AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ-ಕರ್ನಾಟಕದ ಗಡಿಯಲ್ಲಿ ಘೋರ ದುರಂತ: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ, ಆರು ಜನ ಸಾವು

ಇತ್ತೀಚೆಗೆ ಕೆಎಸ್​​ಆರ್​​ಟಿಸಿ ಹಾಗೂ ಬಿಎಂಟಿಸಿ ಬಸ್​​ಗಳ ಅವಘಡ ಸಂಖ್ಯೆ ಹೆಚ್ಚಾಗುತ್ತಿದೆ. ಅಪಘಾತ, ಬ್ರೇಕ್ ಫೇಲ್ ಆಗುವ ಪ್ರಕರಣಗಳು ಹೆಚ್ಚಾಗಿದ್ದು, ಅದರಂತೆ ಕರ್ನಾಟಕ ಕೇರಳ ನಡುವಿನ ಗಡಿ ಭಾಗದಲ್ಲಿ ಕೆಎಸ್​​ಆರ್​ಟಿಸಿ ಬಸ್​ ಬ್ರೇಕ್ ಫೇಲ್ ಆಗಿ ತಂಗುದಾಣಕ್ಕೆ ನುಗ್ಗಿದೆ. ಪರಿಣಾಮ ಆರು ಜನರು ಸಾವನ್ನಪ್ಪಿದ್ದಾರೆ.

ಕೇರಳ-ಕರ್ನಾಟಕದ ಗಡಿಯಲ್ಲಿ ಘೋರ ದುರಂತ: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ, ಆರು ಜನ ಸಾವು
ಅಪಘಾತ
ಅಶೋಕ್​ ಪೂಜಾರಿ, ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 28, 2025 | 4:41 PM

Share

ಮಂಗಳೂರು, (ಆಗಸ್ಟ್​​ 28): ಕರ್ನಾಟಕ ಹಾಗೂ ಕೇರಳ ಗಡಿ ಭಾಗದ ತಲಪಾಡಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್​ ಬ್ರೇಕ್ ಫೇಲಾಗಿ ಅಪಘಾತಕ್ಕೀಡಾಗಿದ್ದು (accident), ಸ್ಥಳದಲ್ಲೇ ಆರು ಜನರು ಸಾವನ್ನಪ್ಪಿದ್ದಾರೆ. ಕರ್ನಾಟಕ ಕೇರಳ ಗಡಿ ಭಾಗದ ತಲಪಾಡಿಯಲ್ಲಿ ಈ ದುರ್ಘಟನೆ ನಡೆದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬ್ರೇಕ್ ಫೇಲ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬಸ್​ ತುಂಗುದಾಣಕ್ಕೆ ನುಗ್ಗಿ ಬಸ್​ಗಾಗಿ ಕಾಯುತ್ತಿದ್ದವರಿಗೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಆಟೋ ಚಾಲಕ, ಒಂದು ಮಗು, ಬಾಲಕಿ, ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ.

ಆಟೋ ಚಾಲಕ ಹೈದರ್ (47)​​, ಅವಮ್ಮಾ (72), ಖದೀಜಾ (60), ಹಸ್ನಾ(11), ನಫೀಸಾ (52), ಆಯಿಷಾ ಫಿದಾ (19) ಮೃತರು. ಲಕ್ಷ್ಮಿ (61), ಸುರೇಂದ್ರ (39) ಗಾಯಾಳುಗಳು.

ಇದನ್ನೂ ಓದಿ: ಯಲ್ಲಾಪುರ: ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ; ಲಾರಿಗೆ ಬಸ್ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು

ಕೇರಳದ ಕಾಸರಗೋಡು ಕಡೆಯಿಂದ ಮಂಗಳೂರು ಕಡೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್​,​ ಆಟೋ ರಿಕ್ಷಾದ ಹಿಂಬದಿ‌ಗೆ ಡಿಕ್ಕಿ ಹೊಡೆದು ದುರುಂತ ಸಂಭವಿಸಿದೆ. ಮೃತರ ಪೈಕಿ 3 ಮಹಿಳೆಯರು ಮತ್ತು ಓರ್ವ ಪುರುಷ ಒಂದೇ ಕುಟುಂಬದವರು.

ಏಳು ಜನರಿಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು 

ಸದ್ಯ ಮೃತ ಯಾರ ಗುರುತು ಪತ್ತೆ ಆಗಿಲ್ಲ. ಏಳು ಜನರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇರಳದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ವಿಜಯನಗರ ಅಂಡರ್​ಪಾಸ್​ನಲ್ಲಿ ಬಿಎಂಟಿಸಿಯ ಈವಿ ಬಸ್ ಅಪಘಾತ ನಡೆಸಿದ ದೃಶ್ಯ ಕಾರಿನ ಡ್ಯಾಶ್​ಕಾಮ್​ನಲ್ಲಿ ಸೆರೆ

ಕೆಎಸ್‌ಆರ್‌ಟಿಸಿ​ ಬಸ್​ ಡಿಕ್ಕಿ ಹೊಡೆದ ರಭಸಕ್ಕೆ ರಿವರ್ಸ್ ಬಂದು ಬಸ್​ ನಿಲ್ದಾಣದ ಪಕ್ಕ ನಿಂತಿದ್ದ ಮತ್ತೊಂದು ಆಟೋಗೂ ಡಿಕ್ಕಿ ಹೊಡೆದಿದೆ. ಹೀಗಾಗಿ ಆಟೋ ಚಾಲಕನಿಗೆ ಗಂಭೀರ ಗಾಯವಾಗಿದೆ. ರಸ್ತೆ ಬದಿ ನಿಂತಿದ್ದ ಇಬ್ಬರು ವ್ಯಕ್ತಿಗಳಿಗೂ ಬಸ್ ಡಿಕ್ಕಿ‌ ಹೊಡೆದೆ. ಸದ್ಯ ಸ್ಥಳಕ್ಕೆ ‌ಮಂಜೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:01 pm, Thu, 28 August 25