ಕಂದಾಯ-ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ -ಅಸಲಿಗೆ ರೈತರ ಅನುಮತಿ ಪಡೆಯದೆ ತೋಟಗಳಲ್ಲಿ ಬೃಹತ್ ಯಂತ್ರಗಳ ಹಾಕುವ ಧಾರ್ಷ್ಟ್ಯತನ ಯಾಕೆ?
Gadag Wind Energy: ಅಮಾಯಕ ರೈತರ ಜಮೀನುಗಳಲ್ಲಿ ಈಗಾಗಲೇ ಹೈಟೆನ್ಷನ್ ಟವರ್ ಅಳವಡಿಸಿದ್ದಾರೆ. ಕೆಲ ರೈತರಿಗೆ ನೈಯಾಪೈಸೆ ಪರಿಹಾರವೂ ಕೊಟ್ಟಿಲ್ಲ. ಟವರ್ ಅಳವಡಿಕೆಗೆ ಅಡ್ಡಿ ಮಾಡಿದ್ರೆ ಕೇಸ್ ಹಾಕುವ ಬೆದರಿಕೆ ಹಾಕ್ತಾಯಿದ್ದಾರಂತೆ. ಒಂದು ಕಡೆ ಕಂಪನಿ ದಬ್ಬಾಳಿಕೆ ಮತ್ತೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅನ್ನದಾತರ ಹೈರಾಣಾಗಿದ್ದಾರೆ.
ಆ ಜಿಲ್ಲೆಯಲ್ಲಿ ವಿಂಡ್ ಕಂಪನಿಗಳ (ಪವನ ವಿದ್ಯುತ್ ಉತ್ಪಾದನೆ -Wind Energy) ದಬ್ಬಾಳಿಕೆಗೆ ಅನ್ನದಾತರು ಹೈರಾಣಾಗಿ ಹೋಗಿದ್ದಾರೆ. ಜಮೀನುಗಳಲ್ಲಿ ವಾಹನಗಳು ಓಡಾಡಿಸಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳ ಸರ್ವನಾಶ ಮಾಡಿದ್ದಾರೆ. ಇದರಿಂದ ವಿಂಡ್ ಕಂಪನಿಗಳ ದಬ್ಬಾಳಿಕೆಗೆ ಅನ್ನದಾತರು ಆಕ್ರೋಶಗೊಂಡಿದ್ದಾರೆ. ರೈತರ ಜಮೀನಿಗಳಲ್ಲಿ ಹೈ ಟೆನ್ಷನ್ ಟವರ್ ಅಳವಡಿಸಲು ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತಕ್ಕೆ ಸಾಕಷ್ಟು ಬಾರಿ ದೂರು ನೀಡಿದ್ರೂ ರೈತರ (farmers) ನೆರವಿಗೆ ಬರ್ತಾಯಿಲ್ಲ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಂಪನಿ ಸಿಬ್ಬಂದಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ವಿಂಡ್ ಕಂಪನಿ ಸಿಂಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ತಾಯಿರೋ ರೈತರು. ರೈತರ ಅನುಮತಿ ಇಲ್ಲದೇ ಜಮೀನುಗಳಲ್ಲಿ ಹೈಟೆನ್ಷನ್ ಟವರ್ ನಿರ್ಮಾಣ, ಜಮೀನುಗಳಲ್ಲಿ ವಾಹನಗಳ ಅಡ್ಡಾದಿಡ್ಡಿ ಸಂಚಾರ ಅದರಿಂದ ರೈತರ ಬೆಳೆ ಹಾನಿ, ರೈತರ ಅನುಮತಿಯೇ ಇಲ್ಲದೇ (permission) ಜಮೀನುಗಳಲ್ಲಿ ಹೈಟೆನ್ಷನ್ ಅಳವಡಿಸುತ್ತಿರೋ ಕಂಪನಿ. ಅನ್ನದಾತರಿಗೆ ಪರಿಹಾರ ನೀಡದೇ ಜಮೀನುಗಳಲ್ಲಿ ಹೈಟೆನ್ಷನ್ ಟವರ್ ಅಳವಡಿಕೆ, ಪರಿಹಾರವೂ ಇಲ್ಲ.. ಬೆಳೆಯೂ ಹಾಳು.. ಕಂಗಾಲಾದ ರೈತರು…! ಇದು ಇಲ್ಲಿನ ಗಾಢ ನೋವಿನ ಚಿತ್ರಣ.
ಹೌದು.. ಗದಗ ತಾಲೂಕಿನ ಕನಗಿನಾಳ ಗ್ರಾಮದ ವ್ಯಾಪ್ತಿಯಲ್ಲಿ ಪವನ ವಿದ್ಯುತ್ ಟವರ್ ಗಳ ವಿದ್ಯುತ್ ಸರಬರಾಜುಗಾಗಿ ಹೈಟೆನ್ಷನ್ ಟವರ್ ಗಳು ಅಳವಡಿಸಲಾಗುತ್ತಿದೆ. ಆದ್ರೆ, ಕನಿಷ್ಠ ರೈತರ ಗಮನಕ್ಕೂ ತಾರದೇ ಟವರ್ ಅಳವಡಿಸುತ್ತಿವೆ ಅಂತ ರೈತರು ಆರೋಪಿಸಿದ್ದಾರೆ. ಕಂಪನಿಗಳ ದಬ್ಬಾಳಿಕೆ ವಿರುದ್ಧ ಕ್ರಮ ಕೈಗೊಂಡು ನಮಗೆ ನ್ಯಾಯ ಕೊಡಿಸಿ ಅಂತ ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ರೂ ಅಧಿಕಾರಿಗಳು ರೈತರ ನೆರವಿಗೆ ಧಾವಿಸಿಲ್ಲ.
ಗದಗ ಜಿಲ್ಲೆಯಲ್ಲಿ ಮಿತಿಮೀರಿದೆ ಪವನ ವಿದ್ಯುತ್ ಕಂಪನಿಗಳ ದಬ್ಬಾಳಿಕೆ-ಅಟ್ಟಹಾಸ, ಗ್ರಾಮ ಪಂಚಾಯತ್ ಅನುಮತಿ ಕೂಡ ಪಡೆದಿಲ್ಲ!
ಅಷ್ಟಕ್ಕೇ ನಿಲ್ಲದ ಕಂಪನಿ ದಬ್ಬಾಳಿಕೆ ಮಿತಿಮೀರಿದೆ. ಈಗ ರೈತರ ಜಮೀನುಗಳಲ್ಲಿ ಅಡ್ಡಾದಿಡ್ಡಿ ವಾಹನಗಳ ಸಂಚಾರ ಮಾಡಿ ಅಪಾರ ಬೆಳೆ ಹಾನಿ ಮಾಡಿದ್ದಾರೆ. ಇದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲೇ ನಿರಂತರ ಮಳೆಗೆ ಎಲ್ಲ ಬೆಳೆಯೂ ಸರ್ವನಾಶವಾಗಿದೆ. ಈ ಅಳಿದುಳಿದ ಬೆಳೆ ಕೈಸೇರುತ್ತೆ ಅಂತ ಕನಸು ಕಂಡಿದ ರೈತರ ಕನಸಿಗೆ ವಿಂಡ್ ಕಂಪನಿಗಳು ಕಲ್ಲು ಹಾಕಿವೆ ಅಂತ ರೈತರು ಕಿಡಿಕಾರಿದ್ದಾರೆ. ನಮ್ಮ ಜಮೀನುಗಳಲ್ಲಿ ಟವರ್ ಹಾಕಲು ಬಿಡಲ್ಲ ಅಂತಿದ್ದಾರೆ.
ಅಮಾಯಕ ರೈತರ ಜಮೀನುಗಳಲ್ಲಿ ಈಗಾಗಲೇ ಹೈಟೆನ್ಷನ್ ಟವರ್ ಅಳವಡಿಸಿದ್ದಾರೆ. ಕೆಲ ರೈತರಿಗೆ ನೈಯಾಪೈಸೆ ಪರಿಹಾರವೂ ಕೊಟ್ಟಿಲ್ಲ. ಟವರ್ ಅಳವಡಿಕೆಗೆ ಅಡ್ಡಿ ಮಾಡಿದ್ರೆ ಕೇಸ್ ಹಾಕುವ ಬೆದರಿಕೆ ಹಾಕ್ತಾಯಿದ್ದಾರಂತೆ. ಒಂದು ಕಡೆ ಕಂಪನಿ ದಬ್ಬಾಳಿಕೆ ಮತ್ತೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅನ್ನದಾತರು ಹೈರಾಣಾಗಿದ್ದಾರೆ. ಗದಗ ಜಿಲ್ಲೆಯಲ್ಲಿ ಪವನ ವಿದ್ಯುತ್ ಕಂಪನಿಗಳ ಅಟ್ಟಹಾಸಕ್ಕೆ ಅನ್ನದಾತರಿಗೆ ದಿಕ್ಕುತೋಚದಂತಾಗಿದೆ. ಕೃಷಿ ಜಮೀನುಗಳಲ್ಲಿ ಕಮರ್ಷಿಯಲ್ ಟವರ್ ಅಳವಡಿಸಬೇಕಾದ ಕೃಷಿ ಜಮೀನು ಕೃಷಿಯೇತರ ಅಂತ ಬದಲಾವಣೆ ಮಾಡಬೇಕು. ಆದ್ರೆ, ಇಲ್ಲಿ ಇದ್ಯಾವ ನಿಯಮವೂ ಪಾಲನೆಯಾಗಿಲ್ಲ ಅಂತಾ ರೈತರು ಆರೋಪಿಸಿದ್ದಾರೆ. ಜಿಲ್ಲಾಡಳಿತ ರೈತರ ನೆರವಿಗೆ ಬಾರದ ಕಾರಣ ವಿವಿಧ ಸಂಘಟನೆಗಳು ರೈತರ ಬೆಂಬಲಕ್ಕೆ ನಿಂತಿದ್ದಾರೆ. ರೈತರ ಅನುಮತಿ ಇಲ್ಲದೇ ಜಮೀನುಗಳಲ್ಲಿ ಹೈಟೆನ್ಷ್ ವಿದ್ಯುತ್ ಟವರ್ ಅಳವಡಿಸಿದ ಕಂಪನಿ ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯತ್ ಅನುಮತಿ ಕೂಡ ಪಡೆದಿಲ್ಲ. ಹೀಗಾಗಿ ಕಂಪನಿಗಳು ತಾವು ಆಡಿದ್ದೇ ಆಟ ಮಾಡಿದ್ದೇ ಕಾನೂನು ಎನ್ನುವಂತಾಗಿದೆ. ಗದಗ ಜಿಲ್ಲೆಯಲ್ಲಿ ವಿಂಡ್ ಕಂಪನಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕೋರಿಲ್ಲದಂತಾಗಿದೆ. ಇನ್ನಾದ್ರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅನ್ನದಾತರ ನೆರವಿಗೆ ಧಾವಿಸಬೇಕಿದೆ.
ವರದಿ: ಸಂಜೀವ ಪಾಂಡ್ರೆ, ಟಿವಿ 9, ಗದಗ