AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯಕರನಿಗಾಗಿ ಗಂಡನ ಬಿಟ್ಟು ಬಂದ ಇಬ್ಬರು ಮಕ್ಕಳ ತಾಯಿ: ಸರ್ಕಾರಿ ಕೆಲಸ ಸಿಗುತ್ತಿದ್ದಂತೆಯೇ ಉಲ್ಟಾ ಹೊಡೆದ ಪ್ರೇಮಿ!

ದಾವಣಗೆರೆ ನಗರದ ಪ್ರಸಿದ್ಧ ಪಾರ್ಕ್​ನಲ್ಲಿ ಜನ ಸಾಗರವೇ ಸೇರಿತ್ತು. ಹೆಚ್ಚಾಗಿ ಮಧ್ಯಾಹ್ನದ ವೇಳೆ ಪ್ರೇಮಿಗಳು ಮನ ಬಿಚ್ಚಿ ಮಾತನಾಡುವ ಆ ಪಾರ್ಕ್​​ನಲ್ಲಿ ಬುಧವಾರ ಹೊಡಿ ಬಡಿ ಎಂಬ ಸದ್ದು ಕೇಳಿ ಬರುತ್ತಿತ್ತು. ವ್ಯಕ್ತಿಯೊಬ್ಬ ದುಷ್ಟನಂತೆ ಮಹಿಳೆ ಮೇಲೆ ಹಲ್ಲೆ ಮಾಡುತ್ತಿದ್ದ. ಕೆಲವರು ಜಗಳ ಬಿಡಿಸಲು ಯತ್ನಿಸುತ್ತಿದ್ದರು. ಮಹಿಳೆ ನೋಡಿದರೆ, ಆತನನ್ನು ಪ್ರೀತಿಸಿ ಗಂಡನನ್ನು ಬಿಟ್ಟು ಇಬ್ಬರು ಮಕ್ಕಳೊಂದಿಗೆ ಬಂದವಳು! ಏನಿದು ಲವ್ ಕಹಾನಿ? ತಿಳಿಯಲು ಮುಂದೆ ಓದಿ.

ಪ್ರಿಯಕರನಿಗಾಗಿ ಗಂಡನ ಬಿಟ್ಟು ಬಂದ ಇಬ್ಬರು ಮಕ್ಕಳ ತಾಯಿ: ಸರ್ಕಾರಿ ಕೆಲಸ ಸಿಗುತ್ತಿದ್ದಂತೆಯೇ ಉಲ್ಟಾ ಹೊಡೆದ ಪ್ರೇಮಿ!
ನವೀನ್ ಹಾಗೂ ಮಹಿಳೆ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on:Sep 11, 2025 | 7:58 AM

Share

ದಾವಣಗೆರೆ, ಸೆಪ್ಟೆಂಬರ್ 11: ಹುಬ್ಬಳ್ಳಿ ಹುಡುಗ ನವೀನ್ ಎಂಬಾತ ಮೂರು ವರ್ಷಗಳ ಹಿಂದೆ ದಾವಣಗೆರೆಗೆ (Davanagere) ಬಂದು ಪೇಪರ್ ವ್ಯಾನ್ ಓಡಿಸುತ್ತಿದ್ದ. ಆಗ ಹರಪನಹಳ್ಳಿ ಮೂಲದ ಮಹಿಳೆಯೊಬ್ಬಳ ಪರಿಚಯವಾಗಿದೆ. ಆಕೆ ಎರಡು ಮಕ್ಕಳ ತಾಯಿ. ಆದರೂ ಅವರಿಬ್ಬರ ನಡುವೆ ಪರಿಚಯವಾಗಿ, ನಂತರ ಪ್ರೀತಿ ಮೂಡಿತು. ಇಬ್ಬರು ಮಕ್ಕಳ ತಾಯಿಯಾಗಿದ್ದರೂ ಆ ಮಹಿಳೆ ಪ್ರಿಯಕರನಿಗಾಗಿ ಪತಿಯನ್ನೇ ಬಿಟ್ಟು ಬಂದಳು. ಮಕ್ಕಳನ್ನೂ ಕರೆದುಕೊಂಡೇ ಬಂದು ಬಿಟ್ಟಿದ್ದಳು!

ಲವ್ ಕಹಾನಿಗೆ ಸಿಕ್ತು ಬಿಗ್ ಟ್ವಿಸ್ಟ್!

ಇಬ್ಬರು ಮಕ್ಕಳ ತಾಯಿ ಹಾಗೂ ಯುವಕನ ಪ್ರೇಮ ಪ್ರಕರಣಕ್ಕೆ ತಿರುವು ದೊರೆಯಲು ಅದೊಂದು ಬೆಳವಣಿಗೆ ಸಾಕಾಯಿತು. ನವೀನ್​ಗೆ ಕೆಎಸ್​ಆರ್​ಟಿಸಿಯಲ್ಲಿ ಉದ್ಯೋಗ ದೊರೆತಿದೆ. ಒಳ್ಳೆಯ ಉದ್ಯೋಗ ದೊರೆಯುತ್ತಿದ್ದಂತೆಯೇ ಆತನಿಗೆ ಮಹಿಳೆ ಬೇಡವಾಗಿದ್ದಾಳೆ. ಇದೇ ವಿಚಾರವಾಗಿ ಇಬ್ಬರ ನಡುವೆ ದಾವಣಗೆರೆ ನಗರದ ಶಾಮನೂರ ರಸ್ತೆಯ ಟ್ಯಾಂಕ್ ಪಾರ್ಕ್​​ನಲ್ಲಿ ಭಾರಿ ಜಗಳ, ಹೊಡೆದಾಟ ನಡೆದಿದೆ. ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ.

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಮಹಿಳೆ

ಹರಪನಹಳ್ಳಿ ಮೂಲದ ಮಹಿಳೆ ನವೀನ್​ನನ್ನೇ ನಂಬಿ ಬಂದಿದ್ದು, ಪತಿಯಿಂದ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದಾಳೆ. ಆದರೆ, ಈಗ ನವೀನ್ ಕೆಎಸ್​ಆರ್​ಟಿಸಿಯಲ್ಲಿ ಕೆಲಸ ಸಿಗುತ್ತಿದ್ದಂತೆಯೇ ಉಲ್ಟಾ ಹೊಡೆದಿದ್ದಾನೆ. ನನ್ನ ಚಿನ್ನಾಭರಣ ಹಾಗೂ ಹಣ ಪಡೆದು ಈಗ ವಂಚಿಸುತ್ತಿದ್ದಾನೆ ಎಂದು ಆರೋಪಿಸಿರುವ ಮಹಿಳೆ ಇದೀಗ ನ್ಯಾಯ ಬೇಕೆಂದು ದಾವಣಗೆರೆ ಬಡಾವಣೆ ಠಾಣೆ ‌ಪೊಲೀಸರ ಮೊರೆ ಹೋಗಿದ್ದಾಳೆ.

ಇದನ್ನೂ ಓದಿ: ಕರ್ನಾಟಕದ ಮಾಜಿ ಶಾಸಕರಿಗೆ ಡಿಜಿಟಲ್‌ ಅರೆಸ್ಟ್: 30 ಲಕ್ಷ ರೂ ಪಂಗನಾಮ!

ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರೇಮ ಪ್ರಕರಣ

ಕಳೆದ ಹಲವು ದಿನಗಳಿಂದ ಇಬ್ಬರ ನಡುವೆ ಜಗಳ ಆಗುತ್ತಲೇ ಇದೆ. ಆದರೆ ಬುಧವಾರ ಮಾತ್ರ ಸಾರ್ವಜನಿಕವಾಗಿಯೇ ಪಾರ್ಕ್​​ನಲ್ಲೇ ಹೊಡೆದಾಡಿಕೊಂಡ ಕಾರಣ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರನ್ನೂ ಬಡಾವಣೆ ಠಾಣೆ ಪೊಲೀಸರು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದಾರೆ. ಆತ ತನಗೆ ವಂಚನೆ ಮಾಡುತ್ತಿದ್ದಾನೆ ಎಂದು ಪೊಲೀಸರ ಬಳಿ ಮಹಿಳೆ ದೂರಿದ್ದಾಳೆ. ಆದರೆ, ಆತ ಮದ್ಯಪಾನದ ಅಮಲಿನಲ್ಲಿರುವುದರಿಂದ ಮರುದಿನ ವಿಚಾರಣೆ ಮಾಡುವುದಾಗಿ ಪೊಲೀಸರು ಹೇಳಿ ಕಳುಹಿಸಿದ್ದಾರೆ. ಮುಂದೇನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:55 am, Thu, 11 September 25

Follow Us
Basavaraj Doddamani
Basavaraj Doddamani

ಬಸವರಾಜ ದೊಡ್ಡಮನಿ ಟಿವಿ9 ಕನ್ನಡ ವರದಿಗಾರರಾಗಿದ್ದು, ವಿಶೇಷವಾಗಿ ದಾವಣಗೆರೆ ಜಿಲ್ಲಾ ಪ್ರಾದೇಶಿಕ ಸುದ್ದಿಗಳ ಮೇಲೆ ಕೇಂದ್ರೀಕರಿಸುತ್ತಾರೆ.

Read More
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?