ್ ಏರ್​ಪೋರ್ಟ್​ನಲ್ಲಿ ಲೇಖಕ ರವಿ ಹಂಜ್ ವಿಚಾರಣೆ
ಬರದಿಂದ ರೈತರು ಸಂಕಷ್ಟದಲ್ಲಿರುವಾಗ ಗದಗ ಡಿಸಿ ನಿವಾಸದಲ್ಲಿ ಮೋಜು-ಮಸ್ತಿ
ಬರದಿಂದ ರೈತರು ಸಂಕಷ್ಟದಲ್ಲಿರುವಾಗ ಗದಗ ಡಿಸಿ ನಿವಾಸದಲ್ಲಿ ಮೋಜು-ಮಸ್ತಿ
ನವೆಂಬರ್ 23ರಿಂದ 29ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನವೆಂಬರ್ 23ರಿಂದ 29ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಬಿಗ್ ಬಾಸ್: ಸೂಪರ್ ಸಂಡೇ ಸಂಚಿಕೆಯಲ್ಲೂ ಮಂಜ, ಗಾನವಿ ಲವ್ ಸ್ಟೋರಿ ಚರ್ಚೆ
ಬಿಗ್ ಬಾಸ್: ಸೂಪರ್ ಸಂಡೇ ಸಂಚಿಕೆಯಲ್ಲೂ ಮಂಜ, ಗಾನವಿ ಲವ್ ಸ್ಟೋರಿ ಚರ್ಚೆ