AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UPSC Exam: ಮೇ 25 ರಂದು ನಮ್ಮ ಮೆಟ್ರೋ ಸಂಚಾರ 1 ಗಂಟೆ ಮುಂಚಿವಾಗಿ ಆರಂಭ

ಮೇ 25ರಂದು ನಡೆಯುವ ಯುಪಿಎಸ್​​ಸಿ ಪೂರ್ವಭಾವಿ ಪರೀಕ್ಷೆಗೆ ಅನುಕೂಲವಾಗುವಂತೆ ಬೆಂಗಳೂರು ಮೆಟ್ರೋ ರೈಲು ಸೇವೆ ಒಂದು ಗಂಟೆ ಮುಂಚಿತವಾಗಿ ಆರಂಭವಾಗಲಿದೆ. ವೈಟ್‌ಫೀಲ್ಡ್, ಚಲ್ಲಘಟ್ಟ, ಮಾದಾವರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳಿಂದ ಬೆಳಿಗ್ಗೆ 6 ಗಂಟೆಗೆ ರೈಲುಗಳು ಸಂಚರಿಸಲಿವೆ. ಪರೀಕ್ಷಾರ್ಥಿಗಳಿಗೆ ಸುಲಭ ಪ್ರಯಾಣಕ್ಕಾಗಿ ಬಿಎಂಆರ್‌ಸಿಎಲ್ ಈ ವ್ಯವಸ್ಥೆ ಮಾಡಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

UPSC Exam: ಮೇ 25 ರಂದು ನಮ್ಮ ಮೆಟ್ರೋ ಸಂಚಾರ 1 ಗಂಟೆ ಮುಂಚಿವಾಗಿ ಆರಂಭ
ನಮ್ಮ ಮೆಟ್ರೋ
Kiran Surya
| Updated By: ವಿವೇಕ ಬಿರಾದಾರ|

Updated on:May 24, 2025 | 10:46 PM

Share

ಬೆಂಗಳೂರು, ಮೇ 24: ಭಾನುವಾರ (ಮೇ.25) ದಂದು ಕೇಂದ್ರ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ (UPSC Preliminary Exams 2025) ನಡೆಯಲಿದೆ. ಹೀಗಾಗಿ, ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ನಮ್ಮ ಮೆಟ್ರೋ (Namma Metro) ಸಂಚಾರ ಒಂದು ಗಂಟೆ ಮುಂಚಿತವಾಗಿ ಆರಂಭವಾಗಲಿದೆ. ವೈಟ್‌ ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ, ಮಾದಾವರ ಮತ್ತು ರೇಷ್ಮೆ ಸಂಸ್ಥೆ ಈ ನಾಲ್ಕೂ ಟರ್ಮಿನಲ್‌ ನಿಲ್ದಾಣಗಳಿಂದ ಬೆಳಿಗ್ಗೆ 7 ಗಂಟೆ ಬದಲಾಗಿ 6 ಗಂಟೆಯಿಂದಲೇ ರೈಲು ಸೇವೆ ಪ್ರಾರಂಭವಾಗಲಿದೆ. ಪ್ರಯಾಣಿಕರು ಈ ಸೇವೆಗಳ ಅನುಕೂಲ ಪಡೆಯುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಟ್ವಿಟರ್ ಪೋಸ್ಟ್​

ಎಐ ಆಧಾರಿತ ಕ್ಯಾಮೆರಾ ಅಳವಡಿಕೆ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆಯ ನಡುವಿನ ಆರು ಮೆಟ್ರೋ ನಿಲ್ದಾಣಗಳಲ್ಲಿ ಸುಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ. ಇದು ನಿಲ್ದಾಣದ ಒಳಗಿನ ಭಾಗಗಳ ಜೊತೆಗೆ ಸುತ್ತಲಿನ ಪ್ರದೇಶಗಳನ್ನೂ ಗಮನಿಸುತ್ತಿದ್ದು, ಕೃತಕಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ಅಪಾಯಗಳನ್ನು ತಕ್ಷಣ ಗುರುತಿಸಿ, ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ನೆರವಾಗುತ್ತದೆ.

ಈ ನಿಗಾ ವ್ಯವಸ್ಥೆಯು ಈಗಾಗಲೇ ಕಾರ್ಯಾರಂಭವಾಗಿದೆ. ನಿಲ್ದಾಣದ ಮುಂದೆ ಇರುವ ವಾಹನಗಳ ಸಂಖ್ಯಾ ಫಲಕಗಳನ್ನು ಗುರುತಿಸಲು “ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್’ (ANPR) ತಂತ್ರಜ್ಞಾನವನ್ನು ಕ್ಯಾಮೆರಾದಲ್ಲಿ ಅಳವಡಿಸಲಾಗಿದೆ. ಎಐ ಆಧಾರಿತ ವಿಡಿಯೊ ವಿಶ್ಲೇಷಣೆಯೊಂದಿಗೆ, ಈ ತಂತ್ರಜ್ಞಾನ ಶಂಕಾಸ್ಪದ ಚಟುವಟಿಕೆಗಳು, ಅನುಮಾನಾಸ್ಪದ ಘಟನೆಗಳನ್ನು ತಕ್ಷಣ ಪತ್ತೆಹಚ್ಚುತ್ತದೆ.

ಮೆಟ್ರೋ ನಿಲ್ದಾಣದಲ್ಲಿ ಕ್ಯೂಆರ್ ಟಿಕೆಟ್ ಯಂತ್ರ

ಮೆಟ್ರೋ ನಿಲ್ದಾಣದಲ್ಲಿ ಸ್ವಯಂ ಸೇವಾ ಕ್ಯೂ.ಆರ್ ಟಿಕೆಟ್ ಯಂತ್ರಗಳ ವ್ಯವಸ್ಥೆ ಮಾಡಲಾಗಿದೆ. ಆ ಮೂಲಕ ಪ್ರಯಾಣಿಕರು 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಟಿಕೆಟ್ ಪಡೆಯಬಹುದಾಗಿ ಎಂದು ಬಿಎಂಆರ್​ಸಿಎಲ್ ತಿಳಿಸಿದೆ.

  • ನಿಮ್ಮ ಗಮ್ಯಸ್ಥಾನ ಆಯ್ಕೆಮಾಡಿ: ಪ್ರಯಾಣಿಕರು ಟಿಕೆಟ್​ ಯಂತ್ರದಲ್ಲಿ ಡ್ರಾಪ್-ಡೌನ್ ಮೆನು ಅಥವಾ ನಕ್ಷೆಯನ್ನು ಉಪಯೋಗಿಸಿ ಗಮ್ಯಸ್ಥಾನವನ್ನು ಆಯ್ಕೆ ಮಾಡಬಹುದು. ನಂತರ ಪ್ರಯಾಣಿಕರ ಸಂಖ್ಯೆಯನ್ನು ನಮೂದಿಸಿ, ಫೇರ್ ಪರಿಶೀಲಿಸಬಹುದು.
  • ಪಾವತಿ ಮಾಡಿ: ಯಾವುದೇ ಯುಪಿಐ ಆಧಾರಿತ ಮೊಬೈಲ್ ಆ್ಯಪ್​ಗಳ ಮೂಲಕ ಪಾವತಿ ಮಾಡಬಹುದಾಗಿದೆ. ಪಾವತಿ ಯಶಸ್ವಿಯಾದ ನಂತರ ತಕ್ಷಣವೇ ಪೇಪರ್ ಕ್ಯೂಆರ್ ಟಿಕೆಟ್ ಪ್ರಕಟವಾಗುತ್ತದೆ.

ಇದನ್ನೂ ಓದಿ:  ಮೆಟ್ರೋ ಹೋಂ ಗಾರ್ಡ್​ ಕೃಪೆ: 2 ಲಕ್ಷ ರೂ. ಚಿನ್ನಾಭರಣ, ಹಣವಿದ್ದ ಬ್ಯಾಗ್ ಅರ್ಧ ಗಂಟೆಯಲ್ಲೇ ಮಹಿಳೆ ಕೈಗೆ

ಈ ಕ್ಯೂಆರ್ ಟಿಕೆಟ್‌ಗಳನ್ನು ನಿಲ್ಯಾಣದ ಎಂಟ್ರಿ ಮತ್ತು ಎಕ್ಸಿಟ್ ಗೇಟ್‌ಗಳಲ್ಲಿ ಬಳಸಬಹುದಾಗಿದೆ. ಪ್ರಯಾಣ ಮುಗಿಸಿದ ನಂತರ, ಪ್ರಯಾಣಿಕರು ಟಿಕೆಟ್‌ಗಳನ್ನು ನಿಗದಿತ ಕಸದ ಬಾಕ್ಸುಗಳಲ್ಲಿ ಹಾಕುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ. ಇದು ಸ್ವಚ್ಛತೆ ಮತ್ತು ಪರಿಸರಸ್ನೇಹಿ ಕ್ರಮಗಳ ಭಾಗವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:20 pm, Sat, 24 May 25