ಸಿದ್ದರಾಮಯ್ಯ ಅವರು ಅಬ್ಬೇಪಾರಿ ಥರ ಕ್ಷೇತ್ರ ಹುಡುಕುತ್ತಾ ಕೋಲಾರಕ್ಕೆ ಹೋಗಿದ್ದಾರೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ
ಸಿದ್ದರಾಮಯ್ಯ ಅವರು ಹೀಗೆ ಅಬ್ಬೇಪಾರಿ ಥರ ಕ್ಷೇತ್ರ ಹುಡುಕಿಕೊಂಡು ರಾಜ್ಯ ತಿರುಗಾಡುತ್ತಾ ಇರುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದ್ದಾರೆ.
ಹುಬ್ಬಳ್ಳಿ: ರಾಜ್ಯದಲ್ಲಿ ಐದು ವರ್ಷ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಅವರು ಏನು ಕೆಲಸ ಮಾಡಲಿಲ್ಲ. ಹೀಗಾಗಿ ಚಾಮುಂಡೇಶ್ವರಿಯ ಜನ ಸಿದ್ದರಾಮಯ್ಯ ಅವರನ್ನ ಸೋಲಿಸಿದರು. ಈಗ ಕೋಲಾರಕ್ಕೆ ಹೋಗಿದ್ದಾರೆ, ಕೋಲಾರದ ಜನ ಸಿದ್ದರಾಮಯ್ಯ ಅವರನ್ನ ಸೋಲಿಸಿ ಮನೆಗೆ ಕಳಿಸೋದು ಒಳಿತು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು (ನ.13) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಸಿದ್ದರಾಮಯ್ಯನವರು ಮೊದಲು ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸುತ್ತಿದ್ದರು. ಅಲ್ಲಿ ಅವರು ಏನು ಕೆಲಸ ಮಾಡಲಿಲ್ಲ. ಅಲ್ಲಿನ ಜನ ಸೋಲಿಸಿದರು. ಬಾದಾಮಿಯಲ್ಲಿ ಏನೋ ಅದೃಷ್ಟದಿಂದ ಕೇವಲ ಒಂದೆರಡು ಸಾವಿರ ಮತಗಳಿಂದ ಗೆದ್ದರು. ಬಾದಾಮಿಯಲ್ಲಿ ಏನೂ ಕೆಲಸ ಮಾಡಿಲ್ಲ. ಈಗ ಬಾದಾಮಿ ಬಿಟ್ಟು ಕೋಲಾರಕ್ಕೆ ಹೋಗಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಹೀಗೆ ಅಬ್ಬೇಪಾರಿ ಥರ ಕ್ಷೇತ್ರ ಹುಡುಕಿಕೊಂಡು ರಾಜ್ಯ ತಿರುಗಾಡುತ್ತಾ ಇರುತ್ತಾರೆ. ಕೋಲಾರದ ಜನರಿಗೆ ಇವತ್ತೇ ಹೇಳಲು ಬಯಸ್ತೇನೆ. ಸಿದ್ದರಾಮಯ್ಯ ಅವರನ್ನ ಸೋಲಿಸಿ ಮನೆಗೆ ಕಳಿಸೋದು ಒಳಿತು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದರು. ರಾಜ್ಯದಲ್ಲಿ ಐದು ವರ್ಷ ಸಿಎಂ ಆಗಿ, 10, 12 ಬಜೆಟ್ ಮಂಡಿಸಿದವರು ಸಿದ್ದರಾಮಯ್ಯ. ತಾವೊಬ್ಬ ದೊಡ್ಡ ನಾಯಕ ಅಂತಾ ಹೇಳಿಕೊಳುತ್ತಾರೆ. ಆದರೆ ಒಂದು ಕ್ಷೇತ್ರದಲ್ಲಿ ಅವರಿಗೆ ನೆಲೆಯೂರಲು ಸಾಧ್ಯವಾಗಿಲ್ಲ. ಒಂದು ಕ್ಷೇತ್ರದಲ್ಲೂ ಸರಿಯಾಗಿ ಕೆಲಸ ಮಾಡಿಲ್ಲ. ಅದರ ಪರಿಣಾಮ ಕ್ಷೇತ್ರ ಬದಲಿಸುತ್ತಾ ಇರುತ್ತಾರೆ. ಜನರು ಇದನ್ನ ಅರ್ಥಮಾಡಿಕೊಳ್ಳುಬೇಕು ಎಂದು ಪ್ರಲ್ಹಾದ ಜೋಶಿ ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ
ಬೆಂಗಳೂರು: ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿಯವರು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರನ್ನ ಇಂದು (ನ.07) ಭೇಟಿ ಮಾಡಿ ಆಶೀರ್ವದಿಸಿ ಕೃತಜ್ಞತೆ ಅರ್ಪಿಸಿದರು. ಎಸ್.ಟಿ ಮೀಸಲಾತಿ ಶೇ 3 ರಿಂದ ಶೇ 7ಕ್ಕೆ ರಾಜ್ಯ ಸರ್ಕಾರ ಹೆಚ್ಚಿಸಿದ ಹಿನ್ನೆಲೆಯಲ್ಲಿ ಸ್ವಾಮೀಜಿಯವರು ಪ್ರಲ್ಹಾದ್ ಜೋಶಿ ಅವರನ್ನ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು. ಈ ಹಿಂದೆ ಸ್ವಾಮೀಜಿಯವರು ಎಸ್.ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಧರಣಿ ನಿರತರಾಗಿದ್ದಾಗ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ವಾಮೀಜಿಯವರ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ್ದರು. ಮೀಸಲಾತಿ ಹೆಚ್ಚಳ ವಿಚಾರವಾಗಿ ಸಿಎಂ ಹಾಗೂ ರಾಜ್ಯ ಸರ್ಕಾರದ ಜೊತೆ ಚರ್ಚಿಸಿ ಸಹಕರಿಸುವುದಾಗಿ ಭೇಟಿ ವೇಳೆ ಸ್ವಾಮೀಜಿಗೆ ಜೋಶಿಯವರು ಭರವಸೆ ನೀಡಿದ್ದರು.
ಆ ಬಳಿಕ ಪ್ರಲ್ಹಾದ್ ಜೋಶಿಯವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಎಸ್.ಟಿ ಮೀಸಲಾತಿ ಹೆಚ್ಚಳ ಕುರಿತು ಚರ್ಚೆ ನಡೆಸಿದ್ದರು. ಅಲ್ಲದೇ ಕೇಂದ್ರ ಸರ್ಕಾರದಿಂದ ಅಗತ್ಯ ಕಾನೂನು ಸಹಕಾರ ನೀಡುವು ಭರವಸೆ ನೀಡಿದ್ದರು. ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 3% ನಿಂದ ಶೇ 7% ಗೆ ಹೆಚ್ಚಿಸಿದಕ್ಕೆ ಪ್ರಸನ್ನಾನಂದ ಸ್ವಾಮೀಜಿ ಪ್ರಲ್ಹಾದ್ ಜೋಶಿ ಅವರ ಭೇಟಿ ವೇಳೆ ಹರ್ಷ ವ್ಯಕ್ತಪಡಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ. ಈ ವೇಳೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಇನ್ನು ಮುಂದೆಯೂ ಕೇಂದ್ರ ಸರ್ಕಾರದಿಂದ ಅಗತ್ಯವಾದ ಎಲ್ಲಾ ಸಹಕಾದ ನೀಡೋದಾಗಿ ಭರವಸೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:21 pm, Sun, 13 November 22