AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಮತ್ತು ಆತನ ಸ್ನೇಹಿತರಿಗೆ ಕಂಬಕ್ಕೆ ಕಟ್ಟಿ ಅರೆಬೆತ್ತಲೆಗೊಳಿಸಿ ಥಳಿತ!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಯ ನೆಪದಲ್ಲಿ ಬಂದ ಯುವಕ ಹಾಗೂ ಆತನ ಸ್ನೇಹಿತರ ಮೇಲೆ ಯುವತಿಯ ಸಂಬಂಧಿಕರು ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಯುವಕರನ್ನು ಕಂಬಕ್ಕೆ ಕಟ್ಟಿ ಅರೆಬೆತ್ತಲೆಗೊಳಿಸಿ ಥಳಿಸಲಾಗಿದ್ದು, ಹಲ್ಲೆಗೊಳಗಾದವರ ಕುಟುಂಬಸ್ಥರು ಹಂಸಭಾವಿ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾರೆ.

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಮತ್ತು ಆತನ ಸ್ನೇಹಿತರಿಗೆ ಕಂಬಕ್ಕೆ ಕಟ್ಟಿ ಅರೆಬೆತ್ತಲೆಗೊಳಿಸಿ ಥಳಿತ!
ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ, ಸ್ನೇಹಿತರಿಗೆ ಕಂಬಕ್ಕೆ ಕಟ್ಟಿ ಅರೆಬೆತ್ತಲೆಗೊಳಿಸಿ ಭೀಕರ ಹಲ್ಲೆ!
ಭಾವನಾ ಹೆಗಡೆ
|

Updated on: Nov 01, 2026 | 2:57 PM

Share

ಮುಖ್ಯಾಂಶಗಳು

  • ಪ್ರೀತಿಯ ನೆಪದಲ್ಲಿ ಬಂದ ಯುವಕ ಹಾಗೂ ಸ್ನೇಹಿತರ ಮೇಲೆ ಭೀಕರ ಹಲ್ಲೆಯಾಗಿದೆ.
  • ಹಾವೇರಿಯಲ್ಲಿ ಪ್ರಿಯಕರ ಮತ್ತು ಸ್ನೇಹಿತರನ್ನು ಕಂಬಕ್ಕೆ ಕಟ್ಟಿ ಅರೆಬೆತ್ತಲೆಗೊಳಿಸಿ ಹೊಡೆಯಲಾಗಿದೆ.
  • ಘಟನೆ ಸಂಬಂಧ ಹಂಸಭಾವಿ ಠಾಣೆಯಲ್ಲಿ ದೂರು ನೀಡಲು ಕುಟುಂಬಸ್ಥರು ಮುಂದಾಗಿದ್ದಾರೆ.

ಹಾವೇರಿ, ನವೆಂಬರ್ 01: ಪ್ರೀತಿಸಿದ ಯುವತಿಯನ್ನು ಕರೆದೊಯ್ದು ಮದುವೆಯಾಗಲು ಬಂದಿದ್ದ ಪ್ರಿಯತಮ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಹಿಡಿದು ಕಂಬಕ್ಕೆ ಕಟ್ಟಿ, ಅರೆಬೆತ್ತಲೆಗೊಳಿಸಿ ಭೀಕರವಾಗಿ ಥಳಿಸಿರುವ ಅಮಾನವೀಯ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಕಳೆದ ಅಕ್ಟೋಬರ್ 27ರಂದು ನಡೆದಿದ್ದ ಈ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

ಕಂಬಕ್ಕೆ ಕಟ್ಟಿ ಥಳಿತ!

ರಟ್ಟಿಹಳ್ಳಿಯ ಪ್ರಮೋದ್ ಹಾಗೂ ಬತ್ತಿಕೊಪ್ಪ ಗ್ರಾಮದ ಭಾವನಾ ಪರಸ್ಪರ ಪ್ರೀತಿಸುತ್ತಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಇಬ್ಬರೂ ಮನೆ ಬಿಟ್ಟು ರಿಜಿಸ್ಟರ್ ಮದುವೆಯಾಗಲು ಹೊರಟಿದ್ದರು. ಆದರೆ ವಿಷಯ ತಿಳಿದ ಭಾವನಾ ಪೋಷಕರು, ಆಕೆಗೆ ಮನವೊಲಿಸಿ ಮನೆಗೆ ಕರೆತಂದಿದ್ದರು. ಮನೆಗೆ ಬಂದ ನಂತರ ಭಾವನಾ ತನ್ನ ಪ್ರಿಯಕರ ಪ್ರಮೋದ್‌ಗೆ ಪತ್ರ ಬರೆದು ಮದುವೆಯಾಗೋಣ ಎಂದು ಸಂದೇಶ ರವಾನಿಸಿದ್ದಳು.

ಪ್ರಿಯತಮೆಯ ಪತ್ರ ತಲುಪುತ್ತಿದ್ದಂತೆಯೇ ಪ್ರಮೋದ್ ತನ್ನ ಸ್ನೇಹಿತರಾದ ಪ್ರಕಾಶ್ ಹಾಗೂ ಪರಶುರಾಮ ಜೊತೆಗೂಡಿ ಬತ್ತಿಕೊಪ್ಪ ಗ್ರಾಮಕ್ಕೆ ಬಂದಿದ್ದ. ಭಾವನಾಳನ್ನು ಕರೆದೊಯ್ಯಲು ಯತ್ನಿಸಿದಾಗ ವಿಷಯ ತಿಳಿದ ಯುವತಿಯ ಕುಟುಂಬಸ್ಥರು ಮೂವರನ್ನೂ ಹಿಡಿದು, ಕಂಬಕ್ಕೆ ಕಟ್ಟಿ ಅರೆಬೆತ್ತಲೆಗೊಳಿಸಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ.

ಅಸಹಾಯಕರಾದ ಪೊಲೀಸರು

ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದರಾದರೂ, ಸ್ಥಳದಲ್ಲಿದ್ದ ಭಾರಿ ಗುಂಪು ಮತ್ತು ಗಲಾಟೆಯನ್ನು ಕಂಡು ಅಸಹಾಯಕರಾಗಿದ್ದರು ಎನ್ನಲಾಗಿದೆ. ಹಲ್ಲೆಗೊಳಗಾದ ಪ್ರಮೋದ್, ಪ್ರಕಾಶ್ ಹಾಗೂ ಪರಶುರಾಮ ಅವರಿಗೆ ತೀವ್ರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಭಾವನಾ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಲು ಹಲ್ಲೆಗೊಳಗಾದ ಯುವಕರ ಕುಟುಂಬಸ್ಥರು ಮುಂದಾಗಿದ್ದಾರೆ. ಈ ಪ್ರಸಂಗವು ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More