ದಾವಣಗೆರೆ: 7 ತಿಂಗಳಲ್ಲಿ 125 ನವಜಾತ ಶಿಶುಗಳು, 28 ಮಂದಿ ಬಾಣಂತಿಯರು ಮೃತ

ಬೆಣ್ಣೆನಗರಿ ದಾವಣಗೆರೆಯಲ್ಲಿ ನವಜಾತ ಶಿಶುಗಳ ಸರಣಿ ಸಾವು ಪ್ರಜ್ಞಾವಂತರ ಎದೆಯಲ್ಲಿ ನಡುಕ ಹುಟ್ಟಿಸಿದೆ. ತಾನು ಹೆತ್ತ ಕಂದಮ್ಮನ ಮುಖ ನೋಡುವ ಮುನ್ನವೇ ಬಾಣಂತಿಯರು ಕಣ್ಣು ಮುಚ್ಚುತ್ತಿದ್ದಾರೆ. ಪ್ರಪಂಚವನ್ನೇ ನೋಡದ ಕರುಳಬಳ್ಳಿಗಳು ಅಸು ನೀಗುತ್ತಿರುವುದು ಜನಸಾಮಾನ್ಯರ ಆತಂಕಕ್ಕೆ ಕಾರಣವಾಗಿದೆ.

ದಾವಣಗೆರೆ: 7 ತಿಂಗಳಲ್ಲಿ 125 ನವಜಾತ ಶಿಶುಗಳು, 28 ಮಂದಿ ಬಾಣಂತಿಯರು ಮೃತ
ದಾವಣಗೆರೆ ಚಿಟಗೆರೆ ಆಸ್ಪತ್ರೆ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ವಿವೇಕ ಬಿರಾದಾರ

Updated on:Nov 26, 2024 | 9:47 AM

ದಾವಣಗೆರೆ, ನವೆಂಬರ್​ 26: ದಾವಣಗೆರೆಯಲ್ಲಿ (Davangere) ಕಳೆದ ಏಳು ತಿಂಗಳಲ್ಲಿ 125 ನವಜಾತ ಶಿಶುಗಳು (Newborn Baby) ಮತ್ತು 28 ಮಂದಿ ಬಾಣಂತಿಯರು ಮೃತಪಟ್ಟಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲೇ ಹೆಚ್ಚು ಸಾವು ಆಗಿದ್ದರಿಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಳವಳ ವ್ಯಕ್ತಪಡಿಸಿದ್ದಾರೆ.

2024ರ ಏಪ್ರಿಲ್​ನಿಂದ ​ನವೆಂಬರ್ ತನಕ ಒಟ್ಟು ಏಳು ತಿಂಗಳ ಕಾಲವಧಿಯಲ್ಲಿ ದಾವಣಗೆರೆಯಲ್ಲಿ ಬರೋಬ್ಬರಿ 125 ನವಜಾತ ಶಿಶುಗಳು, 28 ಮಂದಿ ಬಾಣಂತಿಯರು ಮೃತಪಟ್ಟಿದ್ದಾರೆ. ಚಿಗಟೇರಿ ಸರ್ಕಾರಿ ಆಸ್ಪತ್ರೆಯಲ್ಲಿ 111, ದಾವಣಗೆರೆ ನಗರದ ಚಾಮರಾಜ ಪೇಟೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 24 ಶಿಶುಗಳು ಮೃತಪಟ್ಟಿವೆ. ಒಟ್ಟು 125 ನವಜಾತ ಶಿಶುಗಳು ಕೊನೆಯುಸಿರೆಳೆದಿವೆ.

ಸರ್ಕಾರಿ ಆಸ್ಪತ್ರೆಗಳಲ್ಲಿ 23 ಹಾಗೂ ಖಾಸಗಿ ಹೆರಿಗೆ ಆಸ್ಪತ್ರೆಗಳಲ್ಲಿ 5 ಮಂದಿ ಬಾಣಂತಿಯರು ಮೃತಪಟ್ಟಿದ್ದಾರೆ. ಒಟ್ಟು 28 ಜನ ಬಾಣಂತಿಯರು ಸಾವಿಗೀಡಾಗಿದ್ದಾರೆ.

ಈ ಅಂಕಿ-ಸಂಖ್ಯೆ ನೋಡಿ ಆರೋಗ್ಯ ಸಚಿವ ದಿನೇಶ್​​​ ಗುಂಡುರಾವ್​ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡರು.  “ನಿಮಗೆ ಏನು ಸೌಲಭ್ಯ ಬೇಕು? ಎಷ್ಟು ಅನುದಾನಬೇಕು? ಏನಾದರು ಮಾಡಿ ಮಕ್ಕಳನ್ನು ಉಳಿಸಿ. ಪ್ರತಿಯೊಂದು ಜೀವ ಕೂಡ ನಮಗೆ ಮುಖ್ಯ” ಎಂದು ಗರಂ ಆಗಿದರು.

ಚಿಗಟೇರಿ ಆಸ್ಪತ್ರೆಯಲ್ಲಿ ಈ ಏಳು ತಿಂಗಳಲ್ಲಿ 1103 ಶಿಶುಗಳ ದಾಖಲಾಗಿದ್ದು, 882 ಶಿಶುಗಳು ಡಿಸ್ಚಾರ್ಜ್ ಆಗಿವೆ. 44 ಶಿಶುಗಳು ಬೇರೆ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಮಕ್ಕಳ ಮತ್ತು ಮಹಿಳಾ ಆಸ್ಪತ್ರೆಯಲ್ಲಿ 732 ಮಕ್ಕಳು ದಾಖಲಾಗಿದ್ದು, 657 ಶಿಶುಗಳು ಡಿಸ್ಚಾರ್ಜ್ ಆಗಿವೆ. 34 ಶಿಶುಗಳನ್ನು ಬೇರೆ ಆಸ್ಪತ್ರೆಗೆ ಶಿಫ್ಟ್​​ ಮಾಡಲಾಗಿದೆ.

ಇದನ್ನೂ ಓದಿ: ಎಸ್​ಬಿಐನಲ್ಲಿನ 13 ಕೋಟಿ ಮೌಲ್ಯದ ಚಿನ್ನ ಕಳುವು, ಬ್ಯಾಂಕ್​ ತುಂಬ ಖಾರದ ಪುಡಿ

ದಾವಣಗೆರೆ ನಗರದ ಚಿಗಟೇರಿ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತಲಾ ಒಂದು ನ್ಯೂ ಬಾರ್ನ್ ​ಕೇರ್ ಯೂನಿಟ್​ಗಳು ಇವೆ. ದಾವಣಗೆರೆ ಅಕ್ಕಪಕ್ಕದ ಜಿಲ್ಲೆ, ತಾಲೂಕು ಆಸ್ಪತ್ರೆಗಳಲ್ಲಿ ನ್ಯೂ ಬಾರ್ನ್​ ಕೇರ್ ​ಯೂನಿಟ್ ಇಲ್ಲದ ಕಾರಣ ದಾವಣಗೆರೆಯ ಆಸ್ಪತ್ರೆಗಳಿಗೆ ಕೊನೆ ಹಂತದಲ್ಲಿ ರೆಫರ್ ಮಾಡಲಾಗುತ್ತದೆ. ಆದ್ದರಿಂದ ಈ ಮರಣ ಪ್ರಮಾಣ ಹೆಚ್ಚಿದೆ ಎಂದು ಡಾ. ಷಣ್ಮುಖ ಮಾಹಿತಿ ನೀಡಿದರು.

ಇದು ಸರ್ಕಾರಿ ಆಸ್ಪತ್ರೆಗಳ ಅಂಕಿ ಅಂಶಗಳಾಗಿದ್ದು, ಖಾಸಗಿ ಆಸ್ಪತ್ರೆಗಳ ಅಂಕಿ ಅಂಶಗಳು ತೆಗೆದುಕೊಂಡರೆ ಈ ಮರಣ ಪ್ರಮಾಣ ಏರಿಕೆ ಆಗಬಹುದು. ನ್ಯೂ ಬಾರ್ನ್​ ಕೇರ್ ಯೂನಿಟ್​ಗಳು ಇಲ್ಲದ ಕಾರಣ ಬಾಣಂತಿಯರು ಸಾವಿಗೀಡಾಗುತ್ತಿದ್ದಾರೆ. 2024ರ ಏಪ್ರಿಲ್ ನಿಂದ ನವೆಂಬರ್​ತನಕ ಒಟ್ಟು 28 ಬಾಣಂತಿಯರು ಮೃತಪಟ್ಟಿದ್ದಾರೆ. 23 ಸರ್ಕಾರಿ ಆಸ್ಪತ್ರೆಗಳಾದರೆ, 05 ಖಾಸಗಿ ಹೆರಿಗೆ ಆಸ್ಪತ್ರೆಯಲ್ಲಿ ಸಾವಾಗಿದೆ.

ಹೊರ ಜಿಲ್ಲೆಯಿಂದ ಬರುವ ಬಾಣಂತಿಯರೇ ಹೆಚ್ಚು ಸಾವಿಗೀಡಾಗಿದ್ದಾರೆ. ಚಿತ್ರದುರ್ಗ, ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಹಾವೇರಿ ಜಿಲ್ಲೆಯ ರಾಣೇಬೆನ್ನೂರು, ಶಿವಮೊಗ್ಗ ಗಡಿ ಭಾಗದಿಂದ ರೆಫರ್​ ಆಗಿ ಬಂದು ಸಾವನಪ್ಪಿರುವ ಪ್ರಕರಣಗಳೆ ಹೆಚ್ಚಿವೆ.

ದಾವಣಗೆರೆ ಜಿಲ್ಲೆಯ ಅಂಕಿ-ಅಂಶಗಳನ್ನು ನೋಡಿದರೆ ಸಾವಿನ ಪ್ರಮಾಣ ಶೇ 69 ರಷ್ಟು ಕಡಿಮೆ ಇದೆ. ಬೇರೆ ಜಿಲ್ಲೆಗಳಿಂದ ಬರುವ ಬಾಣಂತಿಯರ ಸಾವು ಆಗುತ್ತಿದೆ. ವೈದ್ಯರು ಸಕಾಲಕ್ಕೆ ಆಸ್ಪತ್ರೆಗೆ ಹಾಜರಾಗಿ. ಹೆರಿಗೆ ಅಂದರೆ ಅದೊಂದು ಟೆಲಿಮೆಡಿಸನ್ ವಿಭಾಗವಲ್ಲ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಸೂಚನೆ ನೀಡಿದರು.

ಹುಟ್ಟಿದ ಮಕ್ಕಳು ಮೆಕನೆಮ್ ಸ್ಡೈಲ್, ಪ್ರೀ ಮೆಚ್ಯೂರ್ ಡೆಲವರಿ, 500-600 ಗ್ರಾಮ್ ತೂಕದ ಮಕ್ಕಳು ಹುಟ್ಟಿರುವುದು, ಬರ್ತ್ ಅನಾಮೆಲಿಸ್ ನಂತಹ ಪ್ರಕರಣಗಳು ಚಿಕಿತ್ಸೆ ಫಲಕಾರಿ ಆಗದೆ ಸಾವಾಗುತ್ತಿವೆ ಎಂದು ಆಡಳಿತ ವರ್ಗ ಹೇಳುತ್ತಿದೆ. ಆದರೆ, ಅಮೂಲ್ಯ ಜೀವಗಳನ್ನು ಉಳಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:30 am, Tue, 26 November 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ