ಧಾರವಾಡದಲ್ಲಿ ಹರಿಯುವ ಕೊಳಚೆ ನೀರಿನ ಹಳ್ಳದಲ್ಲಿ ನೊರೆ; ದುರ್ವಾಸನೆಯಿಂದ ಹತ್ತಿರಕ್ಕೂ ಹೋಗದ ಜನ

ಅದು ಆ ನಗರದ ಕೊಳಚೆ ನೀರನ್ನೆಲ್ಲ ನಗರದಿಂದ ಹೊರಗೆ ಹಾಕುವ ಒಂದು ಹಳ್ಳ. ಒಂದೀಡಿ ನಗರದ ಅರ್ಧ ಭಾಗದ ಮನೆಗಳ ಕೊಳಚೆ ನೀರು ದೊಡ್ಡ ಹಳ್ಳಕ್ಕೆ ಸೇರುವುದಕ್ಕೆ ಇರುವ ಒಂದು ಜಲಮಾರ್ಗವಷ್ಟೇ. ಕೊಳಚೆ ನೀರು ಹರಿಯುತ್ತಿದ್ದರೂ ಅದರ ಆಚೆ ಜನ ವಸತಿ, ಮನೆಗಳು ಮಾತ್ರವಲ್ಲದೇ ದೇವಸ್ಥಾನಗಳು ಇವೆ. ನಿತ್ಯ ಆ ಹಳ್ಳದ ಮಾರ್ಗದಲ್ಲೇ ಜನರೂ ವಾಕಿಂಗ್ ಸಹ ಮಾಡುತ್ತಾರೆ. ಆದರೆ, ಈಗ ಆ ಹಳ್ಳದ ನೊರೆಯಿಂದ, ಅದರ ಸಮೀಪಕ್ಕೆ ಬರೋದಕ್ಕೂ ಜನ ಹೆದರುತ್ತಿದ್ದು, ಮನೆಗಳ ಬಾಗಿಲು ಹಾಕಿಕೊಳ್ಳುತ್ತಿದ್ದಾರೆ.

ಧಾರವಾಡದಲ್ಲಿ ಹರಿಯುವ ಕೊಳಚೆ ನೀರಿನ ಹಳ್ಳದಲ್ಲಿ ನೊರೆ; ದುರ್ವಾಸನೆಯಿಂದ ಹತ್ತಿರಕ್ಕೂ ಹೋಗದ ಜನ
ಧಾರವಾಡ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Jun 25, 2023 | 12:11 PM

ಧಾರವಾಡ: ಹರಿಯುವ ನೀರಿನ ಮಧ್ಯೆ ನಿಧಾನಕ್ಕೆ ಬಂದು ಸೇರುತ್ತಿರುವ ಬಿಳಿ ಬಣ್ಣದ ನೊರೆ, ನೋಡ ನೋಡುತ್ತಿದ್ದಂತೆಯೆ ನೀರಿನ ಮೇಲೆಯೇ ರಾಶಿಯಾಗಿ ನಿಲ್ಲುತ್ತಿದ್ದು, ಗಾಳಿ ಬಿಟ್ಟರೇ ಸಾಕು ಇಡೀ ಪ್ರದೇಶಗಳಲ್ಲಿರುವ ಮನೆಗಳ ಮೇಲೆ ನೊರೆ ಹಾರಿ ಹೋಗುತ್ತಿದೆ. ಧಾರವಾಡ(Dharwad)ದ ಸಾಧುನವರ ಎಸ್ಟೇಟ್ ಪ್ರದೇಶದಲ್ಲಿ, ನಗರದ ಕೊಳಚೆ ನೀರನ್ನು ಹೊರಗೆ ಹಾಕುವ ಹಳ್ಳ ಇದಾಗಿದ್ದು, ಇದು ಮುಂದೆ ಹರಿದು ಹೋಗಿ ತುಪ್ಪರಿ ಹಳ್ಳವನ್ನು ಸೇರುತ್ತದೆ. ಕೆಲಗೇರಿ ಕೆರೆಯಲ್ಲಿ ಹೆಚ್ಚುವರಿಯಾದ ನೀರನ್ನು ಹೊರ ಹಾಕುವುದೂ ಸಹ ಇದೇ ಹಳ್ಳ. ಆದರೆ, ಈಗ ಕೊಳಚೆ ನೀರಿನ ಜೊತೆಗೆ ಯಾವುದೋ ಕೆಮಿಕಲ್(Chemical) ಸೇರಿದ್ದರಿಂದ ನಿತ್ಯವೂ ನಿರಂತರವಾಗಿ ನೊರೆ ಬಂದು ಶೇಖರಣೆಯಾಗುತ್ತಿದ್ದು, ಅದು ಗಾಳಿ ಬಿಟ್ಟರೇ ಸಾಕು ಹಾರಿ ಹೋಗಿ ಜನರ ಮತ್ತು ಮನೆಗಳ ಮೇಲೆ ಬೀಳುತ್ತಿದೆ. ಕೆಟ್ಟ ವಾಸನೆಯೂ ಸಹ ಇರುವ ಕಾರಣಕ್ಕೆ ಜನ ಹೆದರಿ ಹೊರಗೂ ಬರುತ್ತಿಲ್ಲ. ಇದರಿಂದ ಸಾಧುನವರ ಎಸ್ಟೇಟ್ ಪ್ರದೇಶದ ಗುರುನಗರ, ಹಿರೇಮಠ ಲೇಔಟ್, ಪಾಟೀಲ್ ಲೈಔಟ್ ನ ಸುಮಾರು 150ಕ್ಕೂ ಹೆಚ್ಚು ಮನೆಗಳ ಮೇಲೆ ಪರಿಣಾಮ ಬೀರಿದೆ.

ಇನ್ನು ಈ ಇಡೀ ಪ್ರದೇಶವೇ ಒಂದು ರೀತಿಯಲ್ಲಿ ತ್ರಿಶಂಕು ಸ್ಥಿತಿಯಲ್ಲಿದೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಎದುರಿಗೆ ಬರುವ ಈ ಬಡಾವಣೆ, ನಗರಕ್ಕೆ ಹೊಂದಿಕೊಂಡಿದ್ದರೂ ನಗರ ಪ್ರದೇಶಕ್ಕೆ ಸಂಬಂಧವಿಲ್ಲ. ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಈ ಬಡಾವಣೆ ಬರುತ್ತದೆ. ಆದರೆ, ಇಲ್ಲಿ ಹರಿಯುತ್ತಿರುವುದು ಧಾರವಾಡ ನಗರ ಪ್ರದೇಶದಲ್ಲಿನ ಪಾಲಿಕೆಗೆ ಸೇರಿದ ಕೊಳಚೆ ನೀರು. ಹೀಗಾಗಿ ಅದು ನಮಗೆ ಸಂಬಂಧವಿಲ್ಲವೆಂದು ಗ್ರಾಮ ಪಂಚಾಯ್ತಿಯವರು ತಲೆ ಕೆಡಿಸಿಕೊಳ್ಳುತ್ತಿಲ್ಲ.

ಇದನ್ನೂ ಓದಿ:ಯುವತಿಯರು ಸ್ನಾನ ಮಾಡುವುದನ್ನು ವಿಡಿಯೋ ಮಾಡುತ್ತಿದ್ದಾಗ ರೆಡ್​ಹ್ಯಾಂಡ್​ ಆಗಿ ತಗ್ಲಾಕೊಂಡ: ಕಾಮುಕನ ಮೊಬೈಲ್​ನಲ್ಲಿದ್ದವು 7 ಬೆಚ್ಚಿಬೀಳಿಸುವ ವಿಡಿಯೋಗಳು

ಅತ್ತ ತಮ್ಮ ಶಾಸಕರಿಗಾದರೂ ಹೇಳೋಣ ಅಂದ್ರೆ, ಇದು ದೂರದ ಕಲಘಟಗಿ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಶಾಸಕರೂ ದೂರವಾಗಿದ್ದು, ಮುಖ್ಯವಾಗಿ ಈಗ ಕಲಘಟಗಿ ಕ್ಷೇತ್ರ ಪ್ರತಿನಿಧಿಸುವ ಸಂತೋಷ್ ಲಾಡ್ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಆದರೆ, ಅವರು ಸಹ ಈ ಬಡಾವಣೆಯ ಜನರ ನೊರೆ ಸಮಸ್ಯೆ ಬಗ್ಗೆ ಕಾಳಜಿ ವಹಿಸಿಲ್ಲವಂತೆ. ಒಟ್ಟಾರೆಯಾಗಿ ಒಂದಿಡೀ ಪ್ರದೇಶದ ನೂರಕ್ಕೂ ಹೆಚ್ಚು ಮನೆಗಳ ಜನ ಈಗ ಈ ಮಾರಕ ನೊರೆಯಿಂದ ಹೈರಾಣಾಗಿದ್ದಾರೆ. ಮನೆಯಿಂದ ಹೊರಗೆ ಬರುವುದಕ್ಕೂ ಹೆದರುತ್ತಿದ್ದಾರೆ. ಈ ನೊರೆ ಮನೆಯೊಳಗೆ ಸೇರಿದರಂತೂ ಯಾವ ರೋಗ ಬರುತ್ತೇನೋ ಅನ್ನೋ ಸ್ಥಿತಿ ಬಂದಿದೆ. ಇನ್ನು ಹಳ್ಳದ ಪಕ್ಕದಲ್ಲೇ ಗಣಪತಿ ದೇವಸ್ಥಾನವಿದ್ದರೂ ದೇವರಿಗೆ ಕೈ ಮುಗಿಯೋದಕ್ಕೂ ಜನ ಬರದಂತಹ ಸ್ಥಿತಿ ನಿರ್ಮಾಣವಾಗಿದ್ದು, ಇದನ್ನು ಯಾರು ಪರಿಹಾರ ಮಾಡುತ್ತಾರೋ? ಕಾದು ನೋಡಬೇಕಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್