AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂವರು ಬೇಟೆಗಾರರ ಎನ್‌ಕೌಂಟರ್ ಬಳಿಕವೂ ನಿಲ್ಲದ ಕಳ್ಳಬೇಟೆ: ಹನೂರು ಅರಣ್ಯದಲ್ಲಿ ಕಡವೆ ಬೇಟೆ

ಹನೂರು ಅರಣ್ಯದಲ್ಲಿ ಶೂಟೌಟ್ ನಂತರವೂ ಕಳ್ಳಬೇಟೆ ನಿಂತಿಲ್ಲ ಎಂಬ ಆರೋಪ ಕೇಳಿಬಂದಿದೆ. ಅದಕ್ಕೆ ಈಗ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಉಡುತೊರೆಹಳ್ಳ ಡ್ಯಾಂ ಬಳಿ ಕಡವೆಯನ್ನು ಬೇಟೆಯಾಡಿ ಮೂರು ಭಾಗಗಳಾಗಿ ಕತ್ತರಿಸಿ ಮಾಂಸವನ್ನು ಚೀಲಗಳಲ್ಲಿ ತುಂಬಿದ್ದ ನಾಲ್ವರು, ಅರಣ್ಯ ಸಿಬ್ಬಂದಿ ಕಂಡು ಪರಾರಿಯಾಗಿದ್ದಾರೆ. ಸದ್ಯ ಕೇಸ್ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ನಡೆಯತ್ತಿದೆ.

ಮೂವರು ಬೇಟೆಗಾರರ ಎನ್‌ಕೌಂಟರ್ ಬಳಿಕವೂ ನಿಲ್ಲದ ಕಳ್ಳಬೇಟೆ: ಹನೂರು ಅರಣ್ಯದಲ್ಲಿ ಕಡವೆ ಬೇಟೆ
ಕಳ್ಳಬೇಟೆಗಾರರು ಕಡವೆಯನ್ನು ಬೇಟೆಯಾಡಿದ ಪ್ರದೇಶImage Credit source: tv9
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Sep 03, 2026 | 1:24 PM

Share

ಮುಖ್ಯಾಂಶಗಳು

  • ಹನೂರು ಅರಣ್ಯದಲ್ಲಿ ಮತ್ತೆ ಕಡವೆ ಬೇಟೆ
  • ಅರಣ್ಯ ಸಿಬ್ಬಂದಿ ಕಂಡು ಬೇಟೆಗಾರರು ಪರಾರಿ
  • ಆರೋಪಿಗಳಿಗಾಗಿ ಅರಣ್ಯ ಇಲಾಖೆ ಶೋಧ

ಚಾಮರಾಜನಗರ, ಸೆಪ್ಟೆಂಬರ್ 3: ಹನೂರು ಅರಣ್ಯದಲ್ಲಿ ಮೂವರು ಬೇಟೆಗಾರರು ಗುಂಡಿನ ದಾಳಿಯಲ್ಲಿ ಮೃತಪಟ್ಟ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಅಷ್ಟಾದರೂ ಅರಣ್ಯದಲ್ಲಿ ಕಳ್ಳಬೇಟೆ ಮುಂದುವರಿದಿದೆ ಎನ್ನಲಾಗಿದೆ. ಈ ಆರೋಪಕ್ಕೆ ಇದೀಗ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಕಡವೆಯನ್ನು ಬೇಟೆಯಾಡಿ ಮೂರು ಭಾಗಗಳಾಗಿ ಕತ್ತರಿಸಿ, ಮಾಂಸವನ್ನು ಚೀಲಗಳಲ್ಲಿ ತುಂಬಿದ್ದ ವೇಳೆ ಅರಣ್ಯ ಸಿಬ್ಬಂದಿ ಬಂದಿದ್ದರಿಂದ ಬೇಟೆಗಾರರು ಪರಾರಿಯಾಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ಧಾಮದ ವ್ಯಾಪ್ತಿಯ ಉಡುತೊರೆಹಳ್ಳ ಜಲಾಶಯದ ಬಳಿ ಸೆಪ್ಟೆಂಬರ್ 1ರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ನಾಡಬಂದೂಕಿನಿಂದ ಕಡವೆಯನ್ನು ಬೇಟೆಯಾಡಿದ ನಾಲ್ವರು ಆರೋಪಿಗಳು, ಬಳಿಕ ಅದರ ದೇಹವನ್ನು ಮೂರು ಭಾಗಗಳಾಗಿ ಕತ್ತರಿಸಿ ಮಾಂಸವನ್ನು ಚೀಲಗಳಲ್ಲಿ ತುಂಬಿಕೊಂಡಿದ್ದರು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಅರಣ್ಯ ಸಿಬ್ಬಂದಿ ಕಂಡು ಮಾಂಸದ ಚೀಲ ಬಿಸಾಡಿ ಪರಾರಿ

ಉಡುತೊರೆಹಳ್ಳ ಡ್ಯಾಂ ಬಳಿ ಅರಣ್ಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಬೇಟೆಗಾರರ ಚಲನವಲನ ಗಮನಕ್ಕೆ ಬಂದಿದೆ. ಸಿಬ್ಬಂದಿ ಬರುತ್ತಿರುವುದನ್ನು ಕಂಡ ಆರೋಪಿಗಳು ಕಡವೆ ಮಾಂಸ ತುಂಬಿದ್ದ ಚೀಲಗಳನ್ನು ಸ್ಥಳದಲ್ಲೇ ಬಿಸಾಡಿ ಪರಾರಿಯಾಗಿದ್ದಾರೆ.

ಕೇಸ್ ದಾಖಲು, ಆರೋಪಿಗಳ ಪತ್ತೆಗಾಗಿ ಶೋಧ

ಸ್ಥಳ ಪರಿಶೀಲನೆ ನಡೆಸಿದ ಅರಣ್ಯ ಸಿಬ್ಬಂದಿ ಕಡವೆಯ ದೇಹದ ಭಾಗಗಳು ಹಾಗೂ ಮಾಂಸ ತುಂಬಿದ್ದ ಚೀಲಗಳನ್ನು ಪತ್ತೆಹಚ್ಚಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹನೂರು ಬಫರ್ ವಲಯದಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಕಾಡುಪ್ರಾಣಿಗಳ ಬೇಟೆ ತಡೆಯಲು ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರೂ, ಬೇಟೆಗಾರರು ಮತ್ತೆ ಸಕ್ರಿಯರಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಹನೂರು ಶೂಟೌಟ್ ಬಳಿಕ ಮತ್ತೆ ಕಳ್ಳಬೇಟೆ ಆರೋಪ

ಹನೂರು ಅರಣ್ಯ ವ್ಯಾಪ್ತಿಯಲ್ಲಿ ಆಗಸ್ಟ್ 14ರಂದು ನಡೆದ ಗುಂಡಿನ ದಾಳಿ ಪ್ರಕರಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಶಾಗ್ಯ ಸಮೀಪದ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಬೇಟೆಗಾರರ ನಡುವೆ ನಡೆದ ಸಂಘರ್ಷದಲ್ಲಿ ಮೂವರು ಮೃತಪಟ್ಟಿದ್ದರು. ಅವರು ಕಾಡುಪ್ರಾಣಿಯನ್ನು ಬೇಟೆಯಾಡಲು ಅರಣ್ಯ ಪ್ರದೇಶಕ್ಕೆ ಪ್ರವೇಶಿಸಿದ್ದರು ಎಂಬುದು ಅರಣ್ಯ ಇಲಾಖೆಯ ಆರೋಪವಾಗಿತ್ತು. ಆದರೆ ಗುಂಡಿನ ದಾಳಿ ಪ್ರಕರಣದ ಕುರಿತು ಬಳಿಕ ಹಲವು ಪ್ರಶ್ನೆಗಳು ಮತ್ತು ಅನುಮಾನಗಳು ವ್ಯಕ್ತವಾಗಿದ್ದವು. ಪ್ರಕರಣ ರಾಜಕೀಯವಾಗಿಯೂ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ವಿಧಾನಸಭೆಯಲ್ಲೂ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದವು.

ಇದನ್ನೂ ಓದಿ: ಹನೂರು ಎನ್ ಕೌಂಟರ್ ಬೆನ್ನಲ್ಲೇ ಬಯಲಾಯ್ತು ಅಂತರರಾಷ್ಟ್ರೀಯ ಜಾಲ: ಚಾಮರಾಜನಗರದಿಂದ ಚೀನಾ, ಮಲೇಷಿಯಾಗೆ ಚಿಪ್ಪುಹಂದಿ ಸ್ಮಗ್ಲಿಂಗ್

ಈ ಎಲ್ಲ ಬೆಳವಣಿಗೆಗಳ ನಡುವೆಯೇ ಹನೂರು ಅರಣ್ಯದಲ್ಲಿ ಮತ್ತೆ ಕಡವೆ ಬೇಟೆಯಾಡಿರುವ ಘಟನೆ ಬೆಳಕಿಗೆ ಬಂದಿರುವುದು ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಸಂರಕ್ಷಣೆಯ ವಿಚಾರದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ಅರಣ್ಯ ಸಿಬ್ಬಂದಿ ಮುಂದಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸೂರಜ್ ಪ್ರಸಾದ್ ಎಸ್.ಎನ್
ಸೂರಜ್ ಪ್ರಸಾದ್ ಎಸ್.ಎನ್

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
ಗದಗ: ದಶಕಗಳು ಕಳೆದರೂ ರೈತರಿಗೆ ಸಿಗದ ಪರಿಹಾರ; ಡಿಸಿ, ಎಡಿಸಿ ಕಾರು ಜಪ್ತಿ
ಗದಗ: ದಶಕಗಳು ಕಳೆದರೂ ರೈತರಿಗೆ ಸಿಗದ ಪರಿಹಾರ; ಡಿಸಿ, ಎಡಿಸಿ ಕಾರು ಜಪ್ತಿ
ಗೌರವಯುತವಾಗಿ ನೋಡಿ ಅಂದಿದ್ದು, ದುಡ್ಡು ಕೊಡಿ ಎಂದಿಲ್ಲ: ಸಚಿವ ಶಿವಲಿಂಗೇಗೌಡ
ಗೌರವಯುತವಾಗಿ ನೋಡಿ ಅಂದಿದ್ದು, ದುಡ್ಡು ಕೊಡಿ ಎಂದಿಲ್ಲ: ಸಚಿವ ಶಿವಲಿಂಗೇಗೌಡ
ವಾಯುಭಾರ ಕುಸಿತದ ಎಫೆಕ್ಟ್​​: ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭರ್ಜರಿ ಮಳೆ
ವಾಯುಭಾರ ಕುಸಿತದ ಎಫೆಕ್ಟ್​​: ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭರ್ಜರಿ ಮಳೆ
ಕಿಗ್ಗಾ ಬಳಿ ಇರುವ ಋಷ್ಯಶೃಂಗೇಶ್ವರ ಸ್ವಾಮಿಯ ಶಕ್ತಿ, ಐತಿಹ್ಯವೇ ಅತಿ ರೋಚಕ!
ಕಿಗ್ಗಾ ಬಳಿ ಇರುವ ಋಷ್ಯಶೃಂಗೇಶ್ವರ ಸ್ವಾಮಿಯ ಶಕ್ತಿ, ಐತಿಹ್ಯವೇ ಅತಿ ರೋಚಕ!
ಉಪ್ಪಿನ ಪ್ಯಾಕೆಟ್​​ ಮೇಲೂ ಇನ್ನು 'ಆರೋಗ್ಯಕ್ಕೆ ಹಾನಿಕಾರಕ' ಎಂಬ ಸ್ಟಿಕರ್
ಉಪ್ಪಿನ ಪ್ಯಾಕೆಟ್​​ ಮೇಲೂ ಇನ್ನು 'ಆರೋಗ್ಯಕ್ಕೆ ಹಾನಿಕಾರಕ' ಎಂಬ ಸ್ಟಿಕರ್
ರೌಡಿಶೀಟರ್‌ಗಳ ಜೊತೆ ರಾತ್ರಿಯಿಡೀ ಎಣ್ಣೆ ಪಾರ್ಟಿ
ರೌಡಿಶೀಟರ್‌ಗಳ ಜೊತೆ ರಾತ್ರಿಯಿಡೀ ಎಣ್ಣೆ ಪಾರ್ಟಿ
ಲಂಚ ಪಡೆದು ಲಾಕ್ ಆದ ತಹಶೀಲ್ದಾರ್: ಮತ್ತಷ್ಟು ಅಕ್ರಮಗಳು ಬಯಲಿಗೆ
ಲಂಚ ಪಡೆದು ಲಾಕ್ ಆದ ತಹಶೀಲ್ದಾರ್: ಮತ್ತಷ್ಟು ಅಕ್ರಮಗಳು ಬಯಲಿಗೆ
ಬಿಡಿಎ ನಿವೇಶನದಾರರಿಗೆ ಮನೆ ಕಟ್ಟಲು ಅರಣ್ಯ ಇಲಾಖೆಯಿಂದ ಅಡ್ಡಿ
ಬಿಡಿಎ ನಿವೇಶನದಾರರಿಗೆ ಮನೆ ಕಟ್ಟಲು ಅರಣ್ಯ ಇಲಾಖೆಯಿಂದ ಅಡ್ಡಿ
ಮನೆಯವರ ನೆನದು ಕಣ್ಣೀರು ಹಾಕಿದ ಬಿಗ್ ಬಾಸ್ ಸ್ಪರ್ಧಿಗಳು
ಮನೆಯವರ ನೆನದು ಕಣ್ಣೀರು ಹಾಕಿದ ಬಿಗ್ ಬಾಸ್ ಸ್ಪರ್ಧಿಗಳು
ವಿಧಾನ ಪರಿಷತ್​​ ಅಧಿವೇಶನ; ಮೂರನೇ ದಿನದ ಕಲಾಪ ನೇರಪ್ರಸಾರ
ವಿಧಾನ ಪರಿಷತ್​​ ಅಧಿವೇಶನ; ಮೂರನೇ ದಿನದ ಕಲಾಪ ನೇರಪ್ರಸಾರ