AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವುದೇ ಕಾರಣಗಳಿಲ್ಲದಿದ್ದರೂ ಬಂಧಿಸುವ ಚಾಳಿ ಶುರುವಾಗಿದೆ: ಪೊಲೀಸರಿಗೆ ಹೈಕೋರ್ಟ್ ಕ್ಲಾಸ್

ಇತ್ತೀಚೆಗೆ ಪೊಲಿಸರು ಕಾನೂನುಬಾಹಿರವಾಗಿ ಬಂಧನ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಅಪರಾಧ ಕೇಸ್​​​​​ಗಳನ್ನು ಬಿಟ್ಟು ಸಿವಿಲ್ ಪ್ರಕರಣಗಳಲ್ಲಿ​​​​​​​​​ ಯಾರದ್ದೋ ಪ್ರಭಾವಕ್ಕೆ ಮಣಿದು, ರಾಜಕಾರಣಿಗಳ ಒತ್ತಡದಿಂದಾಗಿ ಪ್ರಕರಣಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಯನ್ನು ಕಾನೂನುಬಾಹಿರವಾಗಿ ಬಂಧಿಸುತ್ತಿದ್ದಾರೆ. ಅದರಂತೆ ಆಸ್ತಿ ಉಯಿಲಿನ ಸಾಕ್ಷಿಯೊಬ್ಬರನ್ನು ಕಾನೂನುಬಾಹಿರವಾಗಿ ಬಂಧಿಸಿದ ಬೆಂಗಳೂರಿನ ವೈಟ್‌ಫೀಲ್ಡ್‌ ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಯಾವುದೇ ಕಾರಣಗಳಿಲ್ಲದಿದ್ದರೂ ಬಂಧಿಸುವ ಚಾಳಿ ಶುರುವಾಗಿದೆ: ಪೊಲೀಸರಿಗೆ ಹೈಕೋರ್ಟ್ ಕ್ಲಾಸ್
Karnataka High Court
ರಮೇಶ್​ ಎಮ್​.
| Edited By: |

Updated on: Aug 27, 2026 | 5:59 PM

Share

ಬೆಂಗಳೂರು, (ಆಗಸ್ಟ್ 27): ಸಾಕ್ಷಿಯೊಬ್ಬರನ್ನು ಕಾನೂನುಬಾಹಿರವಾಗಿ ಬಂಧಿಸಿದ್ದಕ್ಕೆ ಬೆಂಗಳೂರಿನ ವೈಟ್ ಫಿಲ್ಟ್ ಪೊಲೀಸರನ್ನು ( whitefield Police) ಕರ್ನಾಟಕ ಹೈಕೋರ್ಟ್ (Karnataka High court) ತರಾಟೆಗೆ ತೆಗೆದುಕೊಂಡಿದೆ. ಆಸ್ತಿ ಉಯಿಲಿನ ಸಾಕ್ಷಿಯಾಗಿದ್ದ ಕೆ.ಎನ್.ಮೋಹನ್ ರೆಡ್ಡಿ ಎನ್ನುವರಿಗೆ ಆಗಸ್ಟ್ 27ಕ್ಕೆ ಹಾಜರಾಗಲು ನೋಟಿಸ್ ಕೊಟ್ಟು ಆಗಸ್ಟ್ 25ಕ್ಕೆ ಬಂಧನ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಯಾವುದೇ ಕಾರಣಗಳಿಲ್ಲದಿದ್ದರೂ ಬಂಧಿಸುವ ಚಾಳಿ ಶುರುವಾಗಿದೆ. ಬಂಧಿಸುವುದು ಪೊಲೀಸರಿಗೆ ತಮಾಷೆಯಾಗಿದೆಯಾ? ದೂರುದಾರ ಪ್ರಭಾವಿಯಾಗಿದ್ದರೆ ಸಾಕು ಬಂಧಿಸುತ್ತೀರಾ ಎಂದು ವೈಟ್‌ಫೀಲ್ಡ್‌ ತನಿಖಾಧಿಕಾರಿ ಸುನೀಲ್ ಕುಮಾರ್, ACP, DCPಗೆ ಕ್ಲಾಸ್ ತೆಗೆದುಕೊಂಡಿದ್ದು, ಕೂಡಲೇ ಕಾನೂನುಬಾಹಿರ ಬಂಧನಗಳನ್ನು ನಿಲ್ಲಿಸಲು ಸೂಚನೆ ನೀಡಿದೆ. ಅಲ್ಲದೇ ಇದನ್ನು ಈ ಬಂಧನವನ್ನು ಕಾನೂನುಬಾಹಿರವೆಂದು ಘೋಷಿಸಿ ತನಿಖಾಧಿಕಾರಿ, ಉನ್ನತಾಧಿಕಾರಿಗಳ ಜೇಬಿನಿಂದ 3 ಲಕ್ಷ ರೂಪಾಯಿ ದಂಡ ಭರಿಸಲು ಆದೇಶ ಹೊರಡಿಸಿದೆ.

ಯಾವುದೇ ಕಾರಣಗಳಿಲ್ಲದಿದ್ದರೂ ಬಂಧಿಸುವ ಚಾಳಿ ಶುರುವಾಗಿದೆ.ಬಂಧಿಸುವುದು ಪೊಲೀಸರಿಗೆ ತಮಾಷೆಯಾಗಿದೆಯಾ? ದೂರುದಾರ ಪ್ರಭಾವಿಯಾಗಿದ್ದರೆ ಸಾಕು ಬಂಧಿಸುತ್ತೀರಾ? ಕೊಲೆಯಂತಹ ಕೇಸ್ ತನಿಖೆ ಬಿಟ್ಟು ಸಿವಿಲ್ ವ್ಯಾಜ್ಯಗಳ ಹಿಂದೆ ಬಿದ್ದಿದ್ದೀರಾ? ಇಲ್ಲಿ ಕಾನೂನಿನ ಆಡಳಿತವಿಲ್ಲ, ಪೊಲೀಸ್ ರಾಜ್ಯವಾಗುವುದನ್ನು ತಪ್ಪಿಸಿ. ಇಲ್ಲವಾದರೆ ಉಕ್ಕಿನ ಕೈಗಳಿಂದ ನಿಲ್ಲಿಸಬೇಕಾಗುತ್ತದೆ. ಅಲ್ಲಿ ಇಲ್ಲಿ ಒಳ್ಳೆ ಕೆಲಸ ಮಾಡುತ್ತಾರೆಂದು ಬಿಟ್ಟಿದ್ದೇವೆ. ಸಿವಿಲ್ ಕೇಸ್​ನಲ್ಲಿ ಪೊಲೀಸರ ಮಧ್ಯಪ್ರವೇಶವೇಕೆ? ಉನ್ನತ ಅಧಿಕಾರಿಗಳ ಒತ್ತಡದಿಂದ ಬಂಧಿಸಿದ್ದಾರಾ? ಎಸಿಪಿ, ಡಿಸಿಪಿ ಏನು ಮಾಡುತ್ತಿದ್ದಾರೆ? ನಿರ್ಲಕ್ಷ್ಯಕ್ಕೆ ಅವರೂ ಹೊಣೆ ಎಂದು ಚಾಟಿ ಬೀಸಿದೆ.

ಇದನ್ನೂ ನೋಡಿ: ಗರ್ಭಿಣಿ ಮಹಿಳಾ ಕಾನ್ಸ್ಟೇಬಲ್ ಮೇಲೆ ರಾಡ್ ನಿಂದ ಹಲ್ಲೆ: ಚೆನ್ನೈ ಮೂಲದ ಆರೋಪಿ ಬಂಧನ

ಇನ್ನು ಕಾನೂನುಬಾಗಿರ ಬಂಧನಕ್ಕೆ ವೈಟ್​ಫೀಲ್ಡ್ ಪೊಲೀಸ್ ಠಾಣೆಯ ತನಿಖಾಧಿಕಾರಿಗೆ 3 ಲಕ್ಷ ರೂಪಾಯಿ ದಂಡ ಸಹ ವಿಧಿಸಿದೆ. ಈ ಮೂಲಕ ಪಭಾವಿಗಳಿಗೆ ಮಣಿದು ಸಿವಿಲ್ ಕೇಸ್​​​ನಲ್ಲಿ ಎಂಟ್ರಿಯಾಗುವ ಪೊಲೀಸರಿಗೆ ಹೈಕೋರ್ಟ್ ಖಡಕ್ ಎಚ್ಚರಿಕೆಸಂದೇಶ ನೀಡಿದಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us