Mullayanagiri: ಹೊಸವರ್ಷ ಆಚರಿಸೋಕೆ ಚಿಕ್ಕಮಗಳೂರು, ಮುಳ್ಳಯ್ಯನಗಿರಿಗೆ ಹೊರಡುವ ಮುನ್ನ ಇದರ ಬಗ್ಗೆ ಇರಲಿ ಗಮನ
ತಂಪಾದ ಮಳೆಗೆ, ಸೊಂಪಾದ ಇಳೆ.. ಕಣ್ಣು ಹಾಯಿಸಿದಲ್ಲೆಲ್ಲಾ ಹಚ್ಚಹಸಿರ ರಾಶಿ. ಚುಮುಚುಮು ಚಳಿ. ಇನ್ನೇನು ಬೇಕು. ಪ್ರವಾಸಿಗರನ್ನು ಕೈಬೀಸಿ ಕರೆಯೋ ಮುಳ್ಳಯ್ಯನಗಿರಿ ನವವಸಂತ ಸ್ವಾಗತಕ್ಕೆ ಸಾಕ್ಷಿಯಾಗ್ತಿದೆ.
ಚಿಕ್ಕಮಗಳೂರು ಅಂದ್ರೆ ಎಂಥಾ ಪ್ರವಾಸಿಗನ ಕಣ್ಣುಗಳು ಅರಳಿಬಿಡ್ತವೆ. ಅದ್ರಲ್ಲೂ ಮುಳ್ಳಯ್ಯನಗಿರಿ ಸೌಂದರ್ಯ ಎಲ್ಲರನ್ನೂ ಸ್ವಾಗತಿಸದೆ ಇರದು. ಈ ಬಾರಿಯೂ ಹೊಸ ವರ್ಷಕ್ಕೆ ಭರಪೂರ ಜನ ಆಗಮಿಸ್ತಿದ್ದಾರೆ. ಇತ್ತ 50-50 ನಿಯಮ ರೆಸಾರ್ಟ್ ಮಾಲೀಕರಿಗೆ ಶಾಕ್ ನೀಡಿದೆ. ಅಷ್ಟೇ ಅಲ್ಲಾ ಪ್ರವಾಸಿಗರ ನಿರ್ಲಕ್ಷ್ಯ ಧೋರಣೆ ಜಿಲ್ಲೆಗೆ ಗಂಡಾಂತರ ತರುವ ಮುನ್ಸೂಚನೆ ನೀಡ್ತಿದೆ.
ತಂಪಾದ ಮಳೆಗೆ, ಸೊಂಪಾದ ಇಳೆ.. ಕಣ್ಣು ಹಾಯಿಸಿದಲ್ಲೆಲ್ಲಾ ಹಚ್ಚಹಸಿರ ರಾಶಿ. ಚುಮುಚುಮು ಚಳಿ. ಇನ್ನೇನು ಬೇಕು. ಪ್ರವಾಸಿಗರನ್ನು ಕೈಬೀಸಿ ಕರೆಯೋ ಮುಳ್ಳಯ್ಯನಗಿರಿ ನವವಸಂತ ಸ್ವಾಗತಕ್ಕೆ ಸಾಕ್ಷಿಯಾಗ್ತಿದೆ. ಈಗಾಗಲೇ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಿಗರ ದಂಡೇ ಹರಿದು ಬರ್ತಿದೆ. ಅದ್ರಲ್ಲೂ ಹೊಸವರ್ಷ ಆಚರಿಸೋ ಉಮೇದಿನಿಂದ ಬರ್ತಿರೋರ ಸಂಖ್ಯೆ ದುಪ್ಪಟ್ಟಾಗ್ತಿದೆ. ಜಿಲ್ಲೆಯ ಬಹುತೇಕ ಹೋಟೆಲ್, ರೆಸಾರ್ಟ್, ಹೋಮ್ ಸ್ಟೇಗಳು ಹೌಸ್ ಫುಲ್ ಆಗಿವೆ. ಆದ್ರೆ ಈ ಸಂತಸದ ನಡುವೆಯೇ ಮಾಲೀಕರಿಗೆ ಸರ್ಕಾರದ 50-50 ನಿಯಮ ಆಘಾತ ನೀಡಿದೆ. ಕೊರೊನಾ ಹೊಡೆತಕ್ಕೆ ಕಂಗೆಟ್ಟವರಿಗೆ ರಿಲೀಫ್ ಅನ್ನುತ್ತಿರುವಾಗಲೇ ಹೊಸ ಪಾಲಿಸಿ ಶಾಕ್ ಕೊಟ್ಟಿದೆ. 50-50 ನಿಯಮ ಜಿಲ್ಲೆಯಲ್ಲೂ ಶಿಸ್ತಿನ ಅನುಷ್ಠಾನ ಅಂತಾ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಸರ್ಕಾರಿ ರಜೆ, ವೀಕೆಂಡ್‌ಗಳಲ್ಲೇ ಮುಳ್ಳಯ್ಯನಗಿರಿಗೆ ಅಪಾರ ಪ್ರವಾಸಿಗರು ಹರಿದು ಬರ್ತಿದ್ದಾರೆ. ಅಷ್ಟೇ ಅಲ್ಲಾ ಕೊರೊನಾ, ಒಮಿಕ್ರಾನ್ ಆತಂಕವಿದ್ರೂ ಮಾಸ್ಕ್, ಅಂತರಕ್ಕೆ ಎಳ್ಳುನೀರು ಬಿಡಲಾಗಿದೆ. ಸ್ಯಾನಿಟೈಸರ್ ಬಳಕೆ ಕೂಡಾ ಕಾಣ್ತಿಲ್ಲ. ಪ್ರವಾಸಿಗರ ಈ ನಡೆ ಜಿಲ್ಲೆಯ ಜನರಲ್ಲೂ ಆತಂಕ ಮೂಡಿಸಿದೆ.
ಕಳೆದ ವರ್ಷವೂ ಲಾಕ್‌ಡೌನ್ ನಿಂದ ಕಂಗಾಲಾಗಿದ್ದ ಪ್ರವಾಸೋದ್ಯಮಕ್ಕೆ ಈ ಬಾರಿ ಚೇತರಿಕೆಯ ವಿನಾಯ್ತಿ ಸಿಕ್ಕಿದೆ. ಹಾಗಂತಾ ಪ್ರವಾಸಿಗರ ಬೇಕಾಬಿಟ್ಟಿ ಸಂಚಾರ ನಿಜಕ್ಕೂ ಜಿಲ್ಲೆಗೆ ಗಂಡಾಂತರ ತರುತ್ತಾ ಅನ್ನೋ ಚರ್ಚೆಯೂ ಶುರುವಾಗಿದೆ. ವಹಿವಾಟಿಲ್ಲದೆ ಕಂಗೆಟ್ಟವರಿಗೆ 50-50 ನಿಯಮ ಅಲ್ಪ ಉಸಿರಾಡುವಂತೆ ಮಾಡಿದೆ. ಆದ್ರೆ, ಸಂಭ್ರಮದ ನಡುವೆ ಜವಾಬ್ದಾರಿ ಮರೆತರೆ ಆಘಾತ ಕಟ್ಟಿಟ್ಟ ಬುತ್ತಿ ಅನ್ನೋದನ್ನ ಎಲ್ಲರೂ ಮರೆಯದಿರಲಿ.
ವರದಿ: ಪ್ರಶಾಂತ್, ಟಿವಿ9 ಚಿಕ್ಕಮಗಳೂರು
ಇದನ್ನೂ ಓದಿ: Festival Calendar 2022: 2022 ರ ಧಾರ್ಮಿಕ ಹಬ್ಬಗಳ ಪಟ್ಟಿ
Published On - 7:25 am, Wed, 29 December 21