AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hasanamba Utsava 2026: ಇಂದಿನಿಂದ ಹಾಸನಾಂಬೆ ಜಾತ್ರೆ ಆರಂಭ: ಎಷ್ಟು ಗಂಟಗೆ ಬಾಗಿಲು ಓಪನ್? ಟಿಕೆಟ್ ದರ, ರೈಲು-ಬಸ್ ಸೌಲಭ್ಯಗಳ ಮಾಹಿತಿ ಇಲ್ಲಿದೆ

ಹಾಸನಾಂಬೆ ದೇವಸ್ಥಾನದ ಗರ್ಭಗುಡಿ ಅ.29ಕ್ಕೆ ತೆರೆಯಲಿದ್ದು, ನ.11ರವರೆಗೆ (14 ದಿನ) ಜಾತ್ರಾ ಮಹೋತ್ಸವ ನಡೆಯಲಿದೆ. ಭಕ್ತರಿಗೆ 300 ಮತ್ತು 1000 ರೂ. ಟಿಕೆಟ್ ಲಭ್ಯವಿದ್ದು, ವಿಶೇಷ ರೈಲು ಹಾಗೂ ಬಸ್ ವ್ಯವಸ್ಥೆ ಮಾಡಲಾಗಿದೆ. ಈ ನಾಡಹಬ್ಬದ ಅಂಗವಾಗಿ ಕುಸ್ತಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಜಾನುವಾರು ಪ್ರದರ್ಶನ ಆಯೋಜಿಸಲಾಗಿದೆ. 30 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದೆ.

Hasanamba Utsava 2026: ಇಂದಿನಿಂದ ಹಾಸನಾಂಬೆ ಜಾತ್ರೆ ಆರಂಭ: ಎಷ್ಟು ಗಂಟಗೆ ಬಾಗಿಲು ಓಪನ್? ಟಿಕೆಟ್ ದರ, ರೈಲು-ಬಸ್ ಸೌಲಭ್ಯಗಳ ಮಾಹಿತಿ ಇಲ್ಲಿದೆ
ಹಾಸನಾಂಬೆ ಜಾತ್ರೆ
ಮಂಜುನಾಥ ಕೆಬಿ
| Edited By: |

Updated on:Oct 29, 2026 | 9:06 AM

Share

ಹಾಸನ, ಅ,29: ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ಇಂದು ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ತೆರೆಯಲಿದೆ. ಆಶ್ವೀಜ ಕೃಷ್ಣ ಪಕ್ಷದ ಚತುರ್ಥಿ ಹಾಗೂ ರೋಹಿಣಿ ನಕ್ಷತ್ರದ ಶುಭ ಮುಹೂರ್ತದಲ್ಲಿ ಗರ್ಭಗುಡಿಯ ಬಾಗಿಲನ್ನು ಓಪನ್ ಮಾಡಲಾಗುತ್ತಿದ್ದು, ಇಂದು (ಅಕ್ಟೋಬರ್ 29) ರಿಂದ ನವೆಂಬರ್ 11ರವರೆಗೆ ಒಟ್ಟು 14 ದಿನಗಳ ಕಾಲ ನಾಡಹಬ್ಬದ ಮಾದರಿಯಲ್ಲಿ ‘ಹಾಸನಾಂಬೆ ಜಾತ್ರಾ ಮಹೋತ್ಸವ’ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಉತ್ಸವದ ಸಿದ್ಧತೆ, ವಿಐಪಿ ದರ್ಶನ, ಟಿಕೆಟ್ ಹಾಗೂ ಬಸ್-ರೈಲು ಸೌಲಭ್ಯಗಳ ಕುರಿತು ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ.

ದರ್ಶನ ಸಮಯ ಹಾಗೂ ಪಾಸ್/ಟಿಕೆಟ್ ವಿವರಗಳು:

ಸಾರ್ವಜನಿಕ ಧರ್ಮದರ್ಶನದ ಜೊತೆಗೆ ಭಕ್ತಾದಿಗಳ ಅನುಕೂಲಕ್ಕಾಗಿ 300 ರೂ. ಹಾಗೂ 1,000 ರೂ.ನ ಪ್ರತ್ಯೇಕ ಕ್ಯೂ ಲೈನ್ ಟಿಕೆಟ್‌ಗಳನ್ನು ಕಲ್ಪಿಸಲಾಗಿದೆ.

ವಿಐಪಿ ಮತ್ತು ಗೋಲ್ಡನ್ ಪಾಸ್ ಸಮಯ:

ಗೋಲ್ಡನ್ ಪಾಸ್: ಬೆಳಿಗ್ಗೆ 8:00 ರಿಂದ 10:00 ಗಂಟೆಯವರೆಗೆ ದರ್ಶನಕ್ಕೆ ಅವಕಾಶ (ಒಬ್ಬರಿಗೆ ಮಾತ್ರ ಅನುಮತಿ).

ವಿಐಪಿ ದರ್ಶನ: ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ ಗಣ್ಯರಿಗೆ ಜಿಲ್ಲಾಡಳಿತದಿಂದಲೇ ದರ್ಶನ ವ್ಯವಸ್ಥೆ.

ಜಾತ್ರೆಯ ಮೊದಲ ದಿನ (ಇಂದು) ಮತ್ತು ಕೊನೆಯ ದಿನ ಯಾವುದೇ ಶಿಷ್ಟಾಚಾರ ಹಾಗೂ ಪಾಸ್‌ಗಳಿಗೆ ಅವಕಾಶವಿರುವುದಿಲ್ಲ.

ಪ್ರಸಾದ ದರ ಮತ್ತು ಭದ್ರತಾ ವ್ಯವಸ್ಥೆ:

ಪ್ರಸಾದ ದರ ನಿಗದಿ:

ಲಡ್ಡು ಪ್ರಸಾದ: 2 ಲಡ್ಡುಗಳಿಗೆ 56 ರೂ. ನಿಗದಿ.

ದೊನ್ನೆ ಪ್ರಸಾದ: 1 ದೊನ್ನೆಗೆ 17 ರೂ. ದರ ನಿಗದಿಪಡಿಸಲಾಗಿದೆ.

30 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, 2,000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಸಿಸಿಟಿವಿ ಹಾಗೂ ಡೆಡಿಕೇಟೆಡ್ ಡ್ರೋನ್ ಕ್ಯಾಮೆರಾಗಳ ಮೂಲಕ ಕಟ್ಟುನಿಟ್ಟಿನ ಕಣ್ಣಾವಲು ಇರಿಸಲಾಗಿದೆ. “ಹಿಂದೆ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದ ಹಾಸನಾಂಬೆ ಉತ್ಸವ ಇಂದು ‘ನಾಡ ಹಬ್ಬ’ವಾಗಿ ಬೃಹತ್ ಮಟ್ಟದಲ್ಲಿ ಬೆಳೆದಿದೆ. ಲಕ್ಷಾಂತರ ಭಕ್ತರು ಆಗಮಿಸುವಾಗ ‘ಸ್ಥಳೀಯರು’ ಎಂದು ಸಂಕುಚಿತವಾಗಿ ಯೋಚಿಸುವುದು ಬೇಡ. ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸೋಣ.” ಎಂದು ಜಿಲ್ಲಾ ಉಸ್ತುವರಿ ಸಚಿವ ಶಿವಲಿಂಗೇಗೌಡ ಹೇಳಿದ್ದಾರೆ.

ದಸರಾ ಮಾದರಿಯಲ್ಲಿ ಸಾಂಸ್ಕೃತಿಕ, ಕ್ರೀಡೆ ಮತ್ತು ಜಾನುವಾರು ಪ್ರದರ್ಶನ:

ಉತ್ಸವದ ಅಂಗವಾಗಿ ಮೈಸೂರು ದಸರಾ ಮಾದರಿಯಲ್ಲೇ ವಿವಿಧ ಆಕರ್ಷಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 450 ಮಂದಿ ಭಾಗವಹಿಸುವ ಮುಕ್ತ ಕುಸ್ತಿ ಪಂದ್ಯಾಟ, ರಾಜ್ಯ/ರಾಷ್ಟ್ರೀಯ ಮಟ್ಟದ ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾವಳಿ. ಹಳ್ಳಿಕಾರ್, ಅಮೃತ ಮಹಲ್ ತಳಿಯ ಜೋಡೆತ್ತುಗಳ ಪ್ರದರ್ಶನ, ಶ್ವಾನ , ಬೆಕ್ಕು ಹಾಗೂ ಟಗರುಗಳ ಬೃಹತ್ ಪ್ರದರ್ಶನ. ಸಾಂಪ್ರದಾಯಿಕ ರಂಗೋಲಿ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು.

ಇದನ್ನೂ ಓದಿ: ಹಾಸನಾಂಬೆ ಭಕ್ತರಿಗೆ ಗುಡ್‌ನ್ಯೂಸ್‌; ಅ.29ರಿಂದ ವಿಶೇಷ ರೈಲು, 200ಕ್ಕೂ ಹೆಚ್ಚು ಬಸ್‌ಗಳ ವ್ಯವಸ್ಥೆ!

ವಿಶೇಷ ಬಸ್ ಹಾಗೂ ರೈಲುಗಳ ಸಂಚಾರ:

ಭಕ್ತರ ಸುಲಭ ಸಂಚಾರಕ್ಕಾಗಿ ಕೇಂದ್ರ ಸರ್ಕಾರವು ಬೆಂಗಳೂರು – ಹಾಸನ ಹಾಗೂ ಅರಸೀಕೆರೆ – ಹಾಸನ ನಡುವೆ ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ 2 ವಿಶೇಷ ರೈಲುಗಳ ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್ ನೀಡಿದೆ. ಸಾರಿಗೆ ಇಲಾಖೆಯು ಮೈಸೂರು, ಬೆಂಗಳೂರು, ಮಡಿಕೇರಿ ಸೇರಿದಂತೆ ಪ್ರಮುಖ ಜಿಲ್ಲೆಗಳಿಂದ ಹಾಸನಕ್ಕೆ 200ಕ್ಕೂ ಅಧಿಕ ಹೆಚ್ಚುವರಿ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳನ್ನು ನಿಯೋಜಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:58 am, Thu, 29 October 26

Follow Us
ಮಂಜುನಾಥ ಕೆಬಿ
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್
ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನೀಕಾಂತ್
ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನೀಕಾಂತ್
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!
ಹಣ ಹಾಕಿದ್ರೆ ದೀಪಾವಳಿ ಹಬ್ಬ ಜೋರಾಗಿ ಮಾಡುತ್ತೇವೆ: ಗೃಹಲಕ್ಷ್ಮೀಯರು
ಹಣ ಹಾಕಿದ್ರೆ ದೀಪಾವಳಿ ಹಬ್ಬ ಜೋರಾಗಿ ಮಾಡುತ್ತೇವೆ: ಗೃಹಲಕ್ಷ್ಮೀಯರು
ಪ್ರಿಯಾಂಕ್​​ ಖರ್ಗೆ ಹೇಳಿಕೆ ಖಂಡಿಸಿ ಜೆಡಿಎಸ್​​ನಿಂದ ಫ್ಲೆಕ್ಸ್​​
ಪ್ರಿಯಾಂಕ್​​ ಖರ್ಗೆ ಹೇಳಿಕೆ ಖಂಡಿಸಿ ಜೆಡಿಎಸ್​​ನಿಂದ ಫ್ಲೆಕ್ಸ್​​