ತಾಯಿ ಅಗಲಿಕೆಯ ನಡುವೆಯೂ ಕರ್ತವ್ಯಕ್ಕೆ ಹಾಜರಾದ ಇನ್ಸ್ಪೆಕ್ಟರ್ ರವಿಚಂದ್ರ :ಕುಖ್ಯಾತ ಕಳ್ಳನನ್ನು ಬಂಧಿಸಿದ ಪಿಐ ಕಾರ್ಯಕ್ಕೆ ಮೆಚ್ಚುಗೆ
ಇನ್ಸ್ ಪೆಕ್ಟರ್ ರವಿಚಂದ್ರ ಅವರ ತಾಯಿ ಹೃದಯ ಸಂಬಂಧಿ ಖಾಯಿಲೆಯಿಂದ ಮೃತಪಟ್ಟಿದ್ದರು. ಆದ್ರೆ ತಾಯಿ ಅಗಲಿಕೆ ನಡುವೆಯೇ ಮೂರು ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾದ ರವಿಚಂದ್ರ ಅವರು ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ: ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ಉಪನಗರ ಠಾಣೆ ಇನ್ಸ್ ಪೆಕ್ಟರ್ (Hubballi police inspector) ರವಿಚಂದ್ರ ಬಡಫಕೀರಪ್ಪನವರ್ ಯಶಸ್ವಿಯಾಗಿದ್ದಾರೆ. ಒಂದೇ ವಾರದಲ್ಲಿ ನಿರಂತರವಾಗಿ ಕಳ್ಳತನ ಪ್ರಕರಣಗಳು ಅವಳಿ ನಗರದಲ್ಲಿ ನಡೆದಿದ್ದವು. ಆಗ ಉಪನಗರ ಠಾಣೆಯಲ್ಲೂ ಕೂಡ ಕಳ್ಳತನವಾಗಿತ್ತು. ಈ ಸಂದರ್ಭದಲ್ಲಿ ಇನ್ಸ್ ಪೆಕ್ಟರ್ ರವಿಚಂದ್ರ ಅವರ ತಾಯಿ (mother) ಹೃದಯ ಸಂಬಂಧಿ ಖಾಯಿಲೆಯಿಂದ ಮೃತಪಟ್ಟಿದ್ದರು (death). ಆದ್ರೆ ತಾಯಿ ಅಗಲಿಕೆ ನಡುವೆಯೇ ಮೂರು ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾದ ರವಿಚಂದ್ರ ಅವರು ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಿ ಹಾಕಿದ ಅವರು, ಬಳ್ಳಾರಿ ಮೂಲದ ಗಣೇಶ್ ಕಾಲೋನಿಯ 26 ವರ್ಷದ ಶ್ರೀಕಾಂತ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ನಗರದ ಮಿಷನ್ ಕಂಪೌಂಡ ಹತ್ತಿರ ಮನಿಯೊಂದರಲ್ಲಿ 3,20,000 ರೂ ಕಿಮ್ಮತ್ತಿನ 71 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 1,00,000 ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ. ಇದಲ್ಲದೇ ಮೂರು ಪ್ರಕರಣಗಳಲ್ಲಿ ಭಾಗಿ ಆಗಿದ್ದು ಒಟ್ಟು 6,95,000 ರೂ ಕಿಮ್ಮತ್ತಿನ 165 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 1,000 ರೂ ಕಿಮ್ಮತ್ತಿನ 20 ಗ್ರಾಂ ತೂಕದ ಬೆಳ್ಳಿ ಆಭರಣ ಮತ್ತು 30,000 ನಗದು ಹಣವನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಅಟ್ಟಿದ್ದು, ರವಿಚಂದ್ರ ಅವರ ಕಾರ್ಯಕ್ಕೆ ಪೊಲೀಸ್ ಆಯುಕ್ತ ಲಾಬೂರಾಮ್ ಬಹುಮಾನ ಘೋಷಿಸಿದ್ದಾರೆ.