ಮಾಜಿ ಸಚಿವ ಹೆಚ್.ಆಂಜನೇಯನ ಆಪ್ತರಿಗೆ ಐಟಿ ಶಾಕ್​: ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮನೆ ಮೇಲೆ ಐಟಿ ದಾಳಿ

ಮಾಜಿ ಸಚಿವ ಹೆಚ್.ಆಂಜನೇಯನ ಆಪ್ತರಾದ ಸುರೇಶ್, ಸಹೋದರ ತಿಪ್ಪೇಸ್ವಾಮಿ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಮಾಜಿ ಸಚಿವ ಹೆಚ್.ಆಂಜನೇಯನ ಆಪ್ತರಿಗೆ ಐಟಿ ಶಾಕ್​: ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮನೆ ಮೇಲೆ ಐಟಿ ದಾಳಿ
ಐಟಿ, ಹೆಚ್​ ಆಂಜನೇಯ
Follow us
TV9 Web
| Updated By: ವಿವೇಕ ಬಿರಾದಾರ

Updated on:Jan 04, 2023 | 6:59 PM

ಚಿತ್ರದುರ್ಗ: ಮಾಜಿ ಸಚಿವ ಹೆಚ್.ಆಂಜನೇಯನ (H Anjaneya) ಆಪ್ತರಾದ ಸುರೇಶ್, ಸಹೋದರ ತಿಪ್ಪೇಸ್ವಾಮಿ ಅವರ ಮನೆ ಮೇಲೆ ಐಟಿ ಅಧಿಕಾರಿಗಳು (IT Officers) ದಾಳಿ ಮಾಡಿದ್ದಾರೆ. ಹೊಳಲ್ಕೆರೆ ತಾಲೂಕಿನ ಪಾಡಿಗಟ್ಟೆ ಗ್ರಾಮದ ಚಿತ್ರದುರ್ಗ (Chitradurga) ಜಿಲ್ಲಾ ಕಾಂಗ್ರೆಸ್ (Congress) ಕಾರ್ಯದರ್ಶಿ ಪಾಡಿಗಟ್ಟೆ ಸುರೇಶ್​​, ಗುತ್ತಿಗೆದಾರ ತಿಪ್ಪೇಸ್ವಾಮಿ ಆದಾಯ ಮೀರಿ ಆಸ್ತಿಗಳಿಸಿದ್ದಾರೆಂದು ಐಟಿ ಅಧಿಕಾರಿಗಳಿಗೆ ಮಾಹಿತಿ ದೊರೆತಿತ್ತು. ಈ ಹಿನ್ನೆಲೆ ಹುಬ್ಬಳ್ಳಿಯಿಂದ ಆಗಮಿಸಿದ ಐಟಿ ಅಧಿಕಾರಿಗಳು ಪಾಡಿಗಟ್ಟೆ ಗ್ರಾಮದ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಸದ್ಯ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಡಿಕೆ ಶಿವಕುಮಾರ್ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ

ಹವಾಲಾ ಆರೋಪದಡಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಸಿಬಿಐ ತನಿಕೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ದೆಹಲಿಯ ಸಿಬಿಐ ಕಚೇರಿಯಲ್ಲಿ ವಿಚಾರಣೆಯನ್ನೂ ಎದುರಿಸಿದ್ದಾರೆ. ಈ ಸಂಬಂಧ ಬಿಜೆಪಿ ಮೇಲೆ ಸಾಕಷ್ಟು ಬಾರಿ ಹರಿಹಾಯ್ದಿದ್ದಾರೆ. ಇದೀಗ ಡಿಕೆ ಶಿವಕುಮಾರ್ (DK Shivakumar) ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ(Education institutions) ಮೇಲೆ ಸಿಬಿಐ ದಾಳಿ (CBI Raid) ಮಾಡಿದೆ. ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರುವ ನ್ಯಾಷನಲ್​ ಎಜುಕೇಷನ್​ ಫೌಂಡೇಶನ್​ ಮೇಲೆ ಸಿಬಿಐ ಅಧಿಕಾರಿಗಳು ಡಿಸೆಂಬರ್ 19 ರಂದು ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲಿಸಿತ್ತು.

ಇದನ್ನೂ ಓದಿ: 1989ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಡಿಕೆ ಶಿವಕುಮಾರ್ ಅವರ ಸಮಗ್ರ ಆಸ್ತಿಪಾಸ್ತಿ ವಿವರ ಇಲ್ಲಿದೆ

ಡಿಕೆ ಶಿವಕುಮಾರ್ ನ್ಯಾಷನಲ್​ ಎಜುಕೇಷನ್​ ಫೌಂಡೇಶನ್ ಚೇರ್​ಮನ್​ ಆಗಿದ್ದರೆ, ಪುತ್ರಿ ಐಶ್ವರ್ಯ ನ್ಯಾಷನಲ್​ ಎಜುಕೇಷನ್​ ಫೌಂಡೇಶನ್ ಕಾರ್ಯದರ್ಶಿಯಾಗಿದ್ದಾರೆ. 2013-2018ರವರೆಗೆ 74.92 ಕೋಟಿ ರೂ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದ ಆರೋಪ ಹಿನ್ನೆಲೆಯಲ್ಲಿ ಡಿಕೆಶಿ ವಿರುದ್ಧ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ FIR ದಾಖಲಿಸಿದ್ದರು. 2020ರ ಅಕ್ಟೋಬರ್‌ 5ರಂದು ಡಿಕೆಶಿ, ಡಿ.ಕೆ.ಸುರೇಶ್‌ ಮನೆ ಸೇರಿ 14 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆದಿತ್ತು.

ಸಿಬಿಐ ದಾಳಿ ಬಗ್ಗೆ ಡಿಕೆಶಿ ಪ್ರತಿಕ್ರಿಯೆ

ಇನ್ನು ಈ ಬಗ್ಗೆ ಟಿವಿ9ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಪ್ರತಿಕ್ರಿಯಿಸಿದ್ದು, ನಮ್ಮ ಶಿಕ್ಷಣ ಸಂಸ್ಥೆ ಮೇಲೆ ಸಿಬಿಐ ದಾಳಿ ಮಾಡಿದ್ದು, ನಮ್ಮ ಜಮೀನು, ವ್ಯವಹಾರದ ಸಂಬಂಧ ತನಿಖೆ ಮಾಡಿದ್ದಾರೆ. ನಮ್ಮ ಕುಟುಂಬಕ್ಕೆ ತನಿಖಾ ಸಂಸ್ಥೆಗಳಿಂದ ನಿರಂತರ ಕಿರುಕುಳ ನೀಡುತ್ತಿದೆ. ಎಲ್ಲಾ ತನಿಖಾ ಸಂಸ್ಥೆಗಳು ದೂರು ದಾಖಲಿಸಿ ತನಿಖೆ ನಡೆಸುತ್ತಿವೆ. ನಾನು ಯಾವುದೇ ತಪ್ಪು ಮಾಡಿಲ್ಲ ಹಾಗಾಗಿ ಭಯಪಡುವುದಿಲ್ಲ. ಸಿಬಿಐ ಅಧಿಕಾರಿಗಳು ನನ್ನ ಸಂಬಂಧಿಕರು, ವ್ಯವಹಾರಿಕ ಪಾಲುದಾರರಿಗೂ ನೋಟಿಸ್​ ನೀಡಿ ಮಾಹಿತಿ ಪಡೆದಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ರಾಜ್ಯದ ಮೂವರು IAS ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆಗಾರಿಕೆ

ವಿರೋಧಿಗಳನ್ನು ಮಟ್ಟಹಾಕಲು ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಾಂಗ್ರೆಸ್​ನವರಿಗೆ ತೊಂದರೆ ಕೊಡುವುದೇ ಮುಖ್ಯ ಉದ್ದೇಶವಾಗಿದೆ. ಐಟಿ, ಇಡಿ, ಸಿಬಿಐ ಮೂಲಕ ನಿರಂತರ ಕಿರುಕುಳ ನೀಡುತ್ತಿದ್ದಾರೆ. ನ್ಯಾಯಾಲಯ, ದೇವರ ಮೇಲೆ ಭಾರ ಹಾಕಿ ಮುನ್ನಡೆಯುತ್ತೇವೆ. ನಾನು ಯಾವುದೇ ತಪ್ಪು ಮಾಡದಿರುವುದರಿಂದ ಧೈರ್ಯವಾಗಿದ್ದೇನೆ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:44 pm, Wed, 4 January 23