AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ಜಿಮ್ ಟ್ರೇನರ್ ಲವ್ ಜಿಹಾದ್ ಕೇಸಿಗೆ ನೇಹಾ ಕೊಲೆ ಲಿಂಕ್: ನಿರಂಜನ ಹಿರೇಮಠ ಸ್ಫೋಟಕ ಆರೋಪ

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಪ್ರಕರಣ ಹೆಚ್ಚಾಗುತ್ತಿವೆ. ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನ ಯಾಮಾರಿಸಿ ಅವರೊಂದಿಗೆ ಕಾಮದಾಹ ತೀರಿಸಿಕೊಂಡು ಬಳಿಕ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಇದೀಗ ಜಿಮ್ ಟ್ರೈನರ್ ವಿರುದ್ಧದ ಲವ್ ಜಿಹಾದ್ ಪ್ರಕರಣಕ್ಕೆ ನೇಹಾ ಹಿರೇಮಠ ಕೊಲೆ ಲಿಂಕ್ ಇರುವ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಸ್ವತಃ ನೇಹಾ ತಂದೆ ನಿರಂಜನ ಹಿರೇಮಠ, ಸಮೀರ್ ಮುಲ್ಲಾನ ಜಿಮ್‌ನಲ್ಲಿನ ಕರಾಳ ಸತ್ಯ ಬಿಚ್ಚಿಟ್ಟಿದ್ದಾರೆ.

ಹುಬ್ಬಳ್ಳಿ ಜಿಮ್ ಟ್ರೇನರ್ ಲವ್ ಜಿಹಾದ್ ಕೇಸಿಗೆ ನೇಹಾ ಕೊಲೆ ಲಿಂಕ್: ನಿರಂಜನ ಹಿರೇಮಠ ಸ್ಫೋಟಕ ಆರೋಪ
ಸಮೀರ್, ನೇಹಾ ಹಾಗೂ ಫಯಾಜ್‌
ಸಂಜಯ್ಯಾ ಚಿಕ್ಕಮಠ
| Edited By: |

Updated on: Apr 06, 2026 | 3:10 PM

Share

ಹುಬ್ಬಳ್ಳಿ, (ಏಪ್ರಿಲ್ 06): ಹುಬ್ಬಳ್ಳಿಯಲ್ಲಿ ಒಂದೊಂದೇ ಲವ್ ಜಿಹಾದ್ ಪ್ರಕರಣಗಳು (Hubballi Live Jihad Cases) ಬೆಳಕಿಗೆ ಬರುತ್ತಿವೆ. ಅದರಲ್ಲೂ ಜಿಮ್ ಟ್ರೈನರ್​​ಗಳು ಹಿಂದೂ ಯುವತಿಯರನ್ನ ಪುಸಲಾಯಿಸಿ ಲೈಂಗಿಕವಾಗಿ ಬಳಿಸಿಕೊಂಡು ಬಳಿಕ ಬ್ಲ್ಯಾಕ್ ಮೇಲ್ ಮಾಡುವ ಆರೋಪಗಳು ಕೇಳಿಬರುತ್ತಿವೆ. ಈ ಪೈಕಿ ಸಮೀರ್ ಎನ್ನುವ ಜಿಮ್ ಟ್ರೈನರ್, ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನುವ ಆರೋಪವಿದ್ದು, ಈ ಸಂಬಂಧ ಈಗಾಗಲೇ ಇಬ್ಬರು ಯುವತಿಯರು ಸಮೀರ್ ಮುಲ್ಲಾನ ವಿರುದ್ಧ ದೂರು ದಾಖಲಿಸಿದ್ದಾರೆ. ಇದರ ನಡುವೆ ಇದೀಗ ಸಮೀರ್ ಮುಲ್ಲಾನ ವಿರುದ್ಧದ ಲವ್ ಜಿಹಾದ್ ಪ್ರಕರಣಕ್ಕೆ ನೇಹಾ ಹಿರೇಮಠ ಕೊಲೆ (Neha Hiremath Murder Case) ಲಿಂಕ್ ಇದೆ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವತಃ ನೇಹಾ ತಂದೆ ನಿರಂಜನ್ ಹಿರೇಮಠ ಸ್ಫೋಟಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ ಅವರಯ ವಿಡಿಯೋ ಹೇಳಿಕೆ‌ ಬಿಡುಗಡೆ ಮಾಡಿದ್ದು, ನನ್ನ ಮಗಳ‌ ಹತ್ಯೆಯಲ್ಲೂ ಈ ಸಮೀರ್ ಹಾಗೂ ಅತನ ಸಹೋದರಿ, ತಂದೆಯ ಕೈವಾಡ ಇರಬಹುದು ಎಂಬ ಸಂಶಯ ಬರುತ್ತಿದೆ. ಯಾಕಂದ್ರೆ, ನೇಹಾ ಹಿರೇಮಠ ಹಂತಕ ಫಯಾಜ್ ಇದೇ ಸಮಿರರ ಜಿಮ್ ಗೆ ಹೋಗುತ್ತಿದ್ದ. ಹೀಗಾಗಿ ಅದೇ ಜಿಮ್‌ನಲ್ಲಿ ಹಂತಕ ಫಯಾಜ್ ಗೆ ತರಬೇತಿ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಲವ್ ಜಿಹಾದ್ ಕೇಸ್​ಗೆ ಟ್ವಿಸ್ಟ್: ಯುವಕನ ವಿರುದ್ಧ ದೂರು ಬೆನ್ನಲ್ಲೇ ಯುವತಿಯ ವಿಡಿಯೋಗಳು ವೈರಲ್

ನೇಹಾ ಹತ್ಯೆಗೂ ಮುನ್ನ ತಂದೆಗೆ ಸ್ಕೆಚ್ ಹಾಕಿದ್ರಾ?

ನೇಹಾ ಹತ್ಯೆಗೂ ಮುನ್ನ ತಂದೆ ನಿರಂಜನ ಹಿರೇಮಠಗೆ ಖೆಡ್ಡ ತೋಡಲುಸಮೀರ್‌ ಮುಲ್ಲಾನ ಕುಟುಂಬ ಮುಂದಾಗಿತ್ತಾ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಸಮೀರ್ ತಂದೆ ಆಗಾಗ ಕಾಲ್ ಮಾಡುತ್ತಿದ್ದರು. ನಿಮ್ಮ ಏರಿಯಾದಲ್ಲಿ‌ ಬಾಡಿ ಬಿಲ್ಡಿಂಗ್ ಸ್ಪರ್ಧೆ ಏರ್ಪಡಿಸೋಣ, ಅರ್ಥಿಕ ನೆರವು ನೀಡುವಂತೆ ಒತ್ತಾಯಿಸುತ್ತಿದ್ದುರು. ಅಲ್ಲದೇ ಆಗಾಗ್ಗೆ ತಮ್ಮ‌ ಮನೆಗೆ ಬರುವಂತೆ ಆಹ್ವಾನಿಸುತ್ತಿದ್ದರು. ನಾನು ಎಷ್ಟೇ ಕರೆದರು ಹೋಗಲಿಲ್ಲ. ಹೋಗಿದ್ರು ಟ್ರ್ಯಾಪ್ ಮಾಡುವ ಪ್ಲಾನ್ ಇದ್ದಿರಬಹುದು ಎಂದು ಸಂಶಯ ಇತ್ತು. ಹೀಗಾಗಿ ಹೋಗಿರಲಿಲ್ಲ ಎಂದಿದ್ದಾರೆ.

ಫಯಾಜ್‌ – ನೇಹಾ ಹಿರೇಮಠ 2020 ರಲ್ಲಿ ಹುಬ್ಬಳ್ಳಿಯ ಕಾಲೇಜೊಂದರಲ್ಲಿ ಬಿಸಿಎ ಓದುವಾಗ ಸಹಪಾಠಿಗಳಾಗಿದ್ದರು. ಇವರಿಬ್ಬರೂ ಮೊದಲು ಪರಸ್ಪರ ಸ್ನೇಹಿತರಾಗಿದ್ದು, 2022 ರಲ್ಲಿ ಇಬ್ಬರು ಪ್ರೀತಿಸುತ್ತಿದ್ದರು. ಆದ್ರೆ, ಇಬ್ಬರ ನಡುವೆ ಅದೇನಾಯ್ತೋ ಏನೋ 2024 ರ ಮಾರ್ಚ್‌ ತಿಂಗಳಲ್ಲಿ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ನೇಹಾ, ಫಯಾಜ್‌ನ ಜತೆ ಮಾತು ನಿಲ್ಲಿಸಿ ಅವನ ಸಂಪರ್ಕದಿಂದ ದೂರವಾಗಿದ್ದಳು. ಈ ಸಿಟ್ಟಿನಲ್ಲಿ ಆಕೆಯನ್ನು ಕೊಲೆ ಮಾಡಿದ್ದ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us