AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶ್ಮೀರದಲ್ಲಿ ಕನ್ನಡಿಗರಿಂದ ಶಂಕರಾಚಾರ್ಯ ಜಯಂತಿ ಆಚರಣೆ: ಯೋಧರಿಗೆ ಶಕ್ತಿ ತುಂಬಲು, ಶಾಂತಿಗಾಗಿ ವಿಶೇಷ ಪೂಜೆ

ಉಗ್ರರ ದಾಳಿಯ ಭೀತಿಯ ನಡುವೆಯೂ ಶ್ರೀನಗರದ ಆದಿ ಶಂಕರಾಚಾರ್ಯ ಮಠದಲ್ಲಿ ವಿಶೇಷ ಶಂಕರಾಚಾರ್ಯ ಜಯಂತಿ ಆಚರಿಸಲಾಗಿದೆ. ಮೈಸೂರು ಮತ್ತು ಬೆಂಗಳೂರಿನಿಂದ 13 ಜನರ ತಂಡ ವಿಶೇಷ ಪೂಜೆ ನೆರವೇರಿಸಿದೆ. ಜಮ್ಮು ಮತ್ತು ಕಾಶ್ಮೀರಿನ ಶಾಂತಿ ಮತ್ತು ಯೋಧರ ಕ್ಷೇಮಕ್ಕಾಗಿ ಪ್ರಾರ್ಥಿಸಲಾಗಿದೆ. ರುದ್ರಾಭಿಷೇಕ, ಮೃತ್ಯುಂಜಯ ಜಪ, ಹೋಮ ಮಾಡಲಾಗಿದೆ.

ಕಾಶ್ಮೀರದಲ್ಲಿ ಕನ್ನಡಿಗರಿಂದ ಶಂಕರಾಚಾರ್ಯ ಜಯಂತಿ ಆಚರಣೆ: ಯೋಧರಿಗೆ ಶಕ್ತಿ ತುಂಬಲು, ಶಾಂತಿಗಾಗಿ ವಿಶೇಷ ಪೂಜೆ
ಕನ್ನಡಿಗರಿಂದ ಶಂಕರಾಚಾರ್ಯ ಜಯಂತಿ
ಗಂಗಾಧರ​ ಬ. ಸಾಬೋಜಿ
|

Updated on: May 03, 2025 | 10:47 AM

Share

ಬೆಂಗಳೂರು, ಮೇ 03: ಪಹಲ್ಗಾಮ್ (Pahalgam) ಉಗ್ರ ದಾಳಿಯ ಪ್ರಕರಣದ ತನಿಖೆ ಚುರುಕುಗೊಂಡಿದೆ. ಉಗ್ರರ ರಣಬೇಟೆಗೆ ಇಳಿದಿರುವ ಎನ್​ಐಎ ಪ್ರಕರಣದ ಒಂದೊಂದೇ ಮಾಹಿತಿ ಬಯಲಿಗೇಳೆಯುತ್ತಿದೆ. ಭಾರತ ವಾಯುಸೇನೆ, ಗಡಿಯಲ್ಲಿ ಪಾಕ್​ಗೆ ಖಡಕ್ ಎಚ್ಚರಿಕೆ ರವಾನಿಸಲಾಗಿದೆ. ಈ ಮಧ್ಯೆ ಜಮ್ಮು-ಕಾಶ್ಮೀರದ  ಶ್ರೀನಗರದಲ್ಲಿರುವ ಶ್ರೀ ಆದಿ ಶಂಕರಾಚಾರ್ಯ ಮಠದಲ್ಲಿ ಇಂದು ಕನ್ನಡಿಗರಿಂದ (Kannadigaru) ವಿಶೇಷ ಪೂಜೆ ಮಾಡಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಪ್ರಾರ್ಥಿಸಲಾಗಿದೆ.

ಮೈಸೂರು ಮತ್ತು ಬೆಂಗಳೂರಿನಿಂದ ತೆರಳಿದ್ದ 13 ಜನರ ತಂಡ ಶ್ರೀ ಆದಿ ಶಂಕರಾಚಾರ್ಯ ಮಠದಲ್ಲಿ ಶಂಕರಾಚಾರ್ಯ ಜಯಂತಿ ಆಚರಣೆ ಮಾಡಲಾಗಿದೆ. ದೇಶ ರಕ್ಷಣೆಗಾಗಿ, ಯೋಧರ ಆರೋಗ್ಯ ಶಕ್ತಿ ವೃದ್ಧಿ ಮತ್ತು ಜಮ್ಮು ಕಾಶ್ಮೀರಿನ ಸುರಕ್ಷತೆಗಾಗಿ ಸಿಆರ್​​ಪಿಎಫ್​ ಮತ್ತು ಆರ್ಮಿ ತಂಡದ ಸಹಾಯದಿಂದ ವಿಶೇಷ ರುದ್ರಾಭಿಷೇಕ, ಮೃತ್ಯುಂಜಯ ಜಪ, ಹೋಮ-ಹವನ ಮಾಡಲಾಗಿದೆ.

ಇದನ್ನೂ ಓದಿ: ನನ್ನಲ್ಲಿ ಧೈರ್ಯ ತುಂಬಲು ಅಷ್ಟು ದೂರದಿಂದ ಬಂದ ಅಜ್ಜಿಗೆ ಹೇಗೆ ಕೃತಜ್ಞತೆ ಸಲ್ಲಿಸುವುದು? ಪಲ್ಲವಿ ರಾವ್

ಇದನ್ನೂ ಓದಿ
Image
ಉಗ್ರರು ದಾಳಿ ಮಾಡುವಾಗ ಧರ್ಮ ಕೇಳುತ್ತಾ ಕೂತಿರಲ್ಲ: ಸಚಿವ ಆರ್​ಬಿ ತಿಮ್ಮಾಪುರ
Image
ಭಾರತದಲ್ಲಿ ನೂರಾರು ಪಾಕಿಸ್ತಾನಿ ಯೂಟ್ಯೂಬ್​ ಚಾನೆಲ್​ಗಳಿಗೆ ನಿಷೇಧ
Image
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
Image
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ

ಡಾ. ನಾಗಲಕ್ಷ್ಮಿ ನಾಗಾರ್ಜುನ್ ಮೈಸೂರು ತಂಡದಿಂದ ಆದಿ ಶಂಕರಾಚಾರ್ಯ ಜೀವನವನ್ನು ಭರತನಾಟ್ಯ ಮೂಲಕ ಪ್ರಸ್ತುತ ಪಡಿಸಿದ್ದಾರೆ. ಕಳೆದ 13 ವರ್ಷಗಳಿಂದ ಬೆಂಗಳೂರು ಮತ್ತು ಮೈಸೂರು ತಂಡಗಳಿಂದ ಜಮ್ಮು ಕಾಶ್ಮೀರನ ಶ್ರೀನಗರದ ಆದಿ ಶಂಕರಾಚಾರ್ಯ ಮಠದಲ್ಲಿ ಶ್ರೀ ಆದಿಶಂಕರ ಜಯಂತಿಯನ್ನು ನಡೆಸುತ್ತಾ ಬಂದಿವೆ.

ಇದೇ ವೇಳೆ ಪಾಕ್ ಆಕ್ರಮಿತಿ ಕಾಶ್ಮೀರ್ ಹಾಗೂ ಶಾರದಾ ಪೀಠ ವಾಪಸ್ ಭಾರತಕ್ಕೆ ಬರುವ ಹಾಗೆ ಎಲ್ಲಾ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸಲಾಗಿದೆ. ಈ ವೇಳೆ ಸಾಧು ಸಂತರಾದ ಸುಬೇಂದ್ರ ಬಾನಿ, ಸ್ವಾಮಿ ವಿಶ್ವನಾಥನಂದ ಸರಸ್ವತಿ ಸುಬೇಂದ್ರ ಬಾನಿ, ಮಹಾ ಮಂಡಲೇಶ್ವರ ಶ್ರೀ ಅಕ್ಷಗಾನನಂದ ಜಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ

ಜಮ್ಮು-ಕಾಶ್ಮೀರದ ಪಹಲ್ಗಾಮ್​​ ಉಗ್ರರ ದಾಳಿಯಲ್ಲಿ ಈಗಾಗಲೇ ಕರ್ನಾಟಕದ ಇಬ್ಬರು ಸೇರಿದಂತೆ 26 ಪ್ರವಾಸಿಗರು ಸಾವಪ್ಪಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕದ ಸಾಕಷ್ಟು ಕುಟುಂಬಗಳು ಉಗ್ರರ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಬಚಾವ್​ ಆಗಿ ಬಂದಿದ್ದಾರೆ. ಪಹಲ್ಗಾಮ್‌ನ ದಾಳಿ ಕಣ್ಣಾರೆ ಕಂಡು ಬೆಚ್ಚಿಬಿದ್ದಿದ್ದರು. ಹಾಗಾಗಿ 26 ಪ್ರವಾಸಿಗರ ರಕ್ತದೋಕುಳಿ ಹರಿಸಿದ್ದ ಉಗ್ರರಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಭಾರತ ಸರ್ವಸನ್ನದ್ಧವಾಗಿದೆ. ಪಾಕಿಸ್ತಾನಕ್ಕೆ ಮುಟ್ಟಿಕೊಳ್ಳುವ ರೀತಿ ಭಾರತ ಪ್ರತೀಕಾರ ಕೊಡುವುದಕ್ಕೆ ಮುಂದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ