Japanese Encephalitis: ಜಪಾನೀಸ್ ಎನ್ಸಿಫಲಾಟೀಸ್ ಲಸಿಕೆಯಿಂದ ಸಾವು ಸಂಭವಿಸುತ್ತದಾ? ಕಲಬುರಗಿ ಆರೋಗ್ಯ ಇಲಾಖೆ ಹೇಳುವುದೇನು?

ಜಪಾನೀಸ್ ಎನ್ಸಿಫಲಾಟೀಸ್ ಲಸಿಕೆಯಿಂದ ತೊಂದರೆ ಆಗಿದೆ ಎಂಬ ಆರೋಪವನ್ನು ಆರೋಗ್ಯ ಇಲಾಖೆಯವರು ಅಲ್ಲಗಳೆದಿದ್ದಾರೆ. ಹೀಗಾಗಿ ಗೊಂದಲ ಮೂಡಿದ್ದು, ಅದನ್ನು ಇಲಾಖೆಯವರು ಬಗೆಹರಿಸುವ ಕೆಲಸ ಮಾಡಬೇಕಿದೆ. ಜೊತೆಗೆ ಜಾಗೃತಿ ಮೂಡಿಸುವ ಕೆಲಸವೂ ಮಾಡಬೇಕಿದೆ.

Japanese Encephalitis: ಜಪಾನೀಸ್ ಎನ್ಸಿಫಲಾಟೀಸ್ ಲಸಿಕೆಯಿಂದ ಸಾವು ಸಂಭವಿಸುತ್ತದಾ? ಕಲಬುರಗಿ ಆರೋಗ್ಯ ಇಲಾಖೆ ಹೇಳುವುದೇನು?
ಜಪಾನೀಸ್ ಎನ್ಸಿಫಲಾಟೀಸ್ ಲಸಿಕೆಯಿಂದ ಸಾವು ಸಂಭವಿಸುತ್ತದಾ?
Follow us
TV9 Web
| Updated By: Digi Tech Desk

Updated on:Dec 13, 2022 | 1:36 PM

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೆದಳು ಜ್ವರ ನಿಯಂತ್ರಣಕ್ಕೆ, ಜಪಾನೀಸ್ ಎನ್ಸಿಫಲಾಟೀಸ್ ಲಸಿಕೆಯನ್ನು (Japanese Encephalitis) ಆರೋಗ್ಯ ಇಲಾಖೆ (health department) ವತಿಯಿಂದ ನೀಡಲಾಗುತ್ತಿದೆ. ಐದು ವರ್ಷದಿಂದ 15 ವರ್ಷದ ಮಕ್ಕಳಿಗೆ ಈ ಲಸಿಕೆ ನೀಡಲಾಗುತ್ತಿದೆ. ಆದ್ರೆ ಇದೇ ಲಸಿಕೆ ಪಡೆದ ಮೇಲೆ ಜ್ವರದಿಂದ ಬಳಲಿ ಓರ್ವ ಬಾಲಕ (boy) ಮೃತಪಟ್ಟಿದ್ದಾನೆ ಅಂತ ಬಾಲಕನ ಕುಟುಂಬದವರು ಆರೋಪ ಮಾಡಿದ್ದಾರೆ. ಇತ್ತ ಆರೋಗ್ಯ ಇಲಾಕೆಯ ಅಧಿಕಾರಿಗಳು ಮಾತ್ರ ಲಸಿಕೆಯಿಂದ ಸಾವು ಸಂಭವಿಸೋದಿಲ್ಲ, ಬೇರೆ ಕಾರಣದಿಂದ ಮೃತಪಟ್ಟಿರಬಹುದು, ವದಂತಿಗಳನ್ನು ನಂಬಬಾರದು ಅಂತಿದ್ದಾರೆ.

ಇದ್ದೊಬ್ಬ ಮಗನ ಮೇಲೆ ಬೆಟ್ಟದಷ್ಟು ಆಸೆ, ಭರವಸೆ ಇಟ್ಟುಕೊಂಡಿದ್ದ ಈ ಮಹಿಳೆಗೆ ಇದೀಗ ದಿಕ್ಕೆ ತೋಚದಂತಾಗಿದೆ. ಮಗ ಬಾರದ ಲೋಕಕ್ಕೆ ಹೋಗಿದ್ದು ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಹೌದು ಕಲಬುರಗಿ (Kalaburagi) ತಾಲೂಕಿನ ಹೀರಾಪುರ ಗ್ರಾಮದ ನಿವಾಸಿಯಾಗಿರುವ ಜಗದೇವಿ ಜಮಾದಾರ್ ಅನ್ನೋ ಮಹಿಳೆಯ 10 ವರ್ಷದ ಪುತ್ರ, ಇದೇ ಡಿಸೆಂಬರ್ 9 ರಂದು ಮೃತಪಟ್ಟಿದ್ದಾನೆ. ಕೂಲಿ ಕೆಲಸ ಮಾಡುವ ಜಗದೇವಿಯ ಪತಿ ಅನೇಕ ವರ್ಷಗಳ ಹಿಂದೆಯೇ ಬಾರದ ಲೋಕಕ್ಕೆ ಹೋಗಿದ್ದರೆ, ಇದ್ದೊಬ್ಬ ಮಗನನ್ನು ಚೆನ್ನಾಗಿ ಓದಿಸಬೇಕು ಅಂತ ಜಗದೇವಿ, ತನ್ನ ಹತ್ತು ವರ್ಷದ ಪುತ್ರ ಆಕಾಶ್ ನನ್ನು ಹೀರಾಪುರದಲ್ಲಿರುವ ಖಾಸಗಿ ಶಾಲೆಗೆ ಸೇರಿಸಿದ್ದರು.

ಆದ್ರೆ ಜ್ವರ ಅಂತ ಮೂರ್ನಾಲ್ಕು ದಿನ ಬಳಲಿದ ಬಾಲಕ ಬಾರದ ಲೋಕಕ್ಕೆ ಹೋಗಿದ್ದಾನೆ. ಆದ್ರೆ ಜಗದೇವಿ, ಮಾತ್ರ ತನ್ನ ಮಗನ ಸಾವಿಗೆ ಜಪಾನಿಸ್ ಎನ್ಸಿಫಲಾಟೀಸ್ ಲಸಿಕೆಯೇ ಕಾರಣ ಅಂತ ಆರೋಪಿಸುತ್ತಿದ್ದಾರೆ. ಹೀಗಾಗಿ ಜಗದೇವಿ ಮತ್ತು ಹೀರಾಪುರದ ಅನೇಕ ಸ್ಥಳೀಯರು ಇಂದು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ರು. ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಅಂತ ಆಗ್ರಹಿಸಿದ್ರು.

ಹೌದು ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಮೆದಳು ಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ವತಿಯಿಂದ ಜಪಾನೀಸ್ ಎನ್ಸಿಫಲಾಟೀಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಐದರಿಂದ ಹದಿನೈದು ವರ್ಷದೊಳಗಿನ ಮಕ್ಕಳಿಗೆ ಈ ಲಸಿಕೆಯನ್ನು ನೀಡಲಾಗುತ್ತಿದೆ. ಡಿಸೆಂಬರ್ 5 ರಿಂದ ರಾಜ್ಯದ ಕಲಬುರಗಿ, ಬಾಗಲಕೋಟೆ, ಗದಗ, ಹಾವೇರಿ, ಉಡುಪಿ, ತುಮಕೂರು, ಹಾಸನ, ದಕ್ಷಿಣ ಕನ್ನಡ, ರಾಮನಗರ ಹಾಗೂ ಯಾದಗಿರಿ ಜಿಲ್ಲೆಯಲ್ಲಿನ ಮಕ್ಕಳಿಗೆ ನೀಡಲಾಗುತ್ತಿದೆ.

ಇದನ್ನೂ ಓದಿ: Plastic Rice? ಅಕ್ಷರ ದಾಸೋಹ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಿಶ್ರಿತ ಅಕ್ಕಿ ಪತ್ತೆ! ಆತಂಕಗೊಂಡ ಶಾಲಾ ಮಕ್ಕಳು, ಪೋಷಕರು ಮಾಡಿದ್ದೇನು? 

ಕಲಬುರಗಿ ಜಿಲ್ಲೆಯಲ್ಲಿಯೇ 7 ಲಕ್ಷ 20 ಸಾವಿರ ಮಕ್ಕಳಿಗೆ ಈ ಲಸಿಕೆಯನ್ನು ನೀಡಲಾಗುತ್ತಿದೆ. ಇದೇ ಲಸಿಕೆಯನ್ನು ಡಿಸೆಂಬರ್ 5 ರಂದು ಆಕಾಶ್ ನಿಗೆ ಆತನ ಖಾಸಗಿ ಶಾಲೆಯಲ್ಲಿ ಆರೋಗ್ಯ ಇಲಾಕೆ ಸಿಬ್ಬಂದಿ ನೀಡಿದ್ದರು. ಆದ್ರೆ ಲಸಿಕೆ ಪಡೆದಿದ್ದ ಆಕಾಶ ಡಿಸೆಂಬರ್ 9 ರಂದು ಮೃತಪಟ್ಟಿದ್ದಾನೆ ಎಂದು ಮೃತ ಆಕಾಶನ ತಾಯಿ ಜಗದೇವಿ ಜಮಾದಾರ್ ಆರೋಪಿಸಿದ್ದಾರೆ.

ಲಸಿಕೆ ಪಡೆದ ನಂತರ ಆಕಾಶ್ ನಿಗೆ ಜ್ವರ ಬಂದಿತ್ತಂತೆ. ಹೀಗಾಗಿ ಜಗದೇವಿ, ಸ್ಥಳೀಯ ವೈದ್ಯರ ಬಳಿ ತೋರಿಸಿದ್ದರಂತೆ. ಆದ್ರೆ ಶುಕ್ರವಾರ ಹೆಚ್ಚಿನ ಜ್ವರ ಬಂದಾಗ, ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದ್ರೆ ಜ್ವರ ಹೆಚ್ಚಾಗಿದ್ದರಿಂದ, ಬಾಲಕ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಬಾರದ ಲೋಕಕ್ಕೆ ಹೋಗಿದ್ದಾನೆ. ತನ್ನ ಮಗನಿಗೆ ಈ ಮೊದಲು ಯಾವುದೇ ಸಮಸ್ಯೆ ಇರಲಿಲ್ಲಾ. ಆತನಿಗೆ ನೆಗಡಿ, ಜ್ವರವು ಇರಲಿಲ್ಲ.

ಆದ್ರೆ ಲಸಿಕೆ ಪಡೆದ ನಂತರ, ಜ್ವರದಿಂದ ಬಳಲಿ ತನ್ನ ಮಗ ಮೃತಪಟ್ಟಿದ್ದಾನೆ ಅಂತ ಜಗದೇವಿ ಆರೋಪಿಸುತ್ತಿದ್ದಾರೆ. ಆದ್ರೆ ಆರೋಗ್ಯ ಇಲಾಖೆಯವರು ಮಾತ್ರ ಜಗದೇವಿ ಆರೋಪವನ್ನು ಅಲ್ಲಗಳೆದಿದ್ದಾರೆ. ಜಪಾನೀಸ್ ಎನ್ಸಿಫಲಾಟೀಸ್ ಲಸಿಕೆಯನ್ನು ಮೆದಳು ಜ್ವರ ನಿಯಂತ್ರಣಕ್ಕಾಗಿ ನೀಡಲಾಗುತ್ತಿದೆ. ಈ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ, ಸಾಯುವುದೂ ಇಲ್ಲಾ. ಹೀಗಾಗಿ ಪಾಲಕರು ಆತಂಕ ಪಡದೆ, ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಇನ್ನು ಬಾಲಕ ಆಕಾಶ್ ನಿಗೆ ಲಸಿಕೆ ಹಾಕಿಸಿದ್ದರಿಂದ ಸತ್ತಿಲ್ಲ, ಬೇರೆ ಆರೋಗ್ಯ ಸಮಸ್ಯೆ ಇದ್ದಿರಬಹುದು ಎಂದು ಡಾ. ರಾಜಶೇಖರ ಮಾಲಿ, ಕಲಬುರಗಿ ಜಿಲ್ಲಾ ಆರೋಗ್ಯಾಧಿಕಾರಿ ಅವರು ಟಿವಿ9 ಗೆ ಸ್ಪಷ್ಟಪಡಿಸಿದ್ದಾರೆ.

ಅನೇಕರು ಜಪಾನೀಸ್ ಎನ್ಸಿಫಲಾಟೀಸ್ ಲಸಿಕೆಯಿಂದ ತೊಂದರೆ ಆಗಿದೆ ಅಂತ ಹೇಳಿದ್ರೆ, ಜನರ ಆರೋಪಗಳನ್ನು ಆರೋಗ್ಯ ಇಲಾಖೆಯವರು ಅಲ್ಲಗಳೆದಿದ್ದಾರೆ. ಹೀಗಾಗಿ ಕೆಲ ಗೊಂದಲ ಮೂಡಿದ್ದು, ಗೊಂದಲಗಳನ್ನು ಆರೋಗ್ಯ ಇಲಾಖೆಯವರು ಬಗೆಹರಿಸುವ ಕೆಲಸ ಮಾಡಬೇಕಿದೆ. ಜೊತೆಗೆ ಜಾಗೃತಿ ಮೂಡಿಸುವ ಕೆಲಸವೂ ಮಾಡಬೇಕಿದೆ. (ವರದಿ: ಸಂಜಯ್, ಟಿವಿ 9, ಕಲಬುರಗಿ)

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:26 pm, Tue, 13 December 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್