ಇದು ಈ ವರ್ಷದ ಕೊನೆಯ ಸೂರ್ಯ ಗ್ರಹಣ: ದೀಪಾವಳಿ ಅಮಾವಾಸ್ಯೆ ದಿನವೇ ಪಾರ್ಶ್ವ ಸೂರ್ಯ ಗ್ರಹಣ ಗೋಚರ!

ಇದು 2022ನೇ ವರ್ಷದ ಕೊನೆಯ ಸೂರ್ಯ ಗ್ರಹಣವಾಗಿದ್ದು, ದೀಪಾವಳಿ ಅಮಾವಾಸ್ಯೆ ದಿನದಂದು ಗೋಚರವಾಗಲಿರುವ ಪಾರ್ಶ್ವ ಸೂರ್ಯ ಗ್ರಹಣವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಜನತೆ ಕಾಯುತ್ತಿದ್ದಾರೆ.

ಇದು ಈ ವರ್ಷದ ಕೊನೆಯ ಸೂರ್ಯ ಗ್ರಹಣ: ದೀಪಾವಳಿ ಅಮಾವಾಸ್ಯೆ ದಿನವೇ ಪಾರ್ಶ್ವ ಸೂರ್ಯ ಗ್ರಹಣ ಗೋಚರ!
ಸೂರ್ಯ ಗ್ರಹಣ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Oct 14, 2022 | 4:28 PM

ಬೆಂಗಳೂರು: 3 ವರ್ಷಗಳ ಬಳಿಕ ಭಾರತದಲ್ಲಿ ದೀಪಾವಳಿ (diwali) ಅಮಾವಾಸ್ಯೆ ದಿನದಂದು ಪಾರ್ಶ್ವ ಸೂರ್ಯ ಗ್ರಹಣ (eclipse) ಗೋಚರವಾಗಲಿದೆ. ಬೆಂಗಳೂರಿನಲ್ಲಿ ಅ. 25ರ ಸಂಜೆ 5.12ಯಿಂದ ಗ್ರಹಣ ಆರಂಭವಾಗಲಿದ್ದು, ಸಂಜೆ 5.49ಕ್ಕೆ ಗರಿಷ್ಠ ಮಟ್ಟವನ್ನು ತಲುಪಲಿದೆ. 5.55ರ ವೇಳೆಗೆ ಮುಕ್ತಾಯವಾಗಲಿದೆ. ಈ ಪಾರ್ಶ್ವ ಸೂರ್ಯ ಗ್ರಹಣ ಕೌತುಕತೆಯನ್ನ ಕಣ್ತುಂಬಿಕೊಳ್ಳಲು ರಾಜ್ಯದ ಜನತೆ ಕಾಯುತ್ತಿದ್ದಾರೆ. ಇದು 2022ನೇ ವರ್ಷದ ಕೊನೆಯ ಸೂರ್ಯ ಗ್ರಹಣವಾಗಿದೆ. ಮುಂದಿನ 2 ವರ್ಷಗಳ ಕಾಲ ಬೇರೆ ಯಾವುದೇ ಗ್ರಹಣವೂ ಗೋಚರಿಸುವುದಿಲ್ಲ. ಈ ಹಿಂದೆ ಪಾರ್ಶ್ವ ಸೂರ್ಯ ಗ್ರಹಣ 2019ರಲ್ಲಿ ಗೋಚರವಾಗಿತ್ತು. ಅಸ್ತಂಗತವಾಗುತ್ತಿರುವ ಸೂರ್ಯನ ಬಿಂಬದ ಶೇ.4 ರಷ್ಟು ಭಾಗವನ್ನ ಚಂದ್ರಬಿಂಬವು ಮುಚ್ಚಲಿದೆ. ಭಾತರವಲ್ಲದೆ ಯೂರೋಪ, ಉತ್ತರ ಆಫ್ರಿಕಾ, ಮಧ್ಯ ಪ್ರಾಚ್ಯ ಮತ್ತು ಏಷ್ಯಾದ ಇತರೆ ಭಾಗಗಳಲ್ಲಿ ಗ್ರಹಣ ಗೋಚರವಾಗುತ್ತದೆ. ನೆಹರು ತಾರಾಲಯದಲ್ಲಿ ಪಾರ್ಶ್ವ ಸೂರ್ಯ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬರಿಗಣ್ಣಿನಿಂದ ಸೂರ್ಯ ಗ್ರಹಣ ವೀಕ್ಷಣೆ ಅಪಾಯಕಾರಿ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

ನವೆಂಬರ್​ 08ಕ್ಕೆ ಪಾರ್ಶ್ವ ಚಂದ್ರ ಗ್ರಹಣ

ದೀಪಾವಳಿ ಅಮಾವಾಸ್ಯೆ ದಿನದಂದು ಪಾರ್ಶ್ವ ಸೂರ್ಯ ಗ್ರಹಣ ಸಂಭವಿಸಿದರೆ, ನವೆಂಬರ್ 08 ರಂದು ಪಾರ್ಶ್ವ ಚಂದ್ರ ಗ್ರಹಣ ಗೋಚರವಾಗಲಿದೆ. ಈ ಎರಡು ಗ್ರಹಣಗಳು ಭಾರತಕ್ಕೆ ಪಾರ್ಶ್ವ ಗ್ರಹಣಗಳಾದರೂ ಖಗೋಳ ವಿದ್ಯಮಾನಕ್ಕೆ ಹೋಲಿಸಿದರೆ ಬಲು ಅಪರೂಪ ಎನ್ನಲಾಗುತ್ತಿದೆ. ಏಕೆಂದರೆ ಸೂರ್ಯ ಗ್ರಹಣ ಸೂರ್ಯಾಸ್ತಕ್ಕೆ ಉಂಟಾದರೆ, ಚಂದ್ರಗ್ರಹಣ ಚಂದ್ರ ಉದಯಕ್ಕೆ ನಡೆಯುವುದು ವಿಶೇಷವಾಗಿದೆ.

ಗ್ರಹಣ ಏಕೆ ಉಂಟಾಗುತ್ತದೆ?

ಗ್ರಹಣಗಳು ಅಪರೂಪವೇನಲ್ಲ. ಪ್ರತಿ 6 ತಿಂಗಳಿಗೊಮ್ಮೆ ಉಂಟಾಗುತ್ತವೆ. ಅದರಲ್ಲಿ ಸೂರ್ಯ ಗ್ರಹಣವಾದರೆ ಭೂಮಿಯ ಕೆಲವೇ ಪ್ರದೇಶಕ್ಕೆ ಸೀಮಿತವಾದರೆ ಚಂದ್ರ ಗ್ರಹಣ ಅರ್ಧ ಭೂಮಿಗೆ ಗೋಚರಿಸಬಹುದು. ಪ್ರಖ್ಯಾತ ಖಗೋಳ ಶಾಸ್ತ್ರಜ್ಞ ಪ್ರೊ. ಜಯಂತ್‌ ವಿ. ನಾರ್ಲೀಕರ್‌ ತಮ್ಮ ‘ಸೆವೆನ್‌ ವಂಡರ್ಸ್‌ ಆಫ್‌ ಕಾಸ್ಮಸ್‌’ ಎಂಬ ಪುಸ್ತಕದಲ್ಲಿ ಭೂಮಿಯಲ್ಲಿ ನಡೆಯುವ ಈ ಗ್ರಹಣಗಳು ಒಂದು ವಿಸ್ಮಯವೇ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:56 pm, Fri, 14 October 22

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್