ಸಕ್ಕರೆ ಕಾರ್ಖಾನೆಯಿಂದ ವಿಷಕಾರಿ ನೀರು ಹಳ್ಳಕ್ಕೆ ಬಿಡುಗಡೆ: ದುರ್ನಾತದಿಂದ ಮೂಗು ಮುಚ್ಚಿಕೊಂಡು ಓಡಾಡುತ್ತಿರುವ ಗ್ರಾಮಸ್ಥರು

2014 ರಂದು ಫೆಬ್ರವರಿಯಂದು ಕ್ರಷಿಂಗ್ ಆರಂಭಿಸಿದ ಕಾರ್ಖಾನೆ ಅಂದಿನಿಂದ ಒಂದಿಲ್ಲೊಂದು ‌ಸಮಸ್ಯೆ ಉಂಟು ಮಾಡುತ್ತಿದ್ದು, ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಗಳು ‌ಮೌನವಹಿಸಿದ್ದಾರೆ.

ಸಕ್ಕರೆ ಕಾರ್ಖಾನೆಯಿಂದ ವಿಷಕಾರಿ ನೀರು ಹಳ್ಳಕ್ಕೆ ಬಿಡುಗಡೆ: ದುರ್ನಾತದಿಂದ ಮೂಗು ಮುಚ್ಚಿಕೊಂಡು ಓಡಾಡುತ್ತಿರುವ ಗ್ರಾಮಸ್ಥರು
ಬೀದರ್ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jul 02, 2022 | 11:14 AM

ಬೀದರ್: ಮಾಜಿ ಶಾಸಕರ ಒಡೆತನದ ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆ (Sugar Factory) ರಾಸಾಯನಿಕ ತ್ಯಾಜ್ಯ ಹಳ್ಳಕ್ಕೆ ಬಿಡಲಾಗುತ್ತಿದ್ದು, ದುರ್ನಾತದಿಂದ ಬಾಜೋಳಗಾ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಭಾಲ್ಕಿ ತಾಲೂಕಿನ ಬಾಜೋಳಗಾ ಗ್ರಾಮದ ಬಳಿಯ ಭಾಲ್ಕೇಶ್ವರ ಸಕ್ಕರೆ ‌ಕಾರ್ಖಾನೆಯಿಂದ‌ ಸಾವಿರಾರು ಲೀಟರ್ ರಾಸಾಯನಿಕ ‌ತ್ಯಾಜ್ಯವನ್ನು ಹಳಕ್ಕೆ ಹರಿಸಲಾಗುತ್ತಿದೆ. ಮೂರು ‌ಸಾವಿರಕ್ಕೂ ಹೆಚ್ಚು ಜನ ಗ್ರಾಮದ‌ಲ್ಲಿ ವಾಸಿಸುತ್ತಿದ್ದು, ಜನರ‌ ಸಮಸ್ಯೆಗೆ ಇದುವರೆಗೂ ಯಾವ ಅಧಿಕಾರಿಗಳು ಸ್ಪಂದಿಸಿಲ್ಲ. ಕುಡಿಯುವ ನೀರಿನಲ್ಲೂ ವಿಷ, ಬಾವಿ, ಬೋರ್ ವೆಲ್​ನಲ್ಲಿಯೂ ವಿಷಕಾರಿ ನೀರು ಬರುತ್ತಿದೆ. ಬಿಜೆಪಿ ಮುಖಂಡ ಪ್ರಭಾವಿ ರಾಜಕಾರಣಿ ಪ್ರಕಾಶ ಖಂಡ್ರೆಯಿಂದ ಜನರಿಗೆ ಧೋಖಾ ನಡೆಯುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಕಾರ್ಖಾನೆಯಿಂದ ಬಿಡುತ್ತಿರುವ ಕೆಮಿಕಲ್ ‌ನೀರನ್ನ ನಿಲ್ಲಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಕೆಮಿಕಲ್ ಮಿಶ್ರಿತ ನೀರಿನಿಂದ ಸ್ನಾನ ಮಾಡಿದ ನಂತರ ಮೈ ತುರಿಕೆ ಉಂಟಾಗುತ್ತಿದ್ದು, ಆರೋಗ್ಯ ಮೇಲೆ ಪರಿಣಾಮ ಬೀರುತ್ತಿದೆ.

ಇದನ್ನೂ ಓದಿ; Automobile: ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಕಾರು ಅನಾವರಣ, ಇಲ್ಲಿದೆ ನೋಡಿ ಫೀಚರ್ಸ್

ಕಾರ್ಖಾನೆಯಿಂದಾಗುತ್ತಿರುವ ಸಮಸ್ಯೆ ಬಗೆಹರಿಸುವಂತೆ ಬಾಜೋಳಗಾ ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗೆ ಮನವಿ ಮಾಡಿದರು  ಅಧಿಕಾರಿಗಳು ಸ್ಫಂದಿಸಿಲ್ಲ. 2014 ರಂದು ಫೆಬ್ರವರಿಯಂದು ಕ್ರಷಿಂಗ್ ಆರಂಭಿಸಿದ ಕಾರ್ಖಾನೆ ಅಂದಿನಿಂದ ಒಂದಿಲ್ಲೊಂದು ‌ಸಮಸ್ಯೆ ಉಂಟು ಮಾಡುತ್ತಿದೆ. ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಗಳು ‌ಮೌನವಹಿಸಿದ್ದು, ಬರದ ನಾಡಾಗಿರುವ ಬೀದರ್ ಜಿಲ್ಲೆಯಲ್ಲಿ ಅಂತರ್ಜಲ ಬಿಟ್ಟರೆ ಬೇರೆ ನೀರಿನ‌ ಮೂಲಗಳಿಲ್ಲ. ಇಂದು ಅದೆ ಅಂತರ್ಜಲದ ನೀರು‌ ವಿಷಕಾರಿಯಾಗಿದ್ದು, ಅದೇ ನೀರು ಕುಡಿಯುವ ಅನಿವಾರ್ಯ ಸೃಷ್ಟಿಯಾಗಿದೆ.

ಸಕ್ಕರೆ ಕಾರ್ಖಾನೆಯಿಂದ ವಿಷಕಾರಿ ನೀರು ಹಳ್ಳಕ್ಕೆ ಹರಿಸುತ್ತಿರುವ ಪ್ರಕರಣ ಸಂಬಂಧ ಟಿವಿ9ಗೆ ಬೀದರ್ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿಕೆ ನೀಡಿದ್ದು, ಸಕ್ಕರೆ ಕಾರ್ಖಾನೆಯಿಂದ ಹಳ್ಳಕ್ಕೆ ಕೆಮಿಕಲ್ ‌ನೀರು ಶುದ್ಧಿ ಕರೀಸದೆ ಹಳ್ಳಕ್ಕೆ ಹರಿಬಿಡಲಾಗುತ್ತಿದೆ. ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಪರಿಸರ ಮಾಲಿನ್ಯ ನಿಯಂತ್ರಣಾಧಿಯನ್ನ ಸ್ಥಳಕ್ಕೆ ಕಳುಹಿಸಿ ಕೊಡುವೆ. ಅವರ ಅಲ್ಲಿನ‌ ವ್ಯವಸ್ಥೆ ಅಲ್ಲಿ ಏನಾಗಿದೆ ಎಂದು ವರದಿಕೊಡುತ್ತಾರೆ ಆ ವರದಿ ಆದಾರದ ಮೇಲೆ ಕ್ರಮ ಕೈಗೊಳ್ಳುವೆ ಎಂದು ಹೇಳಿದರು.

ಬಸವಣ ಹುಳು, ಶಂಕದ ಹುಳುವಿನ ಕಾಟಕ್ಕೆ ಕಂಗಾಲಾದ ಬೀದರ್ ಜಿಲ್ಲೆಯ ಅಣ್ಣದಾತರು

ಬಸವಣ ಹುಳು ಮತ್ತು ಶಂಕದ ಹುಳುವಿನ ಕಾಟಕ್ಕೆ ಬೀದರ್ ಜಿಲ್ಲೆಯ ಅಣ್ಣದಾತರು ಕಂಗಾಲಾಗಿದ್ದಾರೆ. ಜಿಲ್ಲೆಯ ಕಮಲನಗರ ತಾಲೂಕಿನ ಮದನೂರು‌ ಗ್ರಾಮದಲ್ಲಿ ಹುಳುಗಳ‌ ಕಾಟ ಹೆಚ್ಚಾಗಿದೆ. ನೂರಾರು ಸಂಖ್ಯೆಯಲ್ಲಿರುವ ಬಸವಣ ಹುಳು ಶಂಕದ ಹುಳುಗಳಿಂದ ಬೆಳೆನಾಶ ಮಾಡಲಾಗುತ್ತಿದೆ. ಉದ್ದು, ಸೋಯಾ, ಅವರೆ ಬೆಳೆಗಳ ಜಿಗುರು ತಿಂದು ಹಾಕುತ್ತಿರುವ ಹುಳುಗಳಿಂದ ರೈತರು ಆತಂಕಗೊಂಡಿದ್ದಾರೆ. ಹುಳುಗಳ ನಿಯಂತ್ರಣಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿ ಔಷಧ ಸಿಂಪಡಿಸಬೇಕಾದ ಪರಿಸ್ಥಿತಿ ರೈತನಿಗೆ ಉಂಟಾಗಿದೆ. ಮೊದಲೇ ಮಳೆಯ‌ ಕೊರತೆಯಿಂದ ಕಂಗಾಲಾಗಿರುವ ಅಣ್ಣದಾತರಿಗೆ ಈಗ ಹುಳುಗಳು ಕಾಟದಿಂದ ಬೆಳೆ ನಾಶವಾಗುತ್ತಿದೆ.

ಇದನ್ನೂ ಓದಿ: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ! ವಾಹನ ಸವಾರರ ಪರದಾಟ

Published On - 11:13 am, Sat, 2 July 22