ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಭಾಗದಲ್ಲಿ ಕೆರೆಕಟ್ಟೆಗಳನ್ನು ನಿರ್ಮಿಸಿ ಭಗೀರಥ ಎನ್ನಿಸಿಕೊಂಡ ಸಂತ ತಿಪ್ಪೇರುದ್ರಸ್ವಾಮಿ ಈ ಭಾಗದ ಜನರ ಪಾಲಿಗೆ ದೇವರಾಗಿದ್ದಾರೆ. ಹೀಗಾಗಿ, ನೂರಾರು ವರ್ಷಗಳಿಂದ ಶ್ರೀಗುರು ತಿಪ್ಪೇರುದ್ರಸ್ವಾಮಿ ಹೆಸರಿನಲ್ಲಿ ಅದ್ಧೂರಿ ಜಾತ್ರೆ ಉತ್ಸವ ನಡೆಯುತ್ತ ಬಂದಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಜಾತ್ರೆ ಕಳೆಗುಂದಿತ್ತು. ಇದೀಗ ಕೊರೊನಾ ಕಾಟ ಬಹುತೇಕ ಕಡಿಮೆ ಆಗಿದ್ದು ಅದ್ಧೂರಿ ಜಾತ್ರೆಗೆ ಮುಹೂರ್ತ ಫಿಕ್ಸ್ಆಗಿದ್ದು, ಮಾರ್ಚ್ 13ರಿಂದ 20ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.
ಇನ್ನು ರಾಜ್ಯದಲ್ಲೇ ಅತಿಹೆಚ್ಚು ಜನರು ಸೇರುವ ಜಾತ್ರೆಗಳ ಪೈಕಿ ನಾಯಕನ ಹಟ್ಟಿ ಜಾತ್ರೆಯೂ ಒಂದಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದಷ್ಟೇ ಅಲ್ಲದೆ ಹೊರ ರಾಜ್ಯಗಳಿಂದಲೂ ಜಾತ್ರೆಗೆ ಲಕ್ಷಾಂತರ ಜನ ಬರಲಿದ್ದಾರೆ. ಹೀಗಾಗಿ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಶಾಂತಿ ಸುವ್ಯವಸ್ಥೆ ಪಾಲಿಸುವ ದೃಷ್ಠಿಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರು, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಆರೋಗ್ಯ ಇಲಾಖೆಯಿಂದ ಮುಂಜಾಗೃತ ಕ್ರಮದ ವ್ಯವಸ್ಥೆ ಸೇರಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಜಾತ್ರೆ, ಈ ವರ್ಷ ಅದ್ಧೂರಿಯಾಗಿ ನಡೆಯಲಿದೆ. ಕೊವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದಾಗಿ ಜಾತ್ರೆ ಕಳೆಗುಂದಿದ್ದು, ಈ ವರ್ಷ ನಾಡಿನ ಮೂಲೆ ಮೂಲೆಗಳಿಂದ ಭಕ್ತ ಸಾಗರ ಹರಿದು ಬರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ರೀತಿಯಲ್ಲೂ ಸಿದ್ಧತೆಯಲ್ಲಿ ತೊಡಗಿದೆ.
ವರದಿ: ಬಸವರಾಜ ಮುದನೂರ್, tv9 ಚಿತ್ರದುರ್ಗ
ಇದನ್ನೂ ಓದಿ: ನಟನ ಮಗಳಿಗೂ ತಪ್ಪಿಲ್ಲ ಕಾಸ್ಟಿಂಗ್ ಕೌಚ್; ಭಯಾನಕ ಸತ್ಯ ಬಿಚ್ಚಿಟ್ಟ ನಟಿ
Temple Tour: ಬಿಚ್ಚುಗತ್ತಿ ಭರಮಣ್ಣ ನಾಯಕ ಸ್ಥಾಪಿಸಿದ ದೇವಿ ಆಲಯ ನೋಡಿ