ತಮಿಳುನಾಡು ಸಂಪರ್ಕಿಸುವ ರಾ.ಹೆ.209ರಲ್ಲಿ ರಾತ್ರಿ ಸಂಚಾರ ನಿಷೇಧ; ಮದ್ರಾಸ್ ಹೈಕೋರ್ಟ್ ಆದೇಶ
2019 ರಲ್ಲಿ ಈರೋಡ್ ರಾತ್ರಿ ಸಂಚಾರವನ್ನು ಜಿಲ್ಲಾಧಿಕಾರಿ ನಿರ್ಬಂಧಿಸಿದ್ದರು. ಆದರೆ ಜಿಲ್ಲಾಧಿಕಾರಿ ಆದೇಶವನ್ನು ಅರಣ್ಯಧಿಕಾರಿಗಳು ಜಾರಿ ಮಾಡಿರಲಿಲ್ಲ. ಈ ವಿಚಾರವಾಗಿ ಪರಿಸರವಾದಿ ಚೊಕ್ಕಲಿಂಗಂ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಫೆಬ್ರವರಿ 10 ರಿಂದ ಜಾರಿಗೆ ಬರುವಂತೆ ಆದೇಶ ನೀಡಿದೆ.
ಚಾಮರಾಜನಗರ: ಕರ್ನಾಟಕ- ತಮಿಳುನಾಡು ಸಂಪರ್ಕ ಕಲ್ಪಿಸುವ ಮತ್ತೊಂದು ರಸ್ತೆಯ ರಾತ್ರಿ(Night) ಸಂಚಾರ ನಿಷೇಧವಾಗಿದೆ. ನಾಳೆಯಿಂದ ಚಾಮರಾಜನಗರದಿಂದ ಈರೋಡ್ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ(National highway) 209 ರಾತ್ರಿ ಸಂಚಾರ ನಿಷೇಧ ಮಾಡಲಾಗಿದೆ. ತಮಿಳುನಾಡಿ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದಿಂದ ಹಾದು ಹೋಗುವ ರಸ್ತೆ ಇದಾಗಿದ್ದು, ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆ ವರೆಗೆ ಸಂಚಾರ ನಿಷೇಧ ಮಾಡಿ ಮದ್ರಾಸ್ ಹೈಕೋರ್ಟ್(High court) ಆದೇಶ ನೀಡಿದೆ.
2019 ರಲ್ಲಿ ಈರೋಡ್ ರಾತ್ರಿ ಸಂಚಾರವನ್ನು ಜಿಲ್ಲಾಧಿಕಾರಿ ನಿರ್ಬಂಧಿಸಿದ್ದರು. ಆದರೆ ಜಿಲ್ಲಾಧಿಕಾರಿ ಆದೇಶವನ್ನು ಅರಣ್ಯಧಿಕಾರಿಗಳು ಜಾರಿ ಮಾಡಿರಲಿಲ್ಲ. ಈ ವಿಚಾರವಾಗಿ ಪರಿಸರವಾದಿ ಚೊಕ್ಕಲಿಂಗಂ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಫೆಬ್ರವರಿ 10 ರಿಂದ ಜಾರಿಗೆ ಬರುವಂತೆ ಆದೇಶ ನೀಡಿದೆ. ಆ ಪ್ರಕಾರ ನಾಳೆಯಿಂದ ಕರ್ನಾಟಕ- ತಮಿಳುನಾಡು ಸಂಪರ್ಕ ಕಲ್ಪಿಸುವ ಈರೋಡ್ ರಾತ್ರಿ ಸಂಚಾರ ಬಂದ್ ಆಗಲಿದೆ.
ಇದನ್ನೂ ಓದಿ:
ಮೈಸೂರಿನಲ್ಲೂ ಭಾರಿ ಮಳೆ, ಬೃಹತ್ ಮರ ಧರೆಗುರುಳಿ ಎರಡು ಕಾರು ಜಖಂ, ರಸ್ತೆ ಸಂಚಾರ ಸ್ಥಗಿತ, ತೆರವು ಕಾರ್ಯ ಜಾರಿಯಲ್ಲಿದೆ