Karnataka Covid Update: ಕರ್ನಾಟಕದಲ್ಲಿ ಹೊಸದಾಗಿ 14,304 ಜನರಿಗೆ ಕೊರೊನಾ ಸೋಂಕು ದೃಢ; 464 ಮಂದಿ ನಿಧನ

Karnataka Covid Update: ಕರ್ನಾಟಕದಲ್ಲಿ ಹೊಸದಾಗಿ 14,304 ಜನರಿಗೆ ಕೊರೊನಾ ಸೋಂಕು ದೃಢ; 464 ಮಂದಿ ನಿಧನ
ಪ್ರಾತಿನಿಧಿಕ ಚಿತ್ರ

ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 29,554 ಜನರು ಮೃತಪಟ್ಟಿದ್ದಾರೆ. 2,98,299 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

TV9kannada Web Team

| Edited By: ganapathi bhat

Jun 01, 2021 | 8:24 PM

ಬೆಂಗಳೂರು: ಕರ್ನಾಟಕದಲ್ಲಿ ಇಂದು (ಜೂನ್ 1) ಹೊಸದಾಗಿ 14,304 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 26,18,735 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 22,90,861 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 464 ಜನರ ಸಾವು ಸಂಭವಿಸಿದೆ. ಈ ಮೂಲಕ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 29,554 ಜನರು ಮೃತಪಟ್ಟಿದ್ದಾರೆ. 2,98,299 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಲ್ಲಿ ಇಂದು ಒಂದೇ ದಿನ 3,418 ಜನರಿಗೆ ಸೋಂಕು ಖಚಿತವಾಗಿದೆ. ನಗರದಲ್ಲಿ ಇಂದು ಕೊರೊನಾ ಸೋಂಕಿಗೆ 276 ಜನರು ಬಲಿಯಾಗಿದ್ದಾರೆ. ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ 13,622 ಜನರ ಸಾವು ಸಂಭವಿಸಿದೆ. ನಗರದ ಕೊರೊನಾ ಪೀಡಿತರ ಸಂಖ್ಯೆ 11,66,647ಕ್ಕೆ ಏರಿಕೆಯಾಗಿದೆ. 11,66,647 ಸೋಂಕಿತರ ಪೈಕಿ 10,09,322 ಜನರು ಗುಣಮುಖರಾಗಿದ್ದಾರೆ. 1,43,702 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಮೂಲಕ, ಬೆಂಗಳೂರಿನಲ್ಲಿ ಹಾಗೂ ರಾಜ್ಯದಲ್ಲಿ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಆದರೆ, ಮರಣಿಸುತ್ತಿರುವವರ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲ.

ಜಿಲ್ಲಾವಾರು ಕೊರೊನಾ ಪ್ರಕರಣಗಳು ಬಾಗಲಕೋಟೆ 217, ಬಳ್ಳಾರಿ 399, ಬೆಳಗಾವಿ 891, ಬೆಂಗಳೂರು ಗ್ರಾಮಾಂತರ 202, ಬೆಂಗಳೂರು ನಗರ 3,418, ಬೀದರ್ 22, ಚಾಮರಾಜನಗರ 80, ಚಿಕ್ಕಬಳ್ಳಾಪುರ 152, ಚಿಕ್ಕಮಗಳೂರು 504, ಚಿತ್ರದುರ್ಗ 637, ದಕ್ಷಿಣ ಕನ್ನಡ 536, ದಾವಣಗೆರೆ 178, ಧಾರವಾಡ 267, ಗದಗ 214, ಹಾಸನ 1127, ಹಾವೇರಿ 219, ಕಲಬುರಗಿ 82, ಕೊಡಗು 162, ಕೋಲಾರ 338, ಕೊಪ್ಪಳ 272, ಮಂಡ್ಯ 337, ಮೈಸೂರು 1153, ರಾಯಚೂರು 133, ರಾಮನಗರ 138, ಶಿವಮೊಗ್ಗ 520, ತುಮಕೂರು 769, ಉಡುಪಿ 735, ಉತ್ತರ ಕನ್ನಡ 332, ವಿಜಯಪುರ 163, ಯಾದಗಿರಿ ಜಿಲ್ಲೆಯಲ್ಲಿ ಇಂದು 107 ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ.

ಕೊರೊನಾದಿಂದ ಮೃತಪಟ್ಟವರ ವಿವರ ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 464 ಜನರ ಸಾವು ಸಂಭವಿಸಿದೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 276 ಜನ ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 19, ಮೈಸೂರು ಜಿಲ್ಲೆಯಲ್ಲಿ 15, ಬಳ್ಳಾರಿಯಲ್ಲಿ 14, ಶಿವಮೊಗ್ಗ ಜಿಲ್ಲೆಯಲ್ಲಿಂದು 13, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 11, ಧಾರವಾಡ, ತುಮಕೂರು ಜಿಲ್ಲೆಯಲ್ಲಿ ತಲಾ 9, ಕೊಪ್ಪಳ, ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ 8, ಚಿತ್ರದುರ್ಗ, ಕಲಬುರಗಿ ಜಿಲ್ಲೆಯಲ್ಲಿ ತಲಾ 7, ವಿಜಯಪುರ, ಹಾವೇರಿ ಜಿಲ್ಲೆಯಲ್ಲಿ ತಲಾ 6, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ 5, ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ 5, ಗದಗ, ಕೊಡಗು ಜಿಲ್ಲೆಯಲ್ಲಿ ಇಂದು ತಲಾ 4, ಚಾಮರಾಜನಗರ, ಮಂಡ್ಯ ಜಿಲ್ಲೆಯಲ್ಲಿ ತಲಾ 3, ಕೋಲಾರ, ರಾಯಚೂರು ಜಿಲ್ಲೆಯಲ್ಲಿ ತಲಾ 3, ರಾಮನಗರ, ಉಡುಪಿ ಜಿಲ್ಲೆಯಲ್ಲಿ ತಲಾ 3, ಬೀದರ್​, ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ 2 ಮಂದಿ ಮರಣಿಸಿದ್ದಾರೆ.

ಇದನ್ನೂ ಓದಿ: ಶೇಕಡಾ 2ರಿಂದ 3ರಷ್ಟು ಮಕ್ಕಳಿಗೆ ಕೊರೊನಾ ಬಂದರೂ ಬರಬಹುದು; ಅದನ್ನು ಎದುರಿಸಲು ಸಿದ್ಧರಿದ್ದೇವೆ: ವಿ ಕೆ ಪೌಲ್

ಕೊರೊನಾ ವೈರಸ್​ನ ಮೂಲ ಚೀನಾದ ವುಹಾನ್ ಲ್ಯಾಬ್‌: ವೈರಸ್ ಮೂಲದ ಬಗ್ಗೆ ತನಿಖೆಗೆ ಹೆಚ್ಚಿದ ಒತ್ತಡ

Follow us on

Related Stories

Most Read Stories

Click on your DTH Provider to Add TV9 Kannada