ನಸೀಬದಾಗ ಇದ್ರೆ ನಾನೂ ಸಿಎಂ ಆಗೇ ಆಗ್ತೀನಿ: ಮತ್ತೆ ಸಿಎಂ ಖುರ್ಚಿ ಆಸೆ ಬಿಚ್ಚಿಟ್ಟ ಸಚಿವ ಉಮೇಶ್ ಕತ್ತಿ

ಕೆಂಪಣ್ಣ ಮಾಡಿದ ಭ್ರಷ್ಟಾಚಾರ ಆರೋಪಕ್ಕೆ ಸಚಿವ ಉಮೇಶ್​ ಕತ್ತಿ ತಿರುಗೇಟು ನೀಡಿದ್ದು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸಿದ್ದರಾಮಯ್ಯ ಶಿಷ್ಯ. ಕೆಂಪಣ್ಣ ಕರೆಸಿಕೊಂಡು ಕಾಂಗ್ರೆಸ್ ಮಾಡ್ತಿರೋ ಕೆಲಸ ಇದು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ನಸೀಬದಾಗ ಇದ್ರೆ ನಾನೂ ಸಿಎಂ ಆಗೇ ಆಗ್ತೀನಿ: ಮತ್ತೆ ಸಿಎಂ ಖುರ್ಚಿ ಆಸೆ ಬಿಚ್ಚಿಟ್ಟ ಸಚಿವ ಉಮೇಶ್ ಕತ್ತಿ
ಸಚಿವ ಉಮೇಶ್ ಕತ್ತಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Aug 26, 2022 | 12:40 PM

ಗದಗ: ಹೈಕಮಾಂಡ ಅವಕಾಶ ಕೊಟ್ರೆ ಅಖಂಡ ಕರ್ನಾಟಕದ ಸಿಎಂ ಆಗುತ್ತೇನೆ ಎಂದು ಸಚಿವ ಉಮೇಶ್ ಕತ್ತಿ ನಗರದಲ್ಲಿ ಹೇಳಿಕೆ ನೀಡಿದರು. ನಸೀಬನಾಗ ಇದ್ರೆ ನಾನೂ ಸಿಎಂ ಆಗೇ ಆಗ್ತೀನಿ ಎಂದು ಮತ್ತೆ ಸಿಎಂ ಖುರ್ಚಿ ಆಸೆಯನ್ನು ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಬಿಚ್ಚಿಟ್ಟಿದ್ದಾರೆ. ಬಸವರಾಜ್ ಬೊಮ್ಮಾಯಿ ತೆಗೆದು ಆಗಲು ನಾನು ಸಿದ್ಧ ಇಲ್ಲ. ಏಕೆಂದರೆ ಅವರು ಉತ್ತರ ಕರ್ನಾಟಕವರು. ಆದರೆ ಅಖಂಡ ಕರ್ನಾಟಕದ ಸಿಎಂ ಆಗ್ತೀನಿ. ಸಿಎಂ ಸ್ಥಾನಕ್ಕೆ ಬೆನ್ನು ಹತ್ತಲ್ಲ. ಸಿಎಂ ಆಗೋ ಯೋಗ್ಯತೆ ಎಲ್ಲರಿಗೂ‌ ಇದೆ‌. ಈಗ ಉತ್ತರ ಕರ್ನಾಟಕ ಬಸವರಾಜ್ ಬೊಮ್ಮಾಯಿ ಸಿಎಂ ಇದ್ದಾರೆ. ಒಂಬತ್ತು ಬಾರಿ ಶಾಸಕನಾಗಿದ್ದೇನೆ. ಎಂಟು ಇಲಾಖೆ ನಿಭಾಯಿಸಿದ್ದೇನೆ. ನಾನು ರಾಜ್ಯದ ಹಿರಿಯ ರಾಜಕಾರಣಿ. ಹುಕ್ಕೇರಿ ಜನ ನನ್ನ ಆಯ್ಕೆ ಮಾಡಿದ್ದಾರೆ. ಸೋಲಿಸಿದ್ರೆ ಮನೆಗೆ ಹೋಗ್ತೀನಿ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆದರೆ ರಾಜೀನಾಮೆಗೂ ಸಿದ್ದ ಎಂದು ಸಚಿವ ಉಮೇಶ್ ಕತ್ತಿ ಹೇಳಿದರು.

ಸಾರ್ವಕರ್ ವಿಚಾರವನ್ನು ಬೀದಿಗೆ ತರುವ ಕೆಲಸ ಮಾಡಬಾರದು:

ದೇಶ ಕಟ್ಟುವಲ್ಲಿ ವಿ.ಡಿ.ಸಾವರ್ಕರ್ ಮುಂಚೂಣಿಯಲ್ಲಿದ್ದವರು. ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಶಿಕ್ಷೆ ಅನುಭವಿಸಿದ್ದಾರೆ. ಸಾರ್ವಕರ್ ವಿಚಾರವನ್ನು ಬೀದಿಗೆ ತರುವ ಕೆಲಸ ಮಾಡಬಾರದು. ಉತ್ತರ ಕರ್ನಾಟಕದ ಬಸವರಾಜ ಬೊಮ್ಮಾಯಿ‌ ಸಿಎಂ ಆಗಿದ್ದಾರೆ. ಆಲಮಟ್ಟಿ 950 ಟಿಎಂಸಿ ನೀರು ಉಪಯೋಗ ಮಾಡುತ್ತಿದ್ದೇವೆ. ಉಳಿದ 750 ಟಿಎಂಸಿ ನೀರು ಉಪಯೋಗ ಆಗಬೇಕು. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಚಿಂತನೆ ಮಾಡ್ತಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೆ ವಿಶೇಷ ಪ್ಯಾಕೇಜ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಸಿಎಂ ಬೊಮ್ಮಾಯಿಗೆ ನಾವು ಸಲಹೆ ಸೂಚನೆ ಕೊಟ್ಟಿದ್ದೇವೆ. ನಾವು 10 ಕೆಜಿ ಅಕ್ಕಿ, 2 ಕೆಜಿ ರಾಗಿ, 1 ಕೆಜಿ ಜೋಳ ಕೊಡ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: HD Kumaraswamy: ಕಮಿಷನ್ ದಂಧೆ ಆರಂಭವಾಗಿದ್ದು ಬಿಜೆಪಿಯಿಂದ, ಕಾಂಗ್ರೆಸ್​ಗೂ ನೈತಿಕತೆ ಇಲ್ಲ; ಎಚ್​ಡಿ ಕುಮಾರಸ್ವಾಮಿ

ಕೆಂಪಣ್ಣ ಸಿದ್ದರಾಮಯ್ಯನ ಶಿಷ್ಯ

ಕೆಂಪಣ್ಣ ಮಾಡಿದ ಭ್ರಷ್ಟಾಚಾರ ಆರೋಪಕ್ಕೆ ಸಚಿವ ಉಮೇಶ್​ ಕತ್ತಿ ತಿರುಗೇಟು ನೀಡಿದ್ದು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸಿದ್ದರಾಮಯ್ಯ ಶಿಷ್ಯ. ಕೆಂಪಣ್ಣ ಕರೆಸಿಕೊಂಡು ಕಾಂಗ್ರೆಸ್ ಮಾಡ್ತಿರೋ ಕೆಲಸ ಇದು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಕೆಂಪಣ್ಣ ಆರೋಪದ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಕಮಿಷನ್ ಇದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ. ತನಿಖೆ ಆಗಲಿ, ಕಮಿಷನ್​ ಪಡೆದವರು ಹೊರಗೆ ಬರಲಿ. ಯಾರ ವಿರುದ್ಧವೂ ಕ್ರಮಕ್ಕೆ ಸರ್ಕಾರ ಹಿಂಜರಿಯಲ್ಲ. ಬಾಯಿ ಇದೆ ಅಂತ ಏನೇನೋ ಮಾತನಾಡಿದ್ರೆ ಸರಿಯಿರಲ್ಲ. ಸಿದ್ದರಾಮಯ್ಯಗೆ ಮಾಡೋಕೆ ಕೆಲಸವಿಲ್ಲ. ಸಿದ್ದರಾಮಯ್ಯಗೆ ಮೊನ್ನೆ ತತ್ತಿ ಒಗೆದ್ರು ಎಂದು ಕಿಡಿಕಾರಿದರು.

ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:37 pm, Fri, 26 August 22