AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಡಗಿ ಮೆಣಸಿನಕಾಯಿ ಬೆಂಗಳೂರಿನಲ್ಲಿ ಗ್ರಾಹಕರಿಗೆ ಮತ್ತಷ್ಟು ಖಾರ..

ಬ್ಯಾಡಗಿ ಮೆಣಸಿನಕಾಯಿ ಕಡು ಕೆಂಪು ಬಣ್ಣವನ್ನು ಹೊಂದಿದ್ದು, ಉಳಿದ ಮೆಣಸಿನಕಾಯಿಗೆ ಹೊಲಿಸಿದರೆ ಖಾರ ಕಡಿಮೆ. ಆದರೆ ಈ ಬಾರಿ ಗ್ರಾಹಕರಿಗೆ ಬ್ಯಾಡಗಿ ಮೆಣಸಿನಕಾಯಿ ದುಬಾರಿಯ ಖಾರವನ್ನು ಉಣಬಡಿಸಿದೆ. 2 ತಿಂಗಳಿಂದ ಮಳೆ ತೀವ್ರಗೊಂಡಿದ್ದು, ಮೆಣಸಿನಕಾಯಿಯ ಬೆಳೆ ಕಡಿಮೆಗೊಂಡಿತ್ತು. ಈ ಕಾರಣಕ್ಕೆ ಬೆಲೆಯು ದುಬಾರಿಯಾಗಿದೆ. ಪ್ರತಿ ವರ್ಷ ಕ್ವಿಂಟಾಲ್ ಗೆ 10 ಸಾವಿರ ರೂಪಾಯಿಯಷ್ಟು ಬೆಲೆ ಇರುತ್ತಿತ್ತು, ಆದರೆ ಈ ಬಾರಿ 16 ಸಾವಿರದಿಂದ 32 ಸಾವಿರದಷ್ಟು ಬೆಲೆ ಏರಿಕೆಯಾಗಿರುವುದು ಆಶ್ಚರ್ಯಕಾರಕವಾಗಿದ್ದು, ಬೆಳೆಗಾರರಿಗೆ ಹೆಚ್ಚಿನ ಸಂತಸವನ್ನು ತಂದುಕೊಟ್ಟಿದೆ. ಸಾಮಾನ್ಯವಾಗಿ […]

ಬ್ಯಾಡಗಿ ಮೆಣಸಿನಕಾಯಿ ಬೆಂಗಳೂರಿನಲ್ಲಿ ಗ್ರಾಹಕರಿಗೆ ಮತ್ತಷ್ಟು ಖಾರ..
ಒಣಮೆಣಸಿನಕಾಯಿ ಮಾರುಕಟ್ಟೆ
ಸಾಧು ಶ್ರೀನಾಥ್​
| Edited By: |

Updated on:Nov 09, 2020 | 3:25 PM

Share

ಬ್ಯಾಡಗಿ ಮೆಣಸಿನಕಾಯಿ ಕಡು ಕೆಂಪು ಬಣ್ಣವನ್ನು ಹೊಂದಿದ್ದು, ಉಳಿದ ಮೆಣಸಿನಕಾಯಿಗೆ ಹೊಲಿಸಿದರೆ ಖಾರ ಕಡಿಮೆ. ಆದರೆ ಈ ಬಾರಿ ಗ್ರಾಹಕರಿಗೆ ಬ್ಯಾಡಗಿ ಮೆಣಸಿನಕಾಯಿ ದುಬಾರಿಯ ಖಾರವನ್ನು ಉಣಬಡಿಸಿದೆ. 2 ತಿಂಗಳಿಂದ ಮಳೆ ತೀವ್ರಗೊಂಡಿದ್ದು, ಮೆಣಸಿನಕಾಯಿಯ ಬೆಳೆ ಕಡಿಮೆಗೊಂಡಿತ್ತು. ಈ ಕಾರಣಕ್ಕೆ ಬೆಲೆಯು ದುಬಾರಿಯಾಗಿದೆ.

ಪ್ರತಿ ವರ್ಷ ಕ್ವಿಂಟಾಲ್ ಗೆ 10 ಸಾವಿರ ರೂಪಾಯಿಯಷ್ಟು ಬೆಲೆ ಇರುತ್ತಿತ್ತು, ಆದರೆ ಈ ಬಾರಿ 16 ಸಾವಿರದಿಂದ 32 ಸಾವಿರದಷ್ಟು ಬೆಲೆ ಏರಿಕೆಯಾಗಿರುವುದು ಆಶ್ಚರ್ಯಕಾರಕವಾಗಿದ್ದು, ಬೆಳೆಗಾರರಿಗೆ ಹೆಚ್ಚಿನ ಸಂತಸವನ್ನು ತಂದುಕೊಟ್ಟಿದೆ.

ಸಾಮಾನ್ಯವಾಗಿ ಬೆಲೆ ಏರಿಕೆಯ ಪ್ರಕ್ರಿಯೆಯೂ ಬೆಸಿಗೆ ಅಂದರೆ ಮಾರ್ಚ್ ಸುಮಾರಿಗೆ ಹೆಚ್ಚಾಗುತಿತ್ತು, ಆದರೆ ಈ ಬಾರಿ ಮಳೆಯ ಕಾರಣಕ್ಕಾಗಿ ಚಳಿಗಾಲದಲ್ಲಿ ಬೆಲೆ ಎರಿಕೆ ಕಂಡುಬಂದಿದ್ದು, ಕೆ.ಜಿ ಗೆ 50 ರಿಂದ 60 ರೂಪಾಯಿಯವರೆಗೆ ಏರಿಕೆಯಾಗಿದೆ.

ಸಗಟು ಮಾರುಕಟ್ಟೆ.. ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ಗೆ 325 ರಿಂದ 350 ರೂ, ಕಡ್ಡಿ ರಹಿತ ಬ್ಯಾಡಗಿ ಮೆಣಸಿನಕಾಯಿ 300 ರಿಂದ 400ರೂ. ರಷ್ಟಿದೆ. ಕಡ್ಡಿ ಸಹಿತ ಬ್ಯಾಡಗಿ ಮೆಣಸಿನಕಾಯಿ 150 ರಿಂದ 350 ರೂ. ಇನ್ನೂ ಗುಂಟೂರು ಮೆಣಸಿನಕಾಯಿ 150 ರಿಂದ 160 ರೂಪಾಯಿಯಷ್ಟು ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.

ಬ್ಯಾಡಗಿ ಮೆಣಸಿನಕಾಯಿ ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ 16 ಸಾವಿರದಿಂದ 32 ಸಾವಿರದಷ್ಟು ಬೆಲೆಗೆ ಮಾರಟವಾಗುತ್ತಿದ್ದು, ಅತ್ಯುತ್ತಮ ಮಟ್ಟದ ಬ್ಯಾಡಗಿ ಮೆಣಸಿನಕಾಯಿ ಕಳೆದ ಮಂಗಳವಾರ ಮಾರುಕಟ್ಟೆಯಲ್ಲಿ ಕ್ವಿಂಟಾಲ್​ಗೆ 42 ಸಾವಿರಕ್ಕೆ ಮಾರಟವಾಗಿದೆ. ಆದರೆ ಈ ವಾರ ಹಿಂದಿನ ವಾರಕ್ಕಿಂತ ಕಡಿಮೆ ದರವನ್ನು ಹೊಂದಿದ್ದು, ಡಿಸೆಂಬರ್ ತಿಂಗಳಿನಲ್ಲಿ ಇನ್ನೂ ಬೆಲೆ ಕಡಿಮೆಯಾಗುವ ಸಾಧ್ಯತೆಗಳಿವೆ.

ದೀಪಾವಳಿಯ ನಂತರ ಬೆಲೆ ಕಡಿಮೆಯಾಗುವ ಸಾಧ್ಯತೆ.. ಬ್ಯಾಡಗಿ ಮೆಣಸಿನಕಾಯಿ ಇತರ ಮೆಣಸಿಗೆ ಹೊಲಿಸಿದರೆ ಬೇಗ ಹಾಳಾಗುವುದಿಲ್ಲ, ಈ ಕಾರಣಕ್ಕೆ ಈ ಮೆಣಸಿನಕಾಯಿಯ ಬೆಲೆ ಹೆಚ್ಚಾಗಿದ್ದು, ದೀಪಾವಳಿಯ ನಂತರ ಇದರ ಬೆಲೆ ಕಡಿಮೆಯಾಗುವ ಸಾಧ್ಯತೆ ಇದ್ದು, ಮಾರುಕಟ್ಟೆಗೆ ಇತರ ಮೆಣಸಿಕಾಯಿಗಳು ಬರುತ್ತವೆ ಎನ್ನುತ್ತಾರೆ ಯಶವಂತಪುರ ಎಪಿಎಂಸಿ ಮಾರುಕಟ್ಟೆಯ ಪಿಸಿಎನ್ ಟ್ರೇಡರ್ ಮಾಲಿಕ ಎಂ. ಪ್ರಭಾಕರ್.

ಇನ್ನೂ ಕೊರೊನಾ ಕಾರಣಕ್ಕೆ ಎಲ್ಲಾ ವ್ಯಾಪಾರವು ಹಿನ್ನೇಡೆಯನ್ನು ಕಂಡಿದ್ದು, ಬ್ಯಾಡಗಿ ಮೆಣಸಿನಕಾಯಿಯ ವ್ಯಾಪಾರವು ಕೂಡ ಕಡಿಮೆಯಾಗಿತ್ತು, ಆದರೆ ಈಗ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಹೆಚ್ಚಿನ ದರದೊಂದಿಗೆ ಮಾರಟವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಸ್ಥರು.

ಬ್ಯಾಡಗಿ ಮೆಣಸಿನಕಾಯಿ ದರ 2019-2020.. 2019 ರಲ್ಲಿ ನವೆಂಬರ್ ತಿಂಗಳಿನಲ್ಲಿ ಕೆ.ಜಿಗೆ 200 ರಿಂದ 320 ರೂ ಗಳಷ್ಟಿತ್ತು ಹಾಗೂ ಕ್ವಿಂಟಾಲ್​ಗೆ 16.000 ದಿಂದ 18.100 ರಷ್ಟಿದೆ. 2020 ರ ನವೆಂಬರ್ ತಿಂಗಳಿನಲ್ಲಿ ಕೆ.ಜಿ. ಗೆ 300 ರಿಂದ  400ರೂ ಗಳಷ್ಟಿದೆ ಹಾಗೂ ಕ್ವಿಂಟಾಲ್​ಗೆ 30.000 ರಿಂದ 34.000 ರಷ್ಟಿದೆ. ಈ ಬಾರಿ ಹೆಚ್ಚು ದುಬಾರಿ ಎನಿಸಿಕೊಂಡಿದೆ.

Published On - 3:18 pm, Mon, 9 November 20