ಎಸ್​ಟಿ ನಿಗಮದ ಹಗರಣ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ: ಎಲ್ಲಾ ಘಟಕದಲ್ಲೂ ಸೂಕ್ತ ಹಣಕಾಸು ನಿರ್ವಹಣೆಗೆ ಸೂಚನೆ

ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಹಗರಣ ರಾಜ್ಯದಲ್ಲಿ ದೊಡ್ಡ ಸದ್ದು ಮಾಡಿದೆ. ಈ ಹಗರಣ ಸರ್ಕಾರದ ತಲೆನೋವಾಗಿತ್ತು. ಸದ್ಯ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ನಿಗಮಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಸರಿಯಾದ ರೀತಿಯಲ್ಲಿ ಹಣಕಾಸು ನಿರ್ವಹಿಸುವಂತೆ ಆದೇಶ ಹೊರಡಿಸಿದೆ. 

ಎಸ್​ಟಿ ನಿಗಮದ ಹಗರಣ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ: ಎಲ್ಲಾ ಘಟಕದಲ್ಲೂ ಸೂಕ್ತ ಹಣಕಾಸು ನಿರ್ವಹಣೆಗೆ ಸೂಚನೆ
ಎಸ್​ಟಿ ನಿಗಮದ ಹಗರಣ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ: ಎಲ್ಲಾ ಘಟಕದಲ್ಲೂ ಸೂಕ್ತ ಹಣಕಾಸು ನಿರ್ವಹಣೆಗೆ ಸೂಚನೆ
Follow us
|

Updated on: Jun 29, 2024 | 7:57 PM

ಬೆಂಗಳೂರು, ಜೂನ್​ 29: ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಹಗರಣ (ST Corporation scandal) ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತ್ತು. ಸಚಿವ ನಾಗೇಂದ್ರರ ತಲೆದಂಡವೂ ಆಗಿತ್ತು. ಹಗರಣವನ್ನ ಕೆದಕಿದಷ್ಟು ಸ್ಫೋಟಕ ಸಂಗತಿಗಳು ಹೊರ ಬರುತ್ತಿವೆ. ಹಣದ ವರ್ಗಾವಣೆ ಆಗಿರುವ ಮೂಲ ಕೆದಕುತ್ತಿರುವ ಎಸ್​ಐಟಿಗೆ ಶಾಕಿಂಗ್ ಮಾಹಿತಿ ಲಭ್ಯವಾಗಿದೆ. ಸದ್ಯ ಈ ಪ್ರಕರಣ ಸರ್ಕಾರಕ್ಕೆ ತಲೆನೋವಾಗಿದೆ. ಆದರೆ ಈ ಹಗರಣದ ಬೆನ್ನಲ್ಲೇ ಎಚ್ಚೆತ್ತಿರುವ ರಾಜ್ಯ ಸರ್ಕಾರ ನಿಗಮಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಸರಿಯಾದ ರೀತಿಯಲ್ಲಿ ಹಣಕಾಸು ನಿರ್ವಹಿಸುವಂತೆ ಆದೇಶ ಹೊರಡಿಸಿದೆ.

ಸಾರ್ವಜನಿಕ ನಿಧಿಗಳ ಹೊಣೆಗಾರಿಕೆ ಮತ್ತು ವಿವೇಚನಾಶೀಲ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು, ರಾಜ್ಯ ಪಿಎಸ್‌ಯುಗಳು, ಮಂಡಳಿಗಳು, ನಿಗಮಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ವೈದ್ಯಕೀಯ ಕಾಲೇಜುಗಳು, ಸ್ವಾಯತ್ತ ಹಾಗೂ ಅರೆ ಸ್ವಾಯತ್ತ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರದಿಂದ ಹಣವನ್ನು ಪಡೆಯುವಂತಹ ಎಲ್ಲ ಘಟಕಗಳು ಹಣಕಾಸು ಸ್ವತ್ತುಗಳನ್ನು ನಿಖರವಾಗಿ ಲೆಕ್ಕಹಾಕಲಾಗಿದೆಯೆ ಮತ್ತು ಸರಿಯಾಗಿ ನಿರ್ವಹಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ.

ಇದನ್ನೂ ಓದಿ: ಎಸ್​ಟಿ ನಿಗಮದ ಹಗರಣ: ಚಂದ್ರಶೇಖರ್​ ಆತ್ಮಹತ್ಯೆಯಿಂದ ನಾಗೇಂದ್ರ ರಾಜೀನಾಮೆ ತನಕ ಏನೇನು ಆಯ್ತು? ಇಲ್ಲಿದೆ ವರದಿ

ಈ ಕುರಿತಾಗಿ ಘಟಕಗಳು ಹೊಂದಿರುವ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಟರ್ಮ್ ಡೆಪಾಸಿಟ್‌ಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ನಿರ್ದೇಶನಗಳನ್ನು ನೀಡಲಾಗಿದೆ.

  • ಚಾಲ್ತಿ ಖಾತೆಗಳು, ಉಳಿತಾಯ ಖಾತೆಗಳು, ಅವಧಿಯ ಠೇವಣಿಗಳು ಮತ್ತು ಯಾವುದೇ ಇತರ ಕಾರ್ಯಾಚರಣೆಯ ಖಾತೆಗಳು ಸೇರಿದಂತೆ ಎಲ್ಲವನ್ನು ಸಮಗ್ರ ಪರಿಶೀಲಿಸುವುದು.
  • ಟರ್ಮ್ ಠೇವಣಿಗಳ ಪರಿಶೀಲನೆ
  • ಮೂರನೇ ವ್ಯಕ್ತಿಯ ದೃಢೀಕರಣ
  • ದಾಖಲಾತಿಗಳು
  • ಹೂಡಿಕೆಯ ವಿಧಾನ
  • ಅಪಾಯ ನಿರ್ವಹಣೆ
  • ಆಂತರಿಕ ವರದಿಗಾರಿಕೆ

ಸರ್ಕಾರದಿಂದ ನಾಮನಿರ್ದೇಶನಗೊಂಡ ನಿರ್ದೇಶಕರ ಪಾತ್ರ ಏನು?

ನಾಮನಿರ್ದೇಶಿತ ನಿರ್ದೇಶಕರು, ಪ್ರಸಕ್ತ ಖಾತೆಗಳು, ಉಳಿತಾಯ ಖಾತೆಗಳು, ಅವಧಿಯ ಠೇವಣಿಗಳು ಮತ್ತು ಇತರ ಯಾವುದೇ ಕಾರ್ಯಾಚರಣೆಯ ಖಾತೆಗಳು ಸೇರಿದಂತೆ ಎಲ್ಲಾ ಬ್ಯಾಂಕ್ ಖಾತೆಗಳ ಬಾಕಿಗಳನ್ನು ತೆರೆಯುವ ಮತ್ತು ಮುಚ್ಚುವ ಬಗ್ಗೆ ವರದಿಯ ಮೂಲಕ ಸಂಬಂಧಿಸಿದ ಸಂಸ್ಥೆಯು ಪ್ರತಿ ಮಂಡಳಿಯ ಸಭೆಯಲ್ಲಿ ಕಾರ್ಯಸೂಚಿಯಲ್ಲಿ ಒಂದು ವಿಷಯವನ್ನು ಇಡುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಹಣಕಾಸು ವರದಿಯಲ್ಲಿನ ಯಾವುದೇ ವ್ಯತ್ಯಾಸಗಳನ್ನು ಸಹ ಪರಿಶೀಲಿಸಬೇಕು.

ಇದನ್ನೂ ಓದಿ: ಸರ್ಕಾರದಿಂದ ಪರಿಹಾರ ಸಿಕ್ಕರೆ ಅದು ಸೆಕಂಡರಿ, ಮೊದಲು ನನ್ನ ಪತಿಯ ಸಾವಿಗೆ ನ್ಯಾಯ ಸಿಗಬೇಕು: ಕವಿತಾ ಚಂದ್ರಶೇಖರನ್

ನಾಮನಿರ್ದೇಶಿತ ನಿರ್ದೇಶಕರು ತಮ್ಮ ಕಂಪನಿ, ಸಂಸ್ಥೆಯಲ್ಲಿ ನಿಧಿಯ ನಿರ್ವಹಣೆಗೆ ಸಂಬಂಧಿಸಿದಂತೆ ಆಂತರಿಕ ಲೆಕ್ಕಪರಿಶೋಧಕರು ಮತ್ತು ಶಾಸನಬದ್ಧ ಲೆಕ್ಕಪರಿಶೋಧಕರ ವರದಿಯನ್ನು ಪರಿಶೀಲಿಸುವುದು.

ನಾಮನಿರ್ದೇಶಿತ ನಿರ್ದೇಶಕರು ಮಂಡಳಿಯ ಸಭೆಗಳನ್ನು ತ್ರೈಮಾಸಿಕಕ್ಕೆ ಒಮ್ಮೆಯಾದರೂ ನಡೆಸುವುದನ್ನು ಮತ್ತು ಲೆಕ್ಕಪರಿಶೋಧನಾ ಸಮಿತಿಯನ್ನು ರಚಿಸುವುದನ್ನು ಮತ್ತು ನಿಯಮಿತವಾಗಿ ಸಭೆಗಳನ್ನು ನಡೆಸುವುದನ್ನು ಖಚಿತಪಡಿಸಿಕೊಳ್ಳುವುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ