Techie Death: ಚಿಕ್ಕಬಳ್ಳಾಪುರದಲ್ಲಿ ಮಹಿಳಾ ಟೆಕ್ಕಿ ಅನುಮಾನಾಸ್ಪದ ಸಾವು

ಈ ಮಧ್ಯೆ ಮೃತಳ ಸಂಬಂಧಿಗಳು ನವ್ಯಾ ಪತಿ ಚೇತನ್ ಕುಮಾರ್ ಗೆ ಛೀಮಾರಿ ಹಾಕಿ ಥಳಿಸಿದ್ದಾರೆ. ಮಹಿಳೆಯರ ಕೈಯಿಂದ ಚೇತನ್ ಕುಮಾರ್ ನನ್ನು ಬಿಡಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

Techie Death: ಚಿಕ್ಕಬಳ್ಳಾಪುರದಲ್ಲಿ ಮಹಿಳಾ ಟೆಕ್ಕಿ ಅನುಮಾನಾಸ್ಪದ ಸಾವು
ವರದಕ್ಷಿಣೆ ಕಿರುಕುಳ: ಚಿಕ್ಕಬಳ್ಳಾಪುರದಲ್ಲಿ ಮಹಿಳಾ ಟೆಕ್ಕಿ ಅನುಮಾನಸ್ಪದ ಸಾವು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 24, 2022 | 4:15 PM

ಚಿಕ್ಕಬಳ್ಳಾಪುರ: ಕುಟುಂಬ ಕಲಹದ ಹಿನ್ನೆಲೆ ಮಹಿಳಾ ಟೆಕ್ಕಿ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಚಿಕ್ಕಬಳ್ಳಾಪುರದ ಪ್ರಶಾಂತ್ ನಗರದಲ್ಲಿರುವ ಗಂಡನ ಮನೆಯಲ್ಲಿ ಟೆಕ್ಕಿ ಕೊನೆಯುಸಿರೆಳೆದಿದ್ದಾರೆ. 23 ವರ್ಷದ ನವ್ಯಾ ಎಸ್.ಆರ್. ಮೃತ ಟೆಕ್ಕಿ (woman techie). ಪತಿಯ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ (Dowry death case) ನೇಣು ಹಾಕಿರುವ ಆರೋಪ ಕೇಳಿಬಂದಿದೆ. ಮೃತ ನವ್ಯಾ ತಂದೆ-ತಾಯಿ ಚಿಕ್ಕಬಳ್ಳಾಪುರ ನಗರ ಠಾಣೆಗೆ (chikkaballapur ) ದೂರು ನೀಡಿದ್ದಾರೆ.

ಆಕೆ ಪ್ರತಿಷ್ಠಿತ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿ, ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಳು. ಕೈತುಂಬ ಸಂಬಳವೂ ಬರ್ತಿತ್ತು.  ನೂರೆಂಟು ಕನಸುಗಳನ್ನು ಹೊತ್ತು… ತನಗಿಂತ 7 ಪಟ್ಟು ಸಂಬಳ ಹೆಚ್ಚು ಇರುವ ಖಾಸಗಿ ಬ್ಯಾಂಕ್ ನ ಉದ್ಯೋಗಿಯ ಜೊತೆ ಖುಷಿಯಿಂದ ಮದುವೆನೂ ಮಾಡಿಕೊಂಡಿದ್ದಳು. ಮದುವೆಯಾಗಿ ಇನ್ನೂ ಒಂದು ವರ್ಷ ತುಂಬಿಲ್ಲ ಆಗಲೇ… ಗಂಡನ ಮನೆಯಲ್ಲಿ ಸಾವಿನ ಮನೆ ಸೇರಿದ್ದಾಳೆ. ಇದ್ರಿಂದ ಆಕ್ರೋಶಗೊಂಡ ಮೃತಳ ಕಡೆಯವರು ಅಳಿಯನನ್ನು ಹಿಡಿದು ಥಳಿಸಿದರೆ… ಮೃತಳ ತಂದೆ ಮಗಳ ಸಾವಿನ ಸುದ್ದಿಯಿಂದ ಅಘಾತವಾಗಿ ಆಸ್ಪತ್ರೆ ಸೇರಿದ್ದಾರೆ. ಅಷ್ಟಕ್ಕೂ ಅಲ್ಲಿ ಆಗಿದ್ದಾದ್ರೂ ಏನ್!! ಟಿಕ್ಕಿ ಸಾವಿಗೆ ಕಾರಣವಾದ್ರು ಏನ್!! ಮೃತಳ ಸಂಬಂಧಿಗಳ ಆಕ್ರೋಶಕ್ಕೆ ಕಾರಣವಾಗಿದ್ದಾದ್ರು ಏನ್ ಅಂತೀರಾ ಈ ವರದಿ ಓದಿ!!

ನೂರೆಂಟು ಆಶೆ ಅಕಾಂಕ್ಷೆ ಹೊತ್ತು, ಬಿ.ಇ (ಎಂಜಿನಿಯರಿಂಗ್ ನಲ್ಲಿ ಸಾಫ್ಟ್​ ವೇರ್ ವಿದ್ಯಾಭ್ಯಾಸ ಮಾಡಿದ್ದ ಈ ಸುಂದರಿಯ ಹೆಸರು ಎಸ್.ಆರ್. ನವ್ಯಾ. ಈಗ ತಾನೆ ವಯಸ್ಸು 23 ವರ್ಷ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಅಡ್ಲವಾರಪಲ್ಲಿ ನಿವಾಸಿ.  ಬಿ.ಇ. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಒಳ್ಳೆ ವರ ಸಿಕ್ಕಿದ್ದಾನೆ – ವರ್ಷಕ್ಕೆ 20 ಲಕ್ಷ ರೂಪಾಯಿ ಸಂಬಳದ ಪ್ಯಾಕೇಜ್, ವರನ ತಂದೆ ಸರ್ಕಾರಿ ಅಧಿಕಾರಿ ಅಂತಾ ನವ್ಯಾಳ ತಂದೆ ತಾಯಿ ಹೆಚ್ಚೇನು ಯೋಚನೆ ಮಾಡದೆ…

ಚಿಕ್ಕಬಳ್ಳಾಪುರ ನಗರದ ಪ್ರಶಾಂತ್ ನಗರದ ನಿವಾಸಿ ಚೇತನ್ ಕುಮಾರ್ ಅನ್ನೊ ಖಾಸಗಿ ಬ್ಯಾಂಕ್ ಉದ್ಯೋಗಿಗೆ ಕೈತುಂಬ ವರದಕ್ಷಿಣೆ, ಮೈತುಂಬಾ ಚಿನ್ನ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾಗಿ ಇನ್ನೂ ಒಂದು ವರ್ಷ ತುಂಬಿಲ್ಲ ಆಗಲೇ… ಗಂಡನ ಮನೆಯಲ್ಲಿ ಮಗಳು ಸಾವಿನ ಮನೆ ಸೇರಿದ್ದಾಳೆ. ಮಗಳ ಸಾವಿನ ಸುದ್ದಿ ಕೇಳಿ… ನವ್ಯಾ ತಂದೆ ಎಂ.ರಾಮಚಂದ್ರಪ್ಪ ಅಸ್ವಸ್ಥನಾಗಿ ಅಘಾತಕ್ಕೊಳಗಾಗಿದ್ದಾರೆ.

ಚಿಕ್ಕಬಳ್ಳಾಪುರದ ಚೇತನ್ ಕುಮಾರ್ ಗೆ, ನವ್ಯಾಳನ್ನು ಮದುವೆ ಮಾಡಿಕೊಳ್ಳುವಾಗ ಕೈತುಂಬಾ ಹಣ, ಮೈತುಂಬಾ ಚಿನ್ನಾಭರಣ ಕೊಡಲಾಗಿತ್ತು. ನವ್ಯಾ… ಪ್ರತಿಷ್ಠಿತ ಸಾಫ್ಟ್​ವೇರ್ ಕಂಪನಿಯಲ್ಲಿ ವರ್ಕ್ ಫ್ರಮ್ ಹೋಂ ವ್ಯವಸ್ಥೆಯಡಿ ಕೆಲಸ ಮಾಡುತ್ತಾ… ಪ್ರತಿ ತಿಂಗಳು 25 ಸಾವಿರ ರೂಪಾಯಿ ಸಂಬಳ ಪಡೆದು ಅತ್ತೆ ಕೈಯಲ್ಲಿ ಕೊಡ್ತಿದ್ದಳು. ಆದ್ರೂ ಅತ್ತೆಗೆ ಸೊಸೆಯ ಸಂಬಳ ಸಾಲದೆ… ತಿಂಗಳಿಗಿಷ್ಟು ವರದಕ್ಷಿಣೆ ತರುವಂತೆ ಪೀಡಿಸುತ್ತಾ… ಸೊಸೆಯನ್ನು ಮನೆಕೆಲಸದವರ ರೀತಿಯಲ್ಲಿ ನೊಡ್ತಿದ್ದಳಂತೆ. ಇದ್ರಿಂದ ಬೇಸತ್ತಿದ್ದ ನವ್ಯಾ.. ತನಗಾದ ಕಿರುಕುಳವನ್ನು ತಾಯಿಯ ಮುಂದೆ ಹೇಳಿಕೊಂಡಿದ್ದಳು.

ಎಲ್ಲರೂ ಸೇರಿ ಮಗಳನ್ನು ಸಂತೈಸಿ ಇಂದು ಸರಿ ಹೋಗುತ್ತೆ – ನಾಳೆ ಸರಿಹೊಗುತ್ತೆ ಅಂತಾ ಸಮಾಧಾನ ಮಾಡಿದ್ದರು. ಇನ್ನು ಕಳೆದ ಮೂರು ದಿನಗಳಿಂದ ಗಂಡನ ಜೊತೆ ಮಾತನಾಡಲು ಯತ್ನಿಸಿದ್ದಾಳೆ. ಆದ್ರೂ ಗಂಡ ಕೇರ್ ಮಾಡಿಲ್ಲ, ಮಾತನಾಡಿಲ್ಲ, ಇದ್ರಿಂದ ನಿನ್ನೆ ಸಂಜೆ ಮನೆಯ ಮಹಡಿಯ ಮೇಲೆ ಇರುವ ಸ್ಟೋರ್ ರೂಮ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನವ್ಯಾ ಪತ್ತೆಯಾಗಿದ್ದಾಳೆ.

ಇದ್ರಿಂದ ಆಕ್ರೋಶಗೊಂಡ ನವ್ಯಾ ಸಂಬಂಧಿಗಳು ಕೈಗೆ ಸಿಕ್ಕ ಚೇತನ್ ಕುಮಾರ್ ನನ್ನು ಥಳಿಸಿ ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ. ಆದ್ರೂ ಚೇತನ್ ಹೇಳೋದು ತನ್ನ ಹೆಂಡತಿ ತುಂಬಾ ಒಳ್ಳೆಯವಳು, ಅವಳಿಂದ ನಮ್ಮ ಮನೆಯಲ್ಲಿ ಸಂತೋಷ ತುಂಬಿತ್ತು, ಯಾವುದೆ ತೊಂದರೆ ಇರಲಿಲ್ಲ, ಕೆಲಸದ ಒತ್ತಡವೂ ಇತ್ತು, ಅದ್ಯಾಕೆ ನೇಣು ಹಾಕಿಕೊಂಡಿದ್ದಾಳೊ ಗೊತ್ತಾಗ್ತಿಲ್ಲ. ಅವಳ ಜೊತೆ ನಾನೂ ಸತ್ತು ಹೋಗ್ತೀನಿ ಅಂತಾ ನವ್ಯಾ ಸಂಬಂಧಿಗಳ ಮುಂದೆ ಗೋಳಾಡಿದ್ದಾನೆ.

ಕಷ್ಟಪಟ್ಟು ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದ ನವ್ಯಾ, ಮನೆಯಲ್ಲಿ ಕುಳಿತು ಕೈತುಂಬ ಸಂಬಳ ಪಡೆಯುತ್ತಿದ್ದಳು. ಗಂಡನೂ ಮನೆಯಲ್ಲಿ ಕುಳಿತು ವರ್ಷಕ್ಕೆ 20 ಲಕ್ಷ ಸಂಬಳ ಪಡೆಯುತ್ತಿದ್ದ. ಆದ್ರೆ ಅವರ ಮಧ್ಯೆ ಇದ್ದ ಅತ್ತೆಯ ಕಿರುಕುಳದಿಂದ ನೊಂದಲೋ ..ಇಲ್ಲ… ಕೆಲಸದ ಒತ್ತಡದಿಂದಲೊ.. ಇಲ್ಲಾ ಗಂಡನ ಧನದಾಹಕ್ಕೊ ಬೇಸತ್ತು ಮೃತಪಟ್ಟಿದ್ದಾಳೊ ಇಲ್ಲಾ ಅತ್ತೆ ಮನೆಯವರು ಇನ್ನೇನೊ ಹೆಚ್ಚು ಕಡಿಮೆ ಮಾಡಿ ನಂತರ ನೇಣು ಹಾಕಿದ್ದಾರೊ… ಪೊಲೀಸರ ತನಿಖೆಯಿಂದಲೆ ಸತ್ಯ ಬಯಲಾಗಬೇಕು. ಸದ್ಯಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು, ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ಸಾವು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. -ಭೀಮಪ್ಪ ಪಾಟೀಲ, ಟಿವಿ9, ಚಿಕ್ಕಬಳ್ಳಾಪುರ 

ಇದನ್ನೂ ಓದಿ: 2022 March Bank Holidays: 2022ರ ಮಾರ್ಚ್​ ತಿಂಗಳಲ್ಲಿ ಬ್ಯಾಂಕ್​ಗಳಿಗೆ 13 ದಿನ ರಜಾ

ಇದನ್ನೂ ಓದಿ:  ಮನುಷ್ಯ ಸಾಯುವಾಗ ಯಾವ ರೀತಿ ಅನುಭವ ಪಡೆಯುತ್ತಾನೆ ಎಂದು ಕಂಡುಹಿಡಿದ ವಿಜ್ಞಾನಿಗಳು: ಸಂಶೋಧನೆಯಲ್ಲಿ ಹೇಳಿದ್ದೇನು?

Published On - 1:49 pm, Thu, 24 February 22

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್