AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವಹಿವಾಟು​: ತನಿಖೆಯಲ್ಲಿ ಹಣದ ರಹಸ್ಯ ಬಯಲು

ಹುಬ್ಬಳ್ಳಿಯ ಆಟೋ ಚಾಲಕ ಇರ್ಫಾನ್‌ನ ಬ್ಯಾಂಕ್ ಖಾತೆಯಿಂದ ಕೋಟ್ಯಾಂತರ ರೂ ವಹಿವಾಟು ನಡೆದಿರುವ ಸೈಬರ್ ವಂಚನೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಆರೋಪಿ ವಿಚಾರಣೆ ವೇಳೆ ಹಲವು ವಿಚಾರಗಳು ಬಯಲಾಗಿವೆ. ಇರ್ಫಾನ್​ ತನ್ನ ಬ್ಯಾಂಕ್​​ ಪಾಸ್​ ಬುಕ್​ನ್ನು ತನ್ನ ಸಂಬಂಧಿಗೆ ನೀಡಿರುವುದು ಗೊತ್ತಾಗಿದ್ದು, ಸದ್ಯ ಆತನಿಗೂ ಖಾಕಿ ಬಲೆ ಬೀಸಿದೆ.

ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವಹಿವಾಟು​: ತನಿಖೆಯಲ್ಲಿ ಹಣದ ರಹಸ್ಯ ಬಯಲು
ಆಟೋ ಚಾಲಕನ ಮನೆಯಲ್ಲಿ ಪೊಲೀಸ್ ತಪಾಸಣೆ, ಇರ್ಫಾನ್‌ Image Credit source: tv9 kannada
ಸಂಜಯ್ಯಾ ಚಿಕ್ಕಮಠ
| Edited By: |

Updated on: Feb 11, 2026 | 5:50 PM

Share

ಹುಬ್ಬಳ್ಳಿ, ಫೆಬ್ರವರಿ 11: ಆತ ಹೆಸರಿಗೆ ಬಡ ಆಟೋ ಚಾಲಕ, ಬ್ಯಾಂಕ್‌ ಖಾತೆಯಲ್ಲಿನ ಹಣ ವರ್ಗಾವಣೆಯಾಗಿದ್ದು, ಮಾತ್ರ ಲಕ್ಷ ಲಕ್ಷ ಹಣ. ಸೈಬರ್ ಅಪರಾಧಗಳ ಪ್ರಕರಣಗಳಿಗೆ (Cyber crime case) ಸಂಬಂಧಿಸಿದಂತೆ ಆ ಅಕೌಂಟ್ ಬಳಕೆಯಾಗಿತ್ತು. ಈ ಬಗ್ಗೆ ಸ್ವಯಂ ದೂರು ದಾಖಲಿಸಿಕೊಂಡ ಹುಬ್ಬಳ್ಳಿ (Hubballi) ಸೆನ್ ಠಾಣೆಯ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದು, ಆ ಮೂಲಕ ಅನೇಕ ಅಂಶಗಳು ಹೊರಬರುತ್ತಿವೆ. ಮೂಲ ಅಕೌಂಟ್ ಮಾಲೀಕ, ತನ್ನ ಅಕೌಂಟ್​ನ್ನು ಮತ್ತೊಬ್ಬರಿಗೆ ನೀಡಿದ್ದು ತನಿಖೆಯಲ್ಲಿ ಬಯಲಾಗಿದೆ.

ಪ್ರಕರಣದ ಹಿನ್ನೆಲೆ 

ದೇಶದಲ್ಲಿ ಪ್ರತಿನಿತ್ಯ ಅನೇಕ ಕಡೆ ಸೈಬರ್ ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ. ಹತ್ತಾರು ರೀತಿಯಿಂದ ಸೈಬರ್ ವಂಚಕರು ಜನರನ್ನು ವಂಚಿಸಿ ಲಕ್ಷದಿಂದ ಕೋಟಿ ಕೋಟಿವರಗೆ ಹಣ ಲಪಟಾಯಿಸುತ್ತಲೇ ಇದ್ದಾರೆ. ಇದೇ ರೀತಿಯ ಸೈಬರ್ ಅಪರಾಧಕ್ಕೆ ಹುಬ್ಬಳ್ಳಿಯ ಆಟೋ ಚಾಲಕನ ಅಕೌಂಟ್​ವೊಂದು ಬಳಕೆಯಾಗಿರುವುದು ಇತ್ತೀಚೆಗೆ ಗೊತ್ತಾಗಿತ್ತು.

ಇದನ್ನೂ ಓದಿ: ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವರ್ಗಾವಣೆ: ಏನಿದು ಹಣದ ರಹಸ್ಯ?

ಒಂದೇ ಬ್ಯಾಂಕ್ ಖಾತೆಗೆ ಲಕ್ಷ ಲಕ್ಷ ಹಣ ಜಮೆಯಾಗಿರುವ ಪ್ರಕರಣವೊಂದರ ಬೆನ್ನು ಬಿದ್ದಿರುವ ಹುಬ್ಬಳ್ಳಿಯ ಸಿಇಎನ್ ಠಾಣೆ ಪೊಲೀಸರು ಕಳೆದ ಫೆಬ್ರವರಿ 2 ರಂದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ರಾಜ್ಯ ಸೈಬರ್ ಕಮಾಂಡ್ ಘಟಕದ ಮಾಹಿತಿ ಆಧರಿಸಿ ಆಯುಕ್ತಾಲಯ ವ್ಯಾಪ್ತಿಯಲ್ಲಿ ಸಂಶಯಾಸ್ಪದ ಎನ್ನಿಸಿದ ಒಟ್ಟು 4,585 ಬ್ಯಾಂಕ್ ಖಾತೆಗಳ ಮಾಹಿತಿ ಪರಿಶೀಲಿಸಲಾಗಿದೆ. ಇದರಲ್ಲಿ ಒಟ್ಟು 69 ಬ್ಯಾಂಕ್ ಖಾತೆಗಳನ್ನು ಆರಂಭದಲ್ಲಿ ಪರಿಶೀಲನೆ ನಡೆಸಿದ್ದರು. ಅದರಲ್ಲಿ ಹುಬ್ಬಳ್ಳಿ ಗೋಪನಕೊಪ್ಪದ ನಿವಾಸಿ ಇರ್ಫಾನ್‌ ಅನ್ನೋ ವ್ಯಕ್ತಿಯ ಅಕೌಂಟ್​ನಿಂದ ಲಕ್ಷಾಂತರ ರೂ ಹಣ ಸೈಬರ್ ಅಪರಾಧ ಪ್ರಕರಣಗಳಿಂದ ಜಮೆ ಆಗಿರುವುದು ಬೆಳಕಿಗೆ ಬಂದಿತ್ತು.

80 ಲಕ್ಷಕ್ಕೂ ಅಧಿಕ ಹಣ ಜಮೆ

ಇರ್ಫಾನ್ ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಕುಕ್ಕಿಂಗ್ ವಿತ್ ಕೇಟರಿಂಗ್ ಹೆಸರಲ್ಲಿ ಚಾಲ್ತಿ ಖಾತೆಯನ್ನು ಆರಂಭಿಸಿದ್ದ. ಅದೇ ಅಕೌಂಟ್​ಗೆ ಲಕ್ಷಾಂತರ ರೂ ಹಣ ಜಮೆಯಾಗಿತ್ತು. ರಾಜ್ಯದ ನಾಲ್ಕು ಕಡೆ ಸೇರಿದಂತೆ ದೇಶದ ವಿವಿಧಡೆಯಿಂದ ಒಟ್ಟು ಹದಿನಾಲ್ಕು ಬಾರಿ ಈ ಅಕೌಂಟ್​ಗೆ ಸರಿಸುಮಾರು 80 ಲಕ್ಷಕ್ಕೂ ಅಧಿಕ ಹಣ ಜಮೆಯಾಗಿರುವುದು ಬೆಳಕಿಗೆ ಬಂದಿದೆ.

ಆಟೋ ಚಾಲಕನ ಅಕೌಂಟ್​ಗೆ ಸೈಬರ್ ಅಪರಾಧಗಳಿಂದ ಲಕ್ಷ ಲಕ್ಷ ಹಣ ಜಮೆಯಾಗಿದ್ದು, ಈಗಾಗಲೇ ನಗರದ ಗೋಪನಕೊಪ್ಪದಲ್ಲಿರುವ ಚಾಲಕ ಇರ್ಫಾನ್​​ನನ್ನು ಪೂರ್ವಾಪರ ಪರಿಶೀಲಿಸಿದ್ದು, ಬ್ಯಾಂಕ್‌ಗೆ ಸಂಬಂಧಿಸಿದ 16 ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಇದರ ಮಧ್ಯೆ ಖಾಕಿ ಕೇಶ್ವಾಪುರದ ಅರುಣ ಜಮಖಂಡಿ ಎಂಬಾತನ ಮತ್ತೆಗೆ ಮುಂದಾಗಿದೆ. ಈತನ ಬ್ಯಾಂಕ್ ಖಾತೆಯನ್ನು ಅರುಣ ಜಮಖಂಡಿ ಪಡೆದಿದ್ದ ಎನ್ನುವ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ.

ಸಂಬಂಧಿಗೆ ಬ್ಯಾಂಕ್ ಪಾಸ್ ಬುಕ್​​ ನೀಡಿರುವ ಆಟೋ ಚಾಲಕ

ಬಿಹಾರ, ದೆಹಲಿ ಹಾಗೂ ಬೆಂಗಳೂರು ನಗರ ವ್ಯಾಪ್ತಿಯ 4 ಕಡೆ ಇರ್ಫಾನ್ ಬ್ಯಾಂಕ್ ಖಾತೆಯಿಂದ ಹಣ ವರ್ಗಾಣೆಯಾಗಿದೆ. ಈ ಕುರಿತು ಫೆಬ್ರವರಿ 2ರಂದು ಸಿಇಎನ್ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದರು. ಸತತ ಒಂದು ವಾರದಿಂದ ಬೆನ್ನು ಬಿದ್ದ ಪೊಲೀಸರಿಗೆ ವಶದಲ್ಲಿರುವ ಇರ್ಫಾನ್ ತನ್ನ ಬ್ಯಾಂಕ್ ಖಾತೆ ಕುರಿತು ಇಂಚಿಂಚೂ ಮಾಹಿತಿ ಕೊಟ್ಟಿದ್ದಾನೆ. ಅಲ್ಲದೆ ತಾನು ತನ್ನ ಬ್ಯಾಂಕ್ ಪಾಸ್ ಬುಕ್​ನ್ನು ತನ್ನ ದೂರದ ಸಂಬಂಧಿ ಅರುಣ ಜಮಖಂಡಿಗೆ ಕೊಟ್ಟಿರುವುದನ್ನು ಒಪ್ಪಿಕೊಂಡಿದ್ದಾನೆ. ಹೀಗಾಗಿ ಹುಬ್ಬಳ್ಳಿಯ ಕೇಶ್ವಾಪುರ ನಿವಾಸಿಯಾಗಿರುವ ಅರುಣ್ ಜಮಖಂಡಿ ಪತ್ತೆಗೆ ಸೆನ್ ಠಾಣೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಆತ ಗೋವಾ ಸೇರಿದಂತೆ ಅನೇಕ ಕಡೆ ಓಡಾಡುತ್ತಿದ್ದು ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಓರ್ವ ವ್ಯಕ್ತಿ 19 ಖಾತೆಗಳ ಮೂಲಕ 11.48 ಕೋಟಿ ರೂ ವ್ಯವಹಾರ: ಪೊಲೀಸರ ರೋಚಕ ಕಾರ್ಯಚರಣೆ

ಸದ್ಯ ಅರುಣ ಜಮಖಂಡಿ ತಲೆಮರೆಸಿಕೊಂಡಿದ್ದು, ಆತನ ಮನೆಯನ್ನು ತಪಾಸಣೆ ಮಾಡಲಾಗಿದೆ. ಈತ ಎಷ್ಟು ಜನರ ಬ್ಯಾಂಕ್ ಪುಸ್ತಕಗಳನ್ನು ಪಡೆದಿದ್ದಾನೆ, ಎಷ್ಟು ಹಣ ವರ್ಗಾವಣೆಯಾಗಿದೆ, ಯಾರಿಗೆ ವರ್ಗಾವಣೆ ಮಾಡಿದ್ದಾನೆ ಎನ್ನುವುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಟಿವಿ9 ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸ್ಫೂರ್ತಿದಾಯಕ ಭಾಷಣ
ಟಿವಿ9 ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸ್ಫೂರ್ತಿದಾಯಕ ಭಾಷಣ
ಪ್ರಧಾನಿ ಮೋದಿಗೆ ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ ರಾವ್ ಸನ್ಮಾನ
ಪ್ರಧಾನಿ ಮೋದಿಗೆ ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ ರಾವ್ ಸನ್ಮಾನ
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ
ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ