Chain Snatching: ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿದ ಕಳ್ಳರು, ಹಗಲುಹೊತ್ತಿನಲ್ಲಿಯೇ ದೇವಿಯ ಮಾಂಗಲ್ಯ ಸರ ಕದ್ದು ಪರಾರಿಯಾದರು!

Hingulambika temple: ಎಪ್ರಿಲ್ 9 ರಂದು, ಹಿಂಗುಲಾಂಬಿಕಾ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಅದು ಕೂಡಾ ರಾತ್ರಿ ಸಮಯದಲ್ಲಿ ಅಲ್ಲಾ, ಬದಲಾಗಿ ಹಗಲು ಹೊತ್ತಿನಲ್ಲಿ. ದೇವಸ್ಥಾನಕ್ಕೆ ಭಕ್ತನ ಸೋಗಿನಲ್ಲಿ ಬಂದಿದ್ದ ಯುವಕ ದೇವಿಯ ಕತ್ತಲ್ಲಿದ್ದ 21 ಗ್ರಾಂ ತೂಕದ ಚಿನ್ನದ ತಾಳಿಯನ್ನು ಕದ್ದು ಪರಾರಿಯಾಗಿದ್ದಾನೆ.

Chain Snatching: ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿದ ಕಳ್ಳರು, ಹಗಲುಹೊತ್ತಿನಲ್ಲಿಯೇ ದೇವಿಯ ಮಾಂಗಲ್ಯ ಸರ ಕದ್ದು ಪರಾರಿಯಾದರು!
ಹಗಲುಹೊತ್ತಿನಲ್ಲಿಯೇ ದೇವಿಯ ಮಾಂಗಲ್ಯ ಸರ ಕದ್ದು ಪರಾರಿಯಾದ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Apr 13, 2023 | 12:13 PM

ಕಲಬುರಗಿ ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಇದೀಗ ಹಾಡಹಗಲೇ ದೇವಸ್ಥಾನಗಳನ್ನೆ ಟಾರ್ಗೇಟ್ ಮಾಡಿಕೊಂಡಿರುವ ಕಳ್ಳರು, ದೇವಿಯ ಮಾಂಗಲ್ಯ ಸರವನ್ನು (Chain Snatching) ಕೂಡಾ ಬಿಡದೆ ಕದ್ದು ಪರಾರಿಯಾಗುತ್ತಿದ್ದಾರೆ. ಭಕ್ತರ ರೂಪದಲ್ಲಿ ದೇವಸ್ಥಾನಕ್ಕೆ ಎಂಟ್ರಿ ನೀಡ್ತಿರೋ ಕಳ್ಳರು, ದೇವರ ಮೈಮೇಲಿನ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗುತ್ತಿದ್ದಾರೆ (Temple Theft). ಆ ದೇವಸ್ಥಾನದ ಪೂಜಾರಿ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ. ಕೆಲ ಭಕ್ತರು, ದೇವಸ್ಥಾನಕ್ಕೆ ಬಂದು ಹೋಗಿದ್ದಾರೆ. ಇದೇ ಸಮಯ ಸಾಧಿಸಿ ದೇವಸ್ಥಾನಕ್ಕೆ ಬಂದ ಯುವಕನೋರ್ವ ಭಕ್ತಿಯಿಂದ ದೇವಿಗೆ ಕೈ ಮುಗಿದಿದ್ದಾನೆ. ದೇವಿಯ ಗರ್ಭಗುಡಿಗೂ ಪ್ರದಕ್ಷಿಣೆ ಹಾಕ್ತಾನೆ. ದೇವಸ್ಥಾನದಲ್ಲಿಯೇ ಇದ್ದ ಅರ್ಚಕ, ಯಾರೋ ಭಕ್ತ ಬಂದಿದ್ದಾನೆ, ದೇವಿ ದರ್ಶನ ಪಡೆದು ಹೋಗ್ತಾನೆ ಅಂತ ಸುಮ್ಮನೇ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ. ಆದ್ರೆ ದೇವಸ್ಥಾನಕ್ಕೆ ಬಂದು, ದೇವಿಯ ಮೂರ್ತಿಗೆ ಕೈ ಮುಗಿದ ಭಕ್ತ, ಅತ್ತ ಇತ್ತ ನೋಡಿ, ಗರ್ಭಗುಡಿ ಪ್ರದಕ್ಷಿಣೆ ಹಾಕಿ, ದೇವಿಯ ಗರ್ಭಗುಡಿಯೊಳಗೆ ಹೋಗಿ ಬಿಡ್ತಾನೆ. ಹೀಗೆ ಹೋದವನು, ದೇವಿಯ ಕತ್ತಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕದ್ದು ಹೊರಗೆ ಬರ್ತಾನೆ! ನಂತರ ಕೂಡಾ ದೇವಿಗೆ ಮತ್ತೆ ಕೈ ಮುಗಿಯುತ್ತಾನೆ… ನಂತರ ದೇವಸ್ಥಾನದ ಅರ್ಚಕನಿಗೆ ಮಾತಾಡಿಸಿ ಹೋಗುತ್ತಾನೆ. ಇಂತಹದೊಂದು ಘಟನೆ ನಡೆದಿದ್ದು, ಕಲಬುರಗಿ (Kalaburgi) ನಗರದ ಗಾಜಿಪುರದಲ್ಲಿರುವ ಸುಪ್ರಸಿದ್ದ ಹಿಂಗುಲಾಂಬಿಕಾ ದೇವಸ್ಥಾನದಲ್ಲಿ (Hingulambika temple).

ಹೌದು ಇದೇ ಎಪ್ರಿಲ್ 9 ರಂದು, ಗಾಜಿಪುರದಲ್ಲಿರುವ ಹಿಂಗುಲಾಂಬಿಕಾ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಅದು ಕೂಡಾ ರಾತ್ರಿ ಸಮಯದಲ್ಲಿ ಅಲ್ಲಾ, ಬದಲಾಗಿ ಹಗಲು ಹೊತ್ತಿನಲ್ಲಿ. ಹೌದು ಸಂಜೆ 5 ಗಂಟೆ 34 ನಿಮಿಷಕ್ಕೆ ದೇವಸ್ಥಾನಕ್ಕೆ ಭಕ್ತನ ಸೋಗಿನಲ್ಲಿ ಬಂದಿದ್ದ ಯುವಕನೋರ್ವ, ಹಿಂಗುಲಾಂಬಿಕಾ ದೇವಿಯ ಕತ್ತಲ್ಲಿದ್ದ 21 ಗ್ರಾಂ ತೂಕದ ಚಿನ್ನದ ತಾಳಿಯನ್ನು ಕದ್ದು ಪರಾರಿಯಾಗಿದ್ದಾನೆ. ನಂತರ ದೇವಸ್ಥಾನದ ಅರ್ಚಕ ಎಚ್ಚೆತ್ತುಕೊಂಡು ಕಳ್ಳನನ್ನು ಹುಡುಕುತ್ತಾ ಬಂದರೂ ಕೂಡಾ, ಭಕ್ತನ ವೇಷದಲ್ಲಿದ್ದ ಕಳ್ಳ, ಕ್ಷಣಾರ್ಧದಲ್ಲಿಯೇ ಅಲ್ಲಿಂದ ಪರಾರಿಯಾಗಿದ್ದಾನೆ.

ಇನ್ನು ಈ ರೀತಿಯ ಕಳ್ಳತನವಾಗ್ತಿರೋದು ಇದು ಮೊದಲೇನಲ್ಲಾ. ಕೆಲ ತಿಂಗಳ ಹಿಂದಷ್ಟೇ ಇದೇ ದೇವಸ್ಥಾನದಲ್ಲಿ ಇದೇ ರೀತಿ ಕಳ್ಳತನವಾಗಿತ್ತಂತೆ. ಆಗ ಕೂಡಾ ದೇವಿಯ ಕತ್ತಲ್ಲಿದ್ದ ಮಾಂಗಲ್ಯ ಸರವನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಇದೇ ಕಾರಣಕ್ಕೆ ದೇವಸ್ಥಾನದ ಸಿಬ್ಬಂದಿ, ದೇವಸ್ಥಾನದಲ್ಲಿ ಸಿಸಿಟಿವಿ ಕೂಡಾ ಅಳವಡಿಸಿದ್ದಾರೆ. ಆದ್ರೆ ಕಳ್ಳರು ಸಿಸಿಟಿವಿ ಗಳಿಗೂ ಕೂಡಾ ಡೋಂಟ್ ಕೇರ್ ಅಂತಿದ್ದಾರೆ. ನಮ್ಮನ್ನು ಯಾರೂ ಏನೂ ಮಾಡಲು ಆಗಲ್ಲ ಅಂತಾ ಭಕ್ತರ ರೂಪದಲ್ಲಿ ದೇವಸ್ಥಾನಕ್ಕೆ ಬಂದು, ಕಳ್ಳತನ ಮಾಡಿಕೊಂಡು ಹೋಗ್ತಿದ್ದಾರೆ.

ಇನ್ನು ಈ ದೇವಸ್ಥಾನದಲ್ಲಿ ಮಾತ್ರವಲ್ಲ, ಕಲಬುರಗಿ ನಗರದಲ್ಲಿ ಅನೇಕ ಕಡೆ ದೇವಸ್ಥಾನಗಳಲ್ಲಿ ಕಳ್ಳತನಗಳಜು ಆಗುತ್ತಿವೆಯಂತೆ. ಕಲಬುರಗಿ ನಗರದ ಚನ್ನವೀರ ನಗರದಲ್ಲಿರುವ ಅಂಬಾಭವಾನಿ ದೇವಸ್ಥಾನ ಸೇರಿದಂತೆ ಅನೇಕ ಕಡೆ ಕಳ್ಳತನಗಳನ್ನು ಮಾಡಿದ್ದಾರೆ. ಅದರಲ್ಲೂ ಕೂಡಾ ಹೆಚ್ಚು ಭಕ್ತರು ಇಲ್ಲದೇ ಇರೋ ಸಮಯದಲ್ಲಿ ದೇವಸ್ಥಾನಕ್ಕೆ ಬರೋ ಕಳ್ಳರು ಭಕ್ತರಂತೆ ನಟಿಸಿ, ದೇವರಿಗೆ ನಮಸ್ಕಾರ ಮಾಡಿ ದೇವರ ಮೈಮೇಲೆ ಇರೋ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗುತ್ತಿದ್ದಾರೆ. ಇನ್ನು ಮೇಲಿಂದ ಮೇಲೆ ದೇವಸ್ಥಾನದಲ್ಲಿ ಕಳ್ಳತನವಾದ್ರು ಕೂಡಾ ಆರೋಪಿಗಳು ಪತ್ತೆಯಾಗುತ್ತಿಲ್ಲಾ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಹಿಂಗುಲಾಂಬಿಕಾ ದೇವಸ್ಥಾನದಲ್ಲಿ ನಡೆದ ಕಳ್ಳತನ ಘಟನೆ ಬಗ್ಗೆ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದ್ರೆ ಮೇಲಿಂದ ಮೇಲೆ ದೇವಸ್ಥಾನಗಳನ್ನೇ ಕಳ್ಳರು ಟಾರ್ಗೇಟ್ ಮಾಡಿಕೊಂಡು ಕಳ್ಳತನ ಮಾಡ್ತಿರುವುದು ಭಕ್ತರ ನೋವಿಗೆ ಕಾರಣವಾಗಿದೆ. ಹೀಗಾಗಿ ಪೊಲೀಸರು ಇನ್ನಷ್ಟು ಕ್ರಮಗಳನ್ನು ಕೈಗೊಂಡು, ದೇವಸ್ಥಾನಗಳನ್ನೇ ಟಾರ್ಗೇಟ್ ಮಾಡಿರೋ ಕಳ್ಳ ಬೆಕ್ಕುಗಳನ್ನು ಪತ್ತೆ ಮಾಡಿ ಅವರನ್ನು ಕಂಬಿ ಹಿಂದೆ ಕಳುಹಿಸುವ ಕೆಲಸ ಮಾಡಬೇಕಿದೆ.

ವರದಿ: ಸಂಜಯ್, ಟಿವಿ9, ಕಲಬುರಗಿ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!