AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾರ್ಚೂನರ್​​ನಲ್ಲಿ ಬಂದು ಕೆಲಸ ಮಾಡುವ ಪೌರ ಕಾರ್ಮಿಕ: 50 ರೂ. ಗಳಿಸುತ್ತಿದ್ದವನ ಬದುಕು ಬದಲಾಯಿಸಿದ್ದು ಆ ಒಂದು ಘಟನೆ!

50 ರೂಪಾಯಿ ದಿನಗೂಲಿಯಿಂದ ಆರಂಭವಾಗಿ ಇಂದು ಸ್ವಂತ ಪರಿಶ್ರಮದಿಂದ ಆರ್ಥಿಕವಾಗಿ ಸದೃಢರಾಗಿ ತಮ್ಮದೇ ಫಾರ್ಚೂನರ್ ಕಾರಿನಲ್ಲಿ ಬಂದು ರಸ್ತೆ ಸ್ವಚ್ಛಗೊಳಿಸುವ ಮಂಗಳೂರಿನ ಪೌರ ಕಾರ್ಮಿಕ ಸೇಸಪ್ಪ ಅವರ ಪ್ರೇರಣಾದಾಯಿ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಅವರ ಬದುಕು ಬದಲಾಗಲು ಕಾರಣವಾಗಿದ್ದು ಆ ಒಂದು ಘಟನೆ. ಅದೇನು ಎಂಬ ಮಾಹಿತಿ ಇಲ್ಲಿದೆ.

ಫಾರ್ಚೂನರ್​​ನಲ್ಲಿ ಬಂದು ಕೆಲಸ ಮಾಡುವ ಪೌರ ಕಾರ್ಮಿಕ: 50 ರೂ. ಗಳಿಸುತ್ತಿದ್ದವನ ಬದುಕು ಬದಲಾಯಿಸಿದ್ದು ಆ ಒಂದು ಘಟನೆ!
ಫಾರ್ಚೂನರ್​​ನಲ್ಲಿ ಬಂದು ಕೆಲಸ ಮಾಡುವ ಪೌರ ಕಾರ್ಮಿಕ
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on:Aug 25, 2026 | 6:35 PM

Share

ಮುಖ್ಯಾಂಶಗಳು

  • ಫಾರ್ಚೂನರ್​​ನಲ್ಲಿ ಬಂದು ಕೆಲಸ ಮಾಡುವ ಪೌರ ಕಾರ್ಮಿಕ
  • 50 ರೂಪಾಯಿ ಗಳಿಸುತ್ತಿದ್ದವನ ಬದುಕು ಬದಲಾಗಿದ್ದು ಹೇಗೆ?
  • ಇಲ್ಲಿದೆ ಬಿ.ಸಿ. ರೋಡ್​​ನ ಸೇಸಪ್ಪ ಕುರಿತ ಇಂಟರೆಸ್ಟಿಂಗ್​​ ವಿಚಾರ

ಮಂಗಳೂರು, ಆಗಸ್ಟ್​​ 25: ಐಷಾರಾಮಿ ಫಾರ್ಚೂನರ್​​ ಕಾರಿನಲ್ಲಿ ಬಂದು ಕೆಲಸ ಮಾಡುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ. ರೋಡ್​​ನ ಸೇಸಪ್ಪ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಫುಲ್​​ ಟ್ರೆಂಡಿಂಗಿನಲ್ಲಿದ್ದಾರೆ. ಬೆಳಗಿನ ಜಾವ ಬಿ.ಸಿ. ರೋಡ್​​ನ ರಸ್ತೆಗಳ ಜನ ಇನ್ನೂ ನಿದ್ರೆಯಲ್ಲಿರುವಾಗಲೇ ಕೈಯಲ್ಲಿ ಪೊರಕೆ ಹಿಡಿದು ರಸ್ತೆಗಳ ಸ್ವಚ್ಛತೆಗೆ ಇಳಿಯುವ ಇವರ ಬದುಕಿನ ಕಥೆ ಮಾತ್ರ ಸಾಮಾನ್ಯವಲ್ಲ. ಕೇವಲ ಮೂರನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರುವ ಇವರು, ಕೆಲಸ ಆರಂಭಿಸಿದ್ದು ಕೇವಲ 50 ರೂ. ದಿನಗೂಲಿಯಿಂದ ಎಂಬುದನ್ನು ನೀವು ನಂಬಲೇಬೇಕು.

ಬದುಕಿಗೆ ಟರ್ನಿಂಗ್​​ ಪಾಯಿಂಟ್​​

1996ರಲ್ಲಿ ಕೇವಲ 50 ರೂಪಾಯಿ ದಿನಗೂಲಿಗೆ ಕೆಲಸಕ್ಕೆ ಸೇರಿದ ಸೇಸಪ್ಪ, ಬಳಿಕ ಕಾಯಂ ನೌಕರರಾದರು. ಆರಂಭದ ದಿನಗಳಲ್ಲಿ ವೈಯಕ್ತಿಕ ಹಾಗೂ ಕೌಟುಂಬಿಕ ಕಾರಣಗಳಿಂದ ಕುಡಿತದ ಚಟಕ್ಕೆ ಒಳಗಾಗಿದ್ದರು. ಆದರೆ 2005ರ ಬಳಿಕ ಬದುಕನ್ನು ಬದಲಿಸಿಕೊಳ್ಳುವ ದೃಢ ನಿರ್ಧಾರ ಕೈಗೊಂಡರು. ಆಗ ಎಸ್‌ಐ ಆಗಿದ್ದ ಬೆಳ್ಳಿಯಪ್ಪ ಅವರ ಮಾತಿಗೆ ಬೆಲೆ ನೀಡಿ ಕುಡಿತವನ್ನು ಸಂಪೂರ್ಣವಾಗಿ ತ್ಯಜಿಸಿದರು. ಅಂದಿನಿಂದ ಅವರ ಬದುಕಿನ ದಿಕ್ಕೇ ಬದಲಾಯಿತು.

ಇದನ್ನೂ ಓದಿ: ಕರಾವಳಿಯಲ್ಲಿ ಇಂದು ಈದ್ ಮಿಲಾದ್ ಆಚರಣೆ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ

ಬೆಳಗ್ಗೆ 5ರಿಂದ ನಗರದ ಸ್ವಚ್ಛತೆ ಕೆಲಸ

ಇಂದಿಗೂ ಬೆಳಗ್ಗೆ 5 ಗಂಟೆಗೆ ಬಿ.ಸಿ. ರೋಡ್​​ಗೆ ಆಗಮಿಸುವ ಸೇಸಪ್ಪ, ಮಧ್ಯಾಹ್ನ 12 ಗಂಟೆಯವರೆಗೆ ನಗರದ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ. ಇಂದು ಸ್ವಂತ ಪರಿಶ್ರಮದಿಂದ ಆರ್ಥಿಕವಾಗಿ ಸದೃಢರಾಗಿರುವ ಅವರು, ಕೆಲಸಕ್ಕೆ ಫಾರ್ಚೂನರ್​​ನಲ್ಲಿ ಕಾರಿನಲ್ಲಿ ಆಗಮಿಸುತ್ತಾರೆ. ಹೀಗಿದ್ದರೂ ತಮ್ಮ ಹಿಂದಿನ ದಿನಗಳನ್ನು ಮಾತ್ರ ಮರೆತಿಲ್ಲ. ಸ್ವಚ್ಛತಾ ಕೆಲಸದ ಜತೆಗೆ ಹೈನುಗಾರಿಕೆ , ಕೃಷಿಯಲ್ಲೂ ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ.

ಸೇಸಪ್ಪರಿಗಿದೆ ಕಾರ್​​ಗಳ ಕ್ರೇಜ್​​

ಪೌರ ಕಾರ್ಮಿಕ ಸೇಸಪ್ಪ ಅವರಿಗೆ ಚಿಕ್ಕಂದಿನಿಂದಲೇ ಕಾರುಗಳ ಬಗ್ಗೆ ಕ್ರೇಜ್​​ ಇತ್ತು. ಆರಂಭದ ದಿನಗಳಲ್ಲಿ ಮಾರುತಿ 800, ಆಲ್ಟೋ, ಓಮ್ನಿ, ಸ್ಕಾರ್ಪಿಯೋ ಮತ್ತು ರಿಟ್ಜ್​​ ಕಾರುಗಳನ್ನ ಖರೀದಿಸಿದ್ದರು. ಕಾರುಗಳ ಮೇಲಿನ ವ್ಯಾಮೋಹವೀಗ ಫಾರ್ಚೂನರ್​​ವರೆಗೆ ಬಂದುನಿಂತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:43 am, Tue, 25 August 26

Follow Us
ಪೃಥ್ವಿರಾಜ್​ ಬಿ.ಯು. ಮಂಗಳೂರು
ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್