ಬೀದರ್ ಜಿಲ್ಲೆಗೆ ಬಂದಿದೆ ತಹರೇವಾರಿ ಚೀನಿ ಹಣತೆಗಳು; ಮಣ್ಣಿನ ಹಣತೆ ತಯಾರಕರು ಕಂಗಾಲು
ದೀಪಾವಳಿಗೆ ಎರಡು ತಿಂಗಳು ಮುಂಚೆಯೇ ಲಾರಿಗಟ್ಟಲೆ ಜೇಡಿ ಮಣ್ಣನ್ನು ತಂದು ಹದ ಮಾಡಿ ಮನೆಯೊಳಗೆ, ಅಂಗಳ, ಖಾಲಿ ಜಾಗೆ ಇದ್ದಲ್ಲೆಲ್ಲ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹಣತೆಗಳನ್ನು ಮಾಡಿ ಆರಲು ಇಡುತ್ತಿದ್ದರು. ಬಳಿಕ ಅದನ್ನು ಚೆನ್ನಾಗಿ ಸುಟ್ಟು ಮಾರುಕಟ್ಟೆಗೆ ತರುತ್ತಿದ್ದರು. ಗ್ರಾಹಕರಂತೂ ಮುಗಿಬಿದ್ದು ಮಣ್ಣಿನ ಹಣತೆಗಳನ್ನು ಒಬ್ಬೊಬ್ಬರು 30-40 ಹಣತೆಗಳನ್ನು ಒಯ್ಯುತ್ತಿದ್ದರು. ಈಗ ಅದೆಲ್ಲವೂ ಇತಿಹಾಸವಾಗಿದೆ.
ಬೀದರ್: ಆಧುನಿಕತೆಯ ಬಿರುಗಾಳಿಗೆ ಸಿಲುಕಿ ಕುಂಬಾರರ ಮಣ್ಣಿನ ಹಣತೆ ಆರುತ್ತಿದ್ದು, ಕುಂಬಾರರ ಬದುಕು ಕತ್ತಲಾಗುತ್ತಿದೆ. ಜೇಡಿ ಮಣ್ಣಿನಿಂದ ತಯಾರಿಸಿದ ಹಣತೆಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿದ್ದು, ಕುಂಬಾರರಿಗೆ ಹೊಡೆತಕೊಟ್ಟಿದೆ. ಚೀನಿ ಪಿಂಗಾಣಿ ಹಣತೆಗಳು ಮತ್ತು ಹೊಳಪಿಗೆ ಜನರು ಮಾರುಹೋಗಿದ್ದೇ ಕುಂಬಾರರಿಗೆ ಸಂಕಷ್ಟ ಎದುರಾಗಿದೆ. ದೂರದ ಸ್ಥಳಗಳಿಂದ ಜೇಡಿ ಮಣ್ಣು ತಂದು ಹದ ಮಾಡಿ ಹಣತೆಗಳನ್ನು ತಯಾರಿಸಿ ಮಾರುಕಟ್ಟೆಗೆ ತಂದರೇ ಗ್ರಾಹಕರು ಖರೀದಿಸುತ್ತಿಲ್ಲ ಎನ್ನುವುದು ಒಂದು ಕಡೆಯಾದರೆ, ಚೀನೀ ಪಿಂಗಾಣಿ ಹಣತೆ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ ಎನ್ನುವುದು ಕುಂಬಾರರಲ್ಲಿ ನಿರಾಶೆ ಹುಟ್ಟಿಸಿದೆ.
ದೀಪಾವಳಿ ಎಂದರೆ ಬೆಳಕಿನ ಹಬ್ಬ. ಕಾರ್ತಿಕ ಮಾಸ ಆರಂಭದ ನಂತರ ಪ್ರತಿ ಮನೆಗಳಲ್ಲೂ ಬೆಳಗುವ ದೀಪಗಳ ಸಾಲು ದೀಪವಾಳಿ ವೇಳೆಗೆ ವಿಶೇಷ ಮೆರುಗು ಪಡೆಯುತ್ತವೆ. ಹತ್ತಿಯ ಬತ್ತಿ ಹೊಸೆದು ಮಣ್ಣಿನ ಹಣತೆಯಲ್ಲಿ ಎಳ್ಳಿನ ಎಣ್ಣೆ ಸುರಿದು ಮನೆಯ ಮುಂದೆ ಸಾಲಾಗಿ ಜೋಡಿಸಿ ಹಣತೆ ಉರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಇಂತಹ ಹಣತೆಗಳೂ ಇಂದು ಆಧುನಿಕ ಸ್ಪರ್ಶ ಪಡೆದಿದ್ದು, ಮಣ್ಣಿನ ದೀಪಗಳ ಸ್ಥಾನದಲ್ಲಿ ಪಿಂಗಾಣಿ ಹಣತೆಗಳು ಲಗ್ಗೆಯಿಟ್ಟಿವೆ. ಮಣ್ಣಿನಿಂದ ತಯಾರಿಸುವ ಸಾಂಪ್ರದಾಯಿಕ ಹಣತೆಗಳಿಗಿಂತ ಹೆಚ್ಚು ಆಕರ್ಷಕವಾಗಿರುವ ಚೀನಿ ಹಣತೆಗಳು ಎಲ್ಲೆಡೆ ಕಾಣುತ್ತಿವೆ.
ಬಹುವಿನ್ಯಾಸ ಹೊಂದಿರುವ ಇಂತಹ ಹಣತೆಗಳು ಗ್ರಾಹಕರನ್ನು ಸೆಳೆಯುತ್ತಿವೆ. ಚೀನಿ ಮಣ್ಣಿನ ಹೊಳಪಿನ ಎದುರು ಮಣ್ಣಿನ ಹಣತೆಗಳು ಅಕ್ಷರಶಃ ಕಳೆಗುಂದಿವೆ. ಆಧುನಿಕತೆಗೆ ಒಗ್ಗಿಕೊಂಡ ಜನರು ಚೀನಿ ಹಣತೆ ಖರೀದಿಸಿ ಮನೆಯ ದೀಪದ ಅಲಂಕಾರ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಚೀನಾದ ಪಿಂಗಾಣಿ ಜೋಡಿ ದೀಪದ ಹಣತೆ ಒಂದಕ್ಕೆ 10 ರಿಂದ 15 ಯಂತೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಆದರೇ ನಾವು ಮಾಡಿದ ದೀಪವನ್ನು ಯಾರು ಕೊಳ್ಳುತ್ತಿಲ್ಲ ನಗರದ ಹೊರವಲಯಗಳಿಂದ ದುಬಾರಿ ಬೆಲೆ ತೆತ್ತು ಜೇಡಿ ಮಣ್ಣು ತಂದು, ಹದ ಮಾಡಿ, ಕುಶಲ ಕರ್ಮಿಗಳ ನೆರವಿನಿಂದ ವಿವಿಧ ವಿನ್ಯಾಸದ ದೀಪ ತಯಾರಿಸುತ್ತೇವೆ. 15ರಿಂದ 20ಗೆ ಒಂದು ಡಜನ್ ಬೆಲೆ ನಿಗದಿ ಮಾಡಿದರೂ, ಗ್ರಾಹಕರು ಖರೀದಿಸುತ್ತಿಲ್ಲ. ಇದರಿಂದ ಸಾಕಷ್ಟು ನಷ್ಟ ಅನುಭವಿಸುತ್ತಿದ್ದೇವೆ ಇದಕ್ಕೆ ಸರಕಾರವೇ ಏನಾದರು ಮಾಡಬೇಕು ಎಂದು ಕುಂಬಾರ ಶಿವಕುಮಾರ್ ಮನವಿ ಮಾಡಿದ್ದಾರೆ.
ದಶಕದ ಹಿಂದೆ ಲಕ್ಷ ಲಕ್ಷ ಹಣತೆಗಳನ್ನು ತಮ್ಮ ಮನೆ ಮುಂದೆ ಮಾರಾಟ ಮಾಡುತ್ತಿದ್ದ ಕುಂಬಾರ ಕುಟುಂಬಗಳು ಐದಾರು ವರ್ಷಗಳಿಂದ ಸಾವಿರ ಲೆಕ್ಕದಲ್ಲಿ ಹಣತೆಗಳನ್ನು ಮಾರಾಟ ಮಾಡಿ, ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಹಣತೆ ತಯಾರಿಸಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರು ಈಗ ಬೇರೆ ವೃತ್ತಿಯತ್ತ ಮುಖ ಮಾಡಿದ್ದಾರೆ. ದಶಕದ ಹಿಂದಿನವರೆಗೂ ಹಣತೆ ಮಾಡುವ ಕುಂಬಾರರ ಕುಟುಂಬಗಳಿಗೆ ದೀಪಾವಳಿ ಬಂತೆಂದರೆ ಅದೊಂದು ಅಕ್ಷರಶಃ ಅವರ ಬದುಕಿನ ಬೆಳಕಿನ ಹಬ್ಬವೇ ಆಗಿತ್ತು.
ದೀಪಾವಳಿಗೆ ಎರಡು ತಿಂಗಳು ಮುಂಚೆಯೇ ಲಾರಿಗಟ್ಟಲೆ ಜೇಡಿ ಮಣ್ಣನ್ನು ತಂದು ಹದ ಮಾಡಿ ಮನೆಯೊಳಗೆ, ಅಂಗಳ, ಖಾಲಿ ಜಾಗೆ ಇದ್ದಲ್ಲೆಲ್ಲ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹಣತೆಗಳನ್ನು ಮಾಡಿ ಆರಲು ಇಡುತ್ತಿದ್ದರು. ಬಳಿಕ ಅದನ್ನು ಚೆನ್ನಾಗಿ ಸುಟ್ಟು ಮಾರುಕಟ್ಟೆಗೆ ತರುತ್ತಿದ್ದರು. ಗ್ರಾಹಕರಂತೂ ಮುಗಿಬಿದ್ದು ಮಣ್ಣಿನ ಹಣತೆಗಳನ್ನು ಒಬ್ಬೊಬ್ಬರು 30-40 ಹಣತೆಗಳನ್ನು ಒಯ್ಯುತ್ತಿದ್ದರು. ಈಗ ಅದೆಲ್ಲವೂ ಇತಿಹಾಸವಾಗಿದೆ. ಬೆರಳೆಣಿಕೆ ಸಂಖ್ಯೆಯಲ್ಲಿ ಮಣ್ಣಿನ ಹಣತೆ ಒಯ್ಯುವರ ಸಂಖ್ಯೆಯೂ ವಿರಳವಾಗುತ್ತಿದೆ. ಹೀಗಾಗಿ ಕುಂಬಾರರ ಬಾಳಿಗೆ ದೀಪಾವಳಿ ಬೆಳಕು ನೀಡುವ ಹಬ್ಬವಾಗಿ ಉಳಿದಿಲ್ಲ ಎನ್ನುತ್ತಾರೆ ಇಲ್ಲಿನ ಜನರು. ಚೀನಿ ಮಣ್ಣಿನ ಹಣತೆಗಳು, ಹೊಳಪಿನ ಮೈಮಾಟವುಳ್ಳ, ವೈವಿಧ್ಯಮಯ ಕಲಾ ಚಿತ್ತಾರ ಹೊಂದಿರುವ ಪಿಂಗಾಣಿ ಹಣತೆಗಳಿಗೆ ಬಹುತೇಕ ಜನರು ಮಾರುಹೋಗಿದ್ದಾರೆ. ಕುಂಬಾರರ ಕೈಯಲ್ಲರಳಿದ ಮಣ್ಣಿನ ಸಾಂಪ್ರದಾಯಿಕ ಹಣತೆಗಳು ವಿವಿಧ ಗಾತ್ರಗಳಲ್ಲಿ ಸಿದ್ಧವಾಗಿ ಮಾರುಕಟ್ಟೆಗೆ ಬಂದಿವೆಯಾದರೂ ಗ್ರಾಹಕರು ಅವುಗಳನ್ನು ಕೊಂಡುಕೊಳ್ಳಲು ಹಿಂದೆಟು ಹಾಕುತ್ತಿದ್ದಾರೆ. ನಮ್ಮ ಕುಂಬಾರರು ಮಾಡಿದ ಹಣತೆಯನ್ನು ಕೊಂಡು ಅವರಿಗೆ ಪ್ರೋತ್ಸಾಹ ನೀಡಿ ಎಂದು ಇಲ್ಲಿನ ಜನರು ಗ್ರಾಹಕರಿಗೆ ವಿನಂತಿಸುತ್ತಿದ್ದಾರೆ.
ಆಧುನಿಕತೆಯ ಭರಾಟೆಗೆ ಸಿಲುಕುತ್ತಿರುವ ಕುಂಬಾರರ ಬದುಕು ಬೀದಿಗೆ ಬೀದ್ದದೆ. ಹಬ್ಬ ಹರಿದಿನಗಳಲ್ಲಿ ಕುಂಬಾರರ ಮಾಡಿದ ಮಣ್ಣಿ ವಸ್ತುಗಳನ್ನು ಖರೀದಿಸಬೇಕಾಗದ ಜನರು ಅಂಲಕಾರಕ್ಕೆ ಮರಳಾಗುತ್ತಿರುವುದು ಕುಂಬಾರರಿಗೆ ದಿಕ್ಕು ತೋಚದತಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆಗೆ ಹಾಕುವ ಅಲಂಕಾರಿಕ ಮಣ್ಣಿನ ಗಂಟೆಗಳನ್ನೂ ಇಂದು ಜನರು ಕೇಳುತ್ತಿಲ್ಲ. ಬಣ್ಣ ಬಣ್ಣದ ದೀಪಗಳ ಅಲಂಕೃತ ಬುಟ್ಟಿಗಳತ್ತ ಜನರು ವಾಲುತ್ತಿದ್ದಾರೆ. ಶುದ್ಧ ಜೇಡಿ ಮಣ್ಣಿನಿಂದ ಹೂವಿನ ಕುಂಡ, ದೀಪ ತಯಾರಿಸಿ, ಅದಕ್ಕೆ ವಿವಿಧ ಬಣ್ಣದ ರೂಪ ನೀಡಿದ್ದೇವೆ. ಆದರೂ ಜನರು ಬಹಳಷ್ಟು ಚೌಕಾಸಿ ಮಾಡುತ್ತಾರೆ. ಅದೇ ಎಲ್‌ಇಡಿ ದೀಪಗಳಾದರೆ, ಅವರು ಹೇಳಿದಷ್ಟು ಬೆಲೆಗೆ ಕೊಳ್ಳುತ್ತಾರೆ. ನಮ್ಮ ಕಷ್ಟಕ್ಕೆ ಬೆಲೆ ಇಲ್ಲವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಕುಂಬಾರರು.
ಸರಕಾರವೂ ಕೂಡಾ ಕುಂಬಾರರ ಉದ್ಯಮಕ್ಕೆ ಪ್ರೋತ್ಸಾಹ ನೀಡಿದಿರುವುದು ಅದೇಷ್ಟೋ ಜನರು ಇಂದು ನಷ್ಟದ ಕುಂಬಾರಿಕೆಯನ್ನು ಬಿಟ್ಟು ಬೇರೆ ಉದ್ಯೋಗ ಅರಸಿ ಗೂಳೆ ಹೋಗುತ್ತಿದ್ದಾರೆ. ಏನೇ ಇರಲಿ ನೂರಾರು ವರ್ಷಗಳಿಂದ ಕುಂಬಾರಿಕೆಯಲ್ಲಿಯೇ ಜೀವನ ಸಾಗಿಸುತ್ತಿರುವ ಕುಂಬಾರರಿಗೆ ಅವರು ತಯಾರಿಸುವ ವಸ್ತುಗಳನ್ನು ಖರೀದಿಸಿ ಅವರಿಗೆ ಪ್ರೋತ್ಸಾಹ ಮಾಡಿ ಎನ್ನುವುದೇ ನಮ್ಮ ಮನವಿಯಾಗಿದೆ.
ವರದಿ: ಸುರೇಶ್ ನಾಯಕ್
ಇದನ್ನೂ ಓದಿ