AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಸತೀಶ್​​ ಕೈತಪ್ಪಿದ್ಯಾಕೆ? ಜಾರಕಿಹೊಳಿ ಲೆಕ್ಕಾಚಾರ ತಪ್ಪಿದ್ದೇಗೆ?: ಇಲ್ಲಿದೆ ಮಾಹಿತಿ

ಕೆಪಿಸಿಸಿಯ ನೂತನ ಅಧ್ಯಕ್ಷರನ್ನಾಗಿ ವಿಧಾನ ಪರಿಷತ್​​ ಸದಸ್ಯ ಮತ್ತು ಕಾಂಗ್ರೆಸ್​​ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್​​ ಅವರನ್ನು ಎಐಸಿಸಿ ನೇಮಕ ಮಾಡಿದೆ. ಅಷ್ಟಕ್ಕೂ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದ ಸತೀಶ್ ಜಾರಕಿಹೊಳಿ ಅವರಿಗೆ ಕೊನೆಕ್ಷಣದಲ್ಲಿ ಹಿನ್ನಡೆಯಾಗಲು ಕಾರಣಗಳೇನು? ಹೈಕಮಾಂಡ್ ಲೆಕ್ಕಾಚಾರ ಏನಾಗಿತ್ತು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಸತೀಶ್​​ ಕೈತಪ್ಪಿದ್ಯಾಕೆ? ಜಾರಕಿಹೊಳಿ ಲೆಕ್ಕಾಚಾರ ತಪ್ಪಿದ್ದೇಗೆ?: ಇಲ್ಲಿದೆ ಮಾಹಿತಿ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸತೀಶ್​​ ಕೈತಪ್ಪಿದ್ಯಾಕೆ?Image Credit source: Tv9 Kannada
ಪ್ರಸನ್ನ ಗಾಂವ್ಕರ್​
| Edited By: |

Updated on: Jun 04, 2026 | 12:52 PM

Share

ಬೆಂಗಳೂರು, ಜೂನ್​​ 04: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ (DK Shivakumar)​​ ರಾಜೀನಾಮೆ ಬೆನ್ನಲ್ಲೇ ಪಕ್ಷದ ನೂತನ ಸಾರಥಿಯಾಗಿ ಪರಿಷತ್​​ ಸದಸ್ಯ ಬಿ.ಕೆ. ಹರಿಪ್ರಸಾದ್​ ಅವರನ್ನು ಎಐಸಿಸಿ ಘೋಷಣೆ ಮಾಡಿದೆ. ಅಷ್ಟಕ್ಕೂ ಹರಿಪ್ರಸಾದ್​​ ಹೆಸರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್​​ಗೆ ಆದ ಸರ್ಪ್ರೈಸ್​​ ಎಂಟ್ರಿಯಾಗಿತ್ತು. ಅಲ್ಲಿಯವರೆಗೂ ಸತೀಶ್​​ ಜಾರಕಿಹೊಳಿ ಹೆಸರೇ ಮುಂಚೂಣಿಯಲ್ಲಿತ್ತು, ಅವರಿಗೇ ಪಟ್ಟ ಎಂಬದೂ ಬಹುತೇಕ ಫೈನಲ್​​ ಆಗಿತ್ತು. ಆದರೆ ಕೊನೇ ಕ್ಷಣದಲ್ಲಿ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿದ್ದು ಒಬಿಸಿಯ ನಾಯಕನಿಗೆ ಮಹತ್ವದ ಹುದ್ದೆ ಲಭಿಸಿದೆ.

ಸತೀಶ್​​ ಲೆಕ್ಕಾಚಾರ ತಪ್ಪಿದ್ದೇಗೆ?

  • ಕೆಪಿಸಿಸಿ ಹಾಗೂ ಮಿನಿಸ್ಟರ್ ಎರಡೂ ಹುದ್ದೆ ನೀಡಲು ಹೈಕಮಾಂಡ್ ನಿರಾಕರಣೆ
  • ಸಿಎಂ ಸ್ಥಾನಕ್ಕೆ ಯಾವುದೇ ಸಂದರ್ಭದಲ್ಲಿ ಸತೀಶ್ ಕಾಂಪಿಟೇಟರ್​ ಎಂಬ ಆತಂಕ
  • ಡಿಕೆ ಶಿವಕುಮಾರ್​​ಗೆ ಸಮನಾಗಿ ಪವರ್ ಸೆಂಟರ್ ಆಗುತ್ತಾರೆ ಎಂಬ ಭೀತಿ
  • ಶಾಸಕರ ಬೆಂಬಲ ಸತೀಶ್​​ಗೆ ಇದೆ ಎಂಬುದು ದೊಡ್ಡ ಥ್ರೆಟ್
  • ಸಿದ್ದರಾಮಯ್ಯರಿಂದಲೂ ಸತೀಶ್​​ಗೆ ಕೆಪಿಸಿಸಿ ಹೊಣೆ ನೀಡಲು ವಿರೋಧ
  • ತಮ್ಮ ಬೆನ್ನಿಗೆ ನಿಂತಿಲ್ಲ ಎಂಬಂತೆ ಭಾವಿಸಿರುವ ಸಿದ್ದರಾಮಯ್ಯ
  • ಸತೀಶ್ ಅಹಿಂದ ಉತ್ತರಾಧಿಕಾರಿಯಾದರೆ ತಮ್ಮ ಅಸ್ತಿತ್ವ ಅಲುಗಾಡುತ್ತದೆ ಎಂದು ಯೋಚಿಸಿದ ಹಲವರು
  • ಸಂಘಟನೆಯಲ್ಲಿ ಸತೀಶ್ ಕೆಪ್ಯಾಸಿಟಿಯೇ ದೌರ್ಬಲ್ಯವಾಗಿದ್ದು
  • 2028ಕ್ಕೆ ಸತೀಶ್ ಸಿಎಂ ಸ್ಥಾನ ಕ್ಲೇಮ್ ಮಾಡ್ತಾರೆ ಎಂಬ ಭಯ
  • ಶಾಸಕರ ಬೆಂಬಲದ ವಿಚಾರ ಬಂದರೆ ಮತ್ತೆ ಸತೀಶ್ vs ಡಿಕೆಶಿ ಫೈಟ್ ನಡೆಯಬಹುದು
  • ಶಾಸಕರನ್ನು ಸತೀಶ್ ತಮ್ಮ ವೈಯಕ್ತಿಕ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ಆತಂಕ
  • ಜನರನ್ನು ಹಿಡಿದು ಕೂರಿಸಬಲ್ಲ ಪ್ರಭಾವಿ ಮಾತುಗಾರ ಅಲ್ಲ ಎಂಬ ಅಂಶ
  • ಇದೆಲ್ಲಕ್ಕೂ ಪುಷ್ಟಿ ನೀಡುವಂತೆ ಒಬ್ಬನಿಗೆ ಒಂದೇ ಹುದ್ದೆ ಎಂಬ ಹೈಕಮಾಂಡ್ ನಿರ್ಧಾರ

ಇದನ್ನೂ ಓದಿ: ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕ; ಬಿಕೆ ಹರಿಪ್ರಾಸದ್​​​ ಒಂದೇ ದಿನ ಡಬಲ್ ಧಮಾಕ

ಸಚಿವ ಸ್ಥಾನವನ್ನೇ ಸತೀಶ್​​ ಆಯ್ದುಕೊಂಡಿದ್ದೇಕೆ?

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಿಂತ ಸಚಿವ ಸ್ಥಾನವೇ ಬೆಸ್ಟ್ ಎಂಬ ನಿರ್ಧಾರಕ್ಕೆ ಸತೀಶ್​​ ಜಾರಕಿಹೊಳಿ ಕೂಡ ಬಂದಿದ್ದರು ಎನ್ನಲಾಗಿದೆ. ಸಚಿವ ಸ್ಥಾನ ಇಲ್ಲದಿದ್ದರೆ ಸರ್ಕಾರದ ಮೇಲೆ ಹಿಡಿತ ಕೈತಪ್ಪುವ ಆತಂಕದ ಜೊತೆಗೆ ಬೆಳಗಾವಿ ರಾಜಕಾರಣದ ಮೇಲೆ ಹಿಡಿತ ಕೈತಪ್ಪುವ ಭೀತಿಯೂ ಅವರಿಗಿತ್ತು. ಕೆಪಿಸಿಸಿ ಮಾತ್ರ ಸಿಕ್ಕಿದರೆ ಸಂಘಟನೆಗೆ ಮಾತ್ರ ಸೀಮಿತವಾಗಬೇಕಾಗುತ್ತದೆ. ಅಲ್ಲದೆ ಸಚಿವಗಿರಿ ಇಲ್ಲದಿದ್ದರೆ ಸಂಘಟನೆಗೆ ಧನ ಬೆಂಬಲ ಸಿಗುವ ಅವಕಾಶವೂ ಕಡಿಮೆ. ಈ ಕಾರಣಕ್ಕೆ ಸಚಿವ ಸ್ಥಾನವೆ ಒಳಿತೆಂದು ಸತೀಶ್​​ ಕೂಡ ಸುಮ್ಮನಾಗಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಟಿ20 ಸರಣಿಗಾಗಿ ಐರ್ಲೆಂಡ್ ತಲುಪಿದ ಟೀಂ ಇಂಡಿಯಾ
ಟಿ20 ಸರಣಿಗಾಗಿ ಐರ್ಲೆಂಡ್ ತಲುಪಿದ ಟೀಂ ಇಂಡಿಯಾ
ಸಿಗ್ನಲ್ ನಲ್ಲಿ ಯಾರಾದ್ರೂ ಹಂಪ್ ಮಾಡ್ತಾರೇನ್ರಿ? ಕೃಷ್ಣಭೈರೇಗೌಡ ಕ್ಲಾಸ್
ಸಿಗ್ನಲ್ ನಲ್ಲಿ ಯಾರಾದ್ರೂ ಹಂಪ್ ಮಾಡ್ತಾರೇನ್ರಿ? ಕೃಷ್ಣಭೈರೇಗೌಡ ಕ್ಲಾಸ್
ಕನ್ನೇರಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ
ಕನ್ನೇರಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ
ಫುಟ್ ಪಾತ್ ತೆರವಿಗೆ ಕೃಷ್ಣಬೈರೇಗೌಡ ದಿಟ್ಟ ಹೆಜ್ಜೆ
ಫುಟ್ ಪಾತ್ ತೆರವಿಗೆ ಕೃಷ್ಣಬೈರೇಗೌಡ ದಿಟ್ಟ ಹೆಜ್ಜೆ
ಹೈಕಮಾಂಡ್​​​​ನಿಂದ ಬಂತು ಫೋನ್, ಡಿಕೆಶಿಗೆ ಖಡಕ್ ಎಚ್ಚರಿಕೆ
ಹೈಕಮಾಂಡ್​​​​ನಿಂದ ಬಂತು ಫೋನ್, ಡಿಕೆಶಿಗೆ ಖಡಕ್ ಎಚ್ಚರಿಕೆ
15ವರ್ಷಗಳ ಪಯಣ ಎಂದಿದ್ದ ಗೋಯೆಂಕಾಗೆ ಎರಡೇ ವರ್ಷಕ್ಕೆ ಬೇಡವಾದ ಪಂತ್
15ವರ್ಷಗಳ ಪಯಣ ಎಂದಿದ್ದ ಗೋಯೆಂಕಾಗೆ ಎರಡೇ ವರ್ಷಕ್ಕೆ ಬೇಡವಾದ ಪಂತ್
TV9 ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
TV9 ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಪೌರಕಾರ್ಮಿಕ
ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಪೌರಕಾರ್ಮಿಕ
ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟ್ ಬಗ್ಗೆ KEA ನಿರ್ದೇಶಕ ಹೇಳಿದ್ದಿಷ್ಟು
ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟ್ ಬಗ್ಗೆ KEA ನಿರ್ದೇಶಕ ಹೇಳಿದ್ದಿಷ್ಟು
ಸಿಇಟಿ ರ‍್ಯಾಂಕ್ ಬಂದಿಲ್ಲವೆಂದ ವಿದ್ಯಾರ್ಥಿಗಳ ದೂರಿಗೆ ಸ್ಪಷ್ಟನೆ ನೀಡಿದ KEA
ಸಿಇಟಿ ರ‍್ಯಾಂಕ್ ಬಂದಿಲ್ಲವೆಂದ ವಿದ್ಯಾರ್ಥಿಗಳ ದೂರಿಗೆ ಸ್ಪಷ್ಟನೆ ನೀಡಿದ KEA