ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ 19,420 ವಯಲ್ ಇಂಜೆಕ್ಷನ್ ಹಂಚಿಕೆ: ಸದಾನಂದಗೌಡ
weಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ಕರ್ನಾಟಕಕ್ಕೆ 1030 ವಯಲ್ ಚುಚ್ಚುಮದ್ದು ಒದಗಿಸಲಾಗಿದೆ. ಅಗತ್ಯ ಔಷಧಗಳನ್ನು ಆಮದು ಮಾಡಿಕೊಳ್ಳುವ ಜೊತೆಗೆ ಸ್ವದೇಶಿ ಉತ್ಪಾದನೆ ಹೆಚ್ಚಿಸಲೂ ಗಮನ ನೀಡಲಾಗುತ್ತಿದೆ ಎಂದು ಸದಾನಂದಗೌಡ ತಿಳಿಸಿದ್ದಾರೆ.
ಬೆಂಗಳೂರು: ಕೊರೊನಾ ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತಿರುವ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ಲಿಪೊಸೊಮಲ್ ಅಂಫೋಟೆರಿಸಿನ್-ಬಿ ಚುಚ್ಚುಮದ್ದನ್ನು ಕರ್ನಾಟಕಕ್ಕೆ ಸಾಕಷ್ಟು ಪ್ರಮಾಣದಲ್ಲಿ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ಕರ್ನಾಟಕಕ್ಕೆ 1030 ವಯಲ್ ಚುಚ್ಚುಮದ್ದು ಒದಗಿಸಲಾಗಿದೆ. ಅಗತ್ಯ ಔಷಧಗಳನ್ನು ಆಮದು ಮಾಡಿಕೊಳ್ಳುವ ಜೊತೆಗೆ ಸ್ವದೇಶಿ ಉತ್ಪಾದನೆ ಹೆಚ್ಚಿಸಲೂ ಗಮನ ನೀಡಲಾಗುತ್ತಿದೆ. ಲಿಪೊಸೊಮಲ್ ಅಂಫೋಟೆರಿಸಿನ್ ಔಷಧಿಯನ್ನು ನಿರಂತರವಾಗಿ ಹಂಚಲಾಗುವುದು. ಎಂದು ಅವರು ಮಾಹಿತಿ ನೀಡಿದ್ದಾರೆ.
ದೇಶದ ವಿವಿಧ ರಾಜ್ಯಗಳಿಗೆ ಇಂದು ಮತ್ತೆ 19,420 ವಯಲ್ಸ್ ಔಷಧಿ ಒದಗಿಸಲಾಗಿದೆ. ಈ ಪೈಕಿಗೆ ಆಂಧ್ರ ಪ್ರದೇಶ 1840, ಗುಜರಾತ್ 4640, ಮಧ್ಯಪ್ರದೇಶ 1470, ಮಹಾರಾಷ್ಟ್ರ 4060, ರಾಜಸ್ತಾನ 1430, ಉತ್ತರ ಪ್ರದೇಶ 1260 ವಯಲ್ಸ್ ನೀಡಲಾಗಿದೆ ಎಂದು ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
#BlackFungus #AmphotericinB ಕಪ್ಪುಶಿಲೀಂಧ್ರ ರೋಗದ ಚಿಕಿತ್ಸೆಗಾಗಿ ರಾಜ್ಯಗಳಿಗೆ ಇಂದು ಮತ್ತೆ 19,420 ವಯಲ್ಸ್ ಲಿಪೋಸೊಮಾಲ್ ಎಂಫೋಟೆರಿಸೊನ್ ಬಿ ಚುಚ್ಚುಮದ್ದನ್ನು ಹಂಚಿಕೆ ಮಾಡಿದ್ದೇವೆ. ಕರ್ನಾಟಕಕ್ಕೆ 1030 ವಯಲ್ಸ್ ಒದಗಿಸಲಾಗಿದೆ. ಆಮದಿನ ಜೊತೆಗೇ ಸ್ವದೇಶಿ ಉತ್ಪಾದನೆಯೂ ಹೆಚ್ಚಾಗುತ್ತಿದ್ದು ಇದರ ಹಂಚಿಕೆ ನಿರಂತರವಾಗಿ ನಡೆಯಲಿದೆ pic.twitter.com/t5blCv1aE7
— Sadananda Gowda (@DVSadanandGowda) May 24, 2021
ಬ್ಲ್ಯಾಕ್ ಫಂಗಸ್ ಸೋಂಕು ಬಾರದಂತೆ ತಡೆಗಟ್ಟಲು ಇಲ್ಲಿದೆ ಸರಳ ಸಲಹೆಗಳು ಕೊವಿಡ್-19 ವ್ಯಾಪಕವಾಗಿ ಹರಡುತ್ತಿದ್ದಂತೆಯೇ ಇದೀಗ ಕೊರೊನಾ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಎಂಬ ಅಪರಿಚಿತ ಸೋಂಕು ಕಾಣಿಸಿಕೊಳ್ಳುತ್ತಿದೆ. ಇಲ್ಲಿಯವರೆಗೆ ಕೇಳರಿಯದ ಸೋಂಕು ಇದೀಗ ಜನರನ್ನು ಭಯಭೀತರನ್ನಾಗಿ ಮಾಡಿದೆ. ಮ್ಯೂಕೋರ್ಮೈಕೋಸಿಸ್ ಎಂದು ಕರೆಯಲ್ಪಡುವ ಬ್ಲ್ಯಾಕ್ ಫಂಗಸ್ ಸೋಂಕಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಮಾರಕವಾಗಬಹುದು. ಹಾಗಿದ್ದಾಗ, ಪ್ರತಿನಿತ್ಯವೂ ನಿಮ್ಮ ಆರೋಗ್ಯದ ಕುರಿತು ಕಾಳಜಿವಹಿಸಿ ರೋಗ ಬಾರದಂತೆ ಎಚ್ಚರ ವಹಿಸಿ. ಸೋಂಕು ಹರಡದಂತೆ ತಡೆಗಟ್ಟಲು ಇಲ್ಲಿದೆ ಸರಳ ವಿಧಾನಗಳು.
ದಿನಕ್ಕೆ 2-3 ಬಾರಿ ಹಲ್ಲುಜ್ಜಬೇಕು ಕೊವಿಡ್19 ಸೋಂಕಿನ ಚೇತರಿಕೆ ಬಳಿಕ ಸ್ಟೀರಾಯ್ಡ್ಗಳು ಮತ್ತು ಇತರ ಔಷಧಿಗಳನ್ನು ಸೇವಿಸುವುದರಿಂದ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಮತ್ತು ಶಿಲೀಂಧ್ರವು ಹುಟ್ಟಿಕೊಳ್ಳಬಹುದು. ಇದು ಶ್ವಾಸಕೋಶ, ಸೈನಸ್ ಮತ್ತು ಮೆದುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಿರುವಾಗ ದಿನಕ್ಕೆ ಎರಡರಿಂದ ಮೂರು ಬಾರಿ ಹಲ್ಲುಜ್ಜುವ ಮೂಲಕ ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳಿ.
ಬಾಯಿ ಮುಕ್ಕಳಿಸುವುದು ರೋಗದ ಕಾರಣದಿಂದ ನಾಲಿಗೆ ರುಚಿಗೆಟ್ಟಿರುತ್ತದೆ. ಕೊವಿಡ್ ಸೋಂಕಿನಿಂದ ದೂರವಾದರೂ ಕೂಡಾ ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ದಿನಕ್ಕೆ ಎರಡರಿಂದ ಮೂರು ಬಾರಿ ಹಲ್ಲುಜ್ಜುವುದರ ಜತೆಗೆ ಆಹಾರ ಸೇವಿಸಿದ ಬಳಿಕವೇ ಬಾಯಿ ಮುಕ್ಕಳಿಸುವುದನ್ನು ರೂಢಿಯಲ್ಲಿಟ್ಟುಕೊಳ್ಳಿ.
ಟೂತ್ ಬ್ರಷ್ ಜತೆಗೆ ಟಂಗ್ ಕ್ಲೀನರ್ ಬಳಸಿ ದಿನನಿತ್ಯವೈ ಬಾಯಿ ಮುಕ್ಕಳಿಸಬಹುದು ಆದರೆ ಕೆಲವು ಬಾರಿ ನಾಲಿಗೆಗೆ ಅಂಟಿಕೊಂಟ ಆಹಾರ ಪದಾರ್ಥಗಳು ನಾಲಿಗೆಯಿಂದ ಸ್ವಚ್ಛವಾಗಿರುವುದಿಲ್ಲ. ಹಾಗಾಗಿ ನಾಲಿಗೆಯನ್ನು ಟಂಗ್ ಕ್ಲೀನರ್ ಮೂಕ ಸ್ವಚ್ಛಗೊಳಿಸಿಕೊಳ್ಳಿ. ಇದರಿಂದ ನಾಲಿಗೆಗೆ ಅಂಟಿಕೊಂಡಿರುವ ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸಬಹುದು. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮನೆಯ ಸದಸ್ಯರು ಇರಿಸಿಕೊಳ್ಳುವ ಟೂತ್ ಬ್ರಶ್ ಮತ್ತು ಟಂಗ್ ಕ್ಲೀನರ್ ಜತೆಗೆ ಸೋಂಕಿಗೆ ಒಳಗಾದ ವ್ಯಕ್ತಿಯ ಬ್ರಶ್ ಮತ್ತು ಟಂಗ್ ಕ್ಲೀನರ್ಗಳನ್ನು ಇರಿಸಿಕೊಳ್ಳುವುದನ್ನು ಆದಷ್ಟು ತಪ್ಪಿಸಿ.
ಇದನ್ನೂ ಓದಿ: Black Fungus ಬ್ಲಾಕ್ ಫಂಗಸ್ಗೆ ಹೋಮಿಯೋಪತಿ ಚಿಕಿತ್ಸೆ ಸೂಚಿಸಿದ ಆಯುಷ್ ಇಲಾಖೆ
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ; ಬ್ಲ್ಯಾಕ್ ಫಂಗಸ್ ಸೋಂಕಿಗೆ ಎಲ್ಲಾ ಜಿಲ್ಲೆಯಲ್ಲಿ ಸಿಗುತ್ತೆ ಚಿಕಿತ್ಸೆ