ತಪ್ಪು ಸೈಜ್ನ ಶೂ ಡೆಲಿವರಿ ಮಾಡಿದ ಕಂಪನಿ: 10 ಸಾವಿರ ರೂ. ದಂಡ ವಿಧಿಸಿದ ಆಯೋಗ
ಚಿಕ್ಕಮಗಳೂರಿನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ರಿಲಯನ್ಸ್ ರಿಟೇಲ್ ಲಿಮಿಟೆಡ್ ಒಡೆತನದ ಇ-ಕಾಮರ್ಸ್ ವೆಬ್‌ಸೈಟ್ ಅಜಿಯೊ ಕಂಪನಿಗೆ 10,000 ರೂಪಾಯಿ ದಂಡ ವಿಧಿಸಿದೆ.
ಚಿಕ್ಕಮಗಳೂರು, ಡಿಸೆಂಬರ್ 11: ಚಿಕ್ಕಮಗಳೂರಿನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು (CDRC) ರಿಲಯನ್ಸ್ ರಿಟೇಲ್ ಲಿಮಿಟೆಡ್ ಒಡೆತನದ ಇ-ಕಾಮರ್ಸ್ ವೆಬ್‌ಸೈಟ್ ಅಜಿಯೊ (Reliance Retail Ltd-owned e-commerce website Ajio) ಕಂಪನಿಗೆ 10,000 ರೂಪಾಯಿ ದಂಡ ವಿಧಿಸಿದೆ. ಅಜಿಯೊ ಕಂಪನಿಯು 9,294 ರೂಪಾಯಿ ಮೌಲ್ಯದ ತಪ್ಪಾದ ಸೈಜ್ನ Nike ಶೂಗಳನ್ನು ನೀಡಿದ್ದಕ್ಕಾಗಿ ಮತ್ತು ನಂತರ ಸರಿಯಾದ ಸೈಜ್ ಶೂಗಳನ್ನು ಗ್ರಾಹಕರಿಗೆ (Costumer) ನೀಡಲು ನಿರಾಕರಿಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ.
ಹರೀಶ್ ಎಂಬುವರು ಅಕ್ಟೋಬರ್ 15 ರಂದು ತಮ್ಮ ಇಬ್ಬರು ಮಕ್ಕಳಿಗೆ Ajio ಆ್ಯಪ್ನಲ್ಲಿ Nike ಕಂಪನಿಯ ಮೂರು ಜೋಡಿ ಶೂಗಳನ್ನು ಆರ್ಡ್ರ್ ಮಾಡಿದ್ದರು. ಇದಕ್ಕೆ 14,443 ರೂ. ಪಾವತಿಸಿದ್ದರು. ಆದರೆ Nike Air Zoom Vomero ಕಂಪನಿಯು UK-9 ಮತ್ತು UK-8 ನಂಬರ್ನ ತಪ್ಪು ಸೈಜ್ನ ಶೂಗಳನ್ನು ಡೆಲಿವರಿ ಮಾಡಿತು.
ಹೀಗಾಗಿ ಹರೀಶ್ ಅವರು ಎಕ್ಸ್ಚೇಂಜ್ ಮಾಡುವಂತೆ Ajio ನ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿದರು. ಆದರೆ ಕಂಪನಿಯು ಇದಕ್ಕೆ ಸ್ಪಂದಿಸಲಿಲ್ಲ. ಈ ಹಿನ್ನೆಲೆಯಲ್ಲಿ ಹರೀಶ್ ಅವರು ಸಿಡಿಆರ್ಸಿ ಮೊರೆ ಹೋದರು. ಸೇವಾ ನ್ಯೂನತೆ, ಪರಿಹಾರವಾಗಿ 20,000 ರೂ. ಮತ್ತು ಪಾವತಿಸಿದ್ದ 9,294 ರೂ. ಹಣವನ್ನು ಮರಳಿಸುವಂತೆ ಹರೀಶ್ ಅವರು ಸಿಡಿಆರ್ಸಿಯಲ್ಲಿ ದಾವೆ ಹೂಡಿದರು.
ಇದನ್ನೂ ಓದಿ: ಚಿಕನ್ ಇಲ್ಲದ ಬಿರಿಯಾನಿ ನೀಡಿದ ತಪ್ಪಿಗೆ 1000 ರೂ. ದಂಡ ಕಟ್ಟಿದ ಹೋಟೆಲ್ ಮಾಲಿಕ
ಸರಿಯಾದ ಗಾತ್ರದೊಂದಿಗೆ ಬೂಟುಗಳನ್ನು ವಿತರಿಸಲು ವಿಫಲವಾದ ಅಜಿಯೊ ತಪ್ಪಿತಸ್ಥವೆಂದು ಕಂಡುಹಿಡಿದಿದೆ. ಹೀಗಾಗಿ Ajio 9,294 ರೂ. ಅನ್ನು ಮರುಪಾವತಿಸಬೇಕು. ಜೊತೆಗೆ 10,000 ರೂ. ಪರಿಹಾರ ಮತ್ತು ದಾವೆ ವೆಚ್ಚಗಳಿಗೆ ವ್ಯಯಿಸಿದ 5,000 ರೂ. ಅನ್ನು ಗ್ರಾಹಕರಿಗೆ ನೀಡಬೇಕು ಎಂದು ಸೂಚಿಸಿದೆ.
ಈ ಮೊತ್ತವನ್ನು ಒಂದು ತಿಂಗಳೊಳಗೆ ನೀಡಬೇಕು. ವಿಫಲವಾದರೆ ಅದು ವಾರ್ಷಿಕ ಶೇ 8 ರಷ್ಟು ಬಡ್ಡಿ ವಿಧಿಸಲಾಗುತ್ತದೆ ಎಂದು ಎನ್.ಆರ್.ಚೆನ್ನಕೇಶವ ನೇತೃತ್ವದಲ್ಲಿ ಸದಸ್ಯ ಮಂಜುನಾಥ ಎಂ.ಬಮ್ಮನಕಟ್ಟಿ ಅವರನ್ನೊಳಗೊಂಡ ಆಯೋಗ ಈ ಆದೇಶ ಹೊರಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:52 pm, Mon, 11 December 23