ಬಕ್ರಿದ್ ಕಾರಣ ಗೋವುಗಳು ಕಸಾಯಿ ಖಾನೆಗೆ ಹೋಗಬಾರದು: ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ -ಸಚಿವ ಪ್ರಭು ಚವ್ಹಾಣ್
ಗೋವು ಸಾಗಾಟ ಕಂಡು ಬಂದರೆ ಹೆಲ್ಪ್ ಲೈನ್ಗೆ ಕರೆ ಮಾಡಿ. ಪಶು ಇಲಾಖೆ ಹೆಲ್ಪ್ ಲೈನ್ ನಂ.1962ಗೆ ಕರೆ ಮಾಡಿ. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಹೀಗಾಗಿ ಬಕ್ರಿದ್ ಹಬ್ಬಕ್ಕೆ ಯಾವುದೇ ಕಾರಣಕ್ಕೂ ಗೋವುಗಳು ಕಸಾಯಿ ಖಾನೆಗೆ ಹೋಗಬಾರದು.

ಬೀದರ್: ರಾಜ್ಯಾದ್ಯಂತ ಜುಲೈ 10ರಂದು ಬಕ್ರಿದ್ ಹಬ್ಬ(Bakrid Festival) ಆಚರಣೆ ನಡೆಯಲಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಬಗ್ಗೆ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್(Prabhu Chavan) ಮಾಹಿತಿ ನೀಡಿದ್ದಾರೆ. ಗೋವುಗಳ ಸಾಗಟಕ್ಕೆ ಕಡಿವಾಣ ಹಾಕಲಾಗಿದೆ. ರಾಜ್ಯಾದ್ಯಂತ ಪೊಲೀಸ್ ಇಲಾಖೆ(Police Department) ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಹೇಳಿದ್ರು.
ಇನ್ನು ಈ ಬಗ್ಗೆ ಬೀದರ್ ನಲ್ಲಿ ಮಾತನಾಡಿದ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್, ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಹೀಗಾಗಿ ಬಕ್ರಿದ್ ಹಬ್ಬಕ್ಕೆ ಯಾವುದೇ ಕಾರಣಕ್ಕೂ ಗೋವುಗಳು ಕಸಾಯಿ ಖಾನೆಗೆ ಹೋಗಬಾರದು. ರಾಜ್ಯಾದ್ಯಂತ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಗೋವು ಸಾಗಾಟ ಕಂಡು ಬಂದರೆ ಹೆಲ್ಪ್ ಲೈನ್ಗೆ ಕರೆ ಮಾಡಿ. ಪಶು ಇಲಾಖೆ ಹೆಲ್ಪ್ ಲೈನ್ ನಂ.1962ಗೆ ಕರೆ ಮಾಡಿ ಮಾಹಿತಿ ತಿಳಿಸಿ ಎಂದರು. ಇದನ್ನೂ ಓದಿ: ಖಾಸಗಿ ವಲಯದಲ್ಲಿ ನಿವೃತ್ತಿ ವಯಸ್ಸು 60ಕ್ಕೇರಿಸುವ ಸರ್ಕಾರರದ ಆದೇಶ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್
ಪಶು ಇಲಾಖೆಯ ಡೈರೆಕ್ಟರ್, ಕಮಿಷನರ್ ಜೊತೆ ಸಭೆ ಮಾಡಿ ಕಟ್ಟುನಿಟ್ಟಿನ ಕ್ರಮತೆಗೆದುಕೊಳ್ಳಲಾಗಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಜೊತೆಗೂ ಚರ್ಚಿಸಲಾಗಿದೆ. ಪೊಲೀಸ್ ಇಲಾಖೆಯಿಂದ ಹಲವು ಕಡೆ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಗೋ ಮಾತಾ ಕಸಾಯಿ ಖಾನೆಗೆ ಕಳುಹಿಸುವ ಹಾಗಿಲ್ಲ. ಯಾರೇ ಕಾನೂನು ಉಲ್ಲಂಘನೆ ಮಾಡಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಔರಾದ್ ಸಮಗ್ರ ಅಭಿವೃದ್ಧಿಯೇ ನನ್ನ ಮಹಾಸಂಕಲ್ಪ ಔರಾದ್ ವಿಧಾನಸಭಾ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದೇ ನನ್ನ ಮಹಾಸಂಕಲ್ಪವಾಗಿದೆ. ಔರಾದ್ ನಂ.1 ಕ್ಷೇತ್ರವಾಗಿ ಬದಲಾಗಲಿದ್ದು, ಮುಖ್ಯಮಂತ್ರಿಗಳೇ ಬಂದು ಕ್ಷೇತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಲಿದ್ದಾರೆ ಎಂದು ಪಶು ಸಂಗೋಪನೆ ಸಚಿವರಾದ ಪ್ರಭು ಚವ್ಹಾಣ್ ತಿಳಿಸಿದರು. ಪಟ್ಟಣದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ತಮ್ಮ ಜನ್ಮ ದಿನದ ನಿಮಿತ್ತ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿ, ಕ್ಷೇತ್ರದ ಜನತೆ ನನ್ನ ಮೇಲಿಟ್ಟಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ಎಂದಿಗೂ ಚಿರರುಣಿಯಾಗಿರುತ್ತೇನೆ ಎಂದರು.
Published On - 6:03 pm, Thu, 7 July 22