ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ: ಆಲಮಟ್ಟಿ ಜಲಾಶಯ ಫುಲ್, ಕೆಆರ್‌ಎಸ್‌ನಲ್ಲಿ ಒಳಹರಿವು ಎಷ್ಟಿದೆ ನೋಡಿ!
ಕರ್ನಾಟಕದ ಜಲಾಶಯಗಳ (ಸೆಪ್ಟೆಂಬರ್ 17) ನೀರಿನ ಮಟ್ಟ: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ ಇಲ್ಲಿದೆ. ಕೃಷ್ಣಾ ಮತ್ತು ಕಾವೇರಿ ಕೊಳ್ಳದ ಆಲಮಟ್ಟಿ, ಕೆಆರ್‌ಎಸ್, ಕಬಿನಿ ಹಾಗೂ ಬಸವಸಾಗರ ಡ್ಯಾಂಗಳ ಗರಿಷ್ಠ ಸಾಮರ್ಥ್ಯ, ಇಂದಿನ ನೀರಿನ ಸಂಗ್ರಹ, ಒಳಹರಿವು ಮತ್ತು ಹೊರಹರಿವಿನ ಸಂಪೂರ್ಣ ಲೈವ್ ಮಾಹಿತಿಯನ್ನು ಪರಿಶೀಲಿಸಿ.

ಬಸವಸಾಗರ ಜಲಾಶಯ
ಮುಖ್ಯಾಂಶಗಳು
- ಆಲಮಟ್ಟಿ ಜಲಾಶಯ ಭರ್ತಿಯಾಗಿದ್ದು 13,692 ಕ್ಯೂಸೆಕ್ ನೀರು ಹೊರಹರಿಲಿದೆ.
- ಕೆಆರ್‌ಎಸ್ ನೀರಿನ ಮಟ್ಟ 105.70 ಅಡಿಗೆ ಏರಿಕೆಯಾಗಿದೆ.
- ಕಬಿನಿಗೆ 924 ಕ್ಯೂಸೆಕ್ ಒಳಹರಿವಿದ್ದು ಸಂಗ್ರಹ 10.94 TMCಗೆ ತಲುಪಿದೆ.
ಬೆಂಗಳೂರು, ಸೆಪ್ಟೆಂಬರ್ 17: ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಪ್ರಮಾಣ ಸಾಧಾರಣವಾಗಿದ್ದು, ಕೃಷ್ಣಾ ಮತ್ತು ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಿಗೆ ನೀರು ಹರಿದುಬರುತ್ತಿದೆ. ಆಲಮಟ್ಟಿ ಡ್ಯಾಂ ಬಹುತೇಕ ಭರ್ತಿಯಾಗಿದ್ದು, ಬಸವಸಾಗರ ಹಾಗೂ ಕೆಆರ್‌ಎಸ್, ಕಬಿನಿ ಜಲಾಶಯಗಳ ಇಂದಿನ ನೀರಿನ ಮಟ್ಟ, ಒಳಹರಿವು ಮತ್ತು ಹೊರಹರಿವಿನ ಸಂಪೂರ್ಣ ವಿವರ ಇಲ್ಲಿದೆ.
ಕಬಿನಿ ಜಲಾಶಯ (ಮೈಸೂರು)
- ಗರಿಷ್ಠ ಮಟ್ಟ: 84.00 ಅಡಿ
- ಇಂದಿನ ಮಟ್ಟ: 68.47 ಅಡಿ
- ಒಟ್ಟು ಸಾಮರ್ಥ್ಯ: 19.52 TMC (ಇಂದಿನ ಸಂಗ್ರಹ: 10.94 TMC)
- ಒಳಹರಿವು: 924 ಕ್ಯೂಸೆಕ್
- ಹೊರಹರಿವು: 833 ಕ್ಯೂಸೆಕ್
ಬಸವಸಾಗರ ಜಲಾಶಯ (ಯಾದಗಿರಿ )
- ಗರಿಷ್ಠ ಮಟ್ಟ: 492.25 ಮೀಟರ್
- ಇಂದಿನ ಮಟ್ಟ: 491.05 ಮೀಟರ್
- ಒಳಹರಿವು: 5,000 ಕ್ಯೂಸೆಕ್
- ಹೊರಹರಿವು: 12,000 ಕ್ಯೂಸೆಕ್
ಕೆ.ಆರ್.ಸಾಗರ ಜಲಾಶಯ (ಮಂಡ್ಯ)
- ಇಂದಿನ ಮಟ್ಟ: 105.70 ಅಡಿ
- ಇಂದಿನ ಸಂಗ್ರಹ: 27.617 TMC
- ಒಳಹರಿವು: 4,221 ಕ್ಯೂಸೆಕ್
- ಹೊರಹರಿವು: 3,252 ಕ್ಯೂಸೆಕ್
ಆಲಮಟ್ಟಿ ಜಲಾಶಯ (ವಿಜಯಪುರ )
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ಮಟ್ಟ: 519.44 ಮೀಟರ್
- ಒಳಹರಿವು: ಇಲ್ಲ
- ಹೊರಹರಿವು: 13,692 ಕ್ಯೂಸೆಕ್
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us




