AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಳ್ಯ: ಹೃದಯಾಘಾತದಿಂದ 2ನೇ ತರಗತಿ ಮಗು ಸಾವು; ಕರ್ನಾಟಕದಲ್ಲಿ ಒಂದು ವಾರದಲ್ಲಿ 3ನೇ ಪ್ರಕರಣ

ಮಗುವಿನ ದೇಹ ಲಕ್ಷಣ ಪರಿಶೀಲಿಸಿದ ವೈದ್ಯರು ಬಾಲಕನಿಗೆ ಹೃದಯಾಘಾತವಾಗಿದೆ. ಮೃತಪಟ್ಟಿದ್ದಾನೆ ಎಂದು ಹೇಳಿದ್ದರು. ಈ ಪ್ರಕರಣದ ಮತ್ತಷ್ಟು ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.

ಸುಳ್ಯ: ಹೃದಯಾಘಾತದಿಂದ 2ನೇ ತರಗತಿ ಮಗು ಸಾವು; ಕರ್ನಾಟಕದಲ್ಲಿ ಒಂದು ವಾರದಲ್ಲಿ 3ನೇ ಪ್ರಕರಣ
ಹೃದಯಾಘಾತದಿಂದ ಮೃತಪಟ್ಟ ವಿದ್ಯಾರ್ಥಿ ಮೋಕ್ಷಿತ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 04, 2022 | 2:42 PM

ಮಂಗಳೂರು: ಕರ್ನಾಟಕದಲ್ಲಿ ಇತ್ತೀಚೆಗೆ ಸಣ್ಣ ಮಕ್ಕಳು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಕುಂಟಿನಾಕ ಗ್ರಾಮದ 2ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಮೃತ ವಿದ್ಯಾರ್ಥಿಯನ್ನು ಮೋಕ್ಷಿತ್ (7) ಎಂದು ಗುರುತಿಸಲಾಗಿದೆ. ಈತ ಕುಕ್ಕುಜಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈತ ಓದುತ್ತಿದ್ದ. ಶಾಲೆಗೆ ಬಂದಿದ್ದ ಬಾಲಕನಿಗೆ ಹಣೆ ಬಿಸಿಯಾಗಿತ್ತು. ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಶಿಕ್ಷಕರು ಪೋಷಕರನ್ನು ಶಾಲೆಗೆ ಕರೆಸಿದರು.

ತಂದೆ ಎದುರು ಮೋಕ್ಷಿತ್ ಕುಸಿದುಬಿದ್ದ. ತಕ್ಷಣ ಮಗನನ್ನು ಎತ್ತಿಕೊಂಡು ಅವರು ಸುಳ್ಯ ಪಟ್ಟಣದ ಖಾಸಗಿ ಆಸ್ಪತ್ರೆಗೆ ತೆರಳಿದರು. ಮಗುವಿನ ದೇಹ ಲಕ್ಷಣ ಪರಿಶೀಲಿಸಿದ ವೈದ್ಯರು ಬಾಲಕನಿಗೆ ಹೃದಯಾಘಾತವಾಗಿದೆ. ಮೃತಪಟ್ಟಿದ್ದಾನೆ ಎಂದು ಹೇಳಿದ್ದರು. ಈ ಪ್ರಕರಣದ ಮತ್ತಷ್ಟು ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.

ಮಕ್ಕಳಲ್ಲಿ ಇತ್ತೀಚೆಗೆ ಹೃದಯಘಾತ ಹೆಚ್ಚಾಗುತ್ತಿರುವುದು ಆತಂಕ ಉಂಟು ಮಾಡಿದೆ. ಇತ್ತೀಚೆಗಷ್ಟೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಹೃದಯಾಘಾತದಿಂದ 9ನೇ ತರಗತಿಯ ಬಾಲಕಿ ವೈಷ್ಣವಿ (14) ಮೃತಪಟ್ಟಿದ್ದರು. ಕುಂದಾಪುರ ತಾಲೂಕಿನ ತಲ್ಲೂರಿನಲ್ಲಿ 13 ವರ್ಷದ ಬಾಲಕಿ ಹೃದಯಾಘಾತದಿಂದ ಮೃತಪಟ್ಟಿದ್ದಳು. 8ನೇ ತರಗತಿಯಲ್ಲಿ ಓದುತ್ತಿದ್ದ ಅನುಶ್ರೀ, ಮನೆಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಳು, ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಇಹಲೋಕ ತ್ಯಜಿಸಿದ್ದಳು.

ಮಕ್ಕಳಲ್ಲಿ ಹೃದಯಾಘಾತಕ್ಕೆ ಏನು ಕಾರಣ

ದೇಹದಲ್ಲಿ ರಕ್ತದ ಪೂರೈಕೆಗೆ ಅಡಚಣೆ ಉಂಟಾದಾಗ, ಹೃದಯದ ಸ್ನಾಯುಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಇದರಿಂದ ಹೃದಯಾಘಾತದಂತಹ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೊರೊನಾ ಸಮಯದಲ್ಲಿ ಪ್ರಪಂಚಾದ್ಯಂತ ಶಾಲೆಗಳನ್ನು ಮುಚ್ಚಲಾಗಿತ್ತು, ಮಕ್ಕಳು ಆಟವಾಡುವುದನ್ನೂ ನಿಲ್ಲಿಸಿದ್ದರು, ಮನೆಯಲ್ಲಿ ಟಿವಿ, ಮೊಬೈಲ್, ಲ್ಯಾಪ್​ಟಾಪ್ ಮುಂದೆ ಕೂತು ಏನಾದರೂ ತಿನ್ನುತ್ತಿದ್ದರು. ಒಂದೇ ಜಾಗದಲ್ಲಿ ದಿನಪೂರ್ತಿ ಕುಳಿತಿದ್ದರೆ ಹೃದ್ರೋಗದ ಅಪಾಯ ಹೆಚ್ಚು. ಈಗಿನ ಮಕ್ಕಳು ಮೊಬೈಲ್ ಫೋನಿನ ಚಟಕ್ಕೆ ಬಿದ್ದಿದ್ದಾರೆ ಅಂದರೆ ಅದಕ್ಕೆ ಅಡಿಕ್ಟ್ ಆಗಿದ್ದು ಅವರ ಮನಸ್ಸನ್ನು ದುರ್ಬಲಗೊಳಿಸುತ್ತಿದೆ.

ಬೊಜ್ಜಿನ ಸಮಸ್ಯೆಯೂ ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣವಾಗಬಹುದು. ಹಾಗಾಗಿ ಪೋಷಕರು ಮಕ್ಕಳ ಈ ಎಲ್ಲಾ ಅಭ್ಯಾಸಗಳತ್ತ ಗಮನ ಹರಿಸಿ ಅವರೊಂದಿಗೆ ಸಮಯ ಕಳೆಯಬೇಕು ಎಂದು ತಜ್ಞರು ಸಲಹೆ ಮಾಡಿದ್ದಾರೆ.

Published On - 2:42 pm, Fri, 4 November 22

ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್
‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
ಐದು ದಿನಗಳ ಕಾಲ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ ಬಾಲಕ
ಐದು ದಿನಗಳ ಕಾಲ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ ಬಾಲಕ
ವಿದ್ಯುತ್ ಚಿತಾಗಾರದ ಕರೆಂಟ್ ಬಿಲ್ ಬಾಕಿ: ಬಡವಾಯ್ತೇ ಬಿಟಿಡಿಎ
ವಿದ್ಯುತ್ ಚಿತಾಗಾರದ ಕರೆಂಟ್ ಬಿಲ್ ಬಾಕಿ: ಬಡವಾಯ್ತೇ ಬಿಟಿಡಿಎ
ದಿನಕ್ಕೆ 10 ಗಂಟೆ ಕೆಲಸದ ಅವಧಿ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು!
ದಿನಕ್ಕೆ 10 ಗಂಟೆ ಕೆಲಸದ ಅವಧಿ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು!
ತನ್ನ ಸಿಗ್ನೇಚರ್ ಸ್ಟೆಪ್​ ಹಾಕುತ್ತಾ ಕುಣಿದು ರಂಜಿಸಿದ ಲೆಜೆಂಡರಿ ಸ್ಟಾರ್
ತನ್ನ ಸಿಗ್ನೇಚರ್ ಸ್ಟೆಪ್​ ಹಾಕುತ್ತಾ ಕುಣಿದು ರಂಜಿಸಿದ ಲೆಜೆಂಡರಿ ಸ್ಟಾರ್
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್