Hassan News: ತಾಯಿ ಮೃತದೇಹ ನೋಡಲು ಬರುವಂತೆ ಮನೆ ಬಿಟ್ಟು ಹೋದ ತಂಗಿಗೆ ಅಣ್ಣನ ಮನವಿ
ತಾಯಿ ಮೃತದೇಹ ನೋಡಲು ಬರುವಂತೆ ತಂಗಿಗೆ ಅಣ್ಣ ಮನವಿ ಮಾಡಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೊಮ್ಮನಕೆರೆ ಗ್ರಾಮದಲ್ಲಿ ನಡೆದಿದೆ.
ಹಾಸನ: ತಾಯಿ (Mother) ಮೃತದೇಹ ನೋಡಲು ಬರುವಂತೆ ತಂಗಿಗೆ (Sister) ಅಣ್ಣ ಮನವಿ ಮಾಡಿರುವ ಘಟನೆ ಜಿಲ್ಲೆಯ ಸಕಲೇಶಪುರ (Sakaleshpur) ತಾಲೂಕಿನ ಬೊಮ್ಮನಕೆರೆ ಗ್ರಾಮದಲ್ಲಿ ನಡೆದಿದೆ. ತಡರಾತ್ರಿ ತಾಯಿ ಹೊನ್ನಮ್ಮ(55) ಸಾವನ್ನಪ್ಪಿದ್ದಾಳೆ. ಎಲ್ಲೇ ಇದ್ದರು ಬೇಗ ಮನೆಗೆ ಬಾ, ತಾಯಿಯ ಮುಖ ನೋಡಲು ಬಾ ಎಂದು ಮನೆಬಿಟ್ಟು ಹೋಗಿರುವ ತಂಗಿಗಾಗಿ ಅಣ್ಣ ಅಳಲು ತೋಡಿಕೊಂಡಿದ್ದಾನೆ.
ಹೊನ್ನಮ್ಮನ ಮಗಳು ಹರಿಣಿ ಗಂಡನನ್ನು ಬಿಟ್ಟು ತವರು ಸೇರಿದ್ದಳು. ತವರೂರಿನಲ್ಲಿ ವಿವಿಧ ಸ್ವಸಹಾಯ ಸಂಘಗಳಲ್ಲಿ ಐದು ಲಕ್ಷ ಸಾಲ ಮಾಡಿದ್ದಳು. ಈ ಹಿನ್ನೆಲೆ ಪುತ್ರಿ ಹರಿಣಿ ಸಾಲ ತೀರಿಸಲಾಗದೆ ಮನೆ ಬಿಟ್ಟು ಪರಾರಿಯಾಗಿದ್ದಾಳೆ.
ಇದನ್ನೂ ಓದಿ: ಕೆಂಪು ಸುಂದರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು; ಹಾಸನದಲ್ಲಿ ಲಕ್ಷಾಂತರ ರೂ. ಮೌಲ್ಯದ ಟೊಮೇಟೊ ಕಳ್ಳತನ
ಹರಿಣಿ ಪರಾರಿಯಾದ ನಂತರ, ಮಗಳು ಸಾಲ ತೀರಿಸುವಂತೆ ಹೊನ್ನಮ್ಮನಿಗೆ ಸಾಲಗಾರರು ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದೆ. ಸಾಲಗಾರರ ಕಿರುಕುಳ ತಾಳಲಾರದೆ ಹೊನ್ನಮ್ಮ ಕಳೆದ ಮೂರು ದಿನಗಳಿಂದ ಊಟ, ತಿಂಡಿ ಬಿಟ್ಟಿದ್ದಳು. ಇದರಿಂದ ನಿನ್ನೆ (ಜು.10) ತಡರಾತ್ರಿ ತೀವ್ರ ಅಸ್ವಸ್ಥತೆಯಿಂದ ಹೊನ್ನಮ್ಮ ಸಾವನ್ನಪ್ಪಿದ್ದಾಳೆ. ಇದೀಗ ತಂಗಿಗಾಗಿ ಅಸಹಾಯಕ ಅಣ್ಣ ಅಳಲು ತೋಡಿಕೊಂಡಿದ್ದು, ಎಲ್ಲಿದ್ದರು ಮನೆಗೆ ಬರುವಂತೆ ಅಣ್ಣ ಕೋರಿಕೊಳ್ಳುತ್ತಿದ್ದಾನೆ. ಅಣ್ಣ ಮನೆಯಲ್ಲಿಯೇ ಮೃತ ತಾಯಿಯ ಶವವಿಟ್ಟುಕೊಂಡು ತಂಗಿಗಾಗಿ ಕಾಯುತ್ತಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ