ವಾಹನ ಸವಾರರ ಗಮನಕ್ಕೆ: ಇಂದು ಶಿವಾಜಿನಗರ ರಸ್ತೆ ಬಂದ್, ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ
Traffic Advisory: ಶಿವಾಜಿನಗರದಲ್ಲಿ ನಡೆಯಲಿರುವ ಸಂತ ಮೇರಿ ಜಯಂತಿ ಹಾಗೂ ಆರೋಗ್ಯ ಮಾತೆಯ ಧ್ವಜಾರೋಹಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಟ್ರಾಫಿಕ್ ಅಡ್ವೈಸರಿ ಬಿಡುಗಡೆ ಮಾಡಿದ್ದಾರೆ. ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ಪಾರ್ಕಿಂಗ್ ನಿಷೇಧಿಸಲಾಗಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಕಲ್ಪಿಸಲಾಗಿರುವ ಪರ್ಯಾಯ ಮಾರ್ಗಗಳು ಮತ್ತು ಪಾರ್ಕಿಂಗ್ ಸ್ಥಳಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು
- ಶಿವಾಜಿನಗರದಲ್ಲಿ ಆರೋಗ್ಯ ಮಾತೆಯ ಧ್ವಜಾರೋಹಣ ಹಿನ್ನೆಲೆ ಹಲವು ರಸ್ತೆಗಳ ಸಂಚಾರ ಬಂದ್.
- ಮಧ್ಯಾಹ್ನ ಒಂದರಿಂದ ರಾತ್ರಿ ಹತ್ತರವರೆಗೆ ಪರ್ಯಾಯ ಮಾರ್ಗಗಳಲ್ಲಿ ವಾಹನ ಸಂಚಾರ.
- ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧಿಸಿದ್ದು ನಿಗದಿತ ಸ್ಥಳಗಳಲ್ಲಿ ವಾಹನ ನಿಲುಗಡೆ.
ಬೆಂಗಳೂರು, ಆಗಸ್ಟ್ 29: ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯಲಿರುವ ಸಂತ ಮೇರಿ ಜಯಂತಿ ಹಾಗೂ ಆರೋಗ್ಯ ಮಾತೆಯ ಧ್ವಜಾರೋಹಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ನಗರ ಸಂಚಾರ ಪೊಲೀಸರು (Traffic Police) ಆಯಕಟ್ಟಿನ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಿ ಪರ್ಯಾಯ ಮಾರ್ಗಗಳನ್ನು ಪ್ರಕಟಿಸಿದ್ದಾರೆ. ಸಾವಿರಾರು ಭಕ್ತರು ಸೇರುವ ನಿರೀಕ್ಷೆಯಿರುವುದರಿಂದ, ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಇಂದು ಮಧ್ಯಾಹ್ನ 1.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಸಂಚಾರ ನಿಷೇಧಿತ ಪ್ರಮುಖ ರಸ್ತೆಗಳು
-
- ಬಾಳೆಕುಂದ್ರಿ ವೃತ್ತದಿಂದ ಜ್ಯೋತಿ ಕೆಫೆ ಜಂಕ್ಷನ್‌ವರೆಗೆ ಹಾಗೂ ಶಿವಾಜಿ ಸರ್ಕಲ್‌ನಿಂದ ಜ್ಯೋತಿ ಕೆಫೆ ಜಂಕ್ಷನ್ ಕಡೆಗೆ ಎಲ್ಲ ರೀತಿಯ ವಾಹನ ಸಂಚಾರ ನಿಷೇಧಿಸಲಾಗಿದೆ.
- ಬಿ.ಆರ್.ವಿ ಜಂಕ್ಷನ್‌ನಿಂದ ಸೆಲೆಕ್ಟ್ ಜಂಕ್ಷನ್ ಮತ್ತು ಬೋರಿಂಗ್ ಆಸ್ಪತ್ರೆ ಜಂಕ್ಷನ್‌ನಿಂದ ಸೆಲೆಕ್ಟ್ ಜಂಕ್ಷನ್‌ವರೆಗೆ ವಾಹನ ಸಂಚಾರ ನಿಷೇಧ.
- ಕ್ವಾಡ್ರಂಟ್ ವೃತ್ತದಿಂದ ಆರ್.ಎಮ್.ಎಸ್ ಜಂಕ್ಷನ್ ಹಾಗೂ ಬಂಬೂ ಬಜಾರ್ ಕಡೆಯಿಂದ ಸುನ್ನಿ ವೃತ್ತದ ಕಡೆಗೆ ಮಾರ್ಗಗಳನ್ನು ಬಂದ್ ಮಾಡಲಾಗಿದೆ.
“ಸಂಚಾರ ಸಲಹೆ” pic.twitter.com/xZ50jPo3vw
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) August 27, 2026
ಪರ್ಯಾಯ ಮಾರ್ಗಗಳು ಹಾಗೂ ಬಸ್ ನಿಲ್ದಾಣಗಳು
ಕ್ವೀನ್ಸ್ ರಸ್ತೆಯಿಂದ ಬರುವ ಬಿಎಂಟಿಸಿ ಬಸ್‌ಗಳು ಟ್ರಾಫಿಕ್ ಹೆಡ್ ಕ್ವಾರ್ಟರ್ಸ್ ಜಂಕ್ಷನ್ ಬಳಿ ಎಡ ತಿರುವು ಪಡೆದು ಇನ್‌ಫ್ಯಾಂಟ್ರಿ ರಸ್ತೆ ಮೂಲಕ ಶಿವಾಜಿನಗರ ಬಸ್ ನಿಲ್ದಾಣ ತಲುಪಬಹುದು. ಅನಿಲ್ ಕುಂಭ್ಳೆ ಹಾಗೂ ಮಣಿಪಾಲ್ ಜಂಕ್ಷನ್ ಕಡೆಯಿಂದ ಬರುವ ಬಸ್‌ಗಳಿಗೆ ಬಿಆರ್‌ವಿ ಜಂಕ್ಷನ್ ಬಳಿ ಪ್ರಯಾಣಿಕರನ್ನು ಇಳಿಸಲು ವ್ಯವಸ್ಥೆ ಮಾಡಲಾಗಿದೆ.
ಪಾರ್ಕಿಂಗ್ ಸ್ಥಳಗಳು
ರಸಲ್ ಮಾರ್ಕೆಟ್, ಬ್ರಾಡ್‌ವೇ ರಸ್ತೆ, ಇನ್‌ಫ್ಯಾಂಟ್ರಿ ರಸ್ತೆ ಮತ್ತು ಕಬ್ಬನ್ ರಸ್ತೆ ಸುತ್ತಮುತ್ತ ವಾಹನ ನಿಲುಗಡೆ ಸಂಪೂರ್ಣ ನಿಷೇಧಿಸಲಾಗಿದೆ. ಸಾರ್ವಜನಿಕರು ತಮ್ಮ ವಾಹನಗಳನ್ನು ಚೋಟಾ ಮೈದಾನ, ಶಿವಾಜಿನಗರ ಬಿಎಂಟಿಸಿ ಬಸ್ ನಿಲ್ದಾಣದ 1ನೇ ಮಹಡಿ, ಸಫೀನಾ ಪ್ಲಾಜಾ ಮುಂಭಾಗ ಮತ್ತು ರಮಡಾ ಹೋಟೆಲ್ ಆವರಣದಲ್ಲಿ ಪಾರ್ಕ್ ಮಾಡಲು ಸೂಚಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




