AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ತಿಂಗಳಲ್ಲಿ 49.6 ಕೆಜಿ ಚಿನ್ನ…30 ಕೋಟಿ ಹವಾಲ ಹಣ: `ಚಿನ್ನಾ’ರಿ ರನ್ಯಾಳ ಮತ್ತಷ್ಟು ಸ್ಫೋಟಕ ನಿಗೂಢ ರಹಸ್ಯ ಬಟಾಬಯಲು

Ranya Rao gold smuggling Case:: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಸಾಹಿಲ್ ವಿಚಾರಣೆ ವೇಳೆ ಗೋಲ್ಡ್ ಸ್ಮಗ್ಲಿಂಗ್ ಜಾಲದ ಮತ್ತಷ್ಟು ರೋಚಕ ಸಂಗತಿ ಹೊರಬಿದ್ದಿದೆ. ಕೇವಲ ಮೂರು ತಿಂಗಳಲ್ಲಿ ರನ್ಯಾ ಅದೆಷ್ಟು ಚಿನ್ನವನ್ನ ಭಾರತಕ್ಕೆ ಸಾಗಾಟ ಮಾಡಿದ್ಳು? ಆ ಸ್ಮಗ್ಲಿಂಗ್ ಹೇಗೆಲ್ಲ ನಡೆಯುತ್ತಿತ್ತು ಎನ್ನುವುದನ್ನು ಬಾಯ್ಬಟ್ಟಿದ್ದಾನೆ. ಅದರ ಸಂಪೂರ್ಣ ವಿವರ ಇಲ್ಲಿದೆ.

3 ತಿಂಗಳಲ್ಲಿ 49.6 ಕೆಜಿ ಚಿನ್ನ...30 ಕೋಟಿ ಹವಾಲ ಹಣ: `ಚಿನ್ನಾ’ರಿ ರನ್ಯಾಳ ಮತ್ತಷ್ಟು ಸ್ಫೋಟಕ ನಿಗೂಢ ರಹಸ್ಯ ಬಟಾಬಯಲು
ರನ್ಯಾ ರಾವ್
Follow us
Prajwal Kumar NY
| Updated By: ರಮೇಶ್ ಬಿ. ಜವಳಗೇರಾ

Updated on:Apr 03, 2025 | 7:59 PM

ಬೆಂಗಳೂರು, (ಏಪ್ರಿಲ್ 03): ದುಬೈನಿಂದ ಚಿನ್ನ ಸಾಗಾಟ (gold smuggling case) ಮಾಡಿ ಕಂಬಿ ಎಣಿಸುತ್ತಿರುವ ರನ್ಯಾ ರಾವ್ (Ranya Rao) ಕಳ್ಳಾಟ ಒಂದೊಂದೇ ಅಂಶ ಬಯಲಿಗೆ ಬರುತ್ತಿವೆ. ರನ್ಯಾ ಕಳ್ಳಾಟದ ಕೇಸ್ ನ ಮೂರನೇ ಆರೋಪಿ ಸಾಹಿಲ್ ಜೈನ್ DRI ಮುಂದೆ ಅನೇಕ ಸಂಗತಿ ಬಾಯ್ಬಿಟ್ಟಿದ್ದಾನೆ. ಜನವರಿಯಿಂದ ರನ್ಯಾ ಬರೋಬ್ಬರಿ 49.6 ಕೆಜಿ ಚಿನ್ನ ಸಾಗಿಸಿದ್ದ ಸ್ಫೋಟಕ ವಿಚಾರ ಬಯಲಾಗಿದೆ. ಈ ಚಿನ್ನವನ್ನೆಲ್ಲ ತಂದು ಸಾಹಿಲ್ ಜೈನ್​ಗೆ  (Sahil Jain) ಕೊಟ್ಟಿದ್ದ ರನ್ಯಾ, ಅದನ್ನ ಆತನ ಮೂಲಕವೇ ಮಾರಾಟ ಮಾಡಿಸುತ್ತಿದ್ದಳು. ಅಷ್ಟೇ ಅಲ್ಲ ಚಿನ್ನ ತರಲು 30 ಕೋಟಿ ರೂಪಾಯಿ ಹಣವನ್ನು ಹವಾಲ ಮೂಲಕ ದುಬೈಗೆ ಸಾಗಾಟ ಮಾಡುತ್ತಿದ್ದಳು ಎನ್ನುವು ತನಿಖೆಯಲ್ಲಿ ಬಟಾಬಯಲಾಗಿದೆ.

3 ತಿಂಗಳಲ್ಲಿ 49.6 ಕೆಜಿ ಚಿನ್ನ ಸಾಗಾಟ

ಕಳೆದ ನವೆಂಬರ್‌ ತಿಂಗಳಿನಿಂದಲೇ ಬರೋಬ್ಬರಿ 49.6 ಕೆಜಿ ಚಿನ್ನ ತಂದು ತನಗೆ ಕೊಟ್ಟಿರುವುದಾಗಿ ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣದ 3ನೇ ಆರೋಪಿ ಸಾಹಿಲ್‌ ಜೈನ್‌  ಡಿಆರ್‌ಐ ಮುಂದೆ ಬಾಯ್ಬಿಟ್ಟಿದ್ದಾನೆ. ಹೌದು… ನವೆಂಬರ್​ನಿಂದಲೇ ಬರೋಬ್ಬರಿ 49.6 ಕೆಜಿ ಚಿನ್ನ ತಂದು ಸಾಹಿಲ್ ಜೈನ್​ಗೆ ಕೊಡುತ್ತಿದ್ದಳು. ಇನ್ನು ರನ್ಯಾ ತಂದುಕೊಟ್ಟಿದ್ದ 49.6 ಕೆಜಿ ಚಿನ್ನವನ್ನು ಸಾಹಿಲ್ ಜೈನ್ ಮಾರಾಟ ಮಾಡಿದ್ದ. ಪ್ರತಿ ಬಾರಿ ದುಬೈನಿಂದ ಬೆಂಗಳೂರಿಗೆ ಚಿನ್ನತಂದು ಮಾರಾಟ ಮಾಡಿದ ಬಳಿಕ ಅದರಿಂದ ಬಂದ ಹಣದಿಂದಲೇ ಮತ್ತೆ ಚಿನ್ನ ಖದೀಗೆ ಹೋಗುತ್ತಿದ್ದಳು. ಇದುವರೆಗೂ 30 ಕೋಟಿ ರೂ. ಹಣ ಹವಾಲ ಮೂಲಕ ದುಬೈಗೆ ಸಾಗಾಟವಾಗಿರುವ ಮಾಹಿತಿ ಲಭ್ಯವಾಗಿದೆ.

ರನ್ಯಾ ರಾವ್ ಒಮ್ಮೆ ಭಾರತಕ್ಕೆ ಚಿನ್ನ ತಂದು ಮಾರಾಟ ಮಾಡಿದ ಬಳಿಕ ಅದರಿಂದ ಬಂದ ಹಣದಿಂದಲೇ ಮತ್ತೆ ದುಬೈನಲ್ಲಿ ಚಿನ್ನ ಖರೀದಿ ಮಾಡುತ್ತಿದ್ದಳು. ಹೀಗೆ ಪ್ರತಿ ಬಾರಿ ದುಬೈಗೆ ಹವಾಲ ಮೂಲಕ ಹಣ ರವಾನಿಸೋ ಕೆಲಸವನ್ನ ಸಾಹಿಲ್ ಜೈನ್ ಮೂಲಕ ಮಾಡಿಸುತ್ತಿದ್ದಳು. ಇದಕ್ಕೂ ಮುನ್ನ ಜನವರಿಯಲ್ಲಿ 55 ಲಕ್ಷ ರೂ, ಫೆಬ್ರವರಿಯಲ್ಲಿ 55 ಲಕ್ಷ, ಮತ್ತೊಮ್ಮೆ 30 ಲಕ್ಷ ಸೇರಿ ಒಟ್ಟು 1,73,61,787 ರೂ ಹಣವನ್ನು ಮನೆಗೆ ಹವಾಲ ಮೂಲಕ ತರಿಸಿಕೊಂಡಿದ್ದಾಳೆ. ಪ್ರತಿ ಬಾರಿಯ ಹವಾಲಾ ವಹಿವಾಟಿಗೆ ಸಾಹಿಲ್ ಜೈನ್ ಐವತ್ತೈದು ಸಾವಿರ ಕಮಿಷನ್ ಪಡೆಯುತ್ತಿದ್ದ.

ಇದನ್ನೂ ಓದಿ
Image
ಚಿನ್ನ ಕಳ್ಳಸಾಗಣೆ: ರನ್ಯಾ ರಾವ್​ ಜಾಮೀನು ಅರ್ಜಿ ವಜಾ, ನೀಡಿದ ಕಾರಣಗಳೇನು?
Image
ಚಿನ್ನ ಕಳ್ಳಸಾಗಾಣಿಕೆ ಕೇಸ್​: ದುಬೈನಲ್ಲಿ ಕಂಪನಿ ತೆರದಿದ್ರು ನಟಿ ರನ್ಯಾ
Image
ರನ್ಯಾ ಕಾರಣಕ್ಕೆ ಸುದೀಪ್​ಗೆ ಆದ ಕಷ್ಟ ಒಂದೆರಡಲ್ಲ: ರವಿ ಶ್ರೀವತ್ಸ
Image
ಅಪ್ಪ ಪೋಲಿಸ್.. ಮಗಳು ಕಳ್ಳಿ.. ನಟಿ ರನ್ಯಾ ಚಿನ್ನದ ರಹಸ್ಯ!

ಸದ್ಯ ರನ್ಯಾ ರಾವ್ ಕೇಸ್ ನಲ್ಲಿ ಇದುವರೆಗೆ 49.6 kg ಚಿನ್ನದ ಸಾಗಾಟ ಮಾಡಿದ್ದು, ದುಬೈಗೆ ಹವಾಲ ಮೂಲಕ 38,39,97,000 ರೂ. ಹಣ ಕಳಿಸಿರೋ ವಿಚಾರ ಬಯಲಾಗಿದೆ. ಆದರೆ ಡಿಆರ್ ಗೆ ಇದುವರೆಗೆ ಸಿಕ್ಕಿರುವುದು 14.206 ಕೆಜಿ ಚಿನ್ನ, 2,67,00,000 ರೂ. ನಗದು ಮತ್ತು ಎರಡು ಕೆಜಿ ಚಿನ್ನದ ಆಭರಣ ಮಾತ್ರ ವಶಕ್ಕೆ ಪಡೆದಿದ್ದಾರೆ.

ಬಳ್ಳಾರಿ (Ballari) ಮೂಲದ ಸಾಹಿಲ್ ಜೈನ್ ರನ್ಯಾ ರಾವ್ ಜೊತೆಗೆ ವಾಟ್ಸಪ್ ಚಾಟಿಂಗ್ ಮಾಡಿದ್ದ ಹಿನ್ನೆಲೆ ಸಾಹಿಲ್ ಜೈನ್ ಲಾಕ್ ಆಗಿದ್ದ. ಸಾಹಿಲ್ ಜೈನ್ ತಂದೆ ಮಹೇಂದ್ರ ಜೈನ್ ಅವರ ಸಹೋದರರ ಬಟ್ಟೆ ಅಂಗಡಿ ಬಳ್ಳಾರಿಯಲ್ಲಿದ್ದು, ಸಹೋದರರು ಬಳ್ಳಾರಿಯಲ್ಲಿ ವಾಸವಾಗಿದ್ದಾರೆ. ಆದರೆ ಕೆಲ ವರ್ಷಗಳಿಂದ ಸಾಹಿಲ್ ಜೈನ್ ಕುಟುಂಬ ಬೆಂಗಳೂರಿಗೆ ಶಿಫ್ಟ್ ಆಗಿದೆ. ಚಿನ್ನದ ವ್ಯಾಪಾರಿಗಳ ಜೊತೆ ನಂಟು ಇರುವ ಹಿನ್ನೆಲೆ ಚಿನ್ನದ ಮಾರಾಟದ ಜವಾಬ್ದಾರಿಯೂ ಸಾಹಿಲ್ ಮೇಲಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:54 pm, Thu, 3 April 25

ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ಶೋಪಿಯಾನ್​ನಲ್ಲಿ ಲಷ್ಕರ್​​ನ ಮೋಸ್ಟ್ ವಾಂಟೆಡ್ ಉಗ್ರ ಸೇರಿ ಮೂವರ ಎನ್​ಕೌಂಟರ್
ಶೋಪಿಯಾನ್​ನಲ್ಲಿ ಲಷ್ಕರ್​​ನ ಮೋಸ್ಟ್ ವಾಂಟೆಡ್ ಉಗ್ರ ಸೇರಿ ಮೂವರ ಎನ್​ಕೌಂಟರ್
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ