AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Loose Cooking Oil Ban: ಕಲಬೆರಕೆ ಎಣ್ಣೆಗೆ ಬ್ರೇಕ್; ಲೂಸ್ ಅಡುಗೆ ಎಣ್ಣೆ ಸಂಪೂರ್ಣ ಬ್ಯಾನ್ ಮಾಡಲು ಸರ್ಕಾರದ ಪ್ಲಾನ್

ನಿಮ್ಮ ಅಡುಗೆ ಎಣ್ಣೆ ಶುದ್ಧವೇ? ಸಣ್ಣ ಲಾಭಕ್ಕೆ ಕಲಬೆರಕೆ ಲೂಸ್ ಎಣ್ಣೆ ಖರೀದಿಸುತ್ತಿದ್ದರೆ ಎಚ್ಚರ! ಕಲಬೆರಕೆ ಎಣ್ಣೆ ಮಾಫಿಯಾ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (FSSAI) ಕಠಿಣ ಕ್ರಮಕ್ಕೆ ಮುಂದಾಗಿದೆ. ಲೂಸ್ ಎಣ್ಣೆಯಿಂದ ಹೃದಯ ಕಾಯಿಲೆ, ಕ್ಯಾನ್ಸರ್ ಅಪಾಯವಿದ್ದು, ರಾಜ್ಯದಲ್ಲಿ ಇದರ ಸಂಪೂರ್ಣ ನಿಷೇಧಕ್ಕೆ ಸರ್ಕಾರ ನಿರ್ಧರಿಸಿದೆ. ಸೀಲ್ ಮಾಡಿದ FSSAI ನೋಂದಾಯಿತ ಎಣ್ಣೆಯನ್ನೇ ಬಳಸಿ.

Loose Cooking Oil Ban: ಕಲಬೆರಕೆ ಎಣ್ಣೆಗೆ ಬ್ರೇಕ್; ಲೂಸ್ ಅಡುಗೆ ಎಣ್ಣೆ ಸಂಪೂರ್ಣ ಬ್ಯಾನ್ ಮಾಡಲು ಸರ್ಕಾರದ ಪ್ಲಾನ್
ಸಾಂದರ್ಭಿಕ ಚಿತ್ರ
ವಿನಯ್​ ಕಾಶಪ್ಪನವರ್​
| Edited By: |

Updated on:Aug 27, 2026 | 12:20 PM

Share

ಬೆಂಗಳೂರು, ಆ,27: ದಿನನಿತ್ಯ ನಿಮ್ಮ ಅಡುಗೆ ಮನೆಯಲ್ಲಿ ಬಳಕೆಯಾಗುವ ಅಡುಗೆ ಎಣ್ಣೆ ಎಷ್ಟು ಶುದ್ಧವಾಗಿದೆ? ಸಣ್ಣ ಪ್ರಮಾಣದ ಲಾಭಕ್ಕಾಗಿ ಅಥವಾ ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಕಾರಣಕ್ಕೆ ನೀವು ಅಂಗಡಿಗಳಲ್ಲಿ ‘ಲೂಸ್ ಎಣ್ಣೆ’ (Loose Cooking Oil) ಖರೀದಿಸುತ್ತಿದ್ದೀರಾ? ಹಾಗಿದ್ದರೆ ಈ ಕೂಡಲೇ ಎಚ್ಚೆತ್ತುಕೊಳ್ಳಿ. ಜನಸಾಮಾನ್ಯರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಕಲಬೆರಕೆ ಎಣ್ಣೆ ಮಾಫಿಯಾದ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (FSSAI) ಕಠಿಣ ಕ್ರಮಕ್ಕೆ ಮುಂದಾಗಿದೆ.

ಲೂಸ್ ಆಗಿ ಮಾರಾಟವಾಗುವ ಅಡುಗೆ ಎಣ್ಣೆಯ ಮೇಲೆ ಆಹಾರ ಸುರಕ್ಷತಾ ಇಲಾಖೆ ತೀವ್ರ ಕಣ್ಣಿಟ್ಟಿದ್ದು, ರಾಜ್ಯಾದ್ಯಂತ ಶೋಧ ಕಾರ್ಯ ತೀವ್ರಗೊಳಿಸಿದೆ. ಎಣ್ಣೆಯ ಮೂಲ, ತಯಾರಿಕಾ ದಿನಾಂಕ ಹಾಗೂ ಲೇಬಲಿಂಗ್ ಇಲ್ಲದೆ ಮಾರಾಟವಾಗುವ ಎಣ್ಣೆಯ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ.

ಸೂಕ್ತ ಲೈಸೆನ್ಸ್ (FSSAI Licence) ಇಲ್ಲದೆ ಮತ್ತು ನಿಯಮ ಉಲ್ಲಂಘಿಸಿ ಎಣ್ಣೆ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಯೋಜನೆ ರೂಪಿಸಲಾಗಿದೆ. ಅಡುಗೆ ಎಣ್ಣೆಯಲ್ಲಿ ಅಗ್ಗದ ಅಥವಾ ಹಾನಿಕಾರಕ ರಾಸಾಯನಿಕ ಪದಾರ್ಥಗಳನ್ನು ಕಲಬೆರಕೆ ಮಾಡಿರುವ ಅನುಮಾನ ಬಂದಲ್ಲಿ, ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗುತ್ತಿದೆ. ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದರೆ ಅಂತಹ ಎಣ್ಣೆಯ ಮಾರಾಟವನ್ನು ತಕ್ಷಣವೇ ತಡೆದು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು.

ಲೂಸ್ ಅಡುಗೆ ಎಣ್ಣೆ ಮಾರಾಟದಿಂದ ಆಗುವ ಅಪಾಯಗಳು, ಸಾಧಕ-ಬಾಧಕಗಳು ಹಾಗೂ ಇದನ್ನು ಸಂಪೂರ್ಣವಾಗಿ ನಿಷೇಧಿಸುವುದರಿಂದ ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ಎದುರಾಗುವ ಸಮಸ್ಯೆಗಳ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಆಹಾರ ಸುರಕ್ಷತೆ ಮತ್ತು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಅಧಿಕಾರಿಗಳ ಉನ್ನತ ಮಟ್ಟದ ಸಮಿತಿ ರಚನೆಗೆ ಸೂಚನೆ ನೀಡಿದ್ದಾರೆ. ಸಮಿತಿ ನೀಡುವ ವರದಿಯ ಆಧಾರದ ಮೇಲೆ ರಾಜ್ಯದಲ್ಲಿ ‘ಲೂಸ್ ಅಡುಗೆ ಎಣ್ಣೆ ಮಾರಾಟ’ ಸಂಪೂರ್ಣ ಬ್ಯಾನ್ ಮಾಡಲು ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ: ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ಬಿಗ್ ರಿಲೀಫ್: ಕೆಜಿಗೆ ಕೇವಲ 35 ರೂ.ಗೆ ಈರುಳ್ಳಿ ಮಾರಾಟ ಆರಂಭಿಸಿದ ಕೇಂದ್ರ

ಲೂಸ್ ಅಡುಗೆ ಎಣ್ಣೆ ಏಕೆ ಅಪಾಯಕಾರಿ?

ತೆರೆದ ಪಾತ್ರೆಗಳಲ್ಲಿ ಅಥವಾ ಕ್ಯಾನ್‌ಗಳಲ್ಲಿ ಮಾರಾಟವಾಗುವ ಎಣ್ಣೆಗೆ ಅಗ್ಗದ ಮಿನರಲ್ ಆಯಿಲ್ ಅಥವಾ ಹಾನಿಕಾರಕ ರಾಸಾಯನಿಕಗಳನ್ನು ಸುಲಭವಾಗಿ ಬೆರೆಸಬಹುದು. ಲೂಸ್ ಎಣ್ಣೆಯ ಪೊಟಣ/ಕ್ಯಾನ್‌ಗಳ ಮೇಲೆ ಪ್ಯಾಕಿಂಗ್ ದಿನಾಂಕ, Expire Date ಅಥವಾ ಕಂಪನಿಯ ವಿಳಾಸವಿರುವುದಿಲ್ಲ. ಕಲಬೆರಕೆ ಎಣ್ಣೆಯ ನಿರಂತರ ಬಳಕೆಯಿಂದ ಹೃದಯಸಂಬಂಧಿ ಕಾಯಿಲೆಗಳು, ಜೀರ್ಣಾಂಗವ್ಯೂಹದ ತೊಂದರೆ ಹಾಗೂ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಅದಕ್ಕೆ ಕೆಲವೊಂದು ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ. ಲೂಸ್ ಆಗಿ ಸಿಗುವ ಅಗ್ಗದ ಎಣ್ಣೆಯನ್ನು ಖರೀದಿಸಬೇಡಿ. ಯಾವಾಗಲೂ ಸೀಲ್ ಮಾಡಿದ, FSSAI ನೋಂದಣಿ ಸಂಖ್ಯೆ ಹೊಂದಿರುವ ಮತ್ತು ಸರಿಯಾದ ಲೇಬಲ್ ಇರುವ ಪ್ಯಾಕೇಜ್ಡ್ ಎಣ್ಣೆಯನ್ನು ಮಾತ್ರ ಖರೀದಿಸಿ ಎಂದು ಹೇಳಿದೆ.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:22 am, Thu, 27 August 26

Follow Us
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಬಯಲು ಮಾಡಿದ ಸುದೀಪ್
ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಬಯಲು ಮಾಡಿದ ಸುದೀಪ್