AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ʻಗಾಂಧಿ ಹತ್ಯೆಯ ಸತ್ಯʼ ವಿವಾದ: ಸುಚಿತ್ರ ಅಕಾಡೆಮಿಯಲ್ಲಿ ನಾಟಕಗಳ ಪ್ರದರ್ಶನಕ್ಕೆ ತಾತ್ಕಾಲಿಕ ತಡೆ; ವಿವಾದಕ್ಕೆ ಕಾರಣವಾದ ಪೊಲೀಸರ ಆದೇಶ

ಬೆಂಗಳೂರಿನ ಸುಚಿತ್ರ ಸಿನಿಮಾ ಅಕಾಡೆಮಿಯಲ್ಲಿ ‘ಗಾಂಧಿ ಹತ್ಯೆಯ ಸತ್ಯ’ ನಾಟಕ ಪ್ರದರ್ಶನದ ವೇಳೆ ನಡೆದ ಗಲಾಟೆ ಹಿನ್ನೆಲೆಯಲ್ಲಿ, ಮುಂದಿನ ಆದೇಶದವರೆಗೆ ಎಲ್ಲಾ ನಾಟಕಗಳ ಪ್ರದರ್ಶನಕ್ಕೆ ಪೊಲೀಸರು ನಿಷೇಧ ಹೇರಿರುವುದು ಭಾರಿ ವಿವಾದ ಸೃಷ್ಟಿಸಿದೆ. ಪೊಲೀಸರ ಈ ನಡೆ ಬಗ್ಗೆ ಬರಹಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರೇ ರಂಗಮಂದಿರಕ್ಕೆ ಬೆದರಿಕೆ ಒಡ್ಡಿರುವುದು ಅತ್ಯಂತ ನೀಚ ನಡೆ ಎಂದು ಕಿಡಿ ಕಾರಿದ್ದಾರೆ.

ʻಗಾಂಧಿ ಹತ್ಯೆಯ ಸತ್ಯʼ ವಿವಾದ: ಸುಚಿತ್ರ ಅಕಾಡೆಮಿಯಲ್ಲಿ ನಾಟಕಗಳ ಪ್ರದರ್ಶನಕ್ಕೆ ತಾತ್ಕಾಲಿಕ ತಡೆ; ವಿವಾದಕ್ಕೆ ಕಾರಣವಾದ ಪೊಲೀಸರ ಆದೇಶ
ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ನಾಟಕಗಳ ಪ್ರದರ್ಶನಕ್ಕೇ ತಾತ್ಕಾಲಿಕ ತಡೆ
ಪ್ರಸನ್ನ ಹೆಗಡೆ
|

Updated on:Nov 02, 2026 | 2:40 PM

Share

ಬೆಂಗಳೂರು, ಅಕ್ಟೋಬರ್​​ 02: ಬನಶಂಕರಿಯ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ʻಗಾಂಧಿ ಹತ್ಯೆಯ ಸತ್ಯʼ ನಾಟಕ ಪ್ರದರ್ಶನದ ವೇಳೆ ನಡೆದ ಗಲಾಟೆ ಸಂಬಂಧ ಆರೋಪ-ಪ್ರತ್ಯಾರೋಪಗಳು ಕೇಳಿಬಂದ ಹಿನ್ನೆಲೆ ಬನಶಂಕರಿ ಪೊಲೀಸರು ಮಾಡಿರುವ ಆದೇಶವೀಗ ವಿವಾದಕ್ಕೆ ಕಾರಣವಾಗಿದೆ. ಮುಂದಿನ ಆದೇಶದವರೆಗೂ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಯಾವುದೇ ನಾಟಕ ಪ್ರದರ್ಶನ ಮಾಡದಂತೆ ಸೂಚನೆ ನೀಡಲಾಗಿದ್ದು, ಪೊಲೀಸರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಪೊಲೀಸರ ಆದೇಶದಲ್ಲಿ ಏನಿದೆ?

ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಅಕ್ಟೋಬರ್​​ 31ರಂದು ನಡೆದಿದ್ದ ಗಾಂಧಿ ಹತ್ಯೆಯ ಸತ್ಯ ನಾಟಕ ಪ್ರದರ್ಶನ ಸಂಬಂಧ ದೂರು ಪ್ರತಿದೂರುಗಳು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆ ಬಗ್ಗೆ ತನಿಖೆ ನಡೆಯುತ್ತಿದೆ. ಆದ್ದರಿಂದ ಅಕಾಡೆಮಿಯಲ್ಲಿ ನಾಟಕಗಳ ಪ್ರದರ್ಶನವನ್ನು ಮುಂದಿನ ಆದೇಶದವರೆಗೂ ಮುಂದೂಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಒಂದು ವೇಳೆ ಯಾವುದೇ ನಾಟಕ ಪ್ರದರ್ಶನಗಳು ನಡೆದು ಕಾನೂನು ಸುವ್ಯವಸ್ಥೆಗೆ ತೊಂದರೆಯಾದಲ್ಲಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ʻಗಾಂಧಿ ಹತ್ಯೆಯ ಸತ್ಯʼ ನಾಟಕ ಪ್ರದರ್ಶನದ ವೇಳೆ ಅಡ್ಡಂಡ ಕಾರ್ಯಪ್ಪ ಮುಖಕ್ಕೆ ಮಸಿ: ದೂರು-ಪ್ರತಿದೂರು ದಾಖಲು

ಪೊಲೀಸರ ಆದೇಶಕ್ಕೆ ತೀವ್ರ ಆಕ್ರೋಶ

ಭಾರತದಲ್ಲಿ 1975-77ರ ಅವಧಿಯಲ್ಲಿ ಎಮರ್ಜೆನ್ಸಿ ಇದ್ದಾಗ ನಾಟಕ, ಸಿನೆಮಾ ಹಾಡು, ಸಿನೆಮಾ, ಪುಸ್ತಕ ಇತ್ಯಾದಿಗಳನ್ನು ನಿಷೇಧಿಸುವ ಕ್ರಮ ಇತ್ತು. ಸರಕಾರದ ವಿರುದ್ಧ ಏನೇ ಇದ್ದರೂ ಅದನ್ನು ನಿಷೇಧಿಸಬೇಕು ಎಂಬುದು ಸರಕಾರದ ಒಂದಂಶದ ಕಾರ್ಯಕ್ರಮವಾಗಿತ್ತು. ಎಷ್ಟರಮಟ್ಟಿಗೆ ಎಂದರೆ ಪ್ರತಿ ಪತ್ರಿಕೆಯ ಪ್ರತಿ ಸುದ್ದಿತುಣುಕು ಕೂಡ ಸರಕಾರೀ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಓಕೇ ಆಗಿ ನಂತರ ಪ್ರಕಟವಾಗಬೇಕಿತ್ತು. ಅಂಥದ್ದೇ ‘ಎಮರ್ಜೆನ್ಸಿ ಸರಕಾರ’ ಈಗ ಮತ್ತೆ ಕರ್ನಾಟಕವನ್ನು ಆಳುತ್ತಿದೆ. ಯಾಕೆಂದರೆ ಇಲ್ಲಿ ಸೃಜನಶೀಲ ಅಭಿವ್ಯಕ್ತಿಯಾದ ನಾಟಕವನ್ನು ಆಡುವುದಕ್ಕೆ ಕೂಡ ನಿಷೇಧ ಹೇರಲಾಗಿದೆ ಎಂದು ಬರಹಗಾರ ರೋಹಿತ್​​ ಚಕ್ರತೀರ್ಥ ಆರೋಪಿಸಿದ್ದಾರೆ.

ಮುಖ್ಯಮಂತ್ರಿಯವರೇ, ಇದೇನು ನಡೀತಾ ಇದೆ? ಒಂದು ನಾಟಕದ ನೆಪ ಹೇಳಿ ರಂಗಮಂದಿರದ ಮುಂದಿನ ಎಲ್ಲಾ ಇತರೆ ಪದರ್ಶನಗಳಿಗೂ ನಿಷೇಧ ಹೇರಿದ್ದೀರಲ್ಲ? ಇದೇ ನಿಮ್ಮ ಸರ್ಕಾರದ ಅಭಿವ್ಯಕ್ತಿ ಸ್ವಾತಂತ್ರ್ಯದ ನೀತಿಯಾ? ಇಂತಹ ಸರ್ವಾಧಿಕಾರಿ ಆಡಳಿತವನ್ನು ಕಣ್ಣಿಗೆ ರಾಚುವಂತೆ ನಡೆಸುತ್ತಾ ದಿಲ್ಲಿಯಲ್ಲಿ ಕೂತು ಅಘೋಷಿತ ತುರ್ತುಪರಿಸ್ಥಿತಿ ಅಂತ ಬೊಬ್ಬೆ ಇಡ್ತೀರಲ್ಲ? ಇದ್ಯಾವ ಕಪಟ ನಾಟಕ ನಿಮ್ಮು? ಕೂಡಲೇ ಈ ನಿಷೇಧವನ್ನು ಹಿಂದೆಗೆದುಕೊಳ್ಳಿ. ಪೊಲೀಸರೇ ರಂಗಮಂದಿರಕ್ಕೆ ಬೆದರಿಕೆ ಒಡ್ಡಿರುವುದು ಅತ್ಯಂತ ನೀಚ ನಡೆ ಎಂದು ಮತ್ತೋರ್ವ ಬರಹಗಾರ ಬೇಳೂರು ಸುದರ್ಶನ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್​​ 31ರಂದು ಏನಾಗಿತ್ತು?

ಅಕ್ಟೋಬರ್​​ 31ರಂದು ಬನಶಂಕರಿಯ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ʻಗಾಂಧಿ ಹತ್ಯೆಯ ಸತ್ಯʼ ನಾಟಕ ಪ್ರದರ್ಶನ ನಡೆದಿತ್ತು. ಈ ವೇಳೆ ನಾಟಕದಲ್ಲಿ ಮಹಾತ್ಮ ಗಾಂಧೀಜಿ ವಿರುದ್ಧ ಆಕ್ಷೇಪಾರ್ಹ ಸಂಭಾಷಣೆ ಬಳಸಲಾಗಿದೆ ಎಂದು ಆರೋಪಿಸಿ ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರ ಮುಖಕ್ಕೆ ಮಸಿ ಬಳಿಯಲಾಗಿತ್ತು. ಬಳಿಕ ಮಾತಿನ ಚಕಮಕಿ ನಡೆದು ಅಡ್ಡಂಡ ಕಾರ್ಯಪ್ಪ ಅವರನ್ನ ಎಳೆದಾಡಲಾಗಿತ್ತು. ಈ ಸಂಬಂಧ ಬೆಂಗಳೂರಿನ ಬನಶಂಕರಿ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದ್ದವು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:38 pm, Mon, 2 November 26

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ಕಾಫಿ, ಟೀ ಬೆಲೆ ಹೆಚ್ಚಳ: ಸರ್ಕಾರದ ವಿರುದ್ಧ ಆಕ್ರೋಶ, ಜನ ಏನಂತಾರೆ ನೋಡಿ
ಕಾಫಿ, ಟೀ ಬೆಲೆ ಹೆಚ್ಚಳ: ಸರ್ಕಾರದ ವಿರುದ್ಧ ಆಕ್ರೋಶ, ಜನ ಏನಂತಾರೆ ನೋಡಿ
ಸ್ಟಿಂಗ್ ಆಪರೇಷನ್ ಪ್ರಕರಣ: ಕುಮಾರಸ್ವಾಮಿ ದೆಹಲಿ ನಿವಾಸ ಪರಿಶೀಲನೆ ಸಾಧ್ಯತೆ
ಸ್ಟಿಂಗ್ ಆಪರೇಷನ್ ಪ್ರಕರಣ: ಕುಮಾರಸ್ವಾಮಿ ದೆಹಲಿ ನಿವಾಸ ಪರಿಶೀಲನೆ ಸಾಧ್ಯತೆ
ಶಕ್ತಿದೇವತೆ ಹಾಸನಾಂಬೆಯನ್ನು ನೋಡಲು ಕಿಕ್ಕಿರಿದ ಭಕ್ತರ ದಂಡು!
ಶಕ್ತಿದೇವತೆ ಹಾಸನಾಂಬೆಯನ್ನು ನೋಡಲು ಕಿಕ್ಕಿರಿದ ಭಕ್ತರ ದಂಡು!
ಕೃಷ್ಣಾ ನದಿ ನೀರು ವಿವಾದ, ಮಹಾರಾಷ್ಟ್ರದ ವಿರುದ್ಧ ಎಂಬಿ ಪಾಟೀಲ್ ವಾಗ್ದಾಳಿ
ಕೃಷ್ಣಾ ನದಿ ನೀರು ವಿವಾದ, ಮಹಾರಾಷ್ಟ್ರದ ವಿರುದ್ಧ ಎಂಬಿ ಪಾಟೀಲ್ ವಾಗ್ದಾಳಿ
ನಂದಿನಿ ಹಾಲು ದರ ಏರಿಕೆ ಪರಿಣಾಮ: ರಾಜ್ಯಾದ್ಯಂತ ಕಾಫಿ, ಟೀ ಬೆಲೆ ₹5 ಹೆಚ್ಚಳ
ನಂದಿನಿ ಹಾಲು ದರ ಏರಿಕೆ ಪರಿಣಾಮ: ರಾಜ್ಯಾದ್ಯಂತ ಕಾಫಿ, ಟೀ ಬೆಲೆ ₹5 ಹೆಚ್ಚಳ
‘ಧಮ್ ಇದ್ರೆ ಬಿಚ್ಚಿಡು’; ಗಾನವಿ-ಆಸಿಯಾ ಮಧ್ಯೆ ನಡೆಯಿತು ದೊಡ್ಡ ವಾಕ್ಸಮರ
‘ಧಮ್ ಇದ್ರೆ ಬಿಚ್ಚಿಡು’; ಗಾನವಿ-ಆಸಿಯಾ ಮಧ್ಯೆ ನಡೆಯಿತು ದೊಡ್ಡ ವಾಕ್ಸಮರ
ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಸತ್ತ ನಾಲ್ವರ ಮೃತದೇಹ ಬೆಂಗಳೂರಿಗೆ
ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಸತ್ತ ನಾಲ್ವರ ಮೃತದೇಹ ಬೆಂಗಳೂರಿಗೆ
ಶಿವಲಿಂಗೇಗೌಡ ಕಬಡ್ಡಿ ಅಖಾಡಕ್ಕಿಳಿದು ರೈಡ್ ಮಾಡಿದ ಸ್ಟೈಲ್ ನೋಡಿ
ಶಿವಲಿಂಗೇಗೌಡ ಕಬಡ್ಡಿ ಅಖಾಡಕ್ಕಿಳಿದು ರೈಡ್ ಮಾಡಿದ ಸ್ಟೈಲ್ ನೋಡಿ
ಇಂದು ಕಾಲಾಷ್ಟಮಿ; ಕಾಲಭೈರವನ ಆರಾಧನೆಗೆ ಸೂಕ್ತ ದಿನ
ಇಂದು ಕಾಲಾಷ್ಟಮಿ; ಕಾಲಭೈರವನ ಆರಾಧನೆಗೆ ಸೂಕ್ತ ದಿನ
ಮೆರವಣಿಗೆಯಲ್ಲಿ ಗಮನ ಸೆಳೆದ ರೋಬೋಟಿಕ್​ ಆನೆಗಳು!
ಮೆರವಣಿಗೆಯಲ್ಲಿ ಗಮನ ಸೆಳೆದ ರೋಬೋಟಿಕ್​ ಆನೆಗಳು!