30 ವರ್ಷದಿಂದ ಶಾಲೆಯಲ್ಲಿ ಕಸಗೂಡಿಸುತ್ತಾ ಶಾಸಕರಾದ ದೇವೇಂದ್ರಪ್ಪ -ಒಬ್ಬ ಮಗನನ್ನು IRS, ಮತ್ತೊಬ್ಬನನ್ನು ನರ್ಸಿಂಗ್​​ ಮಾಡಿಸಿದರು!

ದೇವೇಂದ್ರಪ್ಪದು ತುಂಬು ಜೀವನ-ತುಂಬಿದ ಕೊಡ: 30 ವರ್ಷದಿಂದ ಶಾಲೆಯಲ್ಲಿ ಕಸಗೂಡಿಸುತ್ತಾ ಶಾಸಕರಾದರು-ಒಬ್ಬ ಮಗನನ್ನು IRS, ಮತ್ತೊಬ್ಬನನ್ನು ನರ್ಸಿಂಗ್​​ ಮಾಡಿಸಿದರು!

30 ವರ್ಷದಿಂದ ಶಾಲೆಯಲ್ಲಿ ಕಸಗೂಡಿಸುತ್ತಾ ಶಾಸಕರಾದ ದೇವೇಂದ್ರಪ್ಪ -ಒಬ್ಬ ಮಗನನ್ನು IRS, ಮತ್ತೊಬ್ಬನನ್ನು ನರ್ಸಿಂಗ್​​ ಮಾಡಿಸಿದರು!
ಜವಾನಗಿರಿಯಿಂದ ವಿಧಾನ ಸಭೆಗೆ ಶಾಸಕ ದೇವೇಂದ್ರಪ್ಪದು ತುಂಬು ಜೀವನ-ತುಂಬಿದ ಕೊಡ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಸಾಧು ಶ್ರೀನಾಥ್​

Updated on: Jun 05, 2023 | 12:02 PM

ಅಂದು ಆತನ ಕೆಲ್ಸವೇ ಅದಾಗಿತ್ತು. ದಿನಾ ಬೆಳಗಾದ್ರೆ ಶಾಲೆಯ (School) ಕಸ ಗುಡಿಸುವುದು. ನೀರು ತುಂಬುವುದು. ಶಾಲೆ ಆರಂಭವಾಗುತ್ತಿದ್ದಂತೆ ಗಂಟೆ ಬಾರಿಸುವುದು. ಹೀಗೆ ಮೂರು ದಶಕಗಳ ಕಾಲ ಆತ ನಿರಂತರ ಜವಾನಗಿರಿ ಮಾಡಿದ್ದ. ಇಂತಹ ಓರ್ವ ವ್ಯಕ್ತಿ ಈಗ ಅಷ್ಟು ದೊಡ್ಡ ಸ್ಥಾನಕ್ಕೆ ಹೋಗುತ್ತಾನೆ ಅಂತಾ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದ್ರೆ ಆತ ಮಾತ್ರ ಇಂದು ಎಷ್ಟೇ ದೊಡ್ಡ ಸ್ಥಾನಕ್ಕೆ ಏರಿದ್ದರೂ ಸಹ ತನಗೆ ಅನ್ನ ಹಾಕಿದ ಸಂಸ್ಥೆಯನ್ನ ಮಾತ್ರ ಮರೆತಿಲ್ಲ. ನಿನ್ನೆ ಗುರುವಾರ ರಾಜ್ಯಾದ್ಯಂತ ಬೆಳಿಗ್ಗೆ ಶಾಲೆಗಳು ಪುನರಾರಂಭವಾದಾಗ ಆತ ಸಹ ಶಾಲೆಗೆ ಬಂದು ಕಸಗುಡಿಸಿ ಗುರುವೃಂದಕ್ಕೆ ನಮಸ್ಕರಿಸಿ, ಗಂಟೆ ಬಾರಿಸಿದಾಗ ಬಹುತೇಕರು ಭಾವುಕರಾಗಿದ್ದರು! ಇಲ್ಲಿದೆ ನೋಡಿ ಜವಾನಗಿರಿಯಿಂದ ವಿಧಾನ ಸಭೆಗೆ ಶಾಸಕ ದೇವೇಂದ್ರಪ್ಪ ಸ್ಟೋರಿ (Jagalur Congress MLA B Devendrappa).

ಕೆಟ್ಟ ಬಡತನ. ಓದಿದ್ದು ಹತ್ತನೇ ತರಗತಿ. ಇಂತಹ ಪರಿಸ್ಥಿತಿ ಯಾವುದಾದ್ರು ಒಂದು ಕೆಲ್ಸಾ ಮಾಡಿ ಹೊಟ್ಟೆ ತುಂಬಿಸಿಕೊಳ್ಳವ ಸ್ಥಿತಿ. ಇಂತಹ ಸ್ಥಿತಿಯಲ್ಲಿ ಇಲ್ಲೊಂದು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಜವಾನ ಹುದ್ದೆ ಖಾಲಿ ಇತ್ತು. ಕಷ್ಟಾ ಪಟ್ಟು ಅವರಿವರ ಕಾಲು ಹಿಡಿದು ಜವಾನ ಹುದ್ದೆ ಗುಟ್ಟಿಸಿಕೊಂಡ. ಹೀಗೆ ಮೂರು ದಶಕಗಳ ಕಾಲ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕೆಲ್ಸಾ ಮಾಡಿದರು. ಇಂದು ಅದೇ ಕ್ಷೇತ್ರದ ಶಾಸಕರಾಗಿ ಬಿ. ದೇವೇಂದ್ರಪ್ಪ ಆಯ್ಕೆಯಾಗಿದ್ದಾರೆ.

ಹೌದು ಇದು ಯಾವುದೇ ಸಿಮೆಮಾ ಸ್ಟೋರಿ ಎಲ್ಲ. ಸತ್ಯ ಕಥೆ. ಬಿ. ದೇವೇಂದ್ರಪ್ಪ ಅವರ ಮಾದರಿ ಕತೆ. ಇವರೀಗ ದಾವಣಗೆರೆ ಜಿಲ್ಲೆಯ ಜಗಳೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ. ನಿನ್ನೆ ಗುರುವಾರ ತಾವು ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ ಜಗಳೂರಿನ ಅಮರ ಭಾರತಿ ವಿದ್ಯಾ ಸಂಸ್ಥೆಗೆ ಭೇಟಿ ನೀಡಿದ್ದರು. ಇದು ಖಾಸಗಿ ಹೈಸ್ಕೂಲ್. ಇಲ್ಲಿಯೇ ದೇವೇಂದ್ರಪ್ಪ ಜವಾನನಾಗಿ ಸೇವೆ ಮಾಡಿದ್ದು.

ತನಗೆ ಅನ್ನ ಹಾಕಿದ ಸಂಸ್ಥೆಗೆ ಇಂದು ಅವರು ಶಾಸಕನಾಗಿ ಬಂದಿದ್ದು ಮಾತ್ರ ವಿಶೇಷ. ಹೀಗೆ ಬಂದವರೇ ಶಾಲೆಯಲ್ಲಿ ಕಸಗುಡಿಸಿದರು. ಅಲ್ಲಿದ್ದ ಮುಖ್ಯ ಶಿಕ್ಷಕರಿಗೆ ನಮಸ್ಕರಿಸಿ, ಹಾಜರಿ ಪುಸ್ತಕ ಎತ್ತಿಕೊಟ್ಟರು. ಜೊತೆಗೆ ತನ್ನೊಂದಿಗೆ ಕೆಲ್ಸಾ ಮಾಡಿದ ಬಹುತೇಕರಿಗೆ ಕೈ ಜೋಡಿಸಿ ನಮಸ್ಕರಿಸಿ ಶಾಲೆಯ ಗಂಟೆ ಬಾರಿಸಿದರು. ಹೀಗೆ ಶಾಲೆ ಗಂಟೆ ಬಾರಿಸುತ್ತಿದ್ದಂತೆ ಮಕ್ಕಳೆಲ್ಲಾ ಪ್ರಾರ್ಥನೆಗೆ ಬಂದರು.

ದೇವೇಂದ್ರಪ್ಪ ಜವಾನನಾಗಿದ್ದರೂ ಸಹ ಮಹಾ ಬುದ್ದಿವಂತ. ನಿತ್ಯ ಶಿಕ್ಷಕರನ್ನು ಸಂಪರ್ಕಿಸುತ್ತಿದ್ದ. ಜೊತೆಗೆ ಮಕ್ಕಳ ಒಡನಾಟ. ಹೀಗಿದ್ದ ದೇವೇಂದ್ರಪ್ಪ ತಾನು ಮದ್ವೆ ಆಗಿ ಎರಡು ಮಕ್ಕಳ ತಂದೆಯಾದ. ಹೀಗೆಯೇ ಇದ್ದರೆ ಹೇಗೆ? ಜೀವನದಲ್ಲಿ ಬದಲಾವಣೆ ಆಗಬೇಕು ಎಂದು ತನ್ನಿಬ್ಬರು ಮಕ್ಕಳಿಗೆ ಕಷ್ಟ ಪಟ್ಟು ಶಾಲೆ ಕಲಿಸಿದ.

ಇಬ್ಬರೂ ಗಂಡು ಮಕ್ಕಳು. ಓರ್ವ ಹಿರಿಯ ಪುತ್ರ ಡಾ. ವಿಜಯ ಕುಮಾರ, ಎಂಬಿಬಿಎಸ್ ಓದಿ ವೈದ್ಯನಾದ. ನಂತರ ಐಆರ್ ಎಸ್ ಪರೀಕ್ಷೆ ಬರೆದು ಈಗ ಕರ್ನಾಟಕ ಗೋವಾ ವಿಭಾಗದ ಆದಾಯ ತೆರಿಗೆ ಅಧಿಕಾರಿ ಆಗಿದ್ದಾನೆ. ಇನ್ನೊಬ್ಬ ಪುತ್ರ ನರ್ಸಿಂಗ್ ಮಾಡಿ ಸರ್ಕಾರಿ ಉದ್ಯೋಗಕ್ಕೆ ಸೇರಿದ್ದ. ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ಬಳಿಕ ನರ್ಸಿಂಗ್ ಮಾಡುತ್ತಿದ್ದ ಪುತ್ರನನ್ನ ಸೇವೆ ಬಿಡಿಸಿ ಮನೆಯಲ್ಲಿ ಇಟ್ಟುಕೊಂಡರು. ಪುತ್ರನ ಆದಾಯದಿಂದ ಮನೆಯಲ್ಲಿ ಸಮೃದ್ಧಿ ಮನೆ ಮಾಡಿತ್ತು.

ಇದರ ಹೊರತಾಗಿ, ಜಗಳೂರು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರ. ದೇವೇಂದ್ರಪ್ಪ ಕೂಡಾ ವಾಲ್ಮೀಕಿ ಜನಾಂಗಕ್ಕೆ ಸೇರಿದವರು. ಹೀಗಾಗಿ 2018ರಲ್ಲಿ ಚುನಾವಣಾ ರಾಜಕೀಯಕ್ಕೆ ಪ್ರವೇಶ ಪಡೆದರು. ಜೆಡಿಎಸ್ ನಿಂದ ಸ್ಪರ್ಧಿಸಿ ಸೋತರು. ಆದ್ರೆ ಹೆಸರು ಮಾಡಿದ್ದರು. ನಂತರ ಕಾಂಗ್ರೆಸ್ ಸೇರಿ ಟಿಕೆಟ್ ಪಡೆದು ಈಗ ಶಾಸಕರಾಗಿದ್ದಾರೆ.

ಶಾಸಕರಾಗಿ ಆಯ್ಕೆಯಾಗಿರುವ ದೇವೇಂದ್ರಪ್ಪ ಅವರದು ತುಂಬು ಜೀವನ – ತುಂಬಿದ ಕೊಡ:

ಹೀಗೆ ಹಂತ ಹಂತವಾಗಿ ಮೇಲೆ ಬಂದ ದೇವೇಂದ್ರಪ್ಪ ಜಗಳೂರಿನ ಜನತೆಯ ಆರ್ಶೀವಾದ ದಿಂದ ಇತ್ತೀಚಿಗೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು 873 ಮತಗಳ ಅಂತರದಿಂದ ಬಿಜೆಪಿ ಪಕ್ಷದ ಎಸ್ ವಿ ರಾಮಚಂದ್ರ ಅವರನ್ನ ಸೋಲಿಸಿ ಅಚ್ಚರಿ ಮೂಡಿಸಿದ್ದರು. ಜವಾನಗಿರಿ ಮಾಡಿಕೊಂಡಿದ್ದ ವ್ಯಕ್ತಿ ಈಗ ಅಷ್ಟು ದೊಡ್ಡ ಸ್ಥಾನಕ್ಕೆ ಹೋಗುತ್ತಾನೆ ಅಂತಾ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದ್ರೆ ಆತ ಮಾತ್ರ ಇಂದು ಎಷ್ಟೇ ದೊಡ್ಡ ಸ್ಥಾನಕ್ಕೆ ಏರಿದ್ದರೂ ಸಹ ತನಗೆ ಅನ್ನ ಹಾಕಿದ ಸಂಸ್ಥೆಯನ್ನ ಮಾತ್ರ ಮರೆತಿಲ್ಲ.

ಮೂರು ಸಲ ಶಾಸಕರಾಗಿದ್ದ ರಾಮಚಂದ್ರ ಅವರ ಸೋಲು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಇಂತಹ ದೇವೇಂದ್ರಪ್ಪ ವಿಧಾನ ಸಭೆಯಲ್ಲಿ ಇತ್ತೀಚಿಗೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಕ್ಷೇತ್ರದ ಕಾರ್ಯವನ್ನ ಶಾಲೆಯ ಕಸಗೂಡಿಸುವ ಮೂಲಕ ಆರಂಭಿಸಲು ನಿರ್ಧರಿಸಿದ್ದರು. ಇಂದು ತಾನು ಜವಾನನಾಗಿ ದುಡಿದ ಶಾಲೆಯಲ್ಲಿಯೇ ಕಸಗೂಡಿಸಿ ಗಂಟೆ ಬಾರಿಸಿ ಆ ಕೆಲ್ಸ ವಿನೂತನವಾಗಿ ಆರಂಭಿಸಿದ್ದು ವಿಶೇಷವಾಗಿತ್ತು.

ಅಂದಹಾಗೆ ಇತ್ತೀಚೆಗೆ ನಡೆದ 2023ರ ಅಸೆಂಬ್ಲಿ ಚುನಾವಣೆಯಲ್ಲಿ ಬಿ. ದೇವೇಂದ್ರಪ್ಪ ಜಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಚುನಾವಣೆಯಲ್ಲಿ ಅವರು 50,765 ಮತಗಳನ್ನು ಪಡೆದು, 49,891 ಮತಗಳನ್ನು ಪಡೆದ ಬಿಜೆಪಿ ಅಭ್ಯರ್ಥಿ ಎಸ್. ವಿ. ರಾಮಚಂದ್ರ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ರಾಜ್ಯ ಕಂಡ ಅಪರೂಪದ ಶಾಸಕ… ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿ ತೋರಿಸಿರುವ ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ದೇವೇಂದ್ರಪ್ಪ ಅವರ ಜೀವನ ಕಥೆಯೇ ಮುಂದೊಂದು ದಿನ ಶಾಲಾ ಪಠ್ಯಕ್ಕೆ ಸೇರ್ಪಡೆಯಾದರೆ ಅದು ಕರ್ನಾಟಕದ ಹೆಮ್ಮೆಯಾದೀತು!

‘ಮ್ಯಾಕ್ಸ್’ ಸಿನಿಮಾದ ಆಡಿಯೋ ರಿಲೀಸ್​ ಕಾರ್ಯಕ್ರಮ; ಲೈವ್​ ವಿಡಿಯೋ ನೋಡಿ..
‘ಮ್ಯಾಕ್ಸ್’ ಸಿನಿಮಾದ ಆಡಿಯೋ ರಿಲೀಸ್​ ಕಾರ್ಯಕ್ರಮ; ಲೈವ್​ ವಿಡಿಯೋ ನೋಡಿ..
ಬೆಂಗಳೂರಲ್ಲಿ ಮಿತಿ ಮೀರಿದ ಮೊಬೈಲ್ ಕಳ್ಳರ ಅಟ್ಟಹಾಸ: ಲಾಂಗ್ ತೋರಿಸಿ ಪರಾರಿ
ಬೆಂಗಳೂರಲ್ಲಿ ಮಿತಿ ಮೀರಿದ ಮೊಬೈಲ್ ಕಳ್ಳರ ಅಟ್ಟಹಾಸ: ಲಾಂಗ್ ತೋರಿಸಿ ಪರಾರಿ
ಸುದೀಪ್​ ಮುಂದೆ ನಡೆಯಲಿಲ್ಲ ಗೌತಮಿಯ ಪಾಸಿಟಿವ್ ಮುಖವಾಡ
ಸುದೀಪ್​ ಮುಂದೆ ನಡೆಯಲಿಲ್ಲ ಗೌತಮಿಯ ಪಾಸಿಟಿವ್ ಮುಖವಾಡ
ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪ್ಪ ಜನ್ಮದಿನೋತ್ಸವ ಆಚರಣೆಗೆ ನಿರ್ಧಾರ
ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪ್ಪ ಜನ್ಮದಿನೋತ್ಸವ ಆಚರಣೆಗೆ ನಿರ್ಧಾರ
ಕುಟುಂಬದಲ್ಲಿ ತುರ್ತು ಪರಿಸ್ಥಿತಿ; ಬಿಗ್ ಬಾಸ್​ನಿಂದ ಹೊರಬಂದ ಗೋಲ್ಡ್ ಸುರೇಶ್
ಕುಟುಂಬದಲ್ಲಿ ತುರ್ತು ಪರಿಸ್ಥಿತಿ; ಬಿಗ್ ಬಾಸ್​ನಿಂದ ಹೊರಬಂದ ಗೋಲ್ಡ್ ಸುರೇಶ್
ಸಿಟ್ಟಿದ್ದವರ ಮೇಲೆ ಗುದ್ದಿ ಕೋಪ ತೀರಿಸಿಕೊಂಡ ಬಿಗ್​ಬಾಸ್ ಸ್ಪರ್ಧಿಗಳು
ಸಿಟ್ಟಿದ್ದವರ ಮೇಲೆ ಗುದ್ದಿ ಕೋಪ ತೀರಿಸಿಕೊಂಡ ಬಿಗ್​ಬಾಸ್ ಸ್ಪರ್ಧಿಗಳು
ಅತುಲ್ ಸುಭಾಷ್ ​: ಪುರುಷರ ಮೇಲೆ ದೌರ್ಜನ್ಯ, ಬದಲಾಗುತ್ತಾ ಕಾನೂನು?
ಅತುಲ್ ಸುಭಾಷ್ ​: ಪುರುಷರ ಮೇಲೆ ದೌರ್ಜನ್ಯ, ಬದಲಾಗುತ್ತಾ ಕಾನೂನು?
46 ವರ್ಷಗಳ ಬಳಿಕ ಬಾಗಿಲು ತೆರೆದ ದೇವಾಲಯ, ಶಿವ, ಹನುಮಂತನಿಗೆ ಆರತಿ
46 ವರ್ಷಗಳ ಬಳಿಕ ಬಾಗಿಲು ತೆರೆದ ದೇವಾಲಯ, ಶಿವ, ಹನುಮಂತನಿಗೆ ಆರತಿ
ಸೈಲೆಂಟ್​​ ಆಗಿ ಇದ್ಬಿಡಿ... ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ತಾಕೀತು!
ಸೈಲೆಂಟ್​​ ಆಗಿ ಇದ್ಬಿಡಿ... ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ತಾಕೀತು!
ಗಿನ್ನೆಸ್ ವಿಶ್ವ ದಾಖಲೆ ಬರೆದ ವಿಶ್ವದ ಅತಿ ಉದ್ದದ ಕಾರು
ಗಿನ್ನೆಸ್ ವಿಶ್ವ ದಾಖಲೆ ಬರೆದ ವಿಶ್ವದ ಅತಿ ಉದ್ದದ ಕಾರು